Rh ಅಂದರೇನು?

ಹೊನಲು

ಯಶವನ್ತ ಬಾಣಸವಾಡಿ.

ಹಿಂದಿನ ಬರಹದಲ್ಲಿ ನೆತ್ತರು ಗುಂಪೇರ‍್ಪಾಟುಗಳ ಬಗ್ಗೆ ತಿಳಿಸುತ್ತ, ABO ನೆತ್ತರು ಗುಂಪಿನ ಬಗ್ಗೆ ತಿಳಿಸಿಕೊಟ್ಟಿದ್ದೇನೆ. ಈ ಕಂತಿನಲ್ಲಿ Rh ನೆತ್ತರು ಗುಂಪು ಹಾಗು ನೆತ್ತರು ಮಾರೆಡೆಗೊಳಿಸುವಿಕೆಯ (blood transfusion) ಬಗ್ಗೆ ತಿಳಿಯೋಣ.

Rh ನೆತ್ತರು ಗುಂಪನ್ನು 1940 ರಲ್ಲಿ ಕಾರ‍್ಲ್ ಲ್ಯಾಂಡ್ ಸ್ಟೇನರ್ (Karl Landsteiner) ಹಾಗು ಅಲೆಗ್ಜಾಂಡರ್ ವಿನರ್ (Alexander Weiner) ಅರಿಗರ ಜೋಡಿಯು ಗುರುತಿಸಿತು. ಈ ಗುಂಪಿನಲ್ಲಿ ನೆತ್ತರು ಬಗೆಯನ್ನು ತೀರ‍್ಮಾನಿಸಲು 45 ಕ್ಕೂ ಹೆಚ್ಚು ಬಗೆಯ ಒಗ್ಗದಿಕಗಳು ಕೆನೆ ಕಣಗಳ (RBC) ಮೇಲೆ ಇರುತ್ತವೆ. ನೆತ್ತರು ಗುಂಪುಗಳ ಅರಕೆಯಲ್ಲಿ ಬಳಸಲಾಗುತ್ತಿದ್ದ ರೀಸಸ್ (Rhesus) ಬಗೆಯ ಕೋತಿಗಳಲ್ಲಿ, Rh ಅಂಶವನ್ನು ಮೊದಲ ಬಾರಿಗೆ ಗುರುತಿಸಲಾಯಿತು (ತಿಟ್ಟ 1). ಈ ಹಿನ್ನೆಲೆಯಿಂದಾಗಿ ‘Rh ನೆತ್ತರು ಗುಂಪು’ ಎಂಬ ಹೆಸರು. ನೆತ್ತರಿನಲ್ಲಿ Rh ಅಂಶ ಇದೆಯೇ ಇಲ್ಲವೇ ಅನ್ನುವುದರ ಮೇಲೆ ನೆತ್ತರನ್ನು + (Rh ಇದ್ದರೆ), (Rh ಇಲ್ಲವಾದರೆ) ಅಂತಾ ಗುರುತಿಸಲಾಗುತ್ತದೆ.

titta 1

Rh ಪೀಳಿಯರಿಮೆ (genetics):

Rh ಪೀಳಿಯು D ಹಾಗು d ಎಂಬ ಇಕ್ಕಳಿಗಳನ್ನು ಹೊಂದಿರುತ್ತದೆ. Rh ಪೀಳಿಯ ಮೇಲುಗಯ್ ಸರಿಯಿಕ್ಕಳಿಗಳು (DD) (dominant homozygous) ಇಲ್ಲವೆ ಮೇಲುಗಯ್ ಹೆರಯಿಕ್ಕಳಿಗಳನ್ನು (dominant heterozygous) ಹೊಂದಿರುವವರಲ್ಲಿ Rh+ ತೋರುಮಾದರಿ (phenotype) ಇರುತ್ತದೆ. ಇಳಿಗಯ್ ಸರಿಯಿಕ್ಕಳಿಗಳನ್ನು (dd) (recessive homozygous) ಹೊಂದಿರುವವರಲ್ಲಿ Rh- ತೋರುಮಾದರಿ ಇರುತ್ತದೆ.

ತಾಯಿ ಹಾಗು ಬಸಿರುಗೂಸಿನ (fetus) ನಡುವೆ ಹೊಂದಿಕೆಯಾಗದ Rh ಅಂಶದಿಂದಾಗಿ, ಒಂದಶ್ಟು ಮದ್ದರಿಮೆಯ ತೊಡಕುಗಳು ಉಂಟಾಗುತ್ತವೆ (ತಿಟ್ಟ 2)…

View original post 525 more words

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s