ಪತ್ರಿಕಾ ಹೇಳಿಕೆ : ವಿದ್ಯಾರ್ಥಿನಿ ಮೇಲಿನ ಲೈಂಗಿ ಕ ದೌರ್ಜನ್ಯಕ್ಕೆ ಖಂಡನೆ

ಪತ್ರಿಕಾ ಹೇಳಿಕೆ:

ಪ್ರಕಟಣೆಯ ಕೃಪೆಗಾಗಿ :-

ಉಡುಪಿ : ನಿನ್ನೆ (ದಿನಾಂಕ: 20/06/2013, ಗುರುವಾರ) ರಾತ್ರಿ, ಮಣಿಪಾಲದಲ್ಲಿನ ಕೆ.ಎಂ.ಸಿ.ಯಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದ, ಕೇರಳ ಮೂಲದ ವಿದ್ಯಾರ್ಥಿನಿಯೊಬ್ಬಳ ಮೇಲೆ ಗ್ಯಾಂಗ್ ರೇಪ್ ನಡೆದ ಘಟನೆ ವರದಿಯಾಗಿದೆ. ಈ ಅಮಾನವೀಯ – ಕ್ರೂರ ಘಟನೆಯನ್ನು ಕರ್ನಾಟಕ ಕೋಮು ಸೌಹಾರ್ದ ವೇದಿಕೆ ತೀವ್ರವಾಗಿ ಖಂಡಿಸುತ್ತದೆ. ಮತ್ತು ಅಪರಾಧಿಗಳ ಮೇಲೆ ಕಠಿಣ ಶಿಕ್ಷೆಯನ್ನು ವಿಧಿಸುವುದರ ಮೂಲಕ ಇಂತಹ ಪ್ರಕರಣಗಳು ಮರುಕಳಿಸದಂತೆ ಎಚ್ಚರ ವಹಿಸುವುದರ ಜೊತೆಗೆ, ಮಹಿಳಾ ದೌರ್ಜನ್ಯ ಪ್ರಕರಣಗಳನ್ನು ಮಟ್ಟ ಹಾಕುವತ್ತ ಗಮನ ಹರಿಸಬೇಕಾಗಿ ಈ ಮೂಲಕ ಆಗ್ರಹಿಸುತ್ತದೆ.ಜೊತೆಗೆ ಮಣಿಪಾಲದಂತಹ ಅಂತರಾಷ್ಟ್ರೀಯ ನಗರದಲ್ಲಿ ಕೆಲವು ಪ್ರತಿಷ್ಠಿತರು ಅಕ್ರಮ ವ್ಯವಹಾರಗಳನ್ನು ನಡೆಸುತ್ತಿರುವುದನ್ನು ಗಮನಿಸಿದರೂ, ಪೊಲೀಸ್ ಇಲಾಖೆ ಮೌನವಾಗಿರುವುದು ಇಂತಹ ಕೃತ್ಯಗಳಿಗೆ ಪ್ರೇರಣೆ ನೀಡುವ ಸಾಧ್ಯತೆಗಳಿದ್ದು, ಇದನ್ನು ಮಟ್ಟ ಹಾಕುವುದರ ಜೊತೆಗೆ ಮಹಿಳೆಯರು ನಿರ್ಭಯವಾಗಿ ತಮ್ಮ ಸ್ವಾತಂತ್ರ್ಯವನ್ನು ಅನುಸರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತಿದ್ದೇವೆ.

ಜಿ.ರಾಜಶೇಖರ್ (ಅಧ್ಯಕ್ಷರು), ದಿನಕರ ಎಸ್.ಬೆಂಗ್ರೆ (ಕಾರ್ಯದರ್ಶಿ)

Advertisements