ನಮ್ಮ ಊರಲ್ಲಿನ ಗಣಪತಿ ಹಬ್ಬ

ಹೊನಲು

ಸುನಿಲ್ ಮಲ್ಲೇನಹಳ್ಳಿ.

ganapa

ನಾಳೆ ಗಣೇಶ ಹಬ್ಬ. ನೆನಪಿನ ಅಂಗಳದಲ್ಲಿ ಹಾಗೆ ಹತ್ತಾರು ಮೆಟ್ಟಿಲು ಕೆಳಗಿಳಿದು, ಬಾಲ್ಯದ ಗಟನಾವಳಿಯ ಕೋಣೆಯೊಳಗೆ ಹೊಕ್ಕು, ಅಲ್ಲಿ ನಮ್ಮೂರ ಜನರು ಪ್ರತಿವರ‍್ಶವು ಅಪರಿಮಿತ ಉತ್ಸಾಹ, ಅನನ್ಯ ಬಕ್ತಿ, ಶ್ರದ್ದೆಗಳಿಂದ ಆಚರಿಸುತ್ತಿದ್ದ ಗೌರಿ-ಗಣೇಶ ಹಬ್ಬದ ಆಚರಣೆಯ ದ್ರುಶ್ಯಾವಳಿಯ ಎಳೆಯನ್ನು ಹಾಗೆಯೇ ಬಿಚ್ಚುತ್ತಾಹೋದರೆ, ಹಿರಿಮೆಯುಳ್ಳ ಚಿತ್ರಣಗಳ ಸರಮಾಲೆ ನನ್ನ ಕಣ್ಮುಂದೆ ಬರುತ್ತದೆ.

ಚಿಕ್ಕಮಗಳೂರು ಜಿಲ್ಲೆಯ ಕಡೂರು ಬಳಿಯಿರುವ ಮಲ್ಲೇನಹಳ್ಳಿ ನಮ್ಮೂರು. ಅಂದಿನ ದಿನಗಳಲ್ಲಿ ನಮ್ಮೂರ ಜನರು ಗಣೇಶ ಚತುರ‍್ತಿಯ ಆಗಮನಕ್ಕೂ ಮುನ್ನಾ ಒಂದು ಸಮಿತಿ ರಚಿಸಿ, ಸಮಿತಿಯ ಮೂಲಕ ಆಚರಣೆಯ ನಿಮಿತ್ತವಾಗಿ ತಕ್ಕ ಕಾರ‍್ಯ-ಯೋಜನೆಗಳನ್ನು ಕೈಗೆತ್ತಿಕೊಂಡು, ಅದರಂತೆ ಸಮಿತಿಯ ಕೆಲ ಸದಸ್ಯರುಗಳು ಮಂಟಪ, ಚಪ್ಪರ ಕಟ್ಟುವುದರಲ್ಲಿ, ಕೆಲವರು ನಾಟಕ, ಸಾಂಸ್ಕ್ರುತಿಕ ಅಬ್ಯಾಸದಲ್ಲಿ, ಮತ್ತೆ ಕೆಲವರು ಇನ್ನುಳಿದ ಕೆಲಸಗಳ ಜವಾಬ್ದಾರಿಯನ್ನು ವಹಿಸಿಕೊಂಡು ಮುತುವರ‍್ಜಿಯಿಂದ ಮಾಡಿಬಿಡುತ್ತಿದ್ದರು.

ಗಣೇಶ ಹಬ್ಬಕ್ಕೆ ಒಂದೆರಡು ತಿಂಗಳುಗಳ ಮುಂಚಿತವಾಗಿಯೇ ನಮ್ಮೂರ ಶಾಲಾವರಣದಲ್ಲಿ ಪ್ರತಿದಿನ ಸಂಜೆಯಿಂದ ರಾತ್ರಿಯವರೆಗೂ ನಾಟಕ, ಸಾಂಸ್ಕ್ರುತಿಕ ಕಾರ‍್ಯಕ್ರಮಗಳ ಅಬ್ಯಾಸ ಜರಗುತ್ತಾ ಇರುತ್ತಿತ್ತು. ಅಲ್ಲಿ ಸಹಜವಾಗಿ ನಾನು ಮತ್ತು ನನ್ನ ಸಂಗಡಿಗರು ಹಿಂದೆಂದು ನೋಡಿರದ ಹಾವಬಾವ ತೋರಿಸುವ ಅಬ್ಯಾಸಿಗರು, ಅರ‍್ತ-ದ್ವಂದ್ವಾರ‍್ತಗಳಿಂದಾಗಿ ಒಮ್ಮೊಮ್ಮೆ ಒಡೆದು ಮೂಡುತ್ತಿದ್ದ ನಗೆ ಚಟಾಕಿ, ನಾಟಕದ ಮಾಸ್ತರರು ಹಾರ‍್ಮೊನಿಯಂ ನುಡಿಸುವುದು, ಅಬ್ಯಾಸಿಗರಿಗೆ ಹಾಡನ್ನು ಹೇಳಿಕೊಡುವುದು, ವೀರಗಾಸೆ ಅಬ್ಯಾಸಿಗರ ರಣಗರ‍್ಜನೆ – ಒಟ್ಟಾರೆ ಎಲ್ಲವೂ ಒಂದು ರೀತಿಯ ಹಾಸ್ಯ, ವಿನೋದ, ಮನೋರಂಜನೆಯನ್ನು ನಮಗೆ ತಂದುಕೊಡುತ್ತಿತ್ತು. ಒಂದೊಂದು ದಿನ ಕಾರ‍್ಯಕ್ರಮಗಳ ಅಬ್ಯಾಸವನ್ನು ನೋಡುತ್ತಾ, ಅಲ್ಲೇ ಮಲಗಿ ಬಿಟ್ಟಿರುತ್ತಿದ್ದೆವು. ಕೊನೆಯಲ್ಲಿ ಅಬ್ಯಾಸಿಗರು ನಮ್ಮನ್ನು ಎದ್ದೇಳಿಸಿ, ನಮ್ಮ ನಮ್ಮ…

View original post 296 more words

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s