Images of today’s press meet

ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಬೆಂಗಳೂರಿನಲ್ಲಿ ರಾಜ್ಯದ ವಿವಿಧೆಡೆ ನಡೆಯುತ್ತಿರುವ ಕೋಮು ಗಲಭೆಯ ಸಂಚಿನ ಬಗೆಗಿನ ಸತ್ಯಶೋಧನಾ ವರದಿ ಬಿಡುಗಡೆ

ಬೆಂಗಳೂರು : ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದ ಬಳಿಕ ಕರಾವಳಿ ಜಿಲ್ಲೆಗಳಾದ ಉಡುಪಿ – ದಕ್ಷಿಣಕನ್ನಡ ಮತ್ತು ಮಲೆನಾಡಿನ ಚಿಕ್ಕಮಗಳೂರಲ್ಲಿ ಆರೆಸ್ಸಸ್ ಗ್ಯಾಂಗ್ ಮುಂದಿನ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕೋಮು ಗಲಭೆ ಸೃಷ್ಟಿಸಲು ಸಂಚು ನಡೆಸುತ್ತಿದ್ದು, ಕರಾವಳಿಯಲ್ಲಿ ಅದಕ್ಕೆ ಪ್ರತಿರೋಧಕ್ಕೆಂದು ಕೆಲವು ಮುಸ್ಲಿಮ್ ಮೂಲಭೂತವಾದಿ ತಂಡಗಳೂ ನೈತಿಕ ಪೊಲೀಸ್ ಗಿರಿಯ ಹೆಸರಲ್ಲಿ ಕಾನೂನು ಕೈಗೆತ್ತಿಕೊಂಡು ಶಾಂತಿ – ಸೌಹಾರ್ದತೆಗೆ ಭಂಗ ತರಲು ಯತ್ನಿಸುತ್ತಿರುವುದರ ಬಗ್ಗೆ ಕ.ಕೋ.ಸೌ.ವೇದಿಕೆಯ ಕೇಂದ್ರ ಸಮಿತಿಯ ನೇತೃತ್ವದಲ್ಲಿ ಕೇಂದ್ರ ಸಮಿತಿಯ ತಂಡ ತನ್ನ ಸಹಭಾಗಿಯಾಗಿರುವ ಮಾನವ ಹಕ್ಕು ಸಂಘಟನೆಗಳಾದ ಪಿಡಿಎಫ್, ಪಿಯುಸಿಎಲ್ ನ ಸಹಕಾರದೊಂದಿಗೆ ಮೂರು ಜಿಲ್ಲೆಗಳಿಗೆ ಭೇಟಿ ಇತ್ತು ಸತ್ಯಶೋಧನೆ ನಡೆಸಿತ್ತು. ಆ ಸತ್ಯಶೋಧನಾ ವರದಿಯನ್ನು ಜನವರಿ,29 ರಂದು ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ವಿಶ್ರಾಂತ ನ್ಯಾಯಾಧೀಶ ಎಮ್.ಎಫ್.ಸಲ್ಡಾನ ಬಿಡುಗಡೆಗೊಳಿಸಿದರು. ಈ ಸಂದರ್ಭ ವೇದಿಕೆಯ ಪ್ರಧಾನ ಕಾರ್ಯದರ್ಶಿ ಕೆ.ಎಲ್.ಅಶೋಕ್, ಕಾರ್ಯದರ್ಶಿ ರೆ.ಫಾ.ಮನೋಹರಚಂದ್ರ ಪ್ರಸಾದ್, ಮಾನವ ಹಕ್ಕು ಹೋರಾಟಗಾರರಾದ ಪ್ರೊ.ನಗರಿ ಬಾಬಯ್ಯ, ನಗರಗೆರೆ ರಮೇಶ್, ಮಾಜಿ ಸಚಿವೆ,ಸಾಹಿತಿ ಬಿ.ಟಿ.ಲಲಿತಾ ನಾಯಕ್ ಉಪಸ್ಥಿತರಿದ್ದರು. ವೇದಿಕೆಯು ಈ ವರದಿಯನ್ನು ಸರಕಾರಕ್ಕೆ ಸಲ್ಲಿಸಿದ್ದು, ರಾಜ್ಯದಲ್ಲಿ ಶಾಂತಿ – ಸೌಹಾರ್ದತೆ ಉಳಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮುಖ್ಯಮಂತ್ರಿ, ಗೃಹಮಂತ್ರಿ ಮತ್ತು ಮೂರು ಜಿಲ್ಲೆಗಳ ಸಚಿವರುಗಳನ್ನು ಒತ್ತಾಯಿಸಿದೆ.

Advertisements

ಗಾಂಧಿ ಕೊಲೆ; ಯೋಜಿತ ರಾಜಕೀಯ ಸಂಚು: ಗಾಂಧಿ ಸ್ಮತಿ ಕಾರ್ಯಕ್ರಮದಲ್ಲಿ ಜಿ.ರಾಜಶೇಖರ್

ಗಾಂಧಿ ಕೊಲೆ; ಯೋಜಿತ ರಾಜಕೀಯ ಸಂಚು: ಗಾಂಧಿ ಸ್ಮತಿ ಕಾರ್ಯಕ್ರಮದಲ್ಲಿ ಜಿ.ರಾಜಶೇಖರ್

(ಕೃಪೆ: ವಾರ್ತಾ ಭಾರತಿ,ಶುಕ್ರವಾರ – ಜನವರಿ -31-2014)

ಉಡುಪಿ, ಜ.30: ವಿಭಜನೆಯ ಒಪ್ಪಂದ ದಂತೆ ಪಾಕಿಸ್ತಾನಕ್ಕೆ 55 ಕೋಟಿ ರೂ. ನೀಡಬೇಕೆಂಬ ಬೇಡಿಕೆ ಮಾತ್ರ ಗಾಂಧಿ ಕೊಲೆಗೆ ಕಾರಣವಾಗಿರಲಿಲ್ಲ. ಅದರ ಹಿಂದೆ ಯೋಜಿತ ರಾಜಕೀಯ ಸಂಚು ಕೂಡ ಅಡಗಿತ್ತು. ರಾಜಕೀಯ ಅಜೆಂಡಾದ ಅನುಷ್ಠಾನವೇ ಈ ಕೊಲೆಗೆ ಮುಖ್ಯ ಕಾರಣವಾಗಿತ್ತು ಎಂದು ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷ ಜಿ. ರಾಜಶೇಖರ್ ಹೇಳಿದ್ದಾರೆ.
ಉಡುಪಿ ಕರ್ನಾಟಕ ಕೋಮು ಸೌಹಾರ್ದ ವೇದಿಕೆ, ರಥಬೀದಿ ಗೆಳೆಯರು ಹಾಗೂ ಎಂಜಿಎಂ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಗುರುವಾರ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಯೋ ಜಿಸಲಾದ ಗಾಂಧಿ ಸ್ಮತಿ ಕಾರ್ಯ ಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಗಾಂಧೀಜಿ 1948ರ ಜ.13ರಂದು ನಡೆಸಿದ ಕೊನೆಯ ಸತ್ಯಾಗ್ರಹದ ಉದ್ದೇಶ ದಿಲ್ಲಿಯಲ್ಲಿ ನಡೆಯುತ್ತಿದ್ದ ಅಮಾಯಕ ಮುಸ್ಲಿಮರ ಮೇಲಿನ ಹಿಂಸೆಯನ್ನು ತಡೆಯುವುದಾಗಿತ್ತು. ದಿಲ್ಲಿಯಿಂದ ಮುಸ್ಲಿಮರನ್ನು ಓಡಿಸುವುದನ್ನು ನಿಲ್ಲಿಸ ಬೇಕು, ಬಲಾತ್ಕಾರವಾಗಿ ದೇವಸ್ಥಾನ, ಗುರುದ್ವಾರವನ್ನಾಗಿಸಿದ ಮಸೀದಿಗಳನ್ನು ಮರಳಿಸಬೇಕು. ದಿಲ್ಲಿ ಮುಸ್ಲಿಮರಿಗೆ ಹಾಕಿದ ಆರ್ಥಿಕ ಬಹಿಷ್ಕಾರ ನಿಲ್ಲಿಸಬೇಕು ಸೇರಿದಂತೆ ಐದು ಷರತ್ತುಗಳನ್ನು ಗಾಂಧಿ ವಿಧಿಸಿದ್ದರು ಎಂದರು.
ಇದರೊಂದಿಗೆ 6ನೆ ಷರತ್ತು ಪಾಕಿಸ್ತಾನಕ್ಕೆ ಹಣ ನೀಡುವುದಾಗಿತ್ತು. ಆದರೆ ಗಾಂಧಿ ಕೊನೆಯ ಸತ್ಯಾಗ್ರಹ ನಡೆಸಿದ್ದು ಪಾಕಿಸ್ತಾನಕ್ಕೆ ಹಣ ನೀಡಬೇಕೆಂಬ ಕಾರಣಕ್ಕೆ ಮಾತ್ರ ಎಂಬುದಾಗಿ ಬಿಂಬಿ ಸಲಾಗುತ್ತಿದೆ. ಪ್ರಜಾಪ್ರಭುತ್ವ ಸರಕಾರ ದಲ್ಲಿ ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಸಿಗಬೇಕೆಂಬ ಉದ್ದೇಶದಿಂದ ಅವರು ಸತ್ಯಾಗ್ರಹ ನಡೆಸಿದರೆಂಬುದನ್ನು ಕೈಬಿಡಲಾಗಿದೆ. ಆದರೆ ಅಂದು ಗಾಂಧಿ ನಡೆಸಿದಂತೆ ಇಂದು ಗುಜರಾತ್‌ನಲ್ಲಿ ಸತ್ಯಾಗ್ರಹ ನಡೆಸಲು ಯಾರೂ ಇಲ್ಲವಾ ಗಿರುವುದು ದುರಂತ ಎಂದವರು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಗಳಾಗಿ ತೆಂಕನಿಡಿಯೂರು ಸರಕಾರಿ ಕಾಲೇಜಿನ ಉಪನ್ಯಾಸಕ ಪ್ರೊ.ಎಂ.ಪ್ರಸಾದ್ ರಾವ್ ಮಾತನಾ ಡಿದರು. ಅಧ್ಯಕ್ಷತೆ ಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಹಾಲ ನಾಯ್ಕಾ ವಹಿಸಿದ್ದರು. ಸಾಂಗತ್ಯ ಸಂಸ್ಥೆಯ ಶ್ರೀಕುಮಾರ್ ಗಾಂಧಿ ಚರಕ ಚಳವಳಿ ಕುರಿತು ಮಾತ ನಾಡಿದರು. ರಥಬೀದಿ ಗೆಳೆಯರು ಸಂಘ ಟನೆಯ ಅಧ್ಯಕ್ಷ ಪ್ರೊ.ಮುರಳೀಧರ್ ಉಪಾಧ್ಯ ಉಪಸ್ಥಿತರಿದ್ದರು. ಕಾರ್ಯದರ್ಶಿ ಪ್ರೊ.ಸುಬ್ರಹ್ಮಣ್ಯ ಜೋಶಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಮಣಿಪಾಲ ಸಂಗಮ ಕಲಾವಿದೆರ್ ತಂಡದಿಂದ ‘ಮೋಹನದಾಸೆ’ ತುಳು ನಾಟಕ ಪ್ರದರ್ಶನಗೊಂಡಿತು.

ಕ.ಕೊ.ಸೌ.ವೇದಿಕೆಯ ಉಡುಪಿ ಜಿಲ್ಲಾ ಘಟಕದಿಂದ ಜನವರಿ ,30 ರಂದು ಗಾಂಧಿಜಿಯ ಕೊಲೆಯನ್ನು ನೆನಪಿಸುವ ಕಾರ್ಯಕ್ರ ಮ ‘ಗಾಂಧಿ ಸ್ಮೃತಿ-2014

ಮಹಾತ್ಮ ಗಾಂಧೀಜಿಯವರ ಕೊಲೆ ನಡೆಸಿದ್ದ ಪರಿಸ್ಥಿತಿ ಮತ್ತೆ ಹಿಂದುರಿಗಿದಂತಿದೆ. ಈ ನಿಟ್ಟಿನಲ್ಲಿ ಇದನ್ನು ನೆನಪಿಸಿಕೊಳ್ಳುತ್ತಾ, ಜನ ಮಾನಸದಲ್ಲಿ ಅದರ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಉಡುಪಿ ಜಿಲ್ಲಾ ಘಟಕವು, ರಥಬೀದಿ ಗೆಳೆಯರು (ರಿ.) ಉಡುಪಿ ಮತ್ತು ಎಂ.ಜಿ.ಎಂ.ಕಾಲೇಜುಗಳ ಸಹಭಾಗಿತ್ವದೊಂದಿಗೆ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಜನವರಿ,30 ರ ಸಂಜೆ ‘ಗಾಂಧಿ ಸ್ಮೃತಿ-2014’ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಗಾಂಧೀಜಿಯವರ ದೇಸಿ ಸಂಸ್ಕೃತಿಯ ಹಂಬಲ ಮತ್ತು ದೇಶದಲ್ಲಿ ಕೈಮಗ್ಗ ಉದ್ಯಮಕ್ಕೆ ಉಂಟಾಗಿರುವ ಸಂಕಷ್ಟದ ಬಗ್ಗೆ ಸಾಂಗತ್ಯ ಟ್ರಸ್ಟ್ ನ ಶ್ರೀಕುಮಾರ್ ಬೆಳಕು ಚೆಲ್ಲಿದರು. ರಾಜ್ಯದಲ್ಲಿ ನಡೆಯುತ್ತಿರುವ ಕೈಮಗ್ಗ ಉಳಿಸಿ ಚಳುವಳಿಗೆ ಬೆಂಬಲವಾಗಿ ಸಹಿ ಸಂಗ್ರಹ ನಡೆಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಕಾಲೇಜು ಪ್ರಾಂಶುಪಾಲ ಹಾಲಾ ನಾಯ್ಕ್ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಪ್ರೊ.ಪ್ರಸಾದ್ ರಾವ್ , ಜಿ.ರಾಜಶೇಖರ್, ಪ್ರೊ.ಮುರಳೀಧರ ಉಪಾಧ್ಯ ಹಿರಿಯಡ್ಕ ಭಾಗವಹಿಸಿದ್ದರು. ಪ್ರೊ.ಸುಬ್ರಹ್ಮಣ್ಯ ಜೋಶಿ ಸ್ವಾಗತಿಸಿ, ಶಶಿಧರ ಹೆಮ್ಮಾಡಿ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಪ್ರಚಲಿತ ದಿನಗಳಲ್ಲಿನ ವ್ಯವಸ್ಥೆಯ ಸ್ಥಿತಿಯನ್ನು ಧ್ವನಿಸುವ, ಜಾತಿ – ಬಂಡವಾಳ ಶಾಹಿ ಮನೋಭಾವದ ಚಿತ್ರಣವನ್ನು ಒದಗಿಸುವ ತುಳು ನಾಟಕ ‘ಮೋಹನದಾಸೆ’ ಯನ್ನು ಮಣಿಪಾಲದ ಸಂಗಮ ಕಲಾವಿದರು ನಡೆಸಿಕೊಟ್ಟರು.