ಎದುರಿಸಬೇಕಿದೆ ‘ಎಬೋಲ’

ಹೊನಲು

ಯಶವನ್ತ ಬಾಣಸವಾಡಿ.

ಪಡುವಣ ಆಪ್ರಿಕಾದಲ್ಲಿ (West Africa) ಈಗಾಗಲೇ ಸಾವಿರಾರು ಮಂದಿಯ ಪ್ರಾಣ ತೆಗೆದುಕೊಂಡು ಜಗತ್ತನ್ನು ತಲ್ಲಣಗೊಳಿಸಿದೆ ಎಬೋಲ ನಂಜುಳ (Ebola virus). ಬಾರತಲ್ಲಿ ಎಬೋಲಾ ಹರಡಿರುವುದು ಇನ್ನೂ ಗಟ್ಟಿಯಾಗಿಲ್ಲವಾದರೂ, ಈ ಕುರಿತ ಅಂಜಿಕೆ ಎಲ್ಲೆಡೆ ಮನೆಮಾಡಿದೆ. ಎಬೋಲಾ ತಡೆಗಟ್ಟಲು ಯಾವುದೇ ಮದ್ದು ಇಲ್ಲದಿರುವುದು ಜಗತ್ತಿನೆಲ್ಲೆಡೆ ಆತಂಕಕ್ಕೆ ಕಾರಣವಾಗಿದೆ. ಎಬೋಲಾ ಅಂದರೇನು? ಇದು ಹೇಗೆ ಹರಡುತ್ತದೆ? ಮುಂತಾದವುಗಳ ಕುರಿತು ಈ ಬರಹದಲ್ಲಿ ತಿಳಿಯೋಣ.

ಮನುಶ್ಯ ಹಾಗು ಮನುಶ್ಯ ಜಾತಿಗೆ ಸೇರುವ ಕೋತಿಗುಂಪುಗಳನ್ನು (primates) ಕಾಡುವ ಈ ಬೇನೆಯನ್ನು ಎಬೋಲ ನಂಜುಳಗಳು (Ebola virus) ಉಂಟುಮಾಡುತ್ತವೆ. ಈ ನಂಜುಳವನ್ನು ಮೊದಲ ಬಾರಿಗೆ 1976 ರಲ್ಲಿ ಸುಡಾನ್ (ಈಗ ತೆಂಕಣ ಸುಡಾನ್) ಹಾಗು ಕಾಂಗೋ ನಾಡುಗಳಲ್ಲಿ ಗುರುತಿಸಲಾಯಿತು. ಸಿಡಿಯುವಿಕೆ (outbreak) ಬಗೆಯಲ್ಲಿ ಹರಡುವ ಈ ನಂಜುಳು, ಹೆಚ್ಚಾಗಿ ಬಿಸಿಬಳಸಿನ (tropical) ಬಾಗಗಳಲ್ಲಿ ಕಾಣಿಸಿಕೊಳ್ಳುತ್ತವೆ. ಜಗತ್ತಿನ ಹದುಳ ಕೂಟದ (World Health Organization-WHO) ಮಾಹಿತಿಯ ಪ್ರಕಾರ 1976 ರಿಂದ 2013 ರವರೆಗೆ ಎಬೋಲ 1,716 ಮಂದಿಗೆ ತಗುಲಿತ್ತು.

EbolaOutbreakAugust2014-ActiveTransmissions_svg

(ಎಬೋಲದಿಂದ ಹೆಚ್ಚು ಬಳಲುತ್ತಿರುವ ನಾಡುಗಳನ್ನು ಕೆಂಪುಬಣ್ಣದಲ್ಲಿ ತೋರಿಸಲಾಗಿದೆ)

ಹಿಂದೆಂದಿಗಿಂತಲೂ ದೊಡ್ಡದಾದ ಎಬೋಲಾ ಈಗ ಪಡುವಣ ಆಪ್ರಿಕಾದ ಗಿನಿಯ (Guinea), ಸಿಯೆರ‍್ರ ಲಿಯೋನೆ (Sierra Leone) ಹಾಗು ನಯ್ಜೀರಿಯ (Nigeria) ನಾಡುಗಳನ್ನು ಬಾದಿಸುತ್ತಿದೆ. 2014 ಆಗಶ್ಟ 22 ರವರೆಗೆ 2,615 ಮಂದಿಗೆ ಎಬೋಲ ತಗುಲಿದ್ದು, ಅವರಲ್ಲಿ 1,427 ಮಂದಿ ಸತ್ತಿರುವುದಾಗಿ ವರದಿಯಾಗಿದೆ.

ಹರಡುವ ಬಗೆ:
ಎಬೋಲಾ ಮೊಟ್ಟಮೊದಲಿಗೆ ಬಾವಲಿಗಳಲ್ಲಿ ಕಂಡುಬಂದಿದ್ದಾಗಿ ಅರಕೆಯಿಂದ ತಿಳಿದುಬಂದಿದೆ. ಎಬೋಲ ಸೋಂಕು…

View original post 514 more words

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s