‘ಸವರ್ಣಿಯರು ಅಂಬೇಡ್ಕರ್‌ರನ್ನು ಆರಾಸುವಂತಾಗಲಿ’

‘ಸವರ್ಣಿಯರು ಅಂಬೇಡ್ಕರ್‌ರನ್ನು ಆರಾಸುವಂತಾಗಲಿ’

‘ಸವರ್ಣಿಯರು ಅಂಬೇಡ್ಕರ್‌ರನ್ನು ಆರಾಸುವಂತಾಗಲಿ’

(ಕೃಪೆ: ವಾರ್ತಾಭಾರತಿ, ಬುಧವಾರ – ಮೇ -28-2014)

ಮೈಸೂರು, ಮೇ 27: ದಲಿತರು ಬಸವಣ್ಣರನ್ನು ಆರಾಸುವ ರೀತಿಯಲ್ಲಿ ಸವರ್ಣಿಯರು ಅಂಬೇಡ್ಕರ್‌ರನ್ನು ಆರಾಸುವಂತಾಗಬೇಕು. ಆಗ ಮಾತ್ರ ಸಮಾನತೆ ಕಾಣಲು ಸಾಧ್ಯ ಎಂದು ಪತ್ರಕರ್ತ ರಾಜಶೇಖರ್ ಕೋಟಿ ಅಭಿಮತ ವ್ಯಕ್ತಪಡಿಸಿದ್ದಾರೆ.
ನಂಜನಗೂಡು ಪಟ್ಟಣದ ಗುರುಭ ವನದಲ್ಲಿ ಚಾಮರಾಜನಗರದ ರಂಗ ವಾಹಿನಿ ಮತ್ತು ನಂಜನಗೂಡು ಸಾಂ ಸ್ಕೃತಿಕ ವೇದಿಕೆ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಮುಳ್ಳೂರು ನಾಗ ರಾಜು ರಾಜ್ಯ ಮಟ್ಟದ ಕಾವ್ಯ ಪ್ರಶಸ್ತಿ ಪ್ರದಾನಮಾಡಿ ಮಾತನಾಡಿದರು.
ಬಸವಣ್ಣರ ತತ್ವಗಳು ಎಲ್ಲಾ ಸಮುದಾಯಗಳಿಗೂ ಆದರ್ಶಮಯ. ಹಾಗಾಗಿ ದಲಿತರು ಸೇರಿದಂತೆ ಎಲ್ಲಾ ಜನಾಂಗದವರೂ ಬಸವಣ್ಣರನ್ನು ಪೂಜಿಸುತ್ತಾರೆ. ಅಂತೆಯೇ ಪ್ರಪಂಚ ದಲ್ಲೇ ಶ್ರೇಷ್ಠವಾದ ಸಂವಿಧಾನವನ್ನು ನೀಡಿದ ಅಂಬೇಡ್ಕರ್‌ರನ್ನು ಸವರ್ಣೀ ಯರು ಏಕೆ ದೂಷಿಸುತ್ತಾರೆ. ಅವರು ಎಲ್ಲಾ ವರ್ಗಗಳಿಗೂ ಸಾಮಾಜಿಕ ನ್ಯಾಯ ಒದಗಿಸಿಕೊಡುವಲ್ಲಿ ಅನನ್ಯ ಪಾತ್ರವಹಿಸಿದ್ದು, ಅವರನ್ನೂ ಸವರ್ಣೀ ಯರು ಪೂಜಿಸಿದರೆ ಸಮಾಜವು ಜಾತೀಯತೆಯಿಂದ ಮುಕ್ತವಾಗಿ, ಸುಧಾರಣೆ ಕಾಣಲು ಸಾಧ್ಯ ಎಂದರು.
ದಲಿತರನ್ನು ಕೀಳಾಗಿ ಕಾಣುವ ಮೇಲ್ಜಾತಿಯವರ ಕತ್ತಿನ ಪಟ್ಟಿ ಹಿಡಿದು ಪ್ರಶ್ನಿಸುವ ಮಟ್ಟಕ್ಕೆ ದಲಿತರು ಬೆಳೆಯ ಬೇಕು. ಮುಳ್ಳೂರರ ಸಾಹಿತ್ಯದಲ್ಲಿ ಆ ಗತ್ತು ಅಡಗಿದೆ. ಅವರ ಸಾಹಿತ್ಯದಲ್ಲಿ ಹೋರಾಟದ ಕಿಚ್ಚು ಹುಟ್ಟಿಸುವ ಶಕ್ತಿ ಹೊಂದಿವೆ ಎಂದು ತಿಳಿಸಿದರು.
ಕವಿ ಸುಬ್ಬು ಹೊಲೆಯಾರ್ ಮಾತ ನಾಡಿ, ಮಾನಸಿಕವಾಗಿ ಜಾಗೃತಿಗೊಳಿಸು ವುದೇ ನಿಜವಾದ ಚಳುವಳಿ. ವೈಚಾರಿ ಕತೆ ಮನಸುಳ್ಳ ದಲಿತ ಕವಿಗಳು ಹುಟ್ಟು ತ್ತಾರೆ, ಆದರೆ, ಪರಿಪೂರ್ಣತೆ ಕಾಣಲು ನಮ್ಮವರೇ ಬಿಡುವುದಿಲ್ಲ. ಅಂತವರ ಸಾಲಿಗೆ ಮುಳ್ಳೂರು ನಾಗರಾಜು ಸೇರುತ್ತಾರೆ. ಅವರು ಎಲ್ಲಾ ಸಮು ದಾಯದ ಪರ ದನಿ ಎತ್ತಿ, ನ್ಯಾಯ ಕೊಡಿಸುವಲ್ಲಿ ಸಲತೆ ಕಂಡಿದ್ದರೂ, ಹೆಚ್ಚು ಬೆಳೆಯಲು ನಮ್ಮವರೇ ಬಿಡಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸದ ಆರ್.ಧ್ರುವ ನಾರಾಯಣ್, ಮೂಢನಂಬಿಕೆ, ಜಾತೀ ಯತೆ ಇಂದಿಗೂ ತಾಂಡವ ವಾಡುತ್ತಿ ದ್ದು, ಮುಳ್ಳೂರರ ಬರಹಗಳನ್ನು ಅಧ್ಯಯನ ಮಾಡಿದರೆ ಅವುಗಳನ್ನು ದೂರ ಮಾಡಬಹುದಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಂಜನಗೂಡಿನಲ್ಲಿ ಮುಳ್ಳೂರು ನಾಗರಾಜುರ ಹೆಸರಿನಲ್ಲಿ ರಸ್ತೆಗೆ ಹೆಸರಿಡುವ ಕುರಿತು ಪುರಸಭೆ ಜೊತೆ ಮಾತನಾಡಿ ಶೀಘ್ರದಲ್ಲಿ ನಾಮಕರಣ ಮಾಡಲಾಗುವುದು. ಅಂಬೇಡ್ಕರ್ ಸಮುದಾಯ ಭವನ ಉದ್ಘಾಟನೆಗೊಂಡ ಬಳಿಕ ಅಲ್ಲೊಂದು ಗ್ರಂಥಾಲಯ ತೆರೆದು ಮುಳ್ಳೂರು ನಾಗರಾಜುರ ಕೃತಿಗಳ ಜೊತೆಗೆ ಇತರ ಸ್ಥಳೀಯ ಕವಿಗಳ ಕೃತಿಗಳನ್ನು ಓದಲು ಅನುಕೂಲ ಮಾಡುವುದಾಗಿ ಭರವಸೆ ನೀಡಿದರು.
ಚಾಮರಾಜನಗರದ ರಂಗವಾಹಿನಿ ಯು ಬೆಂಗಳೂರು ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ಹಾಗೂ ಕವಿ ಎಚ್.ಲಕ್ಷ್ಮೀನಾರಾಯಣಸ್ವಾಮಿಗೆ ಮುಳ್ಳೂರು ನಾಗರಾಜು ರಾಜ್ಯ ಮಟ್ಟದ ಕಾವ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ರಂಗಾಯಣದ ನಿರ್ದೇಶಕ ಜನಾರ್ದನ್(ಜನ್ನಿ), ಕುಮಾರಸ್ವಾಮಿ, ರಂಗವಾಹಿನಿ ಅಧ್ಯಕ್ಷ ಸಿ.ಎಂ.ನರಸಿಂಹ ಮೂರ್ತಿ, ಕಾರ್ಯ ದರ್ಶಿ ಕೆಂಪನಪುರ ಶಿವಕುಮಾರ್, ನಾಗೇಶ್‌ರಾಜ್ ಮತ್ತಿತರರಿದ್ದರು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s