ಮಾತು ಸೋಲಬಾರದು: ಸಂವಾದ ಗೋಷ್ಟಿಯ ಮೂಲಕ ಬೆಂಗಳೂರ ಿನಲ್ಲಿ ಕರ್ನಾಟಕ ಕೋಮು ಸೌಹಾರ್ದ ವೇದಿಕೆಯಿಂದ ಅನಂತ ಮೂರ್ತಿಗೆ ಶ್ರದ್ದಾಂಜಲಿ

Courtesey:

www.karavalikarnataka.com.

Karavali Karnataka's photo.
Karavali Karnataka's photo.
Karavali Karnataka's photo.
Karavali Karnataka's photo.

Karavali Karnataka added 8 new photos.

ಮಾತು ಸೋಲಬಾರದು: ಸಂವಾದ ಗೋಷ್ಟಿಯ ಮೂಲಕ ಬೆಂಗಳೂರಿನಲ್ಲಿ ಕರ್ನಾಟಕ ಕೋಮು ಸೌಹಾರ್ದ ವೇದಿಕೆಯಿಂದ ಅನಂತಮೂರ್ತಿಗೆ ಶ್ರದ್ದಾಂಜಲಿ

ನಮ್ಮ ಪ್ರತಿನಿಧಿ ವರದಿ
ಬೆಂಗಳೂರು: ಸಮಾಜಕ್ಕೆ ಕಂಟಕಪ್ರಾಯವಾಗುವಂತಹ ನಿರ್ಧಾರಗಳನ್ನು ಆಳುವವರು ಕೈಗೊಂಡಾಗಲೆಲ್ಲ ಡಾ. ಯು.ಆರ್.ಅನಂತಮೂರ್ತಿ ಅತಹ ನಿಲುವುಗಳನ್ನು ವಿರೋಧಿಸುತ್ತಿದ್ದರು ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ನಾಟಕಕಾರ ಗಿರೀಶ್ ಕಾರ್ನಾಡ್ ಹೇಳಿದ್ದಾರೆ. ಕರ್ನಾಟಕ ರಾಜ್ಯ ಕೋಮು ಸೌಹಾರ್ದ ವೇದಿಕೆ ಆಯೋಜಿಸಿದ್ದ ಯು.ಆರ್. ಅನಂತಮೂರ್ತಿಯವರಿಗೆ ಶ್ರದ್ಧಾಂಜಲಿ: ಮಾತು ಸೋಲಬಾರದು ಸಂವಾದ ಗೋಷ್ಟಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸಮಾಜಮುಖಿ ನಿರ್ಧಾರಗಳನ್ನು ಕೈಗೊಂಡಾಗ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದ ಅನಂತಮೂರ್ತಿ ಕೆಲ ನಿರ್ಧಾರಗಳು ಸಮಾಜಕ್ಕೆ ಕಂಟಕಪ್ರಾಯವಾಗುತ್ತಿದೆ ಎಂದು ತಮ್ಮ ಅರಿವಿಗೆ ಬಂದ ತಕ್ಷಣ ಅವುಗಳನ್ನು ಬಹಿರಂಗವಾಗಿ ವಿರೋಧಿಸುತ್ತಿದ್ದರು ಎಂದು ಹೇಳಿದರು. ಜೆಡಿಎಸ್ ಹಾಗೂ ಬಿಜೆಪಿ ಸೇರಿ ಆಡಳಿತ ನಡೆಸಿದಾಗ ಅವರು ಪ್ರತಿಭಟಿಸಬೇಕೆಂದು ನನ್ನಂತಹವರಿಗೆ ಕರೆ ನೀಡಿದ್ದರು. ಬಾಬಾಬುಡಾನ್ ಗಿರಿಯ ಉಳಿವಿಗೆ ಹೋರಾಟದಲ್ಲಿ ಸಹ ಅವರ ಜೊತೆ ನಾನೂ ಭಾಗಿಯಾಗಿದ್ದೆ. ಕೋಮುವಾದದ ವಿರುದ್ಧ ದನಿ ಎತ್ತಿದ ಅನಂತಮೂರ್ತಿ ಮೋದಿ ಪ್ರಧಾನಿಯಾಗುವುದರ ವಿರುದ್ಧ ಸ್ಪಷ್ಟವಾಗಿ ತಮ್ಮ ವಿರೋಧವನ್ನು ವ್ಯಕ್ತಪಡಿಸಿದರು ಎಂಡು ಕಾರ್ನಾಡ್ ಹೇಳಿದರು.

ಹಂಪಿ ಕನ್ನಡ ವಿವಿ ಪ್ರಾಧ್ಯಾಪಕ ಮತ್ತು ಚಿಂತಕ ಡಾ.ರಹಮತ್ ತರೀಕೆರೆ ಮಾತನಾಡಿ ಯು.ಆರ್.ಅನಂತಮೂರ್ತಿ ಅವರು ಕೃತಿಗಳಲ್ಲಿ ಜಾತಿ, ಧರ್ಮ, ಸಂಸ್ಕೃತಿ ನಮ್ಮ ಚಿಂತನಾ ಲಹರಿಯನ್ನು ಸಿಮೀತಗೊಳಿಸುವ ಸಾಧ್ಯತೆಗಳಿವೆ ಎಂದು ಉಲ್ಲೇಖಿಸಿದ್ದಾರೆ. ಇವರ ಆಲೋಚನಾ ಕ್ರಮಗಳನ್ನು ನಾವು ಅಧ್ಯಯನ ಮಾಡಲು ಹೊರಟಾಗ ವಿಶಿಷ್ಟವಾದ ಚಿಂತನಾ ಶಕ್ತಿ ಅವರಲ್ಲಿ ಅಡಗಿತ್ತು ಎಂಬುದು ನಮ್ಮ ಗಮನಕ್ಕೆ ಬರುತ್ತದೆ ಎಂದು ಹೇಳಿದರು. ಇಂಗ್ಲೀಷರ ಬಗ್ಗೆ ಅವರಿಗೆ ಪ್ರೀತಿ ಇತ್ತು, ಮುಸ್ಲಿಮರ ಬಗ್ಗೆ ಅಭಿಮಾನವಿಟ್ಟುಕೊಂಡಿದ್ದರು ಮತ್ತು, ಕೋಮುವಾದ, ಫ್ಯಾಸಿಸಂ ಹಾಗೂ ಮೂಢ ನಂಬಿಕೆಗಳನ್ನು ಕಟುವಾಗಿ ವಿರೋಧಿಸುತ್ತಿದ್ದರು ಎಂದು ಡಾ. ತರಿಕೆರೆ ಹೇಳಿದರು.

ವಿಮರ್ಶಕ ಪ್ರೊ.ಸಿ.ಎನ್.ರಾಮಚಂದ್ರ ಮಾತನಾಡಿ, ಯು.ಆರ್.ಅನಂತಮೂರ್ತಿ ಅವರು ಮೌಢ್ಯಗಳನ್ನು ತಮ್ಮ ಕೃತಿಗಳ ಮೂಲಕವೂ ವಿರೋಧಿಸುತ್ತಾ ಬಂದರು, ಲಿಂಗ ತಾರತಮ್ಯ ಮಾಡಬಾರದು ಎಂದು ಅನಂತಮೂರ್ತಿ ಪದೇಪದೇ ತಮ್ಮ ಮಾತು, ಲೇಖನಗಳ ಮೂಲಕ ಪ್ರತಿಪಾದಿಸುತ್ತಾ ಬಂದರು ಎಂದು ತಿಳಿಸಿದರು. 1992ರ ನಂತರ ಬರೆದ ಅವರ ಕೃತಿಗಳಲ್ಲಿ ಕಂಡು ಬಂದ ಭಿನ್ನತೆಗೆ ಸಮಾಜದಲ್ಲಿ ನಡೆದ ಪಲ್ಲಟಗಳೆ ಕಾರಣವೆಂದು ಹೇಳಬಹುದು ಎಂದೂ ಸಹ ಅವರು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಲಂಕೇಶ್ ಪತ್ರಿಕೆಯ ಸಂಪಾದಕಿ ಗೌರಿ ಲಂಕೇಶ್, ಕಕೋಸೌವೇ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಲ್.ಅಶೋಕ್, ಚಿಂತಕ ಕೆ.ಫಣಿರಾಜ್, ಪಿಡಿಎಫ್‌ನ ಪ್ರೊ.ವಿ.ಎಸ್.ಶ್ರೀಧರ್ ಮತ್ತಿತರರು ಉಪಸ್ಥಿತರಿದ್ದರು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s