India: Worshipping Gods in the times of Elections

http://communalism.blogspot.com/2014/04/india-worshipping-gods-in-times-of.html

Advertisements

ಅವರು ಅವಮಾನಿಸಿದ್ದು ಸುರೇಶ್ ಭಟ್ಟರನ್ನಲ್ಲ, ಮಾನವೀಯ ಪ್ರಜ್ಞೆಯನ್ನು

ಅಂಕಣ

– ಶಶಿ ಪುತ್ತೂರsuresh-bhat

ಅವರು ಅವಮಾನಿಸಿದ್ದು ಸುರೇಶ್ ಭಟ್ಟರನ್ನಲ್ಲ, ಮಾನವೀಯ ಪ್ರಜ್ಞೆಯನ್ನು

(ಕೃಪೆ: ವಾರ್ತಾಭಾರತಿ, ಬುಧವಾರ – ಏಪ್ರಿಲ್ -30-2014)

ಗೋಮಾತೆಯ ಪರ ಎಂಬಂತೆ ಪೋಸುಕೊಟ್ಟುಕೊಂಡಿದ್ದ ಗುಂಪೊಂದು ಖಾವಿಧಾರಿಯಾಗಿದ್ದ ಸ್ವಾಮಿ ವಿವೇಕಾನಂದರ ಬಳಿ ಬಂದಿತ್ತು. ಈ ಸೋಗಲಾಡಿ ಗುಂಪನ್ನುದ್ದೇಶಿಸಿ ಸ್ವಾಮಿ ವಿವೇಕಾನಂದರು ‘‘ಮೊದಲು ನಿಮ್ಮ ಸುತ್ತಮುತ್ತಲೇ ಇರುವ ಶೋಷಿತರ, ಉಡಲು ಬಟ್ಟೆ, ಹೊತ್ತು ಊಟಕ್ಕೂ ಗತಿ ಇಲ್ಲದ ದಟ್ಟದರಿದ್ರರ ಬಗ್ಗೆ ಯೋಚಿಸಿ ನಂತರ ಈ ನಿಮ್ಮ ಗೋಮಾತೆ ಬಗ್ಗೆ ಯೋಚಿಸುವಿರಂತೆ ಎಂದು ಉಗಿದು ಅಟ್ಟಿದ್ದರಂತೆ. ಈ ಭೂಮಿ ಮಾನವನೊಬ್ಬನಿಗೇ ಸೇರಿದ್ದಲ್ಲ. ಎಲ್ಲಾ ಪ್ರಾಣಿಗಳಿಗೂ ಇಲ್ಲಿ ಜೀವಿಸುವ ಹಕ್ಕಿದ್ದೇ ಇದೆ. ಗೋವನ್ನು ಸೇರಿ ನಾಯಿ ಬೆಕ್ಕು ಕತ್ತೆ ಗುಬ್ಬಚ್ಚಿಗಳ ನೋವಿಗೂ ಸ್ಪಂದಿಸಬೇಕಾದುದು ಎಲ್ಲರ ಧರ್ಮ.

ಆದರೆ ಈ ಭಾವನೆ ಸ್ವಯಂಸ್ಫೂರ್ತಿಯಿಂದ ಬರಬೇಕೇ ವಿನಹ ಯಾವುದೋ ಪೂರ್ವಾಗ್ರಹಪೀಡಿತ ಸಿದ್ಧಾಂತದ ಹಿನ್ನೆಲೆಯಿಂದಲ್ಲ.
ಧರ್ಮವಂತರ ಪ್ರಕಾರ ಕಪ್ಪೆಯಂತಹ ಸಹಜ ಆಹಾರಕ್ಕೇ ರಕ್ಷಣೆ ಕೊಟ್ಟ ದಯಾಮಯಿ ಸರ್ಪವಿರುವ ನಾಡು ಶೃಂಗೇರಿ. ಆದರೀಗ ಇಲ್ಲಿ ಮನುಷ್ಯನ ಜೀವಕ್ಕೆ ಬೆಲೆಯಿಲ್ಲದಂತಾಗಿರುವುದು ವಿಚಿತ್ರ. ಇಲ್ಲೀಗ ಧರ್ಮದ ಅಮಲನ್ನು ಹತ್ತಿಸಿಕೊಂಡ ವ್ಯಕ್ತಿಗಳು ಮನುಷ್ಯನೊಬ್ಬನ ಸಾವನ್ನೇ ಸಂಭ್ರಮದ ವಿಚಾರವನ್ನಾಗಿಸಿಕೊಂಡಿರುವುದು ತಮಾಷೆಯಾಗಿದೆ.

ಮಂಗಳೂರಿನಲ್ಲಿ ಸ್ವಾಮಿಯೊಬ್ಬರು ನ್ಯಾಯಾನ್ಯಾಯವನ್ನು ವಿಶ್ಲೇಷಿಸದೇ ಕೊಂದ ವ್ಯಕ್ತಿಗೆ 1ಲಕ್ಷ ರೂ. ಬಹುಮಾನವನ್ನೂ ಕೂಡ ಘೋಷಿಸುತ್ತ್ತಾರೆಂದರೆ ಮನುಷ್ಯ ಜೀವ ಈ ಮಟ್ಟಿಗೆ ಅಗ್ಗವೆನಿಸಿದ್ದರ ಹಿನ್ನೆಲೆಯಾದರೂ ಏನು? ಶೃಂಗೇರಿಯಲ್ಲಿ ಘಟಿಸಿದ ಅನುಮಾನಾಸ್ಪದ ಕೊಲೆಯ ವಿಚಾರ ಚರ್ಚಿಸುತ್ತಿದ್ದ ಕೋಮು ಸೌಹಾರ್ದ ವೇದಿಕೆಯ ಮುಖಂಡರಾದ ಶ್ರೀಯುತ ಸುರೇಶ್ ಭಟ್ಟರ ಮೇಲೆ ಇಂತಹ ಪೂರ್ವಾಗ್ರಹ ಪೀಡಿತ ಧರ್ಮದ ಅಮಲುಕೋರನೊಬ್ಬ ದಾಳಿ ನಡೆಸಿದ್ದು ಅತ್ಯಂತ ಖಂಡನೀಯ ವಿಚಾರ.

ಇತ್ತೀಚೆಗೆ ಉಡುಪಿಯ ಕೋಡಿಬೆಂಗ್ರೆಯಲ್ಲಿ ಎರಡು ದಿನದ ಕಾರ್ಯಾಗಾರವೊಂದು ನಡೆದಿತ್ತು. ಅಲ್ಲಿ ಹಿರಿಯ ಮಾನವ ಹಕ್ಕುಗಳ ಹೋರಾಟಗಾರ ನಗರಿ ಬಾಬಯ್ಯನವರು ಕಾರ್ಯಕ್ರಮದ ಕೊನೆಯಲ್ಲಿ ಶ್ರೀಯುತ ಸುರೇಶ್ ಭಟ್ಟರ ಬಗ್ಗೆ ಮಾತಾಡುತ್ತಾ, ಸುರೇಶ್ ಭಟ್ ಬಾಕ್ರಬೈಲು ಒನ್ ಮ್ಯಾನ್ ಆರ್ಮಿ ಇದ್ದಂತೆ ಎಂದಿದ್ದರು. ಹೌದು ಕರಾವಳಿಯಲ್ಲಿ ಚಿಗಿತು ಇಲ್ಲಿನ ಸಹಜ ಸೌಹಾರ್ದಕ್ಕೆ ಕೊಳ್ಳಿ ಇಡುತ್ತಿರುವ ಮತಾಂಧ ಶಕ್ತಿಗಳ ವಿರುದ್ಧ ಇವರ ಹೋರಾಟ ನಿರಂತರ.

ಹೇಳಿ ಕೇಳಿ ಇವರು ಉಗ್ರ ಭಾಷಣಕಾರರಲ್ಲ. ನೋಡಿದರೆ ಎದೆ ಝಲ್ಲೆನಿಸುವ ದೇಹದಾರ್ಢ್ಯವೂ ಇವರದ್ದಲ್ಲ. ಕೃಶ ಶರೀರದ ವಯೋವೃದ್ಧರಾದ ಮೃದುಮಾತಿನ ಸರಳ ಸಜ್ಜನರಷ್ಟೆ. ಮೌಢ್ಯ ಮೂಲದ ಸಾಮಾಜಿಕ ಅನಿಷ್ಟಗಳ, ತಾರತಮ್ಯಗಳ ವಿರುದ್ಧ ಧನಿ ಎತ್ತಿದವರಿಗೆ ಬೆದರಿಕೆಗಳು ಇದ್ದದ್ದೇ. ಅಂಥಾ ಸಜ್ಜನ ದಾಬೋಲ್ಕರರನ್ನೇ ಕೊಲ್ಲಿಸಿ ಸಂಭ್ರಮಿಸಲಾಯ್ತು. ಅದೇ ರೀತಿ ವಯೋವೃದ್ಧರೆಂಬುದನ್ನೂ ಮರೆತು ಸುರೇಶ್ ಭಟ್ಟರ ಮೇಲೆ ಪುಂಡನೊಬ್ಬನನ್ನು ಛೂ ಬಿಟ್ಟು ಹಲ್ಲೆಮಾಡಲಾಗಿದೆ. ಇದೆಲ್ಲ ಯಾವ ಧರ್ಮ ಸಂಸ್ಕೃತಿಗಳು ಹೇಳುತ್ತವೆಯೋ ದೇವರೇ ಹೇಳಬೇಕು.

ವಿವೇಕಾನಂದರು ಉಗಿದದ್ದು ಇಂಥಾ ಸೋಗಲಾಡಿಗಳಿಗೇ.. ಕರಾವಳಿ ಜಿಲ್ಲೆ ಮತಾಂಧ ಶಕ್ತಿಗಳ ಆಡಂಬೋಲವಾಗು ತ್ತಿದ್ದರೂ ಅವರ ಹುಚ್ಚಾಟಗಳಿಗೆ ತಡೆಯೊಡ್ಡಲು ಇಲ್ಲೇ ಅನೇಕ ವ್ಯಕ್ತಿಗಳು ಅಪಾಯವನ್ನೂ ಲೆಕ್ಕಿಸದೇ ಹೋರಾಡುತ್ತಿರುವುದು ಅತ್ಯಂತ ಹೆಮ್ಮೆಯ ಸಂಗತಿ. ಉಡುಪಿಯಲ್ಲಿ ಹಾಜಬ್ಬ, ಹಸನಬ್ಬ ಬೆತ್ತಲೆ ಪ್ರಕರಣ ನಡೆದಾಗ ಎಂಥದಕ್ಕೂ ರೆಡಿ ಇರುವ ಒರಟು ಮತಾಂಧರ ಕೀಳು ಕೊಳಕು ಬಹಿರಂಗ ಬೈಗುಳಗಳನ್ನು ಎದುರಿಸಿ ಜಿ. ರಾಜಶೇಖರ್‌ರಂಥವರು ಹೋರಾಡಿದ್ದರು.

ದಿವಂಗತ ಕೆ. ಜೆ. ಶೆಟ್ಟಿ ಕಡಂದಲೆ, ದಿವಂಗತ ಬಿ.ವಿ. ಕಕ್ಕಿಲ್ಲಾಯ ರಂತಹ ವೃದ್ಧ ಜೀವಗಳು ಕೊನೆಗಾಲದವರೆಗೂ ಇಂಥವರ ವಿರುದ್ಧ ದನಿ ಎತ್ತಿದ್ದರು. ಇದೇ ಕರಾವಳಿಯಲ್ಲಿ ಸ್ವಲ್ಪಇನ್ನೂ ಹಿಂದಕ್ಕೆ ಹೋದರೆ ಸಮಾಜವನ್ನು ಎದುರು ಹಾಕಿಕೊಂಡು ಶೋಷಿತರ ಪರ ಹೋರಾಟ ನಡೆಸಿದ ಮಂಗಳೂರಿನ ಕುದ್ಮುಲ್ ರಂಗರಾಯರಿಗೂ ಇಂಥದ್ದೇ ಕಾರಣಕ್ಕಾಗಿ ಸಗಣಿ ಸೇವೆಯಾಗಿತ್ತಲ್ಲದೆ ಮಾನವ ಮಲದ ಸಹವಾಸವನ್ನೂ ಕೂಡ ಅವರು ಅನುಭವಿಸಿದ್ದರು (ಅವರ ಕೊರಗರ ಮಕ್ಕಳ ಶಾಲೆಯ ಬೀಗಕ್ಕೆ ಮಲವನ್ನು ಮೆತ್ತಿ ಅವರನ್ನು ವಿಚಲಿತಗೊಳಿಸಲು ನೋಡಿದ್ದರು) ಕೆಲ ಸಮಯದ ಹಿಂದೆ ಪ್ರಗತಿ ಪರ ಚಿಂತಕ ಪಟ್ಟಾಭಿರಾಮ ಸೋಮಯಾಜಿಯವರ ಮೇಲೂ ಇಂಥಾದ್ದೇ ಸಗಣಿ ದಾಳಿ ನಡೆದಿತ್ತು. ಈಗದು ಸುರೇಶ್ ಭಟ್ಟರ ಸರದಿ.

ಮೋದಿ ಮೇನಿಯಾದ ಕಬಂಧ ಬಾಹು ಇದೀಗ ಎಲ್ಲೆಡೆ ಹಬ್ಬಿದೆ. ಮೋದಿಯ ವಿಜೃಂಭಣೆಗಾಗಿ ಕೋಟಿಗಟ್ಟಲೆ ಹಣ ವ್ಯಯವಾಗುತ್ತಿದೆ. ಮೋದಿಯನ್ನು ಟೀಕಿಸುವವರ ಮೇಲೆ ದಾಳಿಗಳ ಮೇಲೆ ದಾಳಿಗಳಾಗುತ್ತಿದೆ, ಆಮ್ ಆದ್ಮಿ ನಾಯಕ ಕೇಜ್ರಿವಾಲರಂಥವರ ಮೇಲೆಯೇ ಮೋದಿ ಚೇಲಾಗಳು ಬಹಿರಂಗವಾಗಿ ದೈಹಿಕ ದಾಳಿ ನಡೆಸುತ್ತಿರುವಾಗ ಉಳಿದವರ ಪಾಡೇನು? ಕರ್ನಾಟಕದಲ್ಲಿ ಮೋದಿ ವಿರುದ್ಧ ಬಹಿರಂಗವಾಗಿ ಧನಿ ಎತ್ತಿದವರಲ್ಲಿ ಸುರೇಶ್ ಭಟ್ಟರು ಅತ್ಯಂತ ಪ್ರಮುಖರು.

ದಾವಣಗೆರೆಯಲ್ಲಿ ಇವರ ‘ಮೋದಿ- ಮಂಕು ಬೂದಿ’ ಪುಸ್ತಕ ಬಿಡುಗಡೆಯ ಸಮಾರಂಭದಲ್ಲಿ ಅಲ್ಲಿ ಭಾಗವಹಿಸಿದ್ದ ಯೋಗೇಶ್ ಮಾಸ್ಟರ್ ಮೇಲೆ ಯಾವುದೋ ನೆಪದಲ್ಲಿ (ನಾವೆಲ್ಲವನ್ನೂ ಗಮನಿಸುತ್ತಿದ್ದೇವೆ ಹುಷಾರ್ ಎಂದು ಸೂಚಿಸಲು) ದಾಳಿ ಮಾಡಲಾಗಿತ್ತು. ಕಬೀರ್ ಕೊಲೆ ವಿಚಾರದ ನೆಪದಲ್ಲಿ ಸುರೇಶ್ ಭಟ್ಟರ ಮೇಲೆ ದಾಳಿ ನಡೆದಿದ್ದರೂ ದಾಳಿಗೆ ಅದೊಂದೇ ಕಾರಣ ಇದ್ದಿರಲಾರದು.

ಈ ಕುಮ್ಮಕ್ಕಿನ ಹಿಂದೆ ಅನೇಕರ ಕೈವಾಡ ಇರುವ ಸಾಧ್ಯತೆಯೇ ಹೆಚ್ಚಿದೆ. ಹಿಂದುತ್ವವಾದಿಗಳ ಮಾನವ ವಿರೋಧಿ ಮಸಲತ್ತುಗಳನ್ನು ನಿರ್ದಾಕ್ಷಿಣ್ಯವಾಗಿ ವಿರೋಧಿಸುವ, ಜನಪರ ಹೋರಾಟಕ್ಕೆ ಜೀವತುಂಬುವ ಸುರೇಶ್ ಭಟ್ಟರ ಸ್ಥೈರ್ಯವನ್ನು ಕುಗ್ಗಿಸುವ ಸಲುವಾಗಿ ಇಂತಹ ದಾಳಿಯನ್ನು ವ್ಯವಸ್ಥಿತವಾಗಿ ನಡೆಸಲಾಗಿದೆ. ಆದರೆ ಈ ವಯೋವೃದ್ಧರ ಮೇಲೆ ನಡೆಸಲಾದ ದಾಳಿ ಧರ್ಮರಕ್ಷಕ(?)ರ ಅಸಲೀಯತ್ತನ್ನು ಸಾರ್ವಜನಿಕವಾಗಿ ಮತ್ತೊಮ್ಮೆ ಬೆತ್ತಲುಗೊಳಿಸಿದ್ದನ್ನು ಬಿಟ್ಟರೆ ಬೇರೇನನ್ನು ಮಾಡಲಾಗಿಲ್ಲ ಎಂಬುದು ಹಗಲಿನಷ್ಟೇ ಸತ್ಯ.

ಹಂತಕರ ಸುಳಿವಿಲ್ಲ.. ನಿವೃತ್ತರಿಗೂ ಶಿಕ್ಷೆಯಲ್ಲಿ ವಿನಾಯಿತಿ ಇಲ್ಲ…

ಅಂಕಣ

ಹಂತಕರ ಸುಳಿವಿಲ್ಲ.. ನಿವೃತ್ತರಿಗೂ ಶಿಕ್ಷೆಯಲ್ಲಿ ವಿನಾಯಿತಿ ಇಲ್ಲ…

(ಕೃಪೆ: ವಾರ್ತಾಭಾರತಿ, ಮಂಗಳವಾರ – ಏಪ್ರಿಲ್ -29-2014)

ಹಂತಕರ ಸುಳಿವಿಲ್ಲ.. ನಿವೃತ್ತರಿಗೂ ಶಿಕ್ಷೆಯಲ್ಲಿ ವಿನಾಯಿತಿ ಇಲ್ಲ...

ಎಂಟು ತಿಂಗಳ ನಂತರವೂ ಡಾ. ದಾಬೋಲ್ಕರ್ ಹಂತಕರ ಬಂಧನವಾಗಿಲ್ಲ
ಅಂಧಶ್ರದ್ಧೆ ನಿರ್ಮೂಲನಾ ಸಮಿತಿ, ಮಹಾರಾಷ್ಟ್ರ ಇದರ ಅಧ್ಯಕ್ಷರಾಗಿದ್ದ ಸಮಾಜ ಸುಧಾರಕ ದಿ. ನರೇಂದ್ರ ದಾಬೋಲ್ಕರ್ ಅವರ ಹತ್ಯೆಯ ಎಂಟು ತಿಂಗಳ ನಂತರವೂ ಪೊಲೀಸರಿಗೆ ಅವರ ಹತ್ಯೆಯ ರಹಸ್ಯವನ್ನು ಬಿಡಿಸಲು ಇನ್ನೂ ಸಾಧ್ಯವಾಗಿಲ್ಲ. ಒಬ್ಬನೇ ಒಬ್ಬ ದೋಷಿಯನ್ನು ಬಂಧಿಸಲು ಪುಣೆ ಪೊಲೀಸರಿಗೆ ಯಾಕೆ ಸಾಧ್ಯವಾಗಿಲ್ಲವೋ? ಎಂಟು ತಿಂಗಳ ಹಿಂದೆ ದಾಬೋಲ್ಕರ್ ಅವರು ಎಂದಿನಂತೆಯೇ ಬೆಳಗ್ಗೆ ವಾಕಿಂಗ್‌ಗೆ ಮನೆಯಿಂದ ಹೊರಗಡೆ ತೆರಳಿದಾಗ ಅವರನ್ನು ಗುಂಡಿಕ್ಕಿ ಹತ್ಯೆ ನಡೆಸಲಾಗಿತ್ತು. ಇದೀಗ ಸಿಬಿಐಗೆ ತನಿಖೆ ಒಪ್ಪಿಸುವ ಸಾಧ್ಯತೆಗಳು ಕೇಳಿ ಬಂದಿವೆ.

ಮಹಾರಾಷ್ಟ್ರ ಮತ್ತು ಅಕ್ಕಪಕ್ಕದ ರಾಜ್ಯಗಳಲ್ಲೂ ಅನೇಕ ತನಿಖಾ ದಳಗಳು ತೀವ್ರ ತನಿಖಾ ಅಭಿಯಾನ ಕೈಗೊಂಡರೂ ತನಿಖೆಯಲ್ಲಿ ಯಾವುದೇ ಪ್ರಗತಿ ಕಂಡು ಬಂದಿಲ್ಲ. ಮುಖ್ಯಮಂತ್ರಿ ಪ್ರಥ್ವಿರಾಜ್ ಚವ್ಹಾಣ್, ಉಪಮುಖ್ಯಮಂತ್ರಿ ಅಜಿತ್ ಪವಾರ್, ರಾಜ್ಯ ಗೃಹಮಂತ್ರಿ ಆರ್.ಆರ್.ಪಾಟೀಲ್ ಸಹಿತ ಎಲ್ಲಾ ನಾಯಕರು ಆಶ್ವಾಸನೆಯನ್ನು ನೀಡಿದ್ದರೂ ದೋಷಿಗಳನ್ನು ಈ ತನಕವೂ ಬಂಧಿಸಲು ಸಾಧ್ಯವಾಗಿಲ್ಲ.

ಕಳೆದ ಎಂಟು ತಿಂಗಳಲ್ಲಿ 1,200ಕ್ಕೂ ಹೆಚ್ಚಿನ ಸ್ಥಳೀಯರನ್ನು ವಿಚಾರಣೆ ನಡೆಸಲಾಗಿದೆ. ಸ್ಥಳೀಯ ಸಿಸಿಟಿವಿ ಕ್ಯಾಮರಾದ ಫುಟೇಜ್ ಪರೀಕ್ಷಿಸಲಾಗಿದೆ. 700ಕ್ಕೂ ಹೆಚ್ಚು ವೃತ್ತಿ ನಿರತ ಗೂಂಡಾಗಳನ್ನು, ಶಸ್ತ್ರ ವ್ಯಾಪಾರಿಗಳನ್ನು ಕಸ್ಟಡಿಗೆ ಪಡೆದು ಪೊಲೀಸರು ವಿಚಾ ರಣೆ ನಡೆಸಿದ್ದಾರೆ. ಆದರೂ ಹತ್ಯಾ ಅಪರಾಧಿಯನ್ನು ಇನ್ನೂ ಬಂಧಿಸಲು ಸಾಧ್ಯವಾಗಿಲ್ಲ.

ಮಹಾರಾಷ್ಟ್ರದಲ್ಲಿ ಡಾ. ನರೇಂದ್ರ ದಾಬೋಲ್ಕರ್ ಅಂಧ ವಿಶ್ವಾಸದ ವಿರುದ್ಧ ಹೋರಾಟ ಮಾಡಿದವರು. ಜಾದೂ ಟೋನಾ ಬಾಬಾಗಳ ವಿರುದ್ಧ ಜನಜಾಗೃತಿ ಮೂಡಿಸಿದವರು. ವೈದ್ಯರು, ಸಾಮಾಜಿಕ ಕಾರ್ಯಕರ್ತರು, ಪತ್ರಕರ್ತರು ಎಲ್ಲವೂ ಆಗಿದ್ದರು ಅವರು. ಆಗಸ್ಟ್ 20, 2013ರಂದು ಪುಣೆಯ ಓಂಕಾರೇಶ್ವರ ಮಂದಿರದ ಸಮೀಪ ಅವರಿಗೆ ಗುಂಡಿಕ್ಕಿ ಹತ್ಯೆ ನಡೆಸಲಾಗಿದೆ. ಮುಖ್ಯಮಂತ್ರಿಯವರು ಹಂತಕರನ್ನು ಪತ್ತೆ ಹಚ್ಚಿದವರಿಗೆ 10 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದಾರೆ. ಆದರೂ ತಪ್ಪಿತಸ್ಥರ ಸುಳಿವು ಪೊಲೀಸರಿಗೆ ಇನ್ನೂ ಸಿಕ್ಕಿಲ್ಲ.
* * *
ಆಸ್ಪತ್ರೆಯ ರೋಗಿಗಳೂ, ವಿವಾಹ ಮಂಟಪದ ವಧುವರರೂ ಮತ ಹಾಕಿದರು
ಮಹಾರಾಷ್ಟ್ರದಲ್ಲಿ ಲೋಕಸಭಾ ಚುನಾ ವಣೆಯ ಮೂರನೆ ಮತ್ತು ಅಂತಿಮ ಹಂತದ ಮತದಾನದಲ್ಲಿ ಮೊದಲಿಗಿಂತ ಹೆಚ್ಚು, ಆದರೂ ಕಡಿಮೆ ಮತದಾನ ನಡೆದಿದೆ. ಮುಂಬೈ, ಥಾಣೆ ಮತ್ತು ರಾಯ್‌ಘಡ್ ಸಹಿತ 19 ಸೀಟು ಗಳಿಗಾಗಿ ಸರಾಸರಿ 55.57 ಶೇಕಡ ಮತದಾನ ನಡೆದಿದೆ. ಎಪ್ರಿಲ್ 24ರಂದು ನಡೆದ ಮತ ದಾನದಲ್ಲಿ ಒಟ್ಟು 338 ಅಭ್ಯರ್ಥಿಗಳ ಭವಿಷ್ಯ ಇವಿಎಂನಲ್ಲಿ ಅಡಗಿಕೊಂಡಿದೆ. ಕಲ್ಯಾಣ್‌ನಲ್ಲಿ ಅತಿ ಕಡಿಮೆ 42 ಶೇಕಡ ಮತದಾನ ನಡೆಯಿತು.

ಮುಂಬೈಯ 6 ಸೀಟುಗಳಲ್ಲಿ 52.66 ಶೇಕಡ ಮತದಾನ ನಡೆದಿದೆ. ಕಳೆದ ಬಾರಿಗಿಂತ ಸುಮಾರು 11.24 ಶೇಕಡ ಹೆಚ್ಚು! ಈ ಬಾರಿಯೂ ಅನೇಕ ಕಡೆ ಓಟರ್ ಐಡಿ ಇದ್ದ ಹೊರತೂ ಮತ ಹಾಕಲು ಸಾಧ್ಯವಾಗಲಿಲ್ಲ ಅನೇಕರಿಗೆ. ಹಲವೆಡೆ ಇವಿಎಂ ಮೆಶಿನ್ ಬಂದ್ ಬಿದ್ದು ಗೊಂದಲವಾಗುತ್ತಿತ್ತು. ಉತ್ತರ ಮುಂಬೈಯಲ್ಲಿ 52 ಶೇಕಡ, ಉತ್ತರ ಪಶ್ಚಿಮದಲ್ಲಿ 50 ಶೇಕಡ, ಉತ್ತರ ಪೂರ್ವದಲ್ಲಿ 53 ಶೇಕಡ, ಉತ್ತರ ಮಧ್ಯದಲ್ಲಿ 52 ಶೇಕಡ, ದಕ್ಷಿಣ ಮಧ್ಯದಲ್ಲಿ 55 ಶೇಕಡ ಮತ್ತು ದಕ್ಷಿಣ ಮುಂಬೈಯಲ್ಲಿ 54 ಶೇಕಡ ಮತದಾನವಾಗಿದೆ.

ಹಲವು ಬೂತ್‌ಗಳಲ್ಲಿ ಬಿಸಿಲಿಗೆ ಸುತ್ತಾಡಿ ಸುತ್ತಾಡಿ ತಮ್ಮ ಹೆಸರು ಕಾಣೆಯಾದವರು ಕೇಳಿದ್ದಾರೆ- ಮುಂಬೈಯಲ್ಲಿ ಮತದಾನ ಹೆಚ್ಚಾಗುವುದಾದರೂ ಹೇಗೆ ಸಾಧ್ಯ? ಈ ಬಾರಿ ಹಲವೆಡೆ ವಿವಾಹ ಮಂಟಪ ದಿಂದ ಹೊರಬಂದು ವಧು-ವರರು ಮತ ಹಾಕಿ ಮತ್ತೆ ವಿವಾಹ ಮಂಟಪಕ್ಕೆ ತೆರ ಳಿದ ದೃಶ್ಯಗಳೂ ಬಂದಿವೆ. ಆಸ್ಪತ್ರೆಯಲ್ಲಿ ಭರ್ತಿಗೊಂಡವರೂ ಅನುಮತಿ ಪಡೆದು ಮತ ಹಾಕಿ ಮತ್ತೆ ಬೆಡ್‌ನಲ್ಲಿ ಮಲಗಿ ಶುಶ್ರೂಷೆ ಪಡೆದ ದೃಶ್ಯಗಳೂ ವಿಶೇಷ ಸುದ್ದಿ ಮಾಡಿವೆ. ಜೋಗೇಶ್ವರಿಯ ನಿವಾಸಿ ಮುಹಮ್ಮದ್ ಅಬ್ದುಲ್ ಖಾದಿಬ್ ಅವರು ಮತದಾನ ಮಾಡುವ ನಿಮಿತ್ತ ಹಾರ್ಟ್ ಸರ್ಜರಿ ದಿನಾಂಕವನ್ನು ಮುಂದೂಡಿದ್ದರು.

ಈ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗುವುದನ್ನು ತಡೆಯುವುದಕ್ಕಾಗಿ ಮುಸ್ಲಿಂ ಕ್ಷೇತ್ರದಲ್ಲಿ ಭಾರೀ ಮತದಾನವಾಗುವುದೆಂದು ಪ್ರಚಾರ ಮಾಡಲಾಗಿತ್ತು. ಆದರೆ ಮುಸಲ್ಮಾನರಲ್ಲಿ ಅಂತಹ ಯಾವ ಭಯವೂ ಕಾಣಲಿಲ್ಲ. ಬಾಂದ್ರಾ, ಕುರ್ಲಾ, ಮಲಾಡ್ ಕ್ಷೇತ್ರಗಳ ಮುಸ್ಲಿಂ ಬಾಹುಳ್ಯ ಬೂತ್‌ಗಳಲ್ಲಿ ಇತರ ಬೂತ್‌ಗಳಂತೆ ಯಾವುದೇ ವಿಶೇಷ ಪ್ರವಾಹ ಕಂಡು ಬರಲಿಲ್ಲ. ಆದರೆ ಮತ ಹಾಕುವುದು ನಮ್ಮ ಕರ್ತವ್ಯ ಅನ್ನುತ್ತಿದ್ದ ಅನೇಕ ಬಾಲಿವುಡ್ ಸ್ಟಾರ್‌ಗಳು ಅಮೆರಿಕಕ್ಕೆ ತೆರಳಿದ್ದರು. ಅಲ್ಲಿ ನಡೆಯುವ ಐಫಾ ಫಿಲ್ಮ್ ಅವಾರ್ಡ್‌ನ ಸಮಾರಂಭದಲ್ಲಿ ಪಾಲ್ಗೊಳ್ಳುವುದಕ್ಕೆ! ಅಂತೂ ಮತದಾನ ಶಾಂತಿಯುತವಾಗಿ ನಡೆಯಿತು.

* * *

ಮನಪಾ ಶಾಲಾ ಮಕ್ಕಳ ಪುಸ್ತಕ ಖರೀದಿಯಲ್ಲಿ ಭ್ರಷ್ಟಾಚಾರ : ಸೇವಾ ನಿವೃತ್ತರಾದರೂ ಶಿಕ್ಷೆ!
ಮುಂಬೈ ಮಹಾನಗರ ಪಾಲಿಕೆಯ ಶಿಕ್ಷಣ ವಿಭಾಗದಲ್ಲಿ ಪುಸ್ತಕಗಳ ಖರೀದಿ ವಿಷಯದಲ್ಲಿ ಲಕ್ಷಗಟ್ಟಲೆ ರೂಪಾಯಿಯ ಹಗರಣಗಳು (ಎಂದಿನಂತೆ!) ವರದಿಯಾಗಿವೆ. ಈ ಇಡೀ ಪ್ರಕರಣದಲ್ಲಿ ಮನಪಾ ವಿಭಾಗೀಯ ತನಿಖೆಯನ್ನು ನಡೆಸಿದೆ ಮತ್ತು ಮಾಜಿ ಶಿಕ್ಷಣಾ ಧಿಕಾರಿ, ಉಪಶಿಕ್ಷಣಾಧಿಕಾರಿಗಳನ್ನು ತಪ್ಪಿತಸ್ಥರು ಎಂದು ಹೇಳಲಾಗಿದೆ. ಈ ಅಧಿಕಾರಿಗಳು ಪುಸ್ತಕಗಳ ಖರೀದಿ ವ್ಯವಹಾರವನ್ನು ಸರಿಯಾದ ದರಕ್ಕೆ ಮಾಡುವ ಬದಲು ಓರ್ವ ನಿರ್ದಿಷ್ಟ ಪ್ರಕಾಶಕರಿಂದ ಪುಸ್ತಕಗಳನ್ನು ಪಡೆದಿದ್ದು ಈ ಕಾರಣ ಮುಂಬೈ ಮಹಾನಗರ ಪಾಲಿಕೆ ಸುಮಾರು ಹತ್ತು ಲಕ್ಷ ರೂಪಾಯಿ ನಷ್ಟವನ್ನು ಅನುಭವಿಸುವಂತಾಗಿತ್ತು.

ಇಷ್ಟೇ ಅಲ್ಲ, ಈ ಪುಸ್ತಕಗಳು ಶಾಲಾ ಮಕ್ಕಳಿಗೆ ಸಿಕ್ಕಿದ್ದು ಆರು ತಿಂಗಳ ನಂತರವೇ! ಇದರಿಂದಾಗಿ ವಿದ್ಯಾರ್ಥಿಗಳಿಗೆ ಓದಿನ ಲಾಭವೂ ಪೂರ್ತಿ ಸಿಗಲಿಲ್ಲ. ವಿಶೇಷವೆಂದರೆ ಈ ಇಬ್ಬರು ಆರೋಪಿ ಅಧಿಕಾರಿಗಳೂ ಈಗ ಸೇವಾ ನಿವೃತ್ತರಾಗಿದ್ದಾರೆ. ಹಾಗೆಂದು ಮನಪಾ ಕೈಕೈ ಹಿಸುಕಿಕೊಳ್ಳಲು ಹೋಗಿಲ್ಲ. ಈ ಇಬ್ಬರು ಆರೋಪಿ ಅಧಿಕಾರಿಗಳ ಪೆನ್ಶನ್‌ನಲ್ಲಿ ಒಂದು ವರ್ಷ ಕಾಲ ದಂಡವನ್ನು ವಸೂಲಿ ಮಾಡಲಾಗುವುದು. ಅರ್ಥಾತ್ ಪೆನ್ಶನ್‌ನಲ್ಲಿ ಹಣವನ್ನು ಕಟ್ ಮಾಡಲು ನಿರ್ಣಯಿಸಿದೆ.

ಮನಪಾದ ಆಗಿನ ಶಿಕ್ಷಣ ಅಧಿಕಾರಿಗಳಾದ ಆಬಾ ಸಾಹೇಬ್ ಜಾಧವ್ ಮತ್ತು ಉಪಶಿಕ್ಷಣಾಧಿಕಾರಿ ಡಾ. ಆನಂದರಾವ್ ಸೂರ್ಯವಂಶಿ ಅವರು 2009-10ರಲ್ಲಿ 4ನೆಯ ಮತ್ತು 7ನೆಯ ತರಗತಿಗಳಲ್ಲಿ ಸ್ಕಾಲರ್‌ಶಿಪ್ ನೀಡಲು ಪುಸ್ತಕಗಳನ್ನು ಖರೀದಿಸಿದ್ದರು. ಇವುಗಳನ್ನು ಖರೀದಿಸಲು 90.25 ಲಕ್ಷ ಖರ್ಚಾಗಿತ್ತು. ಆದರೆ ಇದನ್ನು ಸ್ಥಾಯಿ ಸಮಿತಿಯಲ್ಲಿ ಇರಿಸಬೇಕಿತ್ತು.

ಟೆಂಡರ್ ಕರೆದು ಎಲ್ಲಕ್ಕಿಂತ ಕಡಿಮೆ ದರದಲ್ಲಿ ಪುಸ್ತಕ ನೀಡುವ ಪ್ರಕಾಶಕರನ್ನು ಆಯ್ಕೆ ಮಾಡಬೇಕಿತ್ತು. ಈ ಅಧಿಕಾರಿಗಳು ಎರಡೂ ನಿಯಮ ಉಲ್ಲಂಘಿಸಿದರು. ಸ್ಕಾಲರ್‌ಶಿಪ್‌ನ ಮರಾಠಿ, ಇಂಗ್ಲಿಷ್, ಉರ್ದು ಪುಸ್ತಕಗಳ ಖರೀದಿಯಲ್ಲಿ ಹಗರಣ ನಡೆದಿತ್ತು.
ಈ ಬಗ್ಗೆ 2013ರಲ್ಲಿ ತನಿಖಾ ವರದಿ ಸಲ್ಲಿಸಲಾಯಿತು. ಆ ಪುಸ್ತಕಗಳನ್ನು ಜೂನ್-ಜುಲೈಯಲ್ಲಿ ನೀಡುವ ಬದಲು ಡಿಸೆಂಬರ್‌ನಲ್ಲಿ ನೀಡಲಾಗಿತ್ತು. ಜಾಧವ್ ಎರಡು ವರ್ಷದ ಹಿಂದೆ ವಿಆರ್‌ಎಸ್ ಪಡೆದಿದ್ದರೆ, ಸೂರ್ಯವಂಶಿ ಸೇವಾ ನಿವೃತ್ತರಾಗಿದ್ದರು. ಸದ್ಯ ಈ ಶಿಫಾರಸು ಮಂಜೂರಿಗಾಗಿ ಶಿಕ್ಷಣ ಸಮಿತಿಯ ಮುಂದಿರಿಸಲಾಗಿದೆ.
* * *
ಮುಂಬೈಯಲ್ಲಿ ಅಪರಾಧ ಘಟನೆ ಗಳಲ್ಲಿ ಇಳಿಕೆ!
ಮುಂಬೈ ಮಹಾನಗರದಲ್ಲಿ ಅಪರಾಧ ಘಟನೆಗಳಲ್ಲಿ ತೀವ್ರ ಇಳಿಕೆಯಾಗಿದೆ ಎನ್ನುತ್ತಿದ್ದಾರೆ ಪೊಲೀಸರು. ಆದರೆ ಇದು ತಾತ್ಕಾಲಿಕ! ಚುನಾವಣೆಯ ಪ್ರಭಾವ. ಮುಂಬೈ ಪೊಲೀಸರ ಅನು ಸಾರ ಮುಂಬೈಯ ಅಪರಾಧಗಳಲ್ಲಿ ಇಳಿ ಮುಖವಾಗಲು ಇಲ್ಲಿನ ಅನೇಕ ಗೂಂಡಾಗಳಿಗೆ ಚುನಾವಣೆಯ ಕಾರಣ ಉದ್ಯೋಗ ಸಿಕ್ಕಿದ್ದೇ ಆಗಿದೆಯಂತೆ! ಈ ದಿನಗಳಲ್ಲಿ ಗಲ್ಲಿ-ಮೊಹಲ್ಲಾಗಳಲ್ಲಿ ಚಿಕ್ಕಪುಟ್ಟ ಕಳ್ಳತನ ಮಾಡುತ್ತಿದ್ದ, ಕಿಸೆಗಳ್ಳರು – ಸರಗಳ್ಳರು…… ಕಡಿಮೆಯಾಗಿದ್ದಾರೆ.

ಇವರೆಲ್ಲ ರಾಜಕೀಯ ಪಾರ್ಟಿಗಳ ಕಾರ್ಯಕರ್ತರ ರೂಪದಲ್ಲಿ ಮನೆಮನೆಗೆ ತೆರಳಿ ಜನಸಂಪರ್ಕ ಕೆಲಸವನ್ನು ಈ ತನಕ ಮಾಡಿಕೊಂಡಿದ್ದರು. ಚುನಾವಣಾ ಸಂದರ್ಭದಲ್ಲಿ ರಾಜ ಕೀಯ ಕಾರ್ಯಕರ್ತರನ್ನು ಪಾರ್ಟಿಗಳು ಬಾಡಿಗೆಗೆ ಇರಿಸಿಕೊಳ್ಳುತ್ತವೆ. ಇವರಿಗೆಲ್ಲ ಆಯಾಯ ಪಕ್ಷಗಳಿಂದ ಪರಿಚಯ ಪತ್ರ ಜಾರಿ ಗೊಳಿಸಲಾಗಿದೆ. ಈ ಕಾರ್ಡ್ ತೋರಿಸಿದವರಿಗೆ ಊಟ ತಿಂಡಿಯ ವ್ಯವಸ್ಥೆ ಮಾಡಲಾಗಿತ್ತು.

ಇದೇ ಕಾರ್ಡ್ ಪೊಲೀಸರಿಂದ ಪಾರಾಗಲೂ ಬಳಸುವಂತಾಗಿತ್ತು! ಕಾರ್ಯಕರ್ತರ ಬಾರೀ ಕೊರತೆಯಿಂದಾಗಿ ರಾಜಕೀಯ ಪಾರ್ಟಿಗಳು ತಮ್ಮ ಕಾರ್ಯಕರ್ತರ ರೇಟ್ ಈ ಭಾರಿ ವೃದ್ಧಿಸಿದ್ದರು. ಪ್ರತೀದಿನ ಊಟ ತಿಂಡಿಯ ಖರ್ಚಿನ ಹೊರತಾಗಿ ರೂಪಾಯಿ 1000 ದಿಂದ 1,200ರ ತನಕ ಸಂಬಳ ನೀಡಬೇಕಾಗಿತ್ತು. ಹೇಗೂ ಚುನಾವಣೆ ಬಂತು ಎಂದರೆ ಕಳ್ಳಕಾಕರಿಗೆ ಲಂಚಕೋರರಿಗೆ ಉತ್ತಮ ಕಾಲ! ಹಾಗಿದ್ದೂ ಪೊಲೀಸರ ಕಾಂಬಿಂಗ್ ಆಪರೇಷನ್ ನಡೆದೇ ಇತ್ತು. ಅನೇಕ ಸಮಾಜ ಘಾತುಕ ಶಕ್ತಿಗಳು ಸಿಕ್ಕಿಬಿದ್ದಿದ್ದೂ ಇವೆ. ಕೆಲವರು ಜೈಲಿಗೂ ಹೋಗಿದ್ದಾರೆ.

ಹಾಗಿದ್ದೂ ಅಭ್ಯರ್ಥಿಗಳ ರೋಡ್ ಶೋ, ರ್ಯಾಲಿ, ಜನಸಂಪರ್ಕ ಪಾದಯಾತ್ರೆ ಇತ್ಯಾದಿಗಳಲ್ಲಿ ಸರಗಳ್ಳರಿಗೆ ತಮ್ಮ ಕೃತ್ಯನಡೆಸಲು ಕಷ್ಟವಾಗಿತ್ತು! ಯಾಕೆಂದರೆ ಮೋಟಾರ್ ಸೈಕಲ್‌ನಲ್ಲಿ ಬಂದು ಸರ ಎಳೆದು ಪರಾರಿಯಾಗಲು ರಸ್ತೆ ಖಾಲಿ ಇರುತ್ತಿರಲಿಲ್ಲ! ಅದು ಚುನಾವಣಾ ಅಭ್ಯರ್ಥಿಗಳ ರ್ಯಾಲಿಯಿಂದ ಟ್ರಾಫಿಕ್ ಜಾಮ್ ಸೃಷ್ಟಿಸುತ್ತಿತ್ತು. ಪೊಲೀಸ್ ಉಪಾಯುಕ್ತ ಡಾ. ಮಹೇಶ್ ಪಾಟೀಲ್ ಅನುಸಾರ ಫೆಬ್ರವರಿ ನಂತರ ಅಪರಾಧ ಘಟನೆಗಳಲ್ಲಿ ಇಳಿಮುಖವಾಗಿದೆಯಂತೆ. ಚುನಾವಣಾ ಫಲಿತಾಂಶ ಬಂದ ನಂತರ ಮುಂದೇನೋ?
ಕಾರ್ಯಾಲಯದಲ್ಲೂ ಕಳ್ಳತನ!
ಮತದಾನವು ಶಾಂತಿಯುತವಾಗಿ ಮುಂಬೈಯಲ್ಲಿ ಜರಗಿದೆ. ಆದರೆ ಚುನಾವಣಾ ವಿಭಾಗ ಮತ್ತು ಪೊಲೀಸ್ ವಿಭಾಗದ ನಿರ್ಲಕ್ಷದ ಪರಿಣಾಮವಾಗಿ ಮತದಾನದ ಎರಡು ದಿನ ಮೊದಲಿಗೆ ಗೋವಂಡಿ – ಶಿವಾಜಿ ನಗರದಲ್ಲಿನ ಚುನಾವಣಾ ಕಾರ್ಯಾಲಯದಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದರು! ಮುಂಬೈ ಉಪನಗರದ ಗೋವಂಡಿ – ಶಿವಾಜಿ ಕ್ಷೇತ್ರದ ನಗರ ಚುನಾವಣಾ ಕಾರ್ಯಾಲಯಕ್ಕೆ ಮತದಾನದ ಎರಡು ದಿನ ಮೊದಲೇ ಕಳ್ಳರು ನುಗ್ಗಿ ಮೂರು ಫ್ಯಾನ್, ನಾಲ್ಕು ಟ್ಯೂಬ್ ಲೈಟ್ ಸಹಿತ ಒಂದು ಮೇಜು ಎತ್ತಿಕೊಂಡು ಹೋಗಿದ್ದಾರೆ.

ಇದರ ಪಕ್ಕದಲ್ಲಿರುವ ರೇಶನ್ ವಿಭಾಗ, ಎನ್.ಜಿ.ಒ. ತರಬೇತಿ ಕೇಂದ್ರ ಸಹಿತ ಇಲ್ಲೆಲ್ಲ ಅನೇಕ ಸಲ ಕಳ್ಳತನವಾಗಿದೆ. ಕಂಪೌಂಡ್‌ನ ಗೇಟ್‌ನ ಬಳಿಯೇ ಪೊಲೀಸ್ ಚೌಕಿ ಇದೆ!ಆದರೂ…..