ಸ್ಮತಿಯ ಕೇಸರಿ ಪಠ್ಯ ಪುಸ್ತಕ ಯೋಜನೆಯ ಹಿಂದೆ ಆರೆಸ್ಸೆಸ್?

ಅಂಕಣ

(ಕೃಪೆ: ವಾರ್ತಾಭಾರತಿ, ಶನಿವಾರ – ಜೂನ್ -07-2014)

ಸ್ಮತಿಯ ಕೇಸರಿ ಪಠ್ಯ ಪುಸ್ತಕ ಯೋಜನೆಯ ಹಿಂದೆ ಆರೆಸ್ಸೆಸ್?

-ಹಸನ್ ಸುರೂರ್

ಹೊಸದಿಲ್ಲಿ, ಜೂ.6: ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಬಿಜೆಪಿ ತನ್ನ ಹಿಂದುತ್ವ ಕೇಂದ್ರಿತ ವಿಶ್ವ ದೃಷ್ಟಿಕೋನದ ಶಾಲಾ ಪಠ್ಯ ಪುಸ್ತಕಗಳನ್ನು ತರುವ ಪ್ರಯತ್ನ ಆರಂಭಿಸಿದೆ. ಸ್ಮತಿ ಇರಾನಿ ‘ಹಿಂದೂ ದೃಷ್ಟಿಕೋನದ’ ಪಠ್ಯ ಕ್ರಮವನ್ನು ನೀಡುವ ಯೋಜನೆಯನ್ನು ಪ್ರಕಟಿಸುವ ಮೂಲಕ ಮಾನವ ಸಂಪನ್ಮೂಲಾಭಿವೃದ್ಧಿ ಸಚಿವಾಲಯದಲ್ಲಿ ತನ್ನ ಖಾತೆಯನ್ನು ತೆರೆದಿದ್ದಾರೆ. ಇದರಿಂದಾಗಿ ಎಡ ಹಾಗೂ ಬಲ ಪಂಥೀಯರ ನಡುವೆ ಹೊಸ ಸುತ್ತಿನ ಸಮರಕ್ಕೆ ವೇದಿಕೆ ಸಿದ್ಧವಾಗಿದೆ ಅಥವಾ ಒಬ್ಬ ವಿವರಣೆಕಾರ ಹೇಳಿರುವಂತೆ ‘ಹೊಸ ಬಲ’ ಹಾಗೂ ‘ಹಳೆ ಎಡ’ಗಳ ನಡುವೆ ಸಂಘರ್ಷಕ್ಕೆ ಕಣ ತೆರೆದುಕೊಂಡಿದೆ.
ವಿಶೇಷ ರಾಜಕೀಯ ಅನುಭವವಿಲ್ಲದ ಹಾಗೂ ಸರಕಾರದಲ್ಲಿ ಶೂನ್ಯ ಅನುಭವಿ ಸ್ಮತಿ, ಎಚ್‌ಆರ್‌ಡಿ ಸಚಿ ವಾಲಯವನ್ನು ಮುನ್ನಡೆಸಲು ಅಚ್ಚರಿಯ ಆಯ್ಕೆಯಿರ ಬಹುದು. ಆದರೆ, ಆಕೆ ‘ಶಾಸನ’ವನ್ನು ಚೆನ್ನಾಗಿ ಬಲ್ಲರು ಹಾಗೂ ಓರ್ವ ಹೊಸ ಮುಲ್ಲಾನ ಉಮೇದಿನಲ್ಲಿ ಅವರದಕ್ಕೆ ಅಂಟಿಕೊಂಡಿದ್ದಾರೆ. ಸ್ಮತಿಯವರ ಯೋಜನೆಯ ಎಲ್ಲ ವಿವರ ಅತ್ಯಂತ ರಹಸ್ಯವಾಗಿದೆ. ಅಧಿಕೃತವಾಗಿ ತಿಳಿದು ಬಂದಿ ರುವ ವಿಚಾರವೆಂದರೆ, 8ನೆ, 9ನೆ ಹಾಗೂ 10ನೆ ತರಗತಿಗಳ ಪಠ್ಯಪುಸ್ತಕಗಳಲ್ಲಿ ‘ಪುರಾತನ ಹಿಂದೂ ಪಾಠ’ಗಳನ್ನು ಅಳವಡಿಸಲು ಅವರು ಆಸಕ್ತರಾಗಿದ್ದಾರೆ ಎಂಬುದಷ್ಟೇ.
ವಾಸ್ತವವಾಗಿ, ಅವರೊಂದು ಸಮಿತಿಯನ್ನು ರಚಿಸಿದ್ದು, ಅದು ಉಪನಿಷತ್ತುಗಳು ಹಾಗೂ ವೇದಗಳಂತಹ ಪುರಾತನ ಸಾಹಿತ್ಯವನ್ನು ಅಧ್ಯಯನ ಮಾಡಿ, ವಿಜ್ಞಾನ, ಗಣಿತ ಹಾಗೂ ತತ್ತ್ವಶಾಸ್ತ್ರಗಳಿಗೆ ಹಿಂದೂ ಕೊಡುಗೆಯ ಮೇಲೆ ಬೆಳಕು ಚೆಲ್ಲುವ ಸೂಕ್ತ ಪಠ್ಯವನ್ನು ಗುರುತಿಸಲಿದೆ. ಮಾಧ್ಯಮ ವರದಿಗಳ ಪ್ರಕಾರ, ಹಿಂದೂ ‘ಸುವರ್ಣ ಯುಗದ’ ವೈಭವವನ್ನು ಅನಾವರಣಗೊಳಿಸುವ ಬೋಧನಾ ಸಾಮಾಗ್ರಿಗಳನ್ನು ಅಭಿವೃದ್ಧಿಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಮೇಲ್ನೋಟಕ್ಕೆ ಇದರಲ್ಲಿ ತಪ್ಪೇನೂ ಇಲ್ಲ. ಪುರಾತನ ಭಾರತದ ಬಗ್ಗೆ ಚರಿತ್ರೆಯ ತರಗತಿಗಳಲ್ಲಿ ಈಗಾಗಲೇ ಕಲಿಸಲಾಗುತ್ತಿದೆ. ವಿದ್ಯಾರ್ಥಿಯ ಕ್ಷಿತಿಜವನ್ನು ವಿಸ್ತರಿಸುವ ಯಾವುದೇ ಆದರೂ ಅದನ್ನು ಸ್ವಾಗತಿಸಲೇ ಬೇಕು. ಆದರೆ, ಸಣ್ಣಕ್ಷರಗಳ ಅಡಿ ಟಿಪ್ಪಣಿಯನ್ನು ಯಥಾವತ್ತಾಗಿ ಗಮನಿಸಿದರೆ ಹಾಗೂ ಈ ಮೊದಲಿನ ಅಂತಹ ಪ್ರಯತ್ನಗಳನ್ನು ಪರಿಗಣಿಸಿದರೆ, ಅದು ನಿಜವಾಗಿ ನಿರುಪದ್ರವಿಯೇ ಎಂಬ ಸಂಶಯ ಬಾರದಿರದು.
ಸ್ಮತಿ ತನ್ನದೇ ಸರಳ ಚಿಂತನೆಯೆಂಬಂತೆ ಪ್ರತಿ ಪಾದಿಸುತ್ತಿರುವ ದೇಶದ ಪುರಾತನ ಸಂಸ್ಕೃತಿ ಹಾಗೂ ಪರಂಪರೆಯನ್ನು ಸಂರಕ್ಷಿಸುವ ಆಕೆಯ ಇಚ್ಛೆಯು – ಒಬ್ಬ ಅಧಿಕಾರಿಯನ್ನುಲ್ಲೇಖಿಸಿ ಹೇಳುವುದಾದರೆ, ವಾಸ್ತವವಾಗಿ ಆರೆಸ್ಸೆಸ್‌ನ ಯೋಜನೆಯಾಗಿದ್ದು, ಅದರ ಮೇಲೆಲ್ಲ ಸಂಘದ ಬೆರಳಚ್ಚು ಇದೆ. ಅದೆಲ್ಲ ಎಲ್ಲಿಂದ ಬರುತ್ತದೆ ಎಂದು ಎಲ್ಲರಿಗೂ ತಿಳಿದಿದ್ದರೂ, ಅಧಿಕಾರಿಗಳು ಏನೂ ತಿಳಿಯದವರಂತೆ ನಟಿಸುತ್ತಿದ್ದಾರೆ.
‘ಡೆಕ್ಕನ್ ಕ್ರಾನಿಕಲ್’ ಬೆಟ್ಟು ಮಾಡಿರುವಂತೆ, ಈ ಕ್ರಮವನ್ನು ‘‘ಆರೆಸ್ಸೆಸ್‌ನ ಶೈಕ್ಷಣಿಕ ಸುಧಾರಣೆ ಕಾರ್ಯಸೂಚಿಯನ್ನು ಒಳ ನೂಕುವ ಸರಕಾರದ ಒಂದು ಪ್ರಯತ್ನವೆಂಬಂತೆ ಕಾಣಲಾಗುತ್ತಿದೆ. ರಾಷ್ಟ್ರ ನಿರ್ಮಾಣಕ್ಕೆ ಹಿಂದೂ ಸಂಸ್ಕೃತಿ ಹಾಗೂ ಧರ್ಮ ನೀಡಿರುವ ಕೊಡುಗೆಯನ್ನು ಕಾಂಗ್ರೆಸ್ ಸರಕಾರಗಳು ಉಪೇಕ್ಷಿಸುತ್ತಿವೆಯೆಂದು ಆರೆಸ್ಸೆಸ್ ಟೀಕಿಸುತ್ತ ಬಂದಿದೆ. ಬಲಪಂಥೀಯ ಸಂಘಟನೆಗಳು ಹಾಲಿ ಪಠ್ಯ ಪುಸ್ತಕಗಳಿಗೆ ‘ಎಡ – ಒಲವಿನ’ವುಗಳೆಂದು ಹಣೆಪಟ್ಟಿ ಹಚ್ಚಿವೆ.
ಶಿಕ್ಷಣದ ‘ಕೇಸರೀಕರಣ’ ಎನ್ನುವುದು, ವಿದೇಶಿ ಪ್ರಭಾವದ ಪಠ್ಯಪುಸ್ತಕಗಳ ಶುದ್ಧೀಕರಣ ಹಾಗೂ ದೇಶಭಕ್ತಿ ಹೆಚ್ಚಿಸುವುದಕ್ಕಾಗಿರುವ ಅಭಿಯಾನದ ಉಡುಪಿನಲ್ಲಿರುವ ಆರೆಸ್ಸೆಸ್‌ನ ನೆಚ್ಚಿನ ಯೋಜನೆಯಾಗಿದೆ. ಮುರಳಿ ಮನೋಹರ ಜೋಶಿ ಎಚ್‌ಆರ್‌ಡಿ ಸಚಿವರಾಗಿದ್ದಾಗ, ವಿಶೇಷ ಆಸಕ್ತಿಯಿಂದ ಅದನ್ನು ಕೈಗೊಂಡಿದ್ದರು. ಆಗ ಎಸಿಇಆರ್‌ಟಿ ಪುಸ್ತಕಗಳ ವ್ಯಾಪಕ ಬದಲಾವಣೆ ಮಾಡಲಾಗಿತ್ತು ಹಾಗೂ ಭಾರೀಯಾದ ರಾಷ್ಟ್ರವಾದಿ ಬೋಧನಾ ಸಾಮಗ್ರಿಯನ್ನು ಸಿದ್ಧಪಡಿಸಲು ಆರೆಸ್ಸೆಸ್ ಪರ ಇತಿಹಾಸಕಾರರನ್ನು ಕರೆಸಲಾಗಿತ್ತು. ಎನ್‌ಸಿಇಆರ್‌ಟಿ ಹಾಗೂ ಭಾರತೀಯ ಇತಿಹಾಸ ಸಂಶೋಧನ ಮಂಡಳಿಗಳಂತಹ ಪ್ರಮುಖ ಶೈಕ್ಷಣಿಕ ಸಂಸ್ಥೆಗಳನ್ನು ‘ಪುನಾರಚಿಸಿ’ ಬಿಜೆಪಿಯ ಚಿಂತನೆಗಳ ಸಹಾನುಭೂತಿಕಾರರನ್ನು ತುಂಬಲಾಗಿತ್ತು.
ಜೋಶಿಯವರ ಈ ಕ್ರಮದ ಕುರಿತು ವಿವಾದ ಭ ುಗಿಲೆದ್ದಿತ್ತು. ಅವರು ಬಿಜೆಪಿ ಹೊರತಾದ ಸರಕಾರಗಳಿರುವ ರಾಜ್ಯಗಳ ವಿರೋಧವನ್ನೆದುರಿಸಬೇಕಾಯಿತು. ‘ವಸ್ತು ದೋಷದಿಂದ ತುಂಬಿರುವ’ ಹೊಸ ಎನ್‌ಸಿಇಆರ್‌ಟಿ ಪುಸ್ತಕಗಳನ್ನು ತಾವು ಅಳವಡಿಸಿಕೊಳ್ಳುವುದಿಲ್ಲವೆಂದು ಹಲವು ರಾಜ್ಯಗಳು ಹೇಳಿದ್ದವು. ಆದ್ದರಿಂದ, ಪರಿಣಾಮದಲ್ಲಿ, ಜೋಶಿ ಎಲ್ಲಿ ನಿಲ್ಲಿಸಿ ದ್ದರೋ ಅಲ್ಲಿಂದು ಸ್ಮತಿ ಆರಂಭಿಸುತ್ತಿದ್ದಾರೆ. ಶಾಲಾ ಶಿಕ್ಷಣ ದಲ್ಲಿ ‘ಸಂಪೂರ್ಣ ಬದಲವಾಣೆಗೆ’ ಆಗ್ರಹಿ ಸಿರುವ ಆರೆಸ್ಸೆಸ್ – ಪ್ರಾಯೋಜಿತ ಶಿಕ್ಷಾ ಸಂಸ್ಕೃತಿ ಉತ್ಥಾನ ನ್ಯಾಸ (ಎಸ್‌ಎಸ್‌ಯುಎನ್) ಈ ಕಾರ್ಯ ಸೂಚಿಯ ಚಾಲಕ ಸ್ಥಾನದಲ್ಲಿದೆಯೆಂಬುದು ಸ್ಪಷ್ಟ. ಆರೆಸ್ಸೆಸ್ ಪ್ರಚಾರಕ್ ದೀನನಾಥ ಬಾತ್ರಾ ಅದರ ಮುಖ್ಯ ಅಭಿಯಾನಕಾರನಾಗಿದ್ದು, ಅವರು, ವಿವಾದಿತ ಶಿಕ್ಷಾ ಬಚಾವೊ ಆಂದೋಲನವನ್ನೂ ನಡೆಸುತ್ತಿದ್ದಾರೆ. ಈ ಆಂದೋಲನವು ತಾನು ‘ಹಿಂದೂ ವಿರೋಧಿ’ಯೆಂದು ಭಾವಿಸುವ ಯಾವುದೇ ಪುಸ್ತಕದ ಮೇಲೆ ನಿಷೇಧ ಹೇರ ಬೇಕೆಂದು ಒತ್ತಾಯಿಸುವ ಮೂಲಕ ಕುಖ್ಯಾತಿ ಗಳಿಸಿದೆ.
ಬಾತ್ರಾ, ಡಾ.ಜೋಶಿಯವರ ‘ಸುಧಾರಣೆ’ಗಳ ಹಿಂದಿನ ಚಾಲಕ ಶಕ್ತಿಯಾಗಿದ್ದಾರೆಂಬುದನ್ನೂ ಇಲ್ಲಿ ನೆನಪಿಸುವುದು ಅಗತ್ಯವಾಗಿದೆ. ಅವರು ಮತ್ತೊಮ್ಮೆ ಬಂದಿದ್ದಾರೆ. ಸ್ಮತಿ ತನ್ನ ಯೋಜನೆಯನ್ನು ಪ್ರಕಟಿಸುವ ಮೊದಲು, ಬಾತ್ರಾ, ತಾನು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ, ಶಿಕ್ಷಣದ ಸುಧಾರಣೆಗೆ ಆಗ್ರಹಿಸಲಿದ್ದೇನೆಂದು ತಿಳಿಸಿದ್ದರು.
ಪ್ರತಿಜ್ಞೆ ಸ್ವೀಕರಿಸಿದ ಬಳಿಕ ತಾನು ನರೇಂದ್ರ ಮೋದಿಜೀಯವರನ್ನು ಭೇಟಿಯಾಗಲಿದ್ದೇನೆ. ತಾವೀಗಾಗಲೇ ತಮ್ಮ ಬೇಡಿಕೆಗಳನ್ನು ಕಳುಹಿಸಿದ್ದೇವೆ. ರಾಜಕೀಯ ಬದಲಾವಣೆ ನಡೆದಿದೆ. ಈಗ ಶಿಕ್ಷಣದ ಸಂಪೂರ್ಣ ಪರಿಷ್ಕರಣೆ ನಡೆಯಬೇಕಾಗಿದೆ ಎಂದು ಬಾತ್ರಾ ‘ಟೈಂಸ್ ಆಫ್ ಇಂಡಿಯಾ’ದೊಡನೆ ಹೇಳಿದ್ದರು.
ಎನ್‌ಸಿಇಆರ್‌ಟಿ ಪಠ್ಯ ಪ್ರಸ್ತಕಗಳನ್ನು ರಾಷ್ಟ್ರದ ಗುರಿ ಹಾಗೂ ಬದ್ಧತೆಗಳಿಗೆ ಅನುಸಾರವಾಗಿ ಪುನಾರಚಿಸಲಾಗುವುದು. ಅವು ಮಕ್ಕಳಲ್ಲಿ ದೇಶಭಕ್ತಿ ತುಂಬುತ್ತಿರಬೇಕು. ಆಧುನೀತೆಯೆಂದರೆ ಪಾಶ್ಚಾತ್ಯೀಕರಣವಲ್ಲ. ತಾವು ಭಾರತೀಯ ಮೂಲದ ದೇಶಭಕ್ತಿ ಹಾಗೂ ಆಧ್ಯಾತ್ಮವನ್ನು ಒಳಗೊಂಡ ಆಧುನೀಕತೆಯನ್ನು ಬಯಸುತ್ತಿದ್ದೇವೆ ಎಂದವರು ಯಾವುದೇ ಭಿಡೆಯಿಲ್ಲದೆ, ತಾವು ಸರಿಯಾದ ದಾರಿಯಲ್ಲೇ ಇದ್ದೇವೆ ಎಂದು ಯೋಚಿಸಿದವರಂತೆ ಮಾತನ್ನಾಡಿದ್ದರು.
ಈ ಪುನಾರಚಿಸಲಾಗುವುದು ಎಂಬ ಮಾತಿನಲ್ಲಿ ‘ರೆ’ ಅಥವಾ ‘ಆದರೆ’ ಇತ್ಯಾದಿಗಳಿರಲಿಲ್ಲ. ಆದುದರಿಂದ ಗೋಡೆ ಬರಹವು ಸ್ಪಷ್ಟವಾಗಿಯೇ ಇದೆ. ಅದು ಪುರಾತನ ಭಾರತದ ಕುರಿತು ಹಿತಕರವಾದ ಕೆಲವು ಆಧ್ಯಾಯಗಳಲ್ಲಿ ಮುಗಿಯಲಾರದು. ಇರಾನಿಯವರ ನಡೆಯು ಜೋಶಿ ಆರಂಭಿಸಿ ಮುಗಿಸದಿರುವ ಕೆಲಸವನ್ನು ಮುಗಿಸುವುದೇ ಆಗಿದೆ. ಇದು ಶಿಕ್ಷಣ ವ್ಯವಸ್ಥೆಯನ್ನು ‘ಹಿಂದುತ್ವೀಕರಿಸುವ’ತ್ತ ಜಾರು ಹೆಜ್ಜೆಯ ಆರಂಭ ಆಗಿರಬಹುದೆಂಬ ಭೀತಿ ಹುಟ್ಟಿಸಿದೆ. ಎಚ್‌ಆರ್‌ಡಿ ಸಚಿವಾಲಯವು ಖಂಡಿತವಾಗಿಯೂ ಶೈಕ್ಷಣಿಕ ಸುಧಾರಣೆಗೆ ಗಮನ ನೀಡಬೇಕೇ ವಿನಾ ಪಠ್ಯಪುಸ್ತಕಗಳ ಕೋಮುವಾದೀಕರಣಕ್ಕಲ್ಲವೆಂದು ಚರಿತ್ರೆಕಾರ ರಾಮಚಂದ್ರ ಗುಹಾ ಟ್ವೀಟಿಸಿದ್ದಾರೆ. ಕೋಮುವಾದೀಕರಣ ಹೌದೋ ಅಲ್ಲವೋ- ಅವರಂತೂ, ಪಠ್ಯಪುಸ್ತಕಗಳಿಗೆ ‘ಕಲಾಯಿ’ ಹಾಕುವ ಬದಲು ಶಿಕ್ಷಣದ ಸುಧಾರಣೆಗೆ ಒತ್ತು ನೀಡಬೇಕೆಂದು ಸರಿಯಾಗಿಯೇ ಹೇಳಿದ್ದಾರೆ. ಸರಕಾರಿ ಶಿಕ್ಷಣ ವಲಯವು ಮೂಲ ಸೌಕರ್ಯದ ಕೊರತೆ, ಅರ್ಹ ಶಿಕ್ಷಕರ ಕೊರತೆ, ಕಡಿಮೆ ಹಾಜರಿ, ಅತಿ ಹೆಚ್ಚು ಶಾಲೆ ಬಿಡುವವರ ಸಂಖ್ಯೆ ಇತ್ಯಾದಿ ಆಘಾತಕಾರಿ ಸಮಸ್ಯೆ ಗಳನ್ನೆದುರಿಸುತ್ತಿರುವಾಗ, ಎಚ್‌ಆರ್‌ಡಿ ಸಚಿವಾಲಯವು ‘ಹಿಂದೂ ಚಿಂತನೆ’ಗಳನ್ನು ಅಳವಡಿಸುವ ಕುರಿತು ಮಾತನಾಡುವುದನ್ನೇ ಆದ್ಯತೆಯನ್ನಾಗಿಸಿರುವುದು ಆತಂಕಕಾರಿ ವಿಚಾರವಾಗಿದೆ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s