ಕೋಮು ಹಿಂಸೆ ನಿಷೇಧ ಮಸೂದೆ ಯಾಕೆ ಬೇಕು? ಪುಸ್ತ ಕ ಬಿಡುಗಡೆ.

ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಉಡುಪಿ ಜಿಲ್ಲಾ ಘಟಕ ಆಯೋಜಿಸಿದ ಪುಸ್ತಕಗಳ ಬಿಡುಗಡೆ ಸಮಾರಂಭ ಮತ್ತು ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ 3 ಪುಸ್ತಕಗಳ ಬಿಡುಗಡೆಯನ್ನು ರಾಜ್ಯ ವಕೀಲ ಪರಿಷತ್ತಿನ ಉಪಾಧ್ಯಕ್ಷ ಎಲ್.ಶ್ರೀನಿವಾಸಬಾಬು ನೆರವೇರಿಸಿದರು. ವಿಚಾರ ಸಂಕಿರಣದಲ್ಲಿ ಖ್ಯಾತ ಲೇಖಕ ಫಕೀರ್ ಮಹಮ್ಮದ್ ಕಟ್ಪಾಡಿ, ಚಿಕ್ಕಮಗಳೂರು ಜಿ.ಪಂ.ಉಪಾಧ್ಯಕ್ಷ ಪಿ.ಜೆ.ಆಂಟನಿ ವಿಚಾರ ಮಂಡಿಸಿದ್ದು, ಮುಖ್ಯ ಅತಿಥಿಯಾಗಿ ವೇದಿಕೆಯ ರಾಜ್ಯ ಪ್ರಧಾನ ಕಾಯರ್ಯದರ್ಶಿ ಕೆ.ಎಲ್.ಅಶೋಕ್ ಭಾಗವಹಿಸಿದ್ದು, ವೇದಿಕೆಯ ಜಿಲ್ಲಾ ಗೌರವಾಧ್ಯಕ್ಷ ಗೋಪಾಲ ಬಿ.ಶೆಟ್ಟಿ, ದ,ಕ.ಜಿಲ್ಲಾಧ್ಯಕ್ಷ ಸುರೇಶ್ ಭಟ್ ಬಾಕ್ರಬೈಲು ಉಪಸ್ಥಿತರಿದ್ದು, ಸಮಾರಂಭದ ಅಧ್ಯಕ್ಷತೆಯನ್ನು ವಿಶ್ರಾಂತ ನ್ಯಾಯಾಧೀಶ ಎಮ್.ಎಫ್.ಸಲ್ಡಾನ ವಹಿಸಿದ್ದರು.