ಗಂಗಾಧರ ಪಾಂಗಾಳ ಹತ್ಯೆ ಪ್ರಕರಣ: ಪ್ರಮುಖ ಆರೋಪಿಯ ಬಂಧನಕ್ಕೆ ಆಗ್ರಹಿಸಿ ರಸ್ತೆಗಿಳಿದ ಮೊಗವೀರರು

gangadhar pangalaಗಂಗಾಧರ ಪಾಂಗಾಳ ಹತ್ಯೆ ಪ್ರಕರಣ: ಪ್ರಮುಖ ಆರೋಪಿಯ ಬಂಧನಕ್ಕೆ ಆಗ್ರಹಿಸಿ ರಸ್ತೆಗಿಳಿದ ಮೊಗವೀರರು
(ಕೃಪೆ: ವಾರ್ತಾಭಾರತಿ, ಶನಿವಾರ – ಜೂನ್ -07-2014)
ಮಂಗಳೂರು, ಜೂ.6: ನಗರದ ಹದಿನಾಲ್ಕು ಪಟ್ಣ ಮೊಗವೀರ ಸಂಯುಕ್ತ ಸಭಾದ ಸಲಹೆಗಾರ, ಉರ್ವಾ ಮಾರಿಯಮ್ಮ ದೇವಸ್ಥಾನದ ಮೊಕ್ತೇಸರ ಗಂಗಾಧರ ಪಾಂಗಾಳ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿಯನ್ನು ತಕ್ಷಣ ಬಂಧಿಸುವಂತೆ ಒತ್ತಾಯಿಸಿ ಮೊಗವೀರ ಸಮು ದಾಯದವರು ಇಂದು ರಸ್ತೆಗಿಳಿದು ಪ್ರತಿಭಟನೆ ನಡೆಸಿದರು.
ಮಂಗಳೂರು ಹದಿನಾಲ್ಕು ಪಟ್ಣ ಮೊಗವೀರ ಸಂಯುಕ್ತ ಸಭಾ ನೇತೃತ್ವದಲ್ಲಿ ಜ್ಯೋತಿ ವೃತ್ತದಿಂದ ವೌನ ಮೆರವಣಿಗೆ ನಡೆಸಿದ ಮೊಗವೀರರು ಜಿಲ್ಲಾಧಿಕಾರಿ ಕಚೇರಿಯೆದುರು ಪ್ರತಿಭಟನಾ ಸಭೆ ನಡೆಸಿದರು. ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿದ ಯಶವಂತ ಮೆಂಡನ್‌ರವರು, ‘‘ಗಂಗಾಧರ್ ಪಾಂಗಾಳರನ್ನು ಕಳೆದ ಮೇ 14ರಂದು ವಾಹನ ಅಪಘಾತ ರೀತಿಯಲ್ಲಿ ಅಮಾನುಷವಾಗಿ ಹತ್ಯೆ ಮಾಡಲಾಗಿದೆ. ಮೂವರು ಸಹೋದರರು ಹಾಗೂ ಇನ್ನೋರ್ವನ ಸಹಕಾರದಿಂದ ಈ ಹತ್ಯೆ ಮಾಡಿರುವುದಾಗಿ ಪತ್ತೆಯಾಗಿದ್ದು, ಪೊಲೀಸರು ಸಹೋದರರಾದ ಭಾಸ್ಕರ್ ಬೈಕಂಪಾಡಿ, ಹರೀಶ್ ಬೈಕಂಪಾಡಿ ಹಾಗೂ ಪುಷ್ಪರಾಜ್ ಎಂಬವರನ್ನು ಬಂಧಿಸಿದ್ದಾರೆ. ಇನ್ನೋರ್ವ ಪ್ರಮುಖ ಆರೋಪಿ ಸತೀಶ್ ಬೈಕಂಪಾಡಿ ಹಾಗೂ ಆತನ ಸಹಚರರ ಬಂಧನವಾಗಿಲ್ಲ. ಹಾಗಾಗಿ ಅವರನ್ನು ತಕ್ಷಣ ಬಂಧಿಸಿ ಸಮುದಾಯಕ್ಕೆ ನ್ಯಾಯ ಒದಗಿಸಬೇಕು’’ ಎಂದು ಆಗ್ರಹಿಸಿದರು. ಈ ಸಂದರ್ಭ ಮೊಗವೀರ ಮುಖಂಡರಾದ ನ್ಯಾಯವಾದಿ ಗಂಗಾಧರ ಎಚ್, ಸದಾನಂದ ಬಂಗೇರ, ದಯಾನಾಥ್ ಕೋಟ್ಯಾನ್ ಮೊದಲಾ ದವರು ಮಾತನಾಡಿದರು. ಪ್ರಮುಖ ಆರೋಪಿಯ ಬಂಧನ ಹಾಗೂ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಒತ್ತಾಯಿಸಿ ಸಂಯುಕ್ತ ಸಭೆಯ 19 ಮೊಗವೀರ ಗ್ರಾಮ ಸಭೆಗಳ ಸರ್ವ ಸದಸ್ಯರ ವತಿಯಿಂದ ಜಿಲ್ಲಾಧಿಕಾರಿ ಮೂಲಕ ಗೃಹಸಚಿವರಿಗೆ ಮನವಿ ಸಲ್ಲಿಸಲಾಯಿತು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s