ಇದು ನಡೆಯುವಾಗ ನಾವು ಸುಮ್ಮನಿದ್ದೆವು ಎಂಬ ಅಪಖ್ ಯಾತಿ ಹೊಂದುವುದು ಬೇಡ!!

ಸ್ನೇಹಿತರೇ,

ಕರ್ನಾಟಕದ ಶಿಕ್ಷಣ ನೀತಿಯಲ್ಲಿ ಅಪಾಯಕಾರಿ ಬೆಳವಣಿಗೆ! ಇದು ನಡೆಯುವಾಗ ನಾವು ಸುಮ್ಮನಿದ್ದೆವು ಎಂಬ ಅಪಖ್ಯಾತಿ ಹೊಂದುವುದು ಬೇಡ!!

ದಯವಿಟ್ಟು ಈ ಬೆಳವಣಿಗೆಯನ್ನು ಗಮನಿಸಿ. ನೀವು ಒಂದು ಪತ್ರವನ್ನು ಬರೆಯುವುದರ ಮುಖಾಂತರ ಅಥವಾ ಇ-ಮೇಲ್ ಕಳಿಸುವುದರ ಮುಖಾಂತರ ಅಥವಾ ಖುದ್ದಾಗಿ ಶಿಕ್ಷಣ ಸಚಿವರು ಹಾಗೂ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ನಿಮ್ಮ ನಿಲುವನ್ನು ಹೇಳುವುದರ ಮುಖಾಂತರ ಮಧ್ಯಪ್ರವೇಶಿಸಬಹುದು.

ಖಾಸಗಿ ಅನುದಾನರಹಿತ ಶಾಲೆಗಳಲ್ಲಿ ವಿಧಿಸಬಹುದಾದ ಶುಲ್ಕವನ್ನು ನಿರ್ಧರಿಸಲು ಸರ್ಕಾರವು " ಶುಲ್ಕ ಪರಿಷ್ಕರಣಾ ಸಮಿತಿ" ಯನ್ನು ರಚಿಸಿತು.ಇದರ ಸಂಪೂರ್ಣ ವಿವರಗಳನ್ನು www.schooleducation.kar.nic.in ವೆಬ್ ಸೈಟಿನಲ್ಲಿ ಓದಬಹುದು. ಈ " ಶುಲ್ಕ ಪರಿಷ್ಕರಣಾ ಸಮಿತಿ" ಯ ವರದಿಯನ್ನು ಕೂಲಂಕುಷವಾಗಿ ಓದಿದಾಗ ಈಗಾಗಲೇ ಶಾಸಕಾಂಗ,ಕಾರ್ಯಾಂಗ ವ್ಯವಸ್ಥೆಯ ನಿಂಯಂತ್ರಣಕ್ಕೆ ಒಳಪಡದೆ,ಸಂವಿಧಾನಬದ್ಧತೆಯನ್ನು ಕಡೆಗಣಿಸಿ ಸ್ವಯಿಚ್ಛೆಯಿಂದ ಶಾಲೆಗಳನ್ನು ನಡೆಸುತ್ತಿರುವ ಈ ಖಾಸಗಿ ಅನುದಾನರಹಿತ ಶಿಕ್ಷಣ ಸಂಸ್ಥೆಗಳಿಗೆ ಈ ಪರಿಷ್ಕೃತ ಶುಲ್ಕದ ಮೂಲಕ ಪೋಷಕರಿಂದ ಮತ್ತಷ್ಟು ಲೂಟಿಯನ್ನು ಮಾಡಲು ಅಧಿಕೃತವಾದ ಪರವಾನಗಿ ಕೊಟ್ಟಿರುವುದು ನಮಗೆ ಮೇಲ್ನೋಟಕ್ಕೆ ಮನದಟ್ಟಾಗುತ್ತದೆ.ಈ ಸಮಿತಿಯ ಅನೇಕ ಶಿಫಾರಸ್ಸುಗಳು ಉದ್ದೇಶಪೂರ್ವಕವಾಗಿಯೇ ಖಾಸಗಿ ಅನುದಾನರಹಿತ ಶಾಲೆಗಳ ಪರವಾಗಿ ಲಾಬಿ ಮಾಡಿರುವುದು ನಮ್ಮ ಗಮನಕ್ಕೆ ಬರುತ್ತದೆ. ಉದಾಹರಣೆಗೆ ಬಹುಪಾಲು ನಿವೃತ್ತ ಅಧಿಕಾರಿಗಳನ್ನು ( ಇವರಿಂದ ಯಾವುದೇ ತೆರೆನಾದ ಸಾಮಾಜಿಕ ಬದ್ಧತೆಯನ್ನು ನಿರೀಕ್ಷಿಸಲೂ ಸಾಧ್ಯವಿಲ್ಲ) ಒಳಗೊಂಡ ಈ ಸಮಿತಿಯು ( ಈ ಸಮಿತಿಯು ಪೋಷಕರ ಪ್ರತಿನಿಧಿಗಳು,ವಿದ್ಯಾರ್ಥಿ ಸಂಘಟನೆಗಳು,ಶಿಕ್ಷಣ ತಜ್ನರನ್ನು ಒಳಗೊಂಡಿಲ್ಲ) ಪೂರ್ವ ಪ್ರಾಥಮಿಕ ಹಂತದಲ್ಲಿ ಗ್ರಾಮೀಣ ಭಾಗದ ಶಿಕ್ಷಕರಿಗೆ ರೂ 2000 ರೂಪಾಯಿ ವೇತನವನ್ನು ನಿಗದಿಪಡಿಸಿದೆ,ಕಿರಿಯ ಮತ್ತು ಹಿರಿಯ ಪ್ರಾಥಮಿಕ ಹಂತದಲ್ಲಿ ರೂ.4000 ನಿಗದಿಪಡಿಸಿದೆ.ಇನ್ನು ಆಯಾಗಳ ವೇತನ ರೂ.1000ಮತ್ತು 2000!!! ಇದು ಕಾರ್ಮಿಕ ಕಾಯ್ದೆಯ ಅಡಿಯಲ್ಲಿ ನಿಗದಿಪಡಿಸಿದ ಕನಿಷ್ಠ ವೇತನಕ್ಕಿಂತಲೂ ಶೇಕಡಾಇಪ್ಪತ್ತೈದಕ್ಕಿಂತ ಕಡಿಮೆ! ಕಾರ್ಮಿಕ ಸಂಘಟನೆಗಳು ಕೇಳುತ್ತಿರುವ ವೇತನದ ಶೇ.10! ಇದು ಹಗಲು ದರೋಡೆಯಲ್ಲದೆ ಮತ್ತೇನಲ್ಲ.ಇದು ಒಂದು ಉದಾಹರಣೆ ಮಾತ್ರ. ಹೊಸ ಶುಲ್ಕದರವನ್ನು ನಿಗದಿಪಡಿಸಿದ ಪಡಿಸಿದ ಈ ಸಮಿತಿಯು ಕಡೆಗೆ ಅಭಿವೃದ್ಧಿಗಾಗಿ ಶಿಕ್ಷಣ ಸಂಸ್ಥೆಗಳು ಪೋಷಕರಿಂದ ಹೆಚ್ಚುವರಿಯಾಗಿ ಶುಲ್ಕವನ್ನು ವಸೂಲಿ ಮಾಡಬಹುದು ಎಂದೂ ಸಹ ಶಿಫಾರಸ್ಸು ಮಾಡಿದೆ. ಇದು ಶಿಕ್ಷಣದ ವ್ಯಾಪಾರೀಕರಣಕ್ಕೆ ಸಂಪೂರ್ಣ ಪರವಾನಿಗೆ ಕೊಟ್ಟಂತಾಗುತ್ತದೆ.ಇನ್ನು ಈ ಸಮಿತಿಯ ವರದಿಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ನಿಯಂತ್ರಣದ ಕುರಿತಾದ ಯಾವುದೇ ಶಿಫಾರಸ್ಸುಗಳಿಲ್ಲ. ಇದು ಶಿಕ್ಷಣದ ಖಾಸಗೀಕರಣಕ್ಕೆ ಉತ್ತೇಜನ ನೀಡುತ್ತದೆ. ಈ ವರದಿಯಲ್ಲಿ ಇದೇ ಮಾದರಿಯ ಹಲವಾರು ಸಾರ್ವಜನಿಕ ಶಿಕ್ಷಣ ವಿರೋಧಿ ಶಿಫಾರಸ್ಸುಗಳಿವೆ. ತಾವು ದಯವಿಟ್ಟು ಮೇಲ್ಕಾಣಿಸಿದ ವೆಬ್ ಸೈಟಿನಲ್ಲಿ ಇದರ ಸಂಪೂರ್ಣ ವರದಿಯನ್ನು ಓದಲೇಬೇಕು.

ಸಮಿತಿ ನೀಡಿದ ಈ ವರದಿಗೆ ನವೆಂಬರ್ 10,2014ರ ಒಳಗೆ ಖುದ್ದಾಗಿ, ಅಥವಾ ನೊಂದಾಯಿತ ಅಂಚೆಯ ಮೂಲಕ ಅಥವಾPrydirector.edu.sgkar ಈ ಮೇಲ್ ವಿಳಾಸಕ್ಕೆ ಸಾರ್ವಜನಿಕರು ತಮ್ಮ ಆಕ್ಷೇಪಣಾ ಪತ್ರವನ್ನು ಸಲ್ಲಿಸಬಹುದೆಂದು ಸಾರ್ವಜನಿಕ ಶಿಕ್ಷಣ ಇಲಾಖೆಯು ತನ್ನ ಪ್ರಕಟಣೆಯಲ್ಲಿ ಹೇಳಿದೆ.

" ಸಮಾನ ಶಿಕ್ಷಣಕ್ಕಾಗಿ ಜನಾಂದೋಲನ" ವೇದಿಕೆಯು ಮೇಲಿನ ಶುಲ್ಕ ಪರಿಷ್ಕರಣ ಸಮಿತಿಯ ವರದಿಯನ್ನು ಅಮೂಲಾಗ್ರವಾಗಿ ಓದಿದ ನಂತರ ಒಂದು " ಆಕ್ಷೇಪಣಾ ಪತ್ರ" ವನ್ನು ಸಿದ್ಧಪಡಿಸಿದೆ. ಮತ್ತು ಇದನ್ನು ನವೆಂಬರ್10 ರ ಒಳಗೆ ಮೇಲ್ಕಾಣಿಸಿದ ವಿಳಾಸಕ್ಕೆ ಸಲ್ಲಿಸಲು ನಿರ್ಧರಿಸಿದೆ. ತಾವೆಲ್ಲರೂ ಈ ಸಮಿತಿಯ ವರದಿ ( www.schooleducation.kar.nic.in ) ಮತ್ತು " ಸಮಾನ ಶಿಕ್ಷಣಕ್ಕಾಗಿ ಜನಾಂದೋಲನ" ವೇದಿಕೆಯು ಸಿದ್ದಪಡಿಸಿದ ಅಕ್ಷೇಪಣಾ ಪತ್ರವನ್ನು ಸಂಪೂರ್ಣವಾಗಿ ಓದಿದ ನಂತರ ಸ್ವತ ತಾವೇ ತಮ್ಮ ಅಕ್ಷೇಪಣಾ ಪತ್ರವನ್ನು ಸಿದ್ಧಪಡಿಸಿ ಮೇಲ್ಕಾಣಿಸಿದ ವಿಳಾಸಕ್ಕೆ ಸಲ್ಲಿಸಬಹುದು. ಅಥವಾ ವೇದಿಕೆಯ ಈ ಅಕ್ಷೇಪಣಾ ಪತ್ರವು ಸಮಂಜಸವೆನಿಸಿದಲ್ಲಿ ಇದನ್ನೇ ತಾವು ಬಳಸಿಕೊಳ್ಳಬಹುದು.

ಸಂವಿಧಾನದ ಆಶಯವಾದ ಎಲ್ಲ ಮಕ್ಕಳಿಗೂ ಉಚಿತ,ಕಡ್ಡಾಯ,ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ನೆರೆಹೊರೆ ತತ್ವದ ಸಮಾನ ಶಿಕ್ಷಣ ವ್ಯವಸ್ಥೆಯ ಜಾರಿಗೆ ನೀವೆಲ್ಲರೂ ಈ ಮೂಲಕ ಒತ್ತಾಯಿಸಬೇಕೆಂದು " ಸಮಾನ ಶಿಕ್ಷಣಕ್ಕಾಗಿ ಜನಾಂದೋಲನ" ವೇದಿಕೆಯು ಮನವಿ ಮಾಡುತ್ತದೆ

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s