ಪರವಾನಿಗೆ ಸಹಿತ ಮಠದ ಜಾನುವಾರು ಸಾಗಾಟ: ಸ್ವಾಮೀಜ ಿ ಸಹಿತ ಮೂವರಿಗೆ ಮಾರಣಾಂತಿಕ ಹಲ್ಲೆ

ಪರವಾನಿಗೆ ಸಹಿತ ಮಠದ ಜಾನುವಾರು ಸಾಗಾಟ: ಸ್ವಾಮೀಜಿ ಸಹಿತ ಮೂವರಿಗೆ ಮಾರಣಾಂತಿಕ ಹಲ್ಲೆ

(ಕೃಪೆ: ವಾರ್ತಾಭಾರತಿ, ಶುಕ್ರವಾರ – ಜೂನ್ -06-2014)

ಕುಂದಾಪುರ, ಜೂ.5: ಕೊಲ್ಲೂರಿನ ಧರ್ಮಪೀಠ ಗೋಶಾಲೆಯಿಂದ ಕೇರಳದ ಪಾಲಿಕ್ಕಾಡಿನ ಮುಖ್ಯ ಮಠದ ಗೋಶಾಲೆಗೆ ಪರವಾನಿಗೆ ಸಹಿತ ಜಾನುವಾರುಗಳನ್ನು ಲಾರಿ ಯಲ್ಲಿ ಸಾಗಾಟ ಮಾಡುತ್ತಿದ್ದ ಸ್ವಾಮೀಜಿ ಸಹಿತ ಮೂವರಿಗೆ ಸುಮಾರು 40ಕ್ಕೂ ಅಧಿಕ ದುಷ್ಕರ್ಮಿ ಗಳ ತಂಡ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಜೂ.4ರಂದು ರಾತ್ರಿ 10:30ರ ಸುಮಾರಿಗೆ ಕೋಟೇಶ್ವರದಲ್ಲಿ ನಡೆದಿದೆ.

ಹಲ್ಲೆಗೊಳಗಾದವರನ್ನು ಕೊಲ್ಲೂರು ಧರ್ಮ ಪೀಠದ ಮುಖ್ಯಸ್ಥ ಮೈತ್ರಿ ಕಶ್ಯಪ ಸ್ವಾಮೀಜಿ(50), ಲಾರಿ ಚಾಲಕ ಜಡ್ಕಲ್ ನಿವಾಸಿ ಮೈಕೆಲ್ (27) ಹಾಗೂ ಮುದೂರು ನಿವಾಸಿ ಜೋಸೆಫ್(64) ಎಂದು ಗುರುತಿಸ ಲಾಗಿದೆ. ಇವರೆಲ್ಲ ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೇರಳದ ಪಾಲಕ್ಕಾಡ್‌ನ ವಂಡತ್ತಾವಲಮ್ ಎಂಬಲ್ಲಿರುವ ತಪೋವರಿಷ್ಟಾಶ್ರಮದ ಅಂಗ ಸಂಸ್ಥೆ ಯಾದ ಕೊಲ್ಲೂರಿನ ಧರ್ಮಪೀಠದ ಸ್ವಾಧೀನದಲ್ಲಿರುವ ಗೋ ಶಾಲೆಯಿಂದ 10 ದನ ಹಾಗೂ 2 ಕರುಗಳನ್ನು ಮುದೂರಿನ ವಿನಿಲ್ ಎಂಬವರಿಗೆ ಸೇರಿದ ಈಚರ್ ಲಾರಿಯಲ್ಲಿ ಇವರು ಕೇರಳದ ಪ್ರಧಾನ ಧರ್ಮ ಪೀಠ ಗೋಶಾಲೆಗೆ ಸಾಗಿಸುತ್ತಿದ್ದರು. ಇವರು ಇದಕ್ಕೆ ಕೊಲ್ಲೂರು ಪೊಲೀಸ್ ಠಾಣೆ, ಕೊಲ್ಲೂರು ಗ್ರಾಪಂ ಹಾಗೂ ಧರ್ಮಪೀಠದ ಲೆಟರ್‌ಹೆಡ್‌ನಲ್ಲಿ ಜಾನುವಾರು ಸಾಗಾಟಕ್ಕೆ ಅಧಿಕೃತ ಅನುಮತಿ ಪತ್ರಗಳನ್ನು ಹೊಂದಿದ್ದರು.

ಲಾರಿಯಲ್ಲಿ ಗೋ ಸಾಗಾಟ ಮಾಡು ತ್ತಿರುವ ವಿಚಾರದ ಬಗ್ಗೆ ಮಾಹಿತಿ ಪಡೆದುಕೊಂಡ ಸಂಘಟನೆಯೊಂದರ ಕಾರ್ಯಕರ್ತರು ಬೈಕಿನಲ್ಲಿ ಬಂದು ಕೋಟೇಶ್ವರದಲ್ಲಿ ಲಾರಿಯನ್ನು ಅಡ್ಡಗಟ್ಟಿದರು. ಲಾರಿ ಚಾಲಕರನ್ನು ವಿಚಾರಿಸಿದ ಇವರು ಅವರಲ್ಲಿದ್ದ ದಾಖಲೆಪತ್ರಗಳನ್ನು ಪಡೆದುಕೊಂಡರು. ಕೂಡಲೇ ಸಂಘಟನೆಯ ಇತರ ಕಾರ್ಯಕರ್ತರಿಗೆ ಕರೆ ಮಾಡಿ ಸ್ಥಳಕ್ಕೆ ಕರೆಸಲಾಯಿತು.
ಸ್ಥಳದಲ್ಲಿ ಜಮಾಯಿಸಿದ ಸುಮಾರು 40ಕ್ಕೂ ಅಧಿಕ ಮಂದಿ ಕಾರ್ಯ ಕರ್ತರು ಲಾರಿಯಲ್ಲಿದ್ದ ಮೂವರಿಗೂ ಹಿಗ್ಗಾಮುಗ್ಗ ಥಳಿಸಿದರು. ಸ್ವಾಮೀಜಿಯ ಕೈ ಹಾಗೂ ಮುಖಕ್ಕೆ ಹಲ್ಲೆ ನಡೆಸಲಾ ಗಿದ್ದು, ಮೈಕೆಲ್ ಹಾಗೂ ಜೋಸೆಫ್ ಎಂಬವರ ಕಾಲುಗಳ ಮೂಳೆ ಮುರಿಯಲಾಗಿದೆ. ಮಾರ ಣಾಂತಿಕ ಹಲ್ಲೆಗೊಳಗಾದ ಮೂವರು ಗಂಭೀರ ಸ್ಥಿತಿಯಲ್ಲಿದ್ದಾರೆ.

ಕೊನೆಯಲ್ಲಿ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಹಲ್ಲೆಗೆ ಒಳಗಾದವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತು. ಹಲ್ಲೆ ನಡೆಸಿರುವ ದುಷ್ಕರ್ಮಿಗಳ ಪತ್ತೆಗೆ ಪೊಲೀಸರು ಮೂರು ತಂಡಗಳನ್ನು ರಚಿಸಲಾಗಿದ್ದು, ಕುಂದಾಪುರ ಡಿವೈಎಸ್ಪಿ ಸಿ.ಬಿ.ಪಾಟಿಲ್ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ದಿವಾಕರ ಪಿ.ಎಂ. ಹಾಗೂ ಸಿಬ್ಬಂದಿ ಆರೋಪಿಗಳ ಶೋಧ ಕಾರ್ಯ ನಡೆಸುತ್ತಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದುಷ್ಕರ್ಮಿಗಳಿಂದ ಹಲ್ಲೆಗೆ ಒಳಗಾಗಿ ರುವ ಸ್ವಾಮೀಜಿ ಸಹಿತ ಮೂವರನ್ನು ಆಸ್ಪತ್ರೆಯಲ್ಲಿ ಭೇಟಿಯಾಗಿರುವ ಬೈಂದೂರು ಶಾಸಕ ಗೋಪಾಲ ಪೂಜಾರಿ, ದುಷ್ಕರ್ಮಿಗಳನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿದ್ದಾರೆ. ಮುಂದೆ ಇಂತಹ ಘಟನೆ ನಡೆದರೆ ಪೊಲೀಸ್ ಅಧಿಕಾರಿಗಳನ್ನೇ ಹೊಣೆ ಗಾರರನ್ನಾಗಿ ಮಾಡಲಾ ಗುವುದು. ಈ ವಿಚಾರವನ್ನು ಮುಖ್ಯಮಂತ್ರಿ ಹಾಗೂ ಗೃಹಸಚಿವರ ಗಮನಕ್ಕೂ ತರಲಾಗುವುದು ಎಂದು ಅವರು ತಿಳಿಸಿದ್ದಾರೆ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s