ಸೌಜನ್ಯ ಕೊಲೆ ಪ್ರಕರಣದ ಸಿ.ಓ.ಡಿ.ವರದಿಯಲ್ಲಿ ಈ ಉಲ್ಲೇಖ ಇದೆಯಾ?!

ಸೌಜನ್ಯ ಕೊಲೆ ಪ್ರಕರಣದ ಸಿ.ಓ.ಡಿ.ವರದಿಯಲ್ಲಿ ಈ ಉಲ್ಲೇಖ ಇದೆಯಾ?!

ಸೌಜನ್ಯ ಕೊಲೆ ಪ್ರಕರಣದ ಸಾಕ್ಷಿದಾರನ ನಿಗೂಢ ಸಾವು ಆಗಿದೆ ಎಂದು ಒಂದು ವರದಿ ತಿಳಿಸುತ್ತದೆ. ಇನ್ನೊಂದು ಪತ್ರಿಕಾ ವರದಿಯಲ್ಲಿ ಶಂಕಿತ ಪಟ್ಟಿಯ ಶ್ರೀಧರ ಕೆಲ್ಲೆಯ ಮನೆಯ ಕೆಲಸದಾಳು ಯುವತಿಯೂ ಇದಕ್ಕೊಂದು ಸಾಕ್ಷಿಯಾಗಿದ್ದಳು. ಸಿ.ಓ.ಡಿ.ಗೆ ಪ್ರಕರಣ ಹಸ್ತಾಂತರವಾಗುತ್ತಲೇ ಆ ಯುವತಿಯ ಮೃತದೇಹವೂ ಬಾವಿಯಲ್ಲಿ ಪತ್ತೆಯಾಗಿತ್ತೆನ್ನುತ್ತದೆ. ಹೀಗಿರುವಾಗ ಈಗ ಸಿ.ಓ.ಡಿ.ವರದಿ ಸಲ್ಲಿಕೆಯಾಗಿದೆ. ಅದರಲ್ಲಿ ಈ ಅಂಶಗಳು ಇವೆಯಾ ಎನ್ನುವುದನ್ನು ಪರಿಶೀಲಿಸಬೇಕಿದೆ. ಇಲ್ಲವಾದಲ್ಲಿ ಕೆ.ಪಿ.ಎಸ್.ಸಿ. ಹಗರಣದಲ್ಲಿ ಸಿಲುಕಿಕೊಂಡಿರುವ ಸಿರಿಗೌರಿ ಇರುವ ಸಿಓಡಿ ತಂಡ ತನಿಖೆ ಕೇವಲ ಕಾಟಾಚಾರದ್ದು ಅನ್ನಬೇಕಿದೆ. ಸಿಬಿಐ ಗೆ ಕೊಡಿ ಎನ್ನುವ ಧ್ವನಿ ಏರಬೇಕಿದೆ.

Advertisements

1984ರ ಸಿಖ್ ನರಮೇಧದಲ್ಲಿ ಆರೆಸ್ಸೆಸ್ ಕೈಗಳೂ ರಕ್ತಸಿಕ್ತವೇ!

 

 
1984ರ ಸಿಖ್ ನರಮೇಧದಲ್ಲಿ ಆರೆಸ್ಸೆಸ್ ಕೈಗಳೂ ರಕ್ತಸಿಕ್ತವೇ!

1984ರ ಸಿಖ್ ನರಮೇಧದಲ್ಲಿ ಆರೆಸ್ಸೆಸ್ ಕೈಗಳೂ ರಕ್ತಸಿಕ್ತವೇ!

– ಸುರೇಶ್ ಭಟ್, ಬಾಕ್ರಬೈಲ್
ರವಿವಾರ – ಅಕ್ಟೋಬರ್ -27-2013

(ವಾರ್ತಾ ಭಾರತಿ ಆನ್ ಲೈನ್)

1984ರ ಸಿಖ್ ನರಮೇಧ ಕಾಂಗ್ರೆಸ್ ಕಾರ್ಯಕರ್ತರ ಕೃತ್ಯವಾಗಿತ್ತು ಎನ್ನುವ ನಂಬಿಕೆ ವ್ಯಾಪಕವಾಗಿದೆ. ಅದು ನಿಜವೂ ಹೌದು. ಆದರೆ ಆ ಹತ್ಯಾಕಾಂಡದಲ್ಲಿ ಇನ್ನಿತರ ಶಕ್ತಿಗಳೂ ಭಾಗಿಯಾಗಿದ್ದವೆಂಬ ಇನ್ನೊಂದು ವಾಸ್ತವಾಂಶ ಹೆಚ್ಚಿನವರಿಗೆ ತಿಳಿದಿಲ್ಲ. ಸರಿಯಾದ ತನಿಖೆ ನಡೆಯದ ಕಾರಣಕ್ಕೆ ಸತ್ಯ ಎಲ್ಲೋ ಮರೆಯಾಗಿದೆ. ದಂಗೆಗಳ ವೇಳೆ ಹಂತಕ ಪಡೆಗಳು ಅಮಾಯಕ ಸಿಖ್ಖರನ್ನು ಕೊಚ್ಚಿ ಕೊಂದು ಸುಟ್ಟು ಹಾಕುತ್ತಿದ್ದ ದೃಶ್ಯಗಳನ್ನು ಕಂಡವರಿದ್ದಾರೆ. ಇವರು ಹಂತಕರ ಕ್ಷಿಪ್ರ ಕಾರ್ಯಾಚರಣೆ, ಸೇನಾಪಡೆಯ ಮಾದರಿಯಲ್ಲಿ ಗುರಿಗಳನ್ನು ಕರಾರುವಾಕ್ಕಾಗಿ ಗುರುತಿಸುತ್ತಿದ್ದ ರೀತಿ ನೋಡಿ ದಿಗ್ಭ್ರಾಂತರಾಗಿದ್ದರು. ವ್ಯವಸ್ಥಿತ ಹಾಗೂ ವ್ಯಾಪಕವಾದ ಜಾಲ, ಪೂರ್ವಸಿದ್ಧತೆ ಮತ್ತು ಅನುಭವಗಳಿಲ್ಲದೆ ಈ ಮಾದರಿಯ ಕಾರ್ಯಾಚರಣೆ ಅಸಾಧ್ಯ.

ಬಾಬರಿ ಮಸೀದಿ ಧ್ವಂಸ ಪ್ರಕರಣದ ತನಿಖೆ ಜಾರಿಯಲ್ಲಿದ್ದ ಕಾಲದಲ್ಲಿ ಲೈಬರ್‌ಹಾನ್ ಆಯೋಗದ ಎದುರು ಹಾಜರಾಗುತ್ತಿದ್ದ ಲಾಲ್ ಕೃಷ್ಣ ಅಡ್ವಾಣಿ ಒಮ್ಮೆ ‘‘1984ರ ಸಿಖ್ ವಿರೋಧಿ ದಂಗೆಗಳು ಬಾಬರಿ ಮಸೀದಿ ಧ್ವಂಸಕ್ಕಿಂತಲೂ ಹೆಚ್ಚು ಲಜ್ಜಾಸ್ಪದ ಕೃತ್ಯ’’ ಎಂಬ ಹೇಳಿಕೆಯನ್ನೂ ನೀಡಿದ್ದರು. ಆದರೆ ಸತ್ಯವನ್ನು ಎಷ್ಟೇ ಮುಚ್ಚಿಡಲೆತ್ನಿಸಿದರೂ ಒಂದಲ್ಲ ಒಂದು ವಿಧದಲ್ಲಿ ಅದು ಬಯಲಾಗಿಯೇ ತೀರುತ್ತದೆ.

11.4.1994ರ ‘ಪಯೊನಿಯರ್’ ಪತ್ರಿಕೆಯಲ್ಲಿ ಪ್ರಕಟವಾದ ವರದಿಯೊಂದು ವಾಸ್ತವವನ್ನು ತೆರೆದಿಡುತ್ತದೆ: ‘‘1984ರ ದಂಗೆಗಳಿಗೆ ಸಂಬಂಧಿಸಿದಂತೆ ಆಸ್ತಿದಹನ/ ದಂಗೆ/ ಕೊಲೆಯತ್ನ ಇತ್ಯಾದಿ ಆರೋಪಗಳಿರುವ ಸುಮಾರು 600 ಪ್ರಕರಣಗಳು ದಾಖಲಿಸಲ್ಪಟ್ಟಿವೆ. …ಇವುಗಳ ಪೈಕಿ ಹೆಚ್ಚಿನವು ದಿಲ್ಲಿಯ ಶ್ರೀನಿವಾಸ್‌ಪುರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ. 49 ಜನ ಬಂಧಿತರಲ್ಲಿ ಸುಮಾರು ಅರ್ಧದಷ್ಟು ಮಂದಿ ಬಿಜೆಪಿಗರು. ಇವರಲ್ಲಿ ಪ್ರೀತಮ್ ಸಿಂಘ್, ರಾಮ್ ಕುಮಾರ್ ಜೈನ್ ಮುಂತಾದ ಪ್ರಮುಖ ಬಿಜೆಪಿ ಕಾರ್ಯಕರ್ತರಿದ್ದಾರೆ. ……

ದಾಖಲಾಗಿರುವ ಒಟ್ಟು 14 ಎಫ್‌ಐಆರ್‌ಗಳಲ್ಲಿ ಒಂದು ಎಫ್‌ಐಆರ್ (376/84) ಹೊರತುಪಡಿಸಿ ಮಿಕ್ಕೆಲ್ಲವೂ ಜೈನ್ ಅಗರ್‌ವಾಲ್ ಸಮಿತಿಯ ಸಲಹೆಯಂತೆ ಕಳೆದೆರಡು ವರ್ಷಗಳ ಅವಧಿಯಲ್ಲಿ (1992-94) ದಾಖಲಿಸಲ್ಪಟ್ಟಿವೆ.’’

ಬಹುಶಃ ಈ ವಿಚಾರಗಳೆಲ್ಲ ಅಡ್ವಾಣಿಗೆ ಗೊತ್ತಿರಲಿಲ್ಲ ಅಥವಾ ಗೊತ್ತಿದ್ದೂ ಸುಳ್ಳು ಹೇಳಿದರೇ? 1984ರ ದಂಗೆಗಳ ಸತ್ಯವನ್ನು ಅನಾವರಣಗೊಳಿಸುವ ಮತ್ತೊಂದು ಪ್ರಬಲ ಸಾಕ್ಷ್ಯವೆಂದರೆ ನವೆಂಬರ್ 8, 1984ರಂದು ಆರೆಸ್ಸೆಸ್‌ನ ಹಿರಿಯ ಸಿದ್ಧಾಂತವಾದಿ ನಾನಾಜಿ ದೇಶಮುಖ್ ಬರೆದ ಲೇಖನ. ಮೂಲತಃ ಹಿಂದಿಯಲ್ಲಿರುವ ಈ ‘ಆತ್ಮಾವಲೋಕನದ ಕೆಲವು ಕ್ಷಣಗಳು’ ಜಾರ್ಜ್ ಫೆರ್ನಾಂಡಿಸ್ ಸಂಪಾದಕತ್ವದ ‘ಪ್ರತಿಪಕ್ಷ್’ ಎಂಬ ವಾರಪತ್ರಿಕೆಯಲ್ಲಿ ಪ್ರಕಟವಾಗಿದೆ.

ಸದರಿ ಲೇಖನ ತಮ್ಮ ಸಂಪಾದಕೀಯ ನೀತಿಗೆ ವಿರುದ್ಧವಾಗಿದ್ದರೂ ಅದನ್ನು ಪ್ರಕಟಿಸಲು ನಿರ್ಧರಿಸಿರುವುದಕ್ಕೆ ಕಾರಣಗಳನ್ನು ಕೊಡುತ್ತಾ ಜಾರ್ಜ್ ಬರೆಯುತ್ತಾರೆ: ‘‘ಪ್ರಸ್ತುತ ಲೇಖನ ಇಂದಿರಾ ಕಾಂಗ್ರೆಸ್ ಮತ್ತು ಆರೆಸ್ಸೆಸ್ ಮಧ್ಯೆ ಪರಸ್ಪರ ಲಾಭಕ್ಕಾಗಿ ಕುದುರುತ್ತಿದ್ದ ಹೊಸ ಸಂಬಂಧಗಳ ಮೇಲೆ ಬೆಳಕು ಚೆಲ್ಲುತ್ತದೆ. ಹಾಗಾಗಿ ಅದಕ್ಕೊಂದು ಚಾರಿತ್ರಿಕ ಮಹತ್ವವಿದೆ. ಆದುದರಿಂದಲೆ ಈ ಲೇಖನವನ್ನು ಪ್ರಕಟಿಸಲು ನಿರ್ಧರಿಸಲಾಗಿದೆ.’’

ದೇಶಮುಖರ ಲೇಖನವನ್ನು ದೆಹಲಿ ವಿಶ್ವವಿದ್ಯಾನಿಲಯದ ಸತ್ಯವತಿ ಕಾಲೇಜಿನ ರಾಜಕೀಯ ಶಾಸ್ತ್ರ ವಿಭಾಗದಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿರುವ ಶಂಸುಲ್ ಇಸ್ಲಾಮ್‌ ಅವರು ಪೂರ್ತಿಯಾಗಿ ವಿಶ್ಲೇಷಿಸಿದ್ದಾರೆ.

ಶಂಸುಲ್ ಹೇಳುವಂತೆ ದೇಶಮುಖರ ಈ ಲೇಖನ 1984ರ ದಂಗೆ ಕುರಿತಂತೆ ಆರೆಸ್ಸೆಸ್‌ನ ನೈಜ ನಿಲುವುಗಳನ್ನು ಪ್ರತಿನಿಧಿಸುತ್ತದೆ; ಅವರ ಸ್ವಂತ ನಿಲುವುಗಳನ್ನಲ್ಲ. ಅದರಲ್ಲಿ ನಾವು ಸಿಖ್ ನರಮೇಧದ ಸಮರ್ಥನೆಯನ್ನು ಗುರುತಿಸಬಹುದು.

ಆರೆಸ್ಸೆಸ್ ಭಾರತದ ಎಲ್ಲಾ ಅಲ್ಪಸಂಖ್ಯಾತ ಸಮುದಾಯಗಳ ಬಗೆಗೆ ತಳೆದಿರುವ ಕುಲಗೆಟ್ಟ ಫ್ಯಾಸಿಸ್ಟ್ ನಿಲುವನ್ನೂ ಕಾಣಬಹುದು. ಆರೆಸ್ಸೆಸ್ ಯಾವತ್ತೂ ವಾದಿಸುವುದೇನೆಂದರೆ ‘‘ಇಸ್ಲಾಮ್ ಮತ್ತು ಕ್ರೈಸ್ತ ಧರ್ಮಗಳು ವಿದೇಶೀ ಮೂಲದವು; ಆದುದರಿಂದಲೆ ತಾವು ಮುಸ್ಲಿಮರನ್ನೂ ಕ್ರೈಸ್ತರನ್ನೂ ದ್ವೇಷಿಸುತ್ತೇವೆ’’ ಎಂದು. ಆದರೆ ಇಲ್ಲಿ ನೋಡಿದರೆ ಅದು ಅಪ್ಪಟ ಸ್ವದೇಶೀ ಧರ್ಮವೊಂದರ ಅನುಯಾಯಿಗಳಾಗಿರುವ ಸಿಖ್ಖರ ನರಮೇಧದಲ್ಲಿ ಭಾಗಿಯಾಗಿದೆ. ಹಿಂದೂ ಸಿಖ್ ಐಕ್ಯತೆ ಕುರಿತು ಮಾತನಾಡುತ್ತಿದ್ದ ಮಂದಿ ಅದಕ್ಕೆ ಸರೀ ವಿರುದ್ಧವಾದ ಕೃತ್ಯವನ್ನು ಎಸಗಿದ್ದಾರೆ.

ದೇಶಮುಖರು ಸಿಖ್ ನರಮೇಧವನ್ನು ಸಮರ್ಥಿಸುತ್ತ ಅದಕ್ಕೆ ಕೊಡುವ ಕಾರಣಗಳನ್ನು ಶಂಸುಲ್ ಇಸ್ಲಾಮ್ ಪಟ್ಟಿಮಾಡಿದ್ದಾರೆ.

•ದೇಶಮುಖರ ಪ್ರಕಾರ ಸಿಖ್ಖರ ಮಾರಣಹೋಮದಲ್ಲಿ ಯಾವುದೇ ಗುಂಪಿನ ಅಥವಾ ಸಮಾಜವಿರೋಧಿ ಶಕ್ತಿಗಳ ಕೈವಾಡ ಇರಲಿಲ್ಲ. ಇಂದಿರಾ ಹತ್ಯೆಯ ಸುದ್ದಿ ತಿಳಿದು ಭಾರತದ ಹಿಂದೂಗಳಿಗೆ ಯಥಾರ್ಥಕ್ಕೂ ಕ್ರೋಧ ಉಕ್ಕಿಬಂದಿದೆ. ಪರಿಣಾಮವಾಗಿ ಸಿಖ್ ಸಮುದಾಯದ ಮೇಲೆ ಸೇಡು ತೀರಿಸಿ ಕೊಂಡಿದ್ದಾರೆ. ‘‘….ಸಿಖ್ಖೇತರ ಜನರು ಇಂದಿರಾ ಗಾಂಧಿ ಕೊಲೆಯಾದ ಸುದ್ದಿ ಕೇಳಿ ಸ್ತಂಭೀಭೂತರಾಗಿ ದಾರಿಕಾಣ ದಂತಾಗಿದ್ದರು. ಅವರು, ಆಕೆಯ ಕೊಲೆಯಾದುದಕ್ಕೆ ಸಿಖ್ಖರು ಸಂಭ್ರಮಾಚರಣೆ ಮಾಡಿದರೆಂಬ ವದಂತಿಗಳನ್ನು ನಂಬಿದರು’’ (ಆತ್ಮಾವಲೋಕನದ ಕೆಲವು ಕ್ಷಣಗಳು).

•ದೇಶಮುಖರು ಇಂದಿರಾ ಗಾಂಧಿಯ ಕಾವಲುಗಾರರು ಮಾಡಿದ ದುಷ್ಕೃತ್ಯವನ್ನು ಪ್ರತ್ಯೇಕ ಘಟನೆಯೆಂದು ಪರಿಗಣಿಸುವ ಬದಲು ಅವರಿಬ್ಬರೂ ಸಿಖ್ಖರು ಎಂಬ ಒಂದೇ ಕಾರಣಕ್ಕಾಗಿ ಆ ಕೃತ್ಯವನ್ನು ಇಡೀ ಸಮುದಾಯದೊಂದಿಗೆ ಥಳುಕು ಹಾಕುತ್ತಾರೆ. ಇಲ್ಲಿ ದೇಶಮುಖರ ಬರಹದ ರೀತಿ ಹೇಗಿದೆಯೆಂದರೆ ಅವರಿಬ್ಬರೂ ತಮ್ಮ ಸಮುದಾಯದ ಆದೇಶದಂತೆ ನಡೆದುಕೊಂಡಿದ್ದರು ಹಾಗಾಗಿ ಸಿಖ್ ಸಮುದಾಯದ ಮೇಲಿನ ದಾಳಿಗಳು ಸಮರ್ಥನೀಯವೆಂದು ಓದುಗರಿಗೆ ಭಾಸವಾಗುವಂತಿದೆ.

•ಸಿಖ್ಖರು ತಮ್ಮ ಮೇಲಿನ ದಾಳಿಗಳನ್ನು ತಾವಾಗಿಯೇ ಆಹ್ವಾನಿಸಿಕೊಂಡರು ಎನ್ನುವ ದೇಶಮುಖರು ಕಾಂಗ್ರೆಸ್ ಪಕ್ಷ ನರಮೇಧಕ್ಕೆ ಸಮರ್ಥನೆಯಾಗಿ ಮುಂದಿಟಿದ್ದ ಪ್ರಮೇಯಕ್ಕೆ ಇನ್ನಷ್ಟು ಬಲತುಂಬುತ್ತಾರೆ.

•ಸ್ವರ್ಣ ಮಂದಿರದಲ್ಲಿ ನಡೆದ ‘ಆಪರೇಷನ್ ಬ್ಲೂಸ್ಟಾರ್’ ಕಾರ್ಯಾಚರಣೆಯನ್ನು ದೇಶಮುಖರು ವೈಭವೀಕರಿಸುತ್ತಾರೆ. ಅದನ್ನು ವಿರೋಧಿಸಿದವರು ದೇಶದ್ರೋಹಿಗಳೆಂದು ಹೇಳುತ್ತಾರೆ. ಅತ್ತ ಸಾವಿರಾರು ಸಿಖ್ಖರ ಕಗ್ಗೊಲೆ ನಡೆಯುತ್ತಿದ್ದರೆ ಇವರು ನರಮೇಧಕ್ಕೆ ಸೈದ್ಧಾಂತಿಕ ಸಮರ್ಥನೆಯಾಗಿ ಸಿಖ್ಖರ ಉಗ್ರಗಾಮಿತ್ವದ ಬಗ್ಗೆ ದೇಶಕ್ಕೆ ಎಚ್ಚರಿಕೆ ನೀಡುತ್ತಾರೆ.

•ಪಂಜಾಬಿನಲ್ಲಿ ನಡೆದ ಹಿಂಸಾಚಾರದ ಘಟನೆಗಳಿಗೆ ಇಡೀ ಸಿಖ್ ಸಮುದಾಯವನ್ನು ಹೊಣೆ ಮಾಡುತ್ತಾರೆ.

•ದೇಶ್‌ಮುಖ್ ಪ್ರಕಾರ ನರಮೇಧಕ್ಕೆ ಸಿಖ್ ಬುದ್ಧಿಜೀವಿಗಳೇ ಕಾರಣ ಹೊರತು ಹಂತಕ ಪಡೆಗಳಲ್ಲ; ಸಿಖ್ ಬುದ್ಧಿಜೀವಿಗಳು ಸಿಖ್ಖರನ್ನು ಉಗ್ರಗಾಮಿ ಸಮುದಾಯವಾಗಿ ಪರಿವರ್ತಿಸಿ ಅವರ ಹಿಂದೂ ಬೇರುಗಳನ್ನು ಕತ್ತರಿಸಿದ ಪರಿಣಾಮವಾಗಿ ಹಿಂದೂ ರಾಷ್ಟ್ರೀಯವಾದಿಗಳ ದಾಳಿಗೆ ತುತ್ತಾಗಬೇಕಾಯಿತು ಎಂಬರ್ಥದಲ್ಲಿ ಬರೆಯುತ್ತಾರೆ.ಇಲ್ಲಿ ಸ್ವಾರಸ್ಯಕರ ವಿಷಯವೆಂದರೆ ದೇಶಮುಖರಿಗೆ ಹಿಂದೂಗಳು ಉಗ್ರಗಾಮಿಗಳಾಗುವುದು ಒಂದು ಸಮಸ್ಯೆಯಲ್ಲ. ಎಲ್ಲಾ ಸಿಖ್ಖರನ್ನು ಒಂದೇ ತಂಡದವರಂತೆ ಪರಿಗಣಿಸುವ ಅವರು ದಾಳಿಗಳು ಹಿಂದೂ ರಾಷ್ಟ್ರೀಯವಾದಿಗಳ ಸಹಜ ಪ್ರತಿಕ್ರಿಯೆ ಎಂಬ ಸಮರ್ಥನೆ ಕೊಡುತ್ತಾರೆ.

• ಇಂದಿರಾ ಗಾಂಧಿಯನ್ನು ದೇಶದ ಐಕ್ಯತೆ ಸಾಧಿಸಿದ ಏಕೈಕ ನಾಯಕಿಯೆಂದು ಬಣ್ಣಿಸುತ್ತಾರೆ. ‘‘….ಅಂತಿಮವಾಗಿ ಇಂದಿರಾ ಗಾಂಧಿಗೆ ಇತಿಹಾಸದ ಹೊಸಿಲಲ್ಲಿ ಮಹಾನ್ ಹುತಾತ್ಮಳ ಶಾಶ್ವತ ಸ್ಥಾನ ಸಿಕ್ಕಿಯೇಬಿಟ್ಟಿದೆ.ತನ್ನ ನಿರ್ಭೀತಿಯ ಗುಣ ಹಾಗೂ ಚಾತುರ್ಯದ ಮೂಲಕ ಪಡೆದ ಶಕ್ತಿಸಾಮರ್ಥ್ಯದಿಂದಾಗಿ ಒಂದು ದಶಕಕ್ಕೂ ಅಧಿಕ ಕಾಲ ಅತಿಮಾನುಷಳಂತೆ ದೇಶವನ್ನು ಮುನ್ನಡೆಸಲು ಆಕೆಗೆ ಸಾಧ್ಯವಾಯಿತು….’’ (ಆತ್ಮಾವಲೋಕನದ ಕೆಲವು ಕ್ಷಣಗಳು).

• ಅಂತಹ ಶ್ರೇಷ್ಠ ನಾಯಕಿಯ ಕೊಲೆಯಾದಾಗ ಈ ತೆರನಾದ ಸಾಮೂಹಿಕ ಹತ್ಯೆಗಳು ಅನಿವಾರ್ಯವೆನ್ನುತ್ತಾರೆ.

•ಲೇಖನದ ಕೊನೆಯಲ್ಲಿ ಇಂದಿರಾ ಹತ್ಯೆಯ ಬಳಿಕ ಪ್ರಧಾನಿ ಪಟ್ಟ ಅಲಂಕರಿಸಿದ ರಾಜೀವ್ ಗಾಂಧಿಯನ್ನು ಪ್ರಶಂಸಿಸುತ್ತಾರಲ್ಲದೆ ಆತನಿಗೆ ಆಶೀರ್ವಾದ ಮಾಡುತ್ತಾರೆ. ರಾಜೀವ್ ಗಾಂಧಿ ಸಿಖ್ ನರಮೇಧವನ್ನು ಸಮರ್ಥಿಸಿದ್ದರಲ್ಲದೆ ‘‘ದೊಡ್ಡ ಮರವೊಂದು ಧರೆಗುರುಳಿದಾಗ ಕಂಪನಗಳು ಸಂಭವಿಸಿಯೇ ಸಂಭವಿಸುತ್ತವೆ’’ ಎಂದಿದ್ದರು.

•ಸಿಖ್ ಹತ್ಯಾಕಾಂಡವನ್ನು ಗಾಂಧೀಜಿ ಹತ್ಯೆಯಾಗುತ್ತಲೆ ಆರೆಸ್ಸೆಸ್ ಸ್ವಯಂಸೇವಕರ ಮೇಲೆ ನಡೆದ ದಾಳಿಗಳಿಗೆ ಹೋಲಿಸುವುದಲ್ಲದೆ ಸಿಖ್ಖರು ಮೌನವಾಗಿ ಎಲ್ಲವನ್ನೂ ಸಹಿಸಬೇಕೆನ್ನುತ್ತಾರೆ. ಗಾಂಧೀಜಿಯನ್ನು ಕೊಂದವರು ಆರೆಸ್ಸೆಸ್ ಮತ್ತು ಹಿಂದೂತ್ವ ಸಿದ್ಧಾಂತಗಳಿಂದ ಪ್ರೇರಿತರಾದವರೆನ್ನುವುದು ನಮಗೆಲ್ಲರಿಗೂ ಗೊತ್ತಿದೆ. ಆದರೆ ಇಲ್ಲಿ ಇಂದಿರಾ ಕೊಲೆಗೂ ಅಮಾಯಕ ಸಿಖ್ಖರಿಗೂ ಸಂಬಂಧವೇ ಇರಲಿಲ್ಲ.

ಸಿಖ್ಖರ ಮೇಲಿನ ಹಿಂಸಾಚಾರ ತಡೆಗಟ್ಟಲು ಸೂಕ್ತ ಪರಿಹಾರೋಪಾಯಗಳಿಗಾಗಿ ಕೇಂದ್ರ ಸರಕಾರವನ್ನು ಒತ್ತಾಯಿಸುವ ಒಂದೇ ಒಂದು ವಾಕ್ಯವೂ ಲೇಖನದಲ್ಲಿ ಕಾಣಸಿಗುವುದಿಲ್ಲ.

 

ದೇಶಮುಖರ ಲೇಖನವನ್ನು ನವೆಂಬರ್ 8ರಂದು ಬಿಡುಗಡೆಗೊಳಿಸಲಾಗಿದೆ. ಸಿಖ್ಖರ ಮೇಲಿನ ದಾಳಿ ಅಕ್ಟೋಬರ್ 31ರಂದು ಆರಂಭವಾಗಿದೆ. ಅಷ್ಟೂ ದಿನಗಳ ಕಾಲ ಸಿಖ್ಖರನ್ನು ದಾಳಿಗಳಿಂದ ಪಾರುಮಾಡುವ ಯತ್ನಗಳಾಗಿಲ್ಲ. ಅತ್ಯಧಿಕ ಕೊಲೆಗಳು ನವಂಬರ್ 5ರಿಂದ 10ರ ನಡುವೆ ಸಂಭವಿಸಿವೆ. ಆದರೆ ದೇಶಮುಖರು ಇದರ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ.

 

ಲೇಖನದಲ್ಲೆಲ್ಲೂ ಆರೆಸ್ಸೆಸ್‌ನ ಸ್ವಯಂಸೇವಕರು ಸಿಖ್ಖರ ಸಹಾಯಕ್ಕೆ ಹೋಗಿರುವ ಕುರಿತಂತೆ ಯಾವುದೇ ಉಲ್ಲೇಖಗಳಿಲ್ಲ. ಆರೆಸ್ಸೆಸ್‌ನ ನೈಜ ಉದ್ದೇಶ ಇದರಿಂದ ಸ್ಪಷ್ಟವಾಗುತ್ತದೆ. ಖಾಕಿ ಚೆಡ್ಡಿ ತೊಟ್ಟ ಸ್ವಯಂಸೇವಕರು ಸಮಾಜಸೇವೆಯಲ್ಲಿ ನಿರತರಾಗಿರುವ ಫೋಟೊ ಮತ್ತಿತರ ದಾಖಲೆಗಳನ್ನು ಹಂಚುವುದರಲ್ಲಿ ಯಾವತ್ತೂ ಆರೆಸ್ಸೆಸ್ ನಂಬರ್ ವನ್. ಆದರೆ 1984ರ ದಂಗೆಗಳ ವೇಳೆ ಸಮಾಜಸೇವೆ ಮಾಡಿರುವ ಒಂದಾದರೂ ದಾಖಲೆ ಅವರಲ್ಲಿಲ್ಲ. 

 

ದೇಶಮುಖರ ಲೇಖನ ಇಂದಿರಾ ಕಾಂಗ್ರೆಸ್ ಮತ್ತು ಆರೆಸ್ಸೆಸ್ ನಡುವೆ ರಹಸ್ಯ ಒಪ್ಪಂದವೊಂದು ಏರ್ಪಟ್ಟಿತ್ತು ಎಂಬುದಕ್ಕೆ ಸಾಕಷ್ಟು ಸೂಚನೆಗಳನ್ನು ಒದಗಿಸುತ್ತದೆ. ಆ ಒಪ್ಪಂದ ರಾಜಕೀಯ ಕ್ಷೇತ್ರಕ್ಕಷ್ಟೇ ಸೀಮಿತವಾಗಿರಲಿಲ್ಲ ಎಂಬುದಕ್ಕೆ ದಿಲ್ಲಿಯ ಶ್ರೀನಿವಾಸ್‌ಪುರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಗಳೆ ಸಾಕ್ಷಿಯಲ್ಲವೇ?

ನಮೋ ಗಾದೆಗಳು (2 ನೇ ಕಂತು)

2ನೇ ಕಂತು:
ಆಡೋದು ದೇಶಭಕ್ತಿಯ ಮಡಿ, ಉಂಬೋದು ಉಳ್ಳೋರ ಕಾಸಿನ ಮೈಲಿಗೆ

(ನಸ್‌ಬಂಧಿ ಮಾತು) ಆಡಿ ತಪ್ಪಬೇಡ (ಗುಲ್ಬಾರ್ಗ್‌ ಹತ್ಯೆ) ಮಾಡಿ ಸಿಕ್ಕಬೇಡ

ಚೆಡ್ಡಿ ಹಾಕಿ ಹಾಕಿ ಸೀಟು, ದೇಸ ಒಡೆದು ಓಟು

ನಮೋ ಮೇಲೆ ನಮೋ(ಬ್ರಿಗೇಡ್)ಬಿದ್ದು (ನಾಡ)ದೋಣು ಬರಿದಾಯ್ತು

ಆದ್ರೇ ಪಿ.ಎಂ. ಪಟ್ಟ, ಹೋದ್ರೆ ಒಂದು (ಮುಜಫರ್ಪುರ್) ಚಟ್ಟ

ಆಗೋ ಚುನಾವಣೆ ಆಗುತ್ತಿರಲಿ, ಊದೋ ನಮೋ ಶಂಖ ಊದಿ ಬಿಡುವ

ಆರು ಯತ್ನ ನಮೋದು, ಏಳನೇದು ಓಟಾಕೋನಿಚ್ಛೆ

ನಮೋ ದಾಡಿ ಬಿಳಿಯಾದ್ರೆ ಬುದ್ಧಿ ಬಿಳಿಯೇನು

ಚೆಡ್ಡಿ ಸಾಕಿದ ನಮೋ ದೇಸಾದ ಬೊಜ್ಜಕ್ಕೂ ಬಾರದು

ಬಡವರಿಗೆ ದಕ್ಕದ ರೊಟ್ಟಿ ಚಿಂತೆ ನಮೋಗೆ ಸವ್ಕಾರ ಬೊಕ್ಕಸದ ಚಿಂತೆ

ನಮೋ ಗಾದೆಗಳು:

ಬಂಧು-ಭಗಿನಿಯರೇ,
’ವಂದೇ ಮಾತರಂ’
ಈಗ ಪಾಠ-2

ನಮೋ ಗಾದೆಗಳು:
ನಮೋ!ಚುನಾವಣೆ ಅಂದ್ರೆ ನಾನೇ ಪಿಎಂ ಅಂದ
ನಮೋನ ಮಂತ್ರಕ್ಕಿಂತ ಉಗುಳೇ ಜಾಸ್ತಿ
(ನಮೋ) ಆಸೆ ಹೆಚ್ಚಿತು, (ದೇಶದ) ಆಯಸ್ಸು ಕಮ್ಮಿ ಆಯ್ತು
(ನಮೋ)ಅಬದ್ಧಕ್ಕೆ ಅಪ್ಪಣೆಯೇ ಅಂದ್ರೆ ಬಾಯಿಗೆ ಬಂದಷ್ಟು
ನಮೋನ ಬಡಿವಾರವೆಲ್ಲ ಹೆರರ ಮತದ ಮೇಲೆ
ಕಾಂಗ್ರೆಸ್ಸ್ ಕತ್ತೆ ಕೊಂಡು ಹೋಗಿ, ನಮೋಗೆ ತ್ಯಾಗ ಹಾಕಿದ ಹಾಗೆ
ನಮೋ ದೊಣ್ಣೆ  ದೇಶದ ತಲೆ
ಗಾಂಧಿ ಮಾಡು ಅಂದ್ರೆ (ನಮೋ) ಗೋಡ್ಸೆ ಮಾಡಿದ
 
 

‘Feku’ Table Fan

‘Feku’ Table Fan

 

“A man dies. In heaven he sees a large wall full of clocks. He asks Angel: What are these for? Angel answers: These are lie clocks, every person has lie clock, whenever you lie on earth, clock moves.

“The Man points towards a clock and asks: whose clock is this? Angel says: it’s Vivekanand’s. It never moved showing that he never told a lie. The man asks: Where is Narendra Modi”s clock? angel replies: That”s in our office. We use it as TABLE FAN..!”

ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಬೆಂಗಳೂರು ಘಟಕದ ಮಹತ್ವದ ಸಭೆ

ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಬೆಂಗಳೂರು ಘಟಕದ ಮಹತ್ವದ ಸಭೆ

ಯು ಇಂದು ನಡೆಯಿತು. ಈ ಸಭೆಯಲ್ಲಿ ನವೆಂಬರ್ 17 ರಂದು ನರೇಂದ್ರ ಮೋದಿ ಬೆಂಗಳೂರಿಗೆ ಆಗಮಿಸುತ್ತಿರುವ ಹಿನ್ನಲೆಯಲ್ಲಿ ಚರ್ಚೆ ನಡೆಯಿತು. ಹಲವಾರು ಸಂಘಟಣೆಗಳ ಮುಖಂಡರು ಮತ್ತು ಸದಸ್ಯರು ಭಾಗವಹಿಸಿದರು. ಸಾಕಷ್ಟು ಚರ್ಚೆಯ ನಂತರ ಈ ಕೆಳಗಂಡ ನಿರ್ಣಯಗಳನ್ನು ಕೈಗೊಳ್ಳಲಾಯಿತು:
1. ನರಹಂತಕ ನರೇಂದ್ರ ಮೋದಿ – ಹಿಂತಿರುಗು. (Mass Murderer Narendra Modi Go Back). ಕರ್ನಾಟಕ ಗುಜರಾತ್ ಅಲ್ಲ. ಮೋದಿ ಸೋಲಿಸಿ ಭಾರತ ಉಳಿಸಿ, ಎಂಬ ಘೋಷಣೆಯೊಂದಿಗೆ……….
2. ನವೆಂಬರ್ 16 ರಂದು ರಾಜ್ಯಾದ್ಯಂತ ಎಲ್ಲ ಸಂಘಟನೆಗಳು ಮತ್ತು ಸಮುದಾಯಗಳನ್ನು ಒಟ್ಟು ಸೇರಿಸಿಕೂಂಡು ಬೃಹತ್ ಪ್ರತಿಭಟನಾ ಪ್ರದರ್ಶನಗಳನ್ನು ನಡೆಸಬೇಕು.
3. ನವೆಂಬರ್ 17 ರಂದು ಬೆಂಗಳೂರಿನ ಬನ್ನಪ್ಪ ಪಾರ್ಕ್‍ನಿಂದ ಟೌನ್ ಹಾಲ್‍ನ ತನಕ ಮೆರವಣಿಗೆ ನಡೆಸಿ ಟೌನ್ ಹಾಲ್ ಮುಂದೆ ಸಮಾವೇಶಗೊಳ್ಳಬೇಕು. ಪ್ರತಿಭಟನೆ ಕಾರ್ಯಕ್ರಮಗಳಿಗೆ ಪೋಲಿಸರು ಅನುಮತಿ ನೀಡದಿದ್ದರೂ ಸಹ ಬಂಧನಕ್ಕೊಳಗಾಗಿ ಪ್ರತಿಭಟಿಸಬೇಕು.
4. ಮೋದಿಯ ಅಭಿವೃದ್ಧಿ ಮಾದರಿಯನ್ನು ಎಕ್ಸ್‍ಪೋಸ್ ಮಾಡುವ ಕರಪತ್ರ, ಪೋಸ್ಟರ್‍ಗಳು, ಇನ್ನಿತರ ಪರಿಣಾಮಕಾರಿ ವಿಧಾನಗಳನ್ನ ಅಳವಡಿಸಬೇಕು.

ಗುಜರಾತ್ ನಂ.1-ಹೇಗೆ ?

ಗುಜರಾತ್ ನಂ.1-ಹೇಗೆ ?

– (ದೊಡ್ಡಿಪಾಳ್ಯ ನರಸಿಂಹಮೂರ್ತಿ ಬರೆದ ಈ ಲೇಖನ ‘ಬ್ಯುಸಿನೆಸ್ ಗುರು’ ಪತ್ರಿಕೆಯಲ್ಲಿ ಇತ್ತೀಚೆಗೆ ಪ್ರಕಟವಾಗಿದೆ)

ನಾವು ಯಾವುದೇ ದಿನಪತ್ರಿಕೆ ಅಥವ ನ್ಯೂಸ್ ಚಾನೆಲ್ಗಳತ್ತ ಕಣ್ಣುಹಾಯಿಸಿದರೂ ಗುಜರಾತ್ ಮಾದರಿಯ ಅಭಿವೃದ್ದಿ ಎಂಬ ಮಾತು ಪದೇಪದೇ ಕೇಳಿಬರುತ್ತದೆ. ನರೇಂದ್ರ ಮೋದಿ ಗುಜರಾತ್ ರಾಜ್ಯವನ್ನು ದೇಶದಲ್ಲೇ ನಂ.1 ಮಾಡಿದ್ದಾರೆಂಬ ಹೊಗಳಿಕೆಗಳ ಮಹಾಪೂರವೇ ಹರಿಯುತ್ತಿರುತ್ತದೆ. ಹೀಗೆ ಕುತೂಹಲಗೊಂಡು ಗುಜರಾತ್ ಅಭಿವೃದ್ಧಿಯನ್ನು ಕೆದಕಲು ಶುರು ಮಾಡಿದರೆ ಹಲವು ಕುತೂಹಲಕಾರಿ ಹಾಗು ವಿರೋಧಾಭಾಸದ ಅಂಶಗಳು ಕಂಡುಬರುತ್ತವೆ.

ಗುಜರಾತ್ ದೇಶದಲ್ಲಿ ಸಾಪೇಕ್ಷವಾಗಿ ಅಭಿವೃದ್ಧಿ ಹೊಂದಿದ ರಾಜ್ಯ ಎಂಬುದು ನಮಗೆಲ್ಲಾ ತಿಳಿದಿರುವ ಸಂಗತಿ. ಆದರೆ ನಂ.1 ಆಗಿದ್ದು ಹೇಗೆ? ಯಾವ ಯಾವ ಅಂಶಗಳಲ್ಲಿ? ಈ ವಿಚಾರದಲ್ಲಿ ಸ್ಪಷ್ಟ ಉತ್ತರ ಯಾರ ಬಳಿಯೂ ಇಲ್ಲ.

ಕೆಲವು ವಾಸ್ತವಾಂಶಗಳನ್ನು ಪರಿಶೀಲಿಸೋಣ.

2001ರಿಂದ 2010ರ ಅವಧಿಯ ಆರ್ಥಿಕ ಅಭಿವೃದ್ಧಿಯ ಅಂಕಿಅಂಶಗಳನ್ನೆ ನೋಡಿ. ಗುಜರಾತ್ ರಾಜಸ್ಥಾನ ಮತ್ತು ಉತ್ತರಾಖಂಡಗಳ ನಂತರ ಮೂರನೇ ಸ್ಥಾನದಲ್ಲಿದೆ. ಅವುಗಳ ಅಭಿವೃದ್ಧಿ ದರ ಕ್ರಮವಾಗಿ 11.81% ಮತ್ತು 8.95% ಆಗಿದ್ದರೆ ಗುಜರಾತ್ನ ದರ 8.68% ಆಗಿದೆ.

ಗುಜರಾತ್ ಮೊದಲಿನಿಂದಲೂ ಅಭಿವೃದ್ಧಿ ಹೊಂದಿದ ರಾಜ್ಯಗಳ ಸಾಲಿನಲ್ಲೇ ಇತ್ತು. ಉದಾ: 1995-2000ದ ಅವಧಿಯಲ್ಲಿ 8.01% ಅಭಿವೃದ್ಧಿ ದರವನ್ನು ದಾಖಲಿಸಿತ್ತು. ಆದರೆ ಇದೇ ಅವಧಿಯಲ್ಲಿ ದಾರಿದ್ರ್ಯದಲ್ಲಿದ್ದ ಬಿಹಾರ ಮತ್ತು ಒರಿಸ್ಸಾ ರಾಜ್ಯಗಳ ದರ 4.70% ಮತ್ತು 4.42% ರಿಂದ 8.12% ಮತ್ತು 8.13% ದರವನ್ನು ದಾಖಲಿಸಿವೆ. ಈ ಅಂಶಗಳ ಬಗ್ಗೆ ಅಡ್ವಾನಿಯವರೇ ಮುಕ್ತಕಂಠದಿಂದ ಹೊಗಳಿದ್ದಾರೆ.
ವಿದೇಶಿ ಹೂಡಿಕೆಯನ್ನು ಪಡೆದ ರಾಜ್ಯಗಳ ಪೈಕಿ ಮಹಾರಾಷ್ಟ್ರ ಮುಂದಿದೆ. ಬಂಡವಾಳ ಹೂಡಿಕಾ ಸಮಾವೇಶಗಳ ಮೂಲಕ ಘೋಷಿಸಿದ ಸಾಧನೆ ಅತಿರಂಜಿತವಾದದ್ದು ಎಂಬುದು ಆ ನಂತರದ ವರದಿಗಳಿಂದ ದೃಡಪಟ್ಟಿದೆ.

ಹಾಗಿದ್ದರೆ ಗುಜರಾತ್ ಹಾಗೂ ಮೋದಿಯ ಸಾಧನೆ ಏನೂ ಇಲ್ಲವೆ? ಖಂಡಿತಾ ಇದೆ. ಭೂಸ್ವಾಧೀನಕ್ಕೆ ರೈತರ ವಿರೋಧ ಅಥವ ಕಾರ್ಮಿಕ-ಮಾಲಿಕರ ನಡುವೆ ಸಂಘರ್ಷ ಇರುವಂಥ ಕಂಪನಿಗಳ ಮನವೊಲಿಸಿ, ಅವರನ್ನು ಗುಜರಾತ್ನಲ್ಲಿ ಸಂಸ್ಥಾಪಿಸುವ ಕಲೆ ಮೋದಿಗೆ ಚನ್ನಾಗಿ ಕರಗತವಾಗಿದೆ. ಪಶ್ಚಿಮ ಬಂಗಾಳದ ಸಿಂಗೂರಿನಿಂದ ಎತ್ತಂಗಡಿಯಾದ ಟಾಟಾ ನ್ಯಾನೋ ಕಾರು ಘಟಕ, ಹರ್ಯಾಣದ ಮಾನೇಸರ್ನಲ್ಲಿ ಮುಷ್ಕರದಿಂದ ಲಾಕ್ಔಟ್ ಆದ ಮಾರುತಿ ಸುಜುಕಿ ಕಂಪನಿ ಮುಂತಾದವು ಗುಜರಾತನ್ನು ತಮ್ಮ ಆಯ್ಕೆಯಾಗಿಸಿಕೊಂಡಿವೆ.

ಇನ್ನೂ ತಲಾವಾರು ಆದಾಯದ ವಿಚಾರದಲ್ಲಿ ಗುಜರಾತ್ ಹರ್ಯಾಣ, ಗೋವಾ, ಮಹಾರಾಷ್ಟ್ರಗಳ ನಂತರದಲ್ಲಿ ಆರನೇ ಸ್ಥಾನದಲ್ಲಿದೆ.

ಮಾನವ ಅಭಿವೃದ್ಧಿ ಸೂಚ್ಯಂಕ- ಅಂದರೆ ಆರೋಗ್ಯ, ಶಿಕ್ಷಣ, ಇತರೆ ಮೂಲಸೌಕರ್ಯಗಳ ಲಭ್ಯತೆ – ವಿಚಾರದಲ್ಲಿ 10ನೇ ಸ್ಥಾನಕ್ಕಿಂತಲೂ ಹಿಂದಿದೆ.

ರಾಜ್ಯ ಮತ್ತು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಗಳು ಜಂಟಿಯಾಗಿ ನಡೆಸಿದ ಸರ್ವೆಯ ಪ್ರಕಾರ ಗುಜರಾತ್ನ ಅಹಮದಾಬಾದ್ ಬಳಿಯ ವಾಪಿ ಕೈಗಾರಿಕಾ ಪ್ರದೇಶ ದೇಶದಲ್ಲೇ ಅತಿಹೆಚ್ಚು ನೆಲ-ಜಲ-ವಾಯು ಮಾಲಿನ್ಯ ಉಂಟುಮಾಡುತ್ತಿದೆ. ಇದು ಪ್ರಪಂಚದಲ್ಲೇ ಅತಿ ಹೆಚ್ಚು ಮಾಲಿನ್ಯಕಾರಕ ಪ್ರದೇಶಗಳ ಪಟ್ಟಿಯಲ್ಲೂ ಸ್ಥಾನ ಪಡೆದಿದೆ.

ಇಷ್ಟೆಲ್ಲಾ ವಾಸ್ತವಾಂಶಗಳಿದ್ದರೂ ಗುಜರಾತ್ ಹಾಗೂ ಗುಜರಾತ್ನ ಮುಖ್ಯಮಂತ್ರಿ ನಂ.1 ಎಂಬ ಅಬ್ಬರದ ಪ್ರಚಾರ ಮಾದ್ಯಮಗಳಲ್ಲಿ ಎದ್ದುಕಾಣುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇದು ಇನ್ನೂ ಹೆಚ್ಚು.