ಮೋದಿ ಬೆಂಗಳೂರು ಭೇಟಿ ವಿರೋಧಿಸಿ ಕ.ಕೋ.ಸೌ.ವೇದಿಕ ೆ ಮತ್ತು ಪ್ರಗತಿಪರ ಸಂಘಟನೆಗಳಿಂದ ಬೆಂಗಳೂರಲ್ಲಿ ಪ್ ರತಿಭಟನೆ

ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಬಿಜೆಪಿ ಪರ ಪ್ರಚಾರಕ್ಕಾಗಿ ರಾಜ್ಯಕ್ಕೆ ಆಗಮಿಸಿರುವುದನ್ನು ವಿರೋಧಿಸಿ ಕರ್ನಾಟಕ ಕೋಮು ಸೌಹಾರ್ದ ವೇದಿಕೆ ,`ನ್ಯಾಯಕ್ಕಾಗಿ ನಾವು’ ಮತ್ತು ಪ್ರಗತಿಪರ ಸಂಘಟನೆಗಳ ಸದಸ್ಯರು ಒಗ್ಗೂಡಿ ನಗರದ ಆನಂದರಾವ್ ವೃತ್ತದ ಬಳಿ ಭಾನುವಾರ ಪ್ರತಿಭಟನೆ ಮಾಡಿದರು.

`ಗುಜರಾತ್‌ನಲ್ಲಿ ನಡೆದ ಜನಾಂಗೀಯ ಹತ್ಯೆ ಹಾಗೂ ಧಾರ್ಮಿಕ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಕ್ಕೆ ಮೋದಿ ಅವರೇ ಕಾರಣ. ಅಂತಹ ಕೋಮುವಾದಿ ಮೋದಿ ಅವರಿಗೆ ರಾಜ್ಯಕ್ಕೆ ಬರುವ ನೈತಿಕ ಹಕ್ಕಿಲ್ಲ. ಜನದ್ರೋಹಿ ರಾಜಕಾರಣಿಯಾದ ಅವರನ್ನು ಬಿಜೆಪಿ ಚುನಾವಣಾ ಪ್ರಚಾರಕ್ಕಾಗಿ ರಾಜ್ಯಕ್ಕೆ ಕರೆಸಿರುವುದು ಖಂಡನೀಯ’ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಮಾತನಾಡಿ, `ನರೇಂದ್ರ ಮೋದಿ ಒಬ್ಬ ನರಹಂತಕ. ಅವರು ಸರ್ವಾಧಿಕಾರಿ ಹಿಟ್ಲರ್‌ನಂತೆ ಜನಾಂಗೀಯ ಹತ್ಯೆ ಮಾಡುತ್ತಿದ್ದಾರೆ. ಯಾರದೋ ಸಮಾಧಿ ಮೇಲೆ ಗುಜರಾತ್ ರಾಜ್ಯವನ್ನು ಅಭಿವೃದ್ಧಿ ಮಾಡಲು ಹೊರಟಿದ್ದಾರೆ. ಅಂತಹ ಮೋದಿ ಕಲ್ಪನೆಯ ಅಭಿವೃದ್ಧಿ ರಾಜ್ಯಕ್ಕೆ ಬೇಕಿಲ್ಲ. ಮಹಾತ್ಮ ಗಾಂಧೀಜಿ ಅವರ ಕಲ್ಪನೆಯ ಸಮಾಜದ ಎಲ್ಲಾ ವರ್ಗದ ಜನರನ್ನು ಒಟ್ಟಿಗೆ ಕೊಂಡೊಯ್ಯುವ ಅಭಿವೃದ್ಧಿ ರಾಜ್ಯಕ್ಕೆ ಬೇಕು’ ಎಂದರು.

ಮೋದಿ ಅವರು ಟಾಟಾ ಹಾಗೂ ಅಂಬಾನಿ ಸಹೋದರರಂತಹ ಬಂಡವಾಳಶಾಹಿಗಳ ಏಜೆಂಟ್. ಅವರ ನೇತೃತ್ವದ ಸರ್ಕಾರದ ದುರಾಡಳಿತದಿಂದಾಗಿ ದಲಿತರು, ಆದಿವಾಸಿಗಳು ಮತ್ತು ಅಲ್ಪಸಂಖ್ಯಾತರು ಗುಜರಾತ್‌ನಲ್ಲಿ ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತಿಲ್ಲ ಎಂದು ದೂರಿದರು.

`ರಾಜ್ಯವು ಕೋಮು ಸಾಮರಸ್ಯ ಮತ್ತು ಶಾಂತಿ ಸೌಹಾರ್ದಕ್ಕೆ ಹೆಸರಾಗಿದೆ. ಮೋದಿ ಪ್ರಚಾರದ ಸೋಗಿನಲ್ಲಿ ರಾಜ್ಯದ ಶಾಂತಿ ಕದಡಲು ಬಂದಿದ್ದಾರೆ. ಆದ್ದರಿಂದ ಅವರ ಮಾತುಗಳಿಗೆ ಜನ ಮರುಳಾಗಬಾರದು. ಮೋದಿಯನ್ನು ರಾಜ್ಯಕ್ಕೆ ಕರೆಸಿ ಮತಯಾಚನೆ ಮಾಡುತ್ತಿರುವುದು ಬಿಜೆಪಿಯ ನೈತಿಕ ದಿವಾಳಿತನವನ್ನು ತೋರುತ್ತದೆ’ ಎಂದು ಚಿಂತಕ ಪ್ರೊ.ಜಿ.ಕೆ. ಗೋವಿಂದರಾವ್ ಹೇಳಿದರು.

ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಇಂದೂಧರ ಹೊನ್ನಾಪುರ, ಪತ್ರಕರ್ತ `ಅಗ್ನಿ’ ಶ್ರೀಧರ್. ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಪ್ರಧಾನ ಕಾರ್ಯದರ್ಶಿ ಕೆ.ಎಲ್.ಅಶೋಕ್, ಗೌರಿ, ರೋಬಿನ್, ಪ್ರೋ.ವಿ.ಎಸ್.ಶ್ರೀಧರ್, ನಗರಗೆರೆ ರಮೇಶ್ ಹಾಗೂ ಕರ್ನಾಟಕ ಜನಪರ – ಪ್ರಗತಿಪರ ಒಕ್ಕೂಟದ ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisements

ಮೋದಿ ಬೆಂಗಳೂರು ಭೇಟಿ ವಿರೋಧಿಸಿ ಕ.ಕೋ.ಸೌ.ವೇದಿಕ ೆ ಮತ್ತು ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನೆ

ಜನಿವಾರ ವಿರೋಧಿಸಿದ್ದ ನಾರಾಯಣ ಗುರುವಿಗೆ ಜನಿವಾ ರ ತೊಡಿಸುವ ಹುನ್ನಾರ!

ನಾರಾಯಣ ಗುರುಗಳು ಕೇರಳದ ಶಿವಗಿರಿಯಲ್ಲಿ ಸ್ಥಾಪಿಸಿದ ಮಠಕ್ಕೆ ನರೇಂದ್ರಮೋದಿ ಕಾಲಿಡುತ್ತಿರುವುದು ಸದ್ಯಕ್ಕೆ ಕೇರಳದಲ್ಲಿ ಮಾತ್ರವಲ್ಲ, ಇಡೀ ದಕ್ಷಿಣ ಭಾರತದಲ್ಲೇ ಸುದ್ದಿಯಾಗುತ್ತಿದೆ. ಕೇರಳವನ್ನು ಆಳುತ್ತಿದ್ದ ಭೀಕರ ಜಾತೀಯತೆಯ ವಿರುದ್ಧ ದಂಗೆಯೆದ್ದು, ಜನಿವಾರ ಧರಿಸುತ್ತಿದ್ದ ಬ್ರಾಹ್ಮಣರ ವಿರುದ್ಧ ಜನಿವಾರ ರಹಿತ ಈಳವ ಬ್ರಾಹ್ಮಣ ಸಮೂಹವನ್ನು ಕಟ್ಟಿದ, ಜಾತೀಯತೆಯನ್ನು ಖಂಡತುಂಡವಾಗಿ ವಿರೋಧಿಸಿ, ವೈದಿಕರ ಮಂತ್ರ ತಂತ್ರಗಳಿಗೆ ಸವಾಲು ಹಾಕಿ, ಪ್ರತಿ ಸಮಾಜವೊಂದನ್ನು ಕಟ್ಟಿದ, ಮನು ತತ್ವಗಳಡಿಯಲ್ಲಿ ತಲೆತಲಾಂತರಗಳಿಂದ ಜೀತ ಮಾಡುತ್ತಿದ್ದವರನ್ನು ಮುಕ್ತಗೊಳಿಸಿದ ನಾರಾಯಣ ಗುರು ಶಿವಗಿರಿಯಲ್ಲಿ ಮಠವೊಂದನ್ನು ಸ್ಥಾಪಿಸಿದರು. ಅದು ಕೇವಲ ಈಳವರ ಅಥವಾ ಈಡಿಗರ ಮಠ ಮಾತ್ರವಾಗಿರಲಿಲ್ಲ. ಸರ್ವ ಶೋಷಿತರಿಗೆ ಬಿಡುಗಡೆಯ ದಾರಿಯನ್ನು ತೋರಿಸಿದ ಮಠ ಅದಾಗಿತ್ತು.

ಇಂದಿಗೂ ಕೇರಳದಂತಹ ರಾಜ್ಯದಲ್ಲಿ ತನ್ನ ಖಾತೆಯನ್ನು ತೆರೆಯಲು ಬಿಜೆಪಿ ಹರಸಾಹಸ ಪಡುತ್ತಿದೆ. ಅದಕ್ಕೆ ಮುಖ್ಯ ಕಾರಣವೇ ನಾರಾಯಣಗುರುಗಳು ಕೇರಳದಲ್ಲಿ ಬಿತ್ತಿ ಹೋದ ತತ್ವ, ಸಾಧನೆಗಳು. ಹೇಗೆ ಕೇರಳ ಕಮ್ಯುನಿಷ್ಟ್ ತತ್ವದಿಂದ ಪ್ರಭಾವಿತವಾಗಿದೆಯೋ ಹಾಗೆಯೇ ನಾರಾಯಣ ಗುರುವಿನ ತತ್ವದಿಂದಲೂ ಪ್ರಭಾವಿತವಾಗಿದೆ. ನಂಬೂದರಿಗಳ ವಿರುದ್ಧ ಗುರು ನಾರಾಯಣರು ನಡೆಸಿದ ಹೋರಾಟ, ಗಾಂಧೀಜಿಯನ್ನು, ವಿವೇಕಾನಂದರನ್ನೂ ಸೆಳೆದಿತ್ತು. ಇಡೀ ದಕ್ಷಿಣ ಭಾರತವೇ ನಾರಾಯಣಗುರುಗಳ ಪ್ರಭಾವಕ್ಕೆ ಸಿಲುಕಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ, ಬಿಲ್ಲವರಿಗಾಗಿ ನಾರಾಯಣ ಗುರುಗಳೇ ಆಗಮಿಸಿ, ಕುದ್ರೋಳಿ ದೇವಸ್ಥಾನಕ್ಕೆ ಅಡಿಗಲ್ಲು ಹಾಕಿ ಹೋದರು. ನಾರಾಯಣಗುರುಗಳ ವಿಶೇಷತೆಯೆಂದರೆ, ಅವರ ಹೋರಾಟದಲ್ಲಿ ಮುಸ್ಲಿಮರೂ ಭಾಗ ವಹಿಸಿದ್ದರು. ಶಿವಗಿರಿ ಮಠದ ಸ್ಥಾಪನೆಯಲ್ಲಿ ಮುಸ್ಲಿಮರ ಕಾಣಿಕೆಗಳೂ ಇವೆ. ಎಲ್ಲ ಸಮುದಾಯವನ್ನು ಒಂದು ಗೂಡಿಸಿ ಅವರು ತನ್ನ ಆಧ್ಯಾತ್ಮಿಕ ಹೋರಾಟವನ್ನು ಮುನ್ನಡೆಸಿ ದರು. ಶಿವಗಿರಿ ಈ ಕಾರಣಕ್ಕೆ ಕೇರಳ ಮಾತ್ರವಲ್ಲ ಇಡೀ ಭಾರತಕ್ಕೆ ಮುಖ್ಯವಾಗುತ್ತದೆ. ಮನುತ ತ್ವದ ವಿರುದ್ಧ ಹಗಲು ರಾತ್ರಿ ಸೆಣೆಸಿದ ಗುರುಗಳು ಸ್ಥಾಪಿಸಿದ ಶಿವಗಿರಿ ಮಠದಿಂದ ಇಂದಿಗೂ ಕೇರಳ ಜಾತ್ಯತೀತವಾಗಿ ಮುನ್ನಡೆಯುತ್ತಿದೆ. ಇಂತಹ ಕ್ಷೇತ್ರಕ್ಕೆ ಇದೀಗ ನರೇಂದ್ರ ಮೋದಿ ತನ್ನ ಪಾದವನ್ನು ಊರುತ್ತಿದ್ದಾರೆ. ಕೇರಳದಲ್ಲಿ ಇದರ ವಿರುದ್ಧ ವ್ಯಾಪಕ ಟೀಕೆಗಳು, ಆಕ್ರೋಶಗಳು ವ್ಯಕ್ತವಾಗುತ್ತಿವೆ.

ಒಂದು ರಾಜ್ಯದ ಮುಖ್ಯಮಂತ್ರಿಯಾಗಿರುವ ನರೇಂದ್ರ ಮೋದಿ, ಈ ದೇಶದೊಳಗಿರುವ ಇನ್ನೊಂದು ಮಠದೊಳಗೆ ಕಾಲಿಡಬಾರದು, ಪ್ರವೇಶಿಸಬಾರದು ಎಂದು ಆಜ್ಞೆ ಮಾಡುವ, ಫತ್ವಾ ಹೊರಡಿಸುವ ಹಕ್ಕು ಯಾರಿಗೂ ಇಲ್ಲ. ಆದರೆ ಕೆಲವು ತಾತ್ವಿಕ ಕಾರಣಗಳಿಗಾಗಿ ನಾವು ಮೋದಿಯ ಶಿವಗಿರಿಯ ಭೇಟಿಯನ್ನು ಖಂಡಿಸಲೇ ಬೇಕಾಗುತ್ತದೆ. ನಾರಾಯಣಗುರುಗಳು ತನ್ನ ಜೀವನದುದ್ದಕ್ಕೂ ಯಾವ ಮನುವಾದವನ್ನು ವಿರೋಧಿಸಿದರೋ ಅದೇ ಮನುವಾದದ ವಾರಸುದಾರರಾಗಿ ನರೇಂದ್ರ ಮೋದಿ ಕೆಲಸ ಮಾಡುತ್ತಿರುವವರು. ಗುಜರಾತ್‌ನಲ್ಲಿ ಇಂದಿಗೂ ದಲಿತರು ಹೀನಾಯ ಬದುಕನ್ನು ಸವೆಸುತ್ತಿದ್ದಾರೆ. ಧರ್ಮದ ಹೆಸರಿನಲ್ಲಿ ಸಾವಿರಾರು ಮುಸ್ಲಿಮರನ್ನು ಕೊಂದು ಹಾಕಿದ ಪಾಪ ನರೇಂದ್ರ ಮೋದಿಯನ್ನು ಸುತ್ತಿಕೊಂಡಿದೆ. ನಾರಾಯಣಗುರುಗಳು ಏನನ್ನು ವಿರೋಧಿಸಿದರೋ ಅವುಗಳಿಗೆಲ್ಲ ವಾರಸುದಾರ ನಾನು ಎಂದು ಮೋದಿ ಹೆಮ್ಮೆಯಿಂದ ಹೇಳಿಕೊಳ್ಳುತ್ತಿರುವಾಗ, ಅವರ ಶಿವಗಿರಿ ಭೇಟಿ ಎಷ್ಟು ಮಟ್ಟಿಗೆ ಸರಿ? ಎಂಬ ಪ್ರಶ್ನೆ ತಲೆಯೆತ್ತುತ್ತದೆ. ಶಿವಗಿರಿಗೂ ಮೋದಿಗೂ ಯಾವ ರೀತಿಯಲ್ಲೂ ಹೋಲಿಕೆ, ಸಂಬಂಧಗಳು ಇಲ್ಲದೇ ಇರುವಾಗ, ಆ ಮಠದ ಆಡಳಿತ ಮಂಡಳಿ ಅವರನ್ನೇ ತಮ್ಮ 100ನೆ ವರ್ಷಾಚರಣೆಗೆ ಕರೆಯಲು ಕಾರಣವೇನು? ನಾರಾಯಣಗುರುಗಳು ಸ್ಥಾಪಿಸಿದ ಶಿವಗಿರಿಯನ್ನು ಇದೀಗ ಮನುವಾದಿ, ಕೇಸರಿ ಕಾಳಸರ್ಪಗಳು ತಮ್ಮ ವಶಕ್ಕೆ ತೆಗೆದುಕೊಂಡಿವೆ ಎಂದು ಇದರ ಅರ್ಥವಲ್ಲವೆ? ನಾರಾಯಣಗುರುಗಳು ಬದುಕಿದ್ದಿದ್ದರೆ ಅವರು ಇಂದು ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದರು?

ಇಂದು ನಾರಾಯಣಗುರುಗಳನ್ನು ಮಾತ್ರವಲ್ಲ ಅಂಬೇಡ್ಕರ್‌ರಂತಹ ನಾಯಕರನ್ನೂ ಸಂಘಪರಿವಾರ ಹೈಜಾಕ್ ಮಾಡಲು ಯತ್ನಿಸಿದೆ. ಜಾತೀಯತೆಯನ್ನು ಎತ್ತಿ ಹಿಡಿಯುವ, ದಲಿತರನ್ನು ತುಳಿಯುವ ಮನುವಾದದ ತಳಹದಿಯಲ್ಲಿ ನಿಂತಿರುವ ಕೇಸರಿ ಪಡೆಗಳು ತಮ್ಮ ವೇದಿಕೆಯಲ್ಲಿ ಅಂಬೇಡ್ಕರ್ ಚಿತ್ರವನ್ನು ಹಾಕುವುದಕ್ಕಿಂತ ದೊಡ್ಡ ವಿಪರ್ಯಾಸ ಏನಿದೆ? ಕೇರಳದಲ್ಲಿ ನಡೆಯುತ್ತಿರುವುದು ಅದೇ ಆಗಿದೆ. ಕೇರಳವನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಲು ಕೇಸರಿ ಪಡೆಗಳಿಗೆ ತೀರಾ ಕಷ್ಟವಾಗುತ್ತಿದೆ. ಅವರಿಗೆ ಅಲ್ಲಿ ಅತಿ ದೊಡ್ಡ ತಡೆಯಾಗಿರುವುದೇ ನಾರಾಯಣ ಗುರುಗಳು ಮತ್ತು ಅವರ ತತ್ವ. ಆದುದರಿಂದ ಅವರು ನಾರಾಯಣ ಗುರುಗಳನ್ನೇ ಹೈಜಾಕ್ ಮಾಡಲು ಹೊರಟಿದ್ದಾರೆ. ಇಡೀ ಶಿವಗಿರಿಯ ಮಠವನ್ನೇ ತಮ್ಮ ರಾಜಕೀಯಕ್ಕೆ ಬಲಿಪಶು ಮಾಡಲು ಮುಂದಾಗಿದ್ದಾರೆ. ಈ ಮಠದೊಂದಿಗೆ ಸಂಬಂಧ ಹೊಂದಿರುವ ರಾಜಕೀಯ ಸಂಘಟನೆಯೊಂದು ಬಿಜೆಪಿಯೊಂದಿಗೆ ಮೈತ್ರಿಗೆ ಸಿದ್ಧತೆ ನಡೆಸುತ್ತಿದೆ. ಅದರ ಭಾಗವಾಗಿಯೇ ನಾರಾಯಣಗುರುವಿನ ಕೇರಳಕ್ಕೆ ಮೋದಿಯ ಪ್ರವೇಶವಾಗಿದೆ.

ಆದುದರಿಂದ ಬರೇ ಮೋದಿಯನ್ನು ಶಿವಗಿರಿಗೆ ಭೇಟಿ ನೀಡದಂತೆ ಪ್ರತಿರೋಧಿಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಇಡೀ ಶಿವಗಿರಿ ಮತ್ತು ನಾರಾಯಣಗುರುಗಳ ಹೈಜಾಕ್‌ನ್ನು ತಪ್ಪಿಸಬೇಕಾಗಿದೆ. ಯಾವ ಶೋಷಿತರಿಗೆ ವೈದಿಕರಿಂದ ನಾರಾಯಣಗುರುಗಳು ಬಿಡುಗಡೆಯನ್ನು ನೀಡಿದರೋ, ಅದೇ ಶೋಷಿತರು ಇಂದು ನಾರಾಯಣಗುರುಗಳು ಮತ್ತು ಅವರ ವೌಲ್ಯಗಳನ್ನು ವೈದಿಕರು ಅಪಭ್ರಂಶ ಮಾಡುವುದನ್ನು ತಡೆಯಬೇಕಾಗಿದೆ. ಈ ಮೂಲಕ ತಮ್ಮನ್ನು ತಾವೇ ರಕ್ಷಿಸಿಕೊಳ್ಳಬೇಕಾಗಿದೆ. ಕೇರಳವನ್ನೂ, ದೇಶವನ್ನು ಕೇಸರಿ ವರ್ಗದಿಂದ ಕಾಪಾಡಬೇಕಾಗಿದೆ.

ಎಡಪಕ್ಷಗಳನ್ನು ಹೊರತು ಪಡಿಸಿ, ಕಾರ್ಮಿಕರನ್ನು ಕ ಡೆಗಣಿಸಿದ ರಾಜಕೀಯ ಪಕ್ಷಗಳು!

ಚುನಾವಣಾ ಪ್ರಣಾಳಿಕೆಗಳಲ್ಲಿ ಕಾರ್ಮಿಕರ ಬಗ್ಗೆ ಉಲ್ಲೇಖವೇ ಇಲ್ಲ!

ಕರ್ನಾಟಕದಲ್ಲಿ ನಡೆಯುತ್ತಿರುವ ವಿಧಾನ ಸಭಾ ಚುನಾವಣೆಗೆ ಹಲವು ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿವೆ. ಆದರೇ, ಈ ಯಾವ ಪಕ್ಷಗಳೂ ಕಾರ್ಮಿಕರ ಬಗ್ಗೆ ಯಾವುದೇ ವಿಚಾರವನ್ನೂ ವ್ಯಕ್ತಪಡಿಸಿಲ್ಲ. ಕನಿಷ್ಠ ವೇತನ – ಸೇವಾ ಭದ್ರತೆಯ ಬಗ್ಗಯೂ ಯಾವುದೇ ಪಕ್ಷ ತುಟಿ ಬಿಚ್ಚ್ಇಲ್ಲ. ದಿನೇ ದಿನೇ ಏರುತ್ತಿರುವ ಬೆಲೆಯಿಂದ ಕಾರ್ಮಿಕ ವರ್ಗ ತತ್ತರಿಸುತ್ತಿರುವ ಬಗ್ಗೆಯೂ ಯಾವ ಪಕ್ಷಕ್ಕೂ ಯೋಚಿಸುವ ಸಮಯವೇ ಇಲ್ಲ! ಸಿಪಿಐ(ಎಂ) – ಸಿಪಿಐ ಪಕ್ಷಗಳು ಮಾತ್ರ ಇದಕ್ಕೆ ಹೊರತಾದವುಗಳು. ಅವು ಅಧಿಕಾರ ನಡೆಸುವುದು ಸಾಧ್ಯವಿಲ್ಲ. ಇಂತಹ ಸ್ಥಿತಿಯಲ್ಲಿ ಕಾರ್ಮಿಕರ ಬಗ್ಗೆ ಮಾತಾಡದ ಪಕ್ಷಗಳ ಬಗ್ಗೆ ಕಾರ್ಮಿಕ ವರ್ಗ ಯೋಚಿಸಬೇಕಿದೆ. ಗುತ್ತಿಗೆ ಪದ್ಧತಿಯನ್ನು ಕೈ ಬಿಡುವುದರ ಬಗ್ಗೆ ಯೋಚಿಸದೇ, ತ್ರಿಶಂಕು ಸ್ಥಿತಿಯಲ್ಲಿರುವ ಕಾರ್ಮಿಕರ ನೆರವಿಗೆ ಇನ್ನಾದರೂ ರಾಜಕೀಯ ಪಕ್ಷಗಳು ಯೋಚಿಸುವ ಸಮಯ ಇನ್ನೂ ಇದೆ. ಹಾಗಾಗಲಿ.

ಬಿಜೆಪಿ ಸರ್ಕಾರದ ಐದು ವರ್ಷಗಳ ಆಡಳಿತ ಕಾಲದಲ್ಲಿ ನಡೆದ ಜನದ್ರೋಹದ ಕಥನ- ‘ಮಹಾದ್ರೋಹದ ಕರಾಳ ದಿನಗಳು’ ಪು ಸ್ತಕ ಬಿಡುಗಡೆ ಸಮಾರಂಭ

ಉಡುಪಿ : ಎ.21, ಬಿಜೆಪಿ ಸರ್ಕಾರ ಕಳೆದ ಐದು ವರ್ಷದಲ್ಲಿ ಜನದ್ರೋಹವನ್ನೇ ಮಾಡಿದೆ. ಈ ಪಕ್ಷವನ್ನು ಮುಂದಿನ ಚುನಾವಣೆಯಲ್ಲಿ ಸೋಲಿಸುವುದರ ಜೊತೆಗೆ ಇತರ ರಾಜಕೀಯ ಪಕ್ಷಗಳನ್ನೂ ಎಚ್ಚರಿಸಬೇಕಿದೆ ಎಂದು ಕ.ಕೋ.ಸೌ.ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಲ್. ಅಶೋಕ್ ಹೇಳಿದರು. ಅವರು ವೇದಿಕೆಯ ಕೇಂದ್ರ ಸಮಿತಿ ಪ್ರಕಟಿಸಿರುವ ‘ಮಹಾ ದ್ರೋಹದ ಕರಾಳ ದಿನಗಳು’ ಎಂಬ ಪುಸ್ತಕವನ್ನು ಉಡುಪಿಯಲ್ಲಿ ಬಿಡುಗಡೆಗೊಳಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ವೇದಿಕೆಯ ಕೇಂದ್ರ ಸಮಿತಿ ಸದಸ್ಯ ರೆ.ಫಾ.ವಿಲಿಯಂ ಮಾರ್ಟಿಸ್, ಉಡುಪಿ ಜಿಲ್ಲಾ ಗೌರವಾಧ್ಯಕ್ಷ ಗೋಪಾಲ ಬಿ.ಶೆಟ್ಟಿ, ಅಧ್ಯಕ್ಷ ಜಿ.ರಾಜಶೇಖರ್, ದ.ಕ.ಜಿಲ್ಲಾಧ್ಯಕ್ಷ ಸುರೇಶ್ ಭಟ್ ಬಾಕ್ರಬೈಲು, ಜಿಲ್ಲಾ ಅಲ್ಪಸಂಖ್ಯಾತರ ವೇದಿಕೆಯ ಅಧ್ಯಕ್ಷ ಖತೀಬ್ ಅಬ್ದುಲ್ ರಶೀದ್, ಸಹಮತ ಕುಂದಾಪುರದ ಶಶಿಧರ ಹೆಮ್ಮಾಡಿ ಮತ್ತಿತರರು ಉಪಸ್ಥಿತರಿದ್ದರು.

Book Release Programe

ಆತ್ಮೀಯ ಬಂಧುಗಳೇ,
ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಕೇಂದ್ರ ಸಮಿತಿ ಪ್ರಕಟಿಸಿರುವ ‘ಮಹಾದ್ರೋಹದ ಕರಾಳ ದಿನಗಳು’ ಎಂಬ ಪುಸ್ತಕವನ್ನು ನಾಳೆ ಉಡುಪಿಯಲ್ಲಿ ಬಿಡುಗಡೆಗೊಳಿಸಲಾಗುವುದು. ನಾಳೆ ಸಂಜೆ :5.30ಕ್ಕೆ ಉಡುಪಿ ಗೀತಾಂಜಲಿ ಥಿಯೇಟರ್ ಬಳಿಯ ಬಾಳಿಗಾ ಆರ್ಕೇಡ್ ಕಟ್ಟಡದಲ್ಲಿನ ಮುಸ್ಲಿಮ್ ವೆಲ್ಫೇರ್ ಅಸೋಸಿಯೇಷನ್ ಹಾಲನಲ್ಲಿ ಈ ಪುಸ್ತಕ ಬಿಡುಗಡೆಯಾಗಲಿದ್ದು, ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಎಲ್.ಅಶೋಕ್ ಭಾಗವಹಿಸಲಿದ್ದಾರೆ. ತಾವು ಈ ಸಮಾರಂಭದಲ್ಲಿ ಉಪಸ್ಥಿತರಿದ್ದು, ಈ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕಾಗಿ ಈ ಮೂಲಕ ಕೇಳಿಕೊಳ್ಳುತ್ತೇವೆ.
ಜಿ.ರಾಜಶೇಖರ್ ( ಅಧ್ಯಕ್ಷರು), ಗೋಪಾಲ ಬಿ.ಶೆಟ್ಟಿ (ಗೌರವಾಧ್ಯಕ್ಷರು), ದಿನಕರ ಎಸ್.ಬೆಂಗ್ರೆ (ಪ್ರ.ಕಾರ್ಯದರ್ಶಿ), ಕ.ಕೋ.ಸೌ.ವೇದಿಕೆ , ಉಡುಪಿ ಜಿಲ್ಲಾ ಘಟಕ

Ambedkar Habba – 2013 Photos