“ಸಮಾನ ಶಿಕ್ಷಣ ನೀತಿ – ಭಾರತದ ಭವಿಷ್ಯ” – ವಿಚಾರ ಸ ಂಕಿರಣ ಮತ್ತು ಸಂವಾದ

"ಸಮಾನ ಶಿಕ್ಷಣ ನೀತಿ – ಭಾರತದ ಭವಿಷ್ಯ" – ವಿಚಾರ ಸಂಕಿರಣ ಮತ್ತು ಸಂವಾದ

ಸ್ನೇಹಿತರೆ,

ನವೆಂಬರ್ 14, ಶುಕ್ರವಾರ ೆಳಿಗ್ಗೆ 10.30ಕ್ಕೆ ಕನ್ನಡ ಸಾಹಿತ್ಯಪರಿಷತ್ ನ ಕ್ರಿಷ್ಣರಾಜ್ ಪರಿಷನ್ಮಂದಿರದಲ್ಲಿ ಸಮಾನ ಶಿಕ್ಷಣಕ್ಕಾಗಿ ಜನಾಂದೋಲನ ಸಂಘಟನೆಯ ವತಿಯಿಂದ "ಸಮಾನ ಶಿಕ್ಷಣ ನೀತಿ – ಭಾರತದ ಭವಿಷ್ಯ" ಕುರಿತಾಗಿ ವಿಚಾರ ಸಂಕಿರಣ ಮತ್ತು ಸಂವಾದವನ್ನು ಹಮ್ಮಿಕೊಳ್ಳಲಾಗಿದೆ. ಇದೇ ಸಂದರ್ಭದಲ್ಲಿ "ಸಮಾನ ಶಿಕ್ಷಣ ; ವರ್ತಮಾನದ ಸವಾಲು,ಭವಿಷ್ಯದ ಆಶಯ" ಪುಸ್ತಕ ಬಿಡುಗಡೆಯಾಗಲಿದೆ.ಸಮಾರಂಭಕ್ಕೆ ನಿಮಗೆ ಆತ್ಮೀಯ ಆಮಂತ್ರಣ

ಸಮಾನ ಶಿಕ್ಷಣಕ್ಕಾಗಿ ಜನಾಂದೋಲನ ಸಂಘಟನೆ

invitation.pdf

jesintha issu protest

ಕ್ರೈಸ್ತ ಮಹಿಳೆಯ ಮೇಲೆ ಹಲ್ಲೆ ನಡೆಸಿದ ನಿರ್ಮಿತಿ ಕೇಂದ್ರದ ನಿರ್ದೇಶಕನ ಮೇಲೆ ಕ್ರಮಕ್ಕೆ ಆಗ್ರಹಿಸಿ ಉಡುಪಿಯಲ್ಲಿ ಕ್ರೈಸ್ತ ಸಂಘಟನೆಗಳ ಜೊತೆ ಕ.ಕೋ.ಸೌ.ವೇದಿಕೆ ಮತ್ತು ದ.ಸಂ.ಸ ಪ್ರತಿಭಟನೆ

ಉಡುಪಿಯಲ್ಲಿ ಜೆಸಿಂತಾ ಎಂಬ ಮಹಿಳೆಯ ಮೇಲೆ ಉಡುಪಿ ಜಿಲ್ಲಾ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಹಲ್ಲೆ ನಡೆಸಿ, ನಂತರ ತನ್ನ ಹೆಂಡತಿಯ ಮೇಲೆ ಹಲ್ಲೆ ನಡೆದಿದೆ ಎಂದು ಸುಳ್ಳು ದೂರು ದಾಖಲಿಸಿದ್ದ. ಪೊಲೀಸರು ಹಲ್ಲೆಗೊಳಗಾದ ಮಹಿಳೆ ಟೆಲಿಪೋನ್ ಮೂಲಕ ಹಲ್ಲೆ ನಡೆದಿದೆ ಎಂದು ತಿಳಿಸಿದ್ದರೂ ಸ್ಥಳಕ್ಕೆ ಆಗಮಿಸಿರಲಿಲ್ಲ. ಅರುಣ್ ಕುಮಾರ್ ಸುಳ್ಳು ದೂರು ನೀಡಿದ ಬಳಿಕ ಮಹಿಳೆಯ ಮನೆಗೆ ತೆರಳಿದ ಪೊಲೀಸರು ದೂರು ದಾಖಲಾಗಿದೆ ಎಂದು ಹೇಳಿ ರಾಜಿಗೆ ಒತ್ತಾಯಿಸಿದ್ದರು. ಮಹಿಳೆ ಕೊಟ್ಟ ದೂರನ್ನು ರಿಜಿಸ್ತ್ರಿ ಮಾಡದೇ, ಪೊಲೀಸ್ ಬ್ಲಾಗ್ ನಲ್ಲೂ ಪ್ರಕಟಿಸದೇ, ಅರುಣ್ ಕುಮಾರ್ ಮೇಲಿನ ದೂರನ್ನು ವಾಪಾಸು ಪಡೆಯಲು ಒತ್ತಡ ಹೇರಿದ್ದರು. ಮಾಧ್ಯಮದವರು ಕೇಳಿದಾಗಲೂ ಅದು ರಾಜಿಯಲ್ಲಿ ಮುಗಿಯುತ್ತೆ ಅಂತ ಹೇಳಿ ಪ್ರಕರಣ ದಾಖಲಾಗಿಲ್ಲ ಎಂದು ಹೇಳಿ ಜಾರಿಕೊಳ್ಳುತ್ತಿದ್ದರು.
ಇನ್ನೊಂದೆಡೆ ಅರುಣ್ ಪರ ಬಿಜೆಪಿಯ ಜಿ.ಪಂ.ಸದಸ್ಯೆ ಗೀತಾಂಜಲಿ ಸುವರ್ಣ ಎಂಬ ಮಹಿಳೆಯ ಸಹಿತ ಅನೇಕರು, ಜಿಲ್ಲಾ ಉಸ್ತುವಾರಿ ಸಚಿವರ ಜೊತೆಗಿನ ನಂಟಿರುವವರು, ಅರುಣ್ ಕುಮಾರ್ ನ ‘ನಿರ್ಮಿತಿ ಕೇಂದ್ರದ ಕೆಲ ಫಲಾನುಭವಿಗಳ ಸಹಿತ ಹಲವರು ಇದನ್ನು ಸುದ್ದಿಯಾಗಿಸಬಾರದು, ಪ್ರಕರಣ ದಾಖಲಾಗಬಾರದು ಎಂದು ಹಲವು ವಿಧದಲ್ಲಿ ವಿಪರೀತ ಪ್ರಯತ್ನ ನಡೆಸಿದ್ದರು. ಇದೆಲ್ಲವನ್ನೂ ಮನಗಂಡ ಉಡುಪಿಯ ಕ್ರೈಸ್ತ ಸೇವಾದಳ ಮತ್ತು ಅನೇಕ ಕ್ರೈಸ್ತ ಸಂಘಟನೆಗಳು ಈ ಬಗ್ಗೆ ಬಹಿರಂಗ ಪ್ರತಿಭಟನೆಗೆ ಸಿದ್ಧವಾಗಿದ್ದವು. ಇದನ್ನು ನಿಲ್ಲಿಸಲು ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆಯಯವರ ಕಛೇರಿಯಲ್ಲೇ ಕೆಲವು ವ್ಯಕ್ತಿಗಳು ಸಭೆ ನಡೆಸಿ, ಪ್ರತಿಭಟನೆಯನ್ನು ಆಯೋಜಿಸಿದ್ದವರಿಗೆ ಒತ್ತಡ ಹಾಕಲಾರಂಭಿಸಿದ್ದರು. ಆದರೂ ಈ ಯಾವ ಒತ್ತಡಗಳಿಗೂ ಬಗ್ಗದೇ, ಮಹಿಳೆಯ ಮೇಲೆ ದೌರ್ಜನ್ಯ ನಡೆಸಿದವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ, ನಿನ್ನೆ (12-11-2014, ಬುಧವಾರ) ಸಂಜೆ : 4.30 ಕ್ಕೆ ಉಡುಪಿ ನಗರದ ಕ್ಲಾಕ್ ಟವರ್ ಎದುರು ಬಹಿರಂಗ ಪ್ರತಿಭಟನೆಯನ್ನು ಕ್ರೈಸ್ತ ಸಂಘಟನೆಗಳು, ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಮತ್ತು ಕರ್ನಾಟಕ ದಲಿತ ಸಂಘರ್ಷ ಸಮಿತಿ ಮತ್ತಿತರರ ಬೆಂಬಲದೊಂದಿಗೆ ನಡೆಸಿ, ನ್ಯಾಯಕ್ಕಾಗಿ ಒತ್ತಾಯಿಸಿದವು. ಮಹಿಳಾ ದೌರ್ಜನ್ಯ – ಅತ್ಯಾಚಾರ ಎಂದೆಲ್ಲಾ ಬಡಬಡಿಸಿ ಪ್ರತಿಭಟನೆ ನಡೆಸುತ್ತಿದ್ದ ಯಾವ ಮಹಿಳಾ ರಾಜಕೀಯ ನಾಯಕರೂ ಇತ್ತ ಸುಳಿಯದೇ ತಮ್ಮ ಹೋರಾಟಗಳು ಎಲ್ಲವೂ ಓಟು ಬ್ಯಾಂಕ್ ರಾಜಕೀಯಕ್ಕೆ ಮಾತ್ರ ಎಂದು ಸಾಬೀತು ಮಾಡಿದ್ದರು!

ಚಿತ್ರದಲ್ಲಿ ಪ್ರತಿಭಟನೆಯ ದೃಶ್ಯಗಳ ಜೊತೆ , ಅರುಣ್ ಕುಮಾರ್ ಫೋಟೋ ಕೂಡಾ ಇದೆ.