ತೀರ್ಥಹಳ್ಳಿ ನಂದಿತಾ ಸಾವಿನ ಪ್ರಕರಣವೂ ಬಿಜೆಪಿ ಗರ ಅತ್ಯುತ್ಸಾಹವೂ! ಇಲ್ಲಿ ಅತ್ಯಾಚಾರ ಮಾಡಿದವರು ಯಾರ ು?!

ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆ ಈಗ ಕೆಲವು ದಿನಗಳಿಂದ ಉದ್ವಿಗ್ನ ಸ್ಥಿತಿಯಲ್ಲಿದೆ. ಇದಕ್ಕೆ ಕಾರಣ ಒಂದು ವಿದ್ಯಾರ್ಥಿನಿಯ ಸಾವು. ಸಾವಿಗೆ ಸಂಭ್ರಮ ಪಡುವವರೂ ನಿಜಕ್ಕೂ ಮನುಷ್ಯರಾಗಿರಲು ಸಾಧ್ಯವೇ?! ಎನ್ನುವ ಪ್ರಶ್ನೆಯನ್ನು ಜೊತೆಗಿಟ್ಟುಕೊಂಡು ಇಡೀ ಪ್ರಕರಣವನ್ನು ಅವಲೋಕಿಸ ಹೊರಟಾಗ, ಇಲ್ಲಿ ಬೆಂಕಿ ಹಚ್ಚಲು – ಧರ್ಮಗಳನ್ನು ಆಚರಿಸುತ್ತಾ ತಮ್ಮ ದೈನಂದಿನ ಜೀವನವೇ ಕಷ್ಟಕರವಾಗಿ ನಡೆಸಲು ಹೆಣಗಾಡುತ್ತಿರುವ ಮಂದಿಯ ಮನಸ್ಸುಗಳನ್ನು ಪ್ರೇರೇಪಿಸಲಾಗುತ್ತಿರುವುದನ್ನು ಕಾಣಬಹುದಾಗಿದೆ. ಕಳೆದ ಲೋಕಸಭಾ ಚುನಾವಣೆಯ ಮೊದಲೇ ರಾಜ್ಯದಲ್ಲಿ ಕೋಮು ಅಶಾಂತಿಯನ್ನು ಉಂಟು ಮಾಡಲು ಪ್ರಯತ್ನ ನಡೆಸಿದ್ದರೂ ಅದೆಲ್ಲೂ ಸಾಧ್ಯವಾಗದ ಒಂದಷ್ಟು ಜನ ‘ಉಗ್ರ ಧರ್ಮಾಭಿಮಾನಿಗಳು’ ಈ ಸಾವನ್ನು ಬಳಸಿಕೊಂಡಿದ್ದಾರೆ ಎನ್ನಲು ಯಾವುದೇ ಸಂಶಯಪಡಬೇಕಿಲ್ಲ. ಪ್ರಕರಣವನ್ನು ಸರಕಾರ ಸಿಓಡಿ ತನಿಖೆಗೆ ಒಪ್ಪಿಸಿದೆ. ಅದರ ಸಂಪೂರ್ಣ ವರದಿ ಯಾವಾಗ ಬರುತ್ತದೆಯೋ ಗೊತ್ತಿಲ್ಲ. ಅಷ್ಟರವರೆಗೆ ಈಗ ಹಚ್ಚಿದ ಬೆಂಕಿ ಎಷ್ಟು ಅನಾಹುತಗಳನ್ನು ಸೃಷ್ಲಿಸಲಿದೆಯೋ ಎಂಬ ಆತಂಕವಂತೂ ಇದ್ದೇ ಇದೆ.

ರಾಜ್ಯದಲ್ಲಿ ಸಿದ್ಧರಾಮಯ್ಯ ಸರಕಾರ ಬಂದ ಮೇಲೆ ಅತ್ಯಾಚಾರ ಪ್ರಕರಣಗಳು ಹೆಚ್ಚಿವೆ ಎನ್ನುವ ರೀತಿಯಲ್ಲಿ ವರದಿಗಳು ಬಿಂಬಿತವಾಗುತ್ತಿವೆ. ಅದಕ್ಕೂ ಮೊದಲು ಇದ್ದ ಸರಕಾರದ ಅವಧಿಯಲ್ಲಿ ಸರಕಾರದ ಪ್ರತಿನಿಧಿಗಳ ಮೇಲೇನೆ ಆರೋಪಗಳು ಕೇಳಿ ಬಂದಿದ್ದವು. ಸಚಿವರುಗಳೇ ಸದನದಲ್ಲಿ ಅಶ್ಲೀಲ ಚಲನಚಿತ್ರ ವೀಕ್ಷಿಸುವಂತಹ ಸನ್ನಿವೇಶವನ್ನೂ ನಾವು ಕಂಡಿದ್ದೇವೆ. ಬಹುಶಃ ಈಗ ನಡೆಯುತ್ತಿರುವ ಇಂತಹ ದುಷ್ಕ್ರತ್ಯಗಳಿಗೆ ಕಾರಣವಾಗಿರಬಹುದು ಎಂದೂ ಅಭಿಪ್ರಾಯವೂ ಇದೆ. ಇರಲಿ, ಆಗೆಲ್ಲಾ ಇಂತಹ ಘಟನೆಗಳು ವರದಿಯಾದಾಗ ಬಿಜೆಪಿಯವರು ಅದನ್ನು ನಿರಾಕರಿಸುತ್ತಿದ್ದರು. ರಾಜಕೀಯ ಕಾರಣದಿಂದ ಅದನ್ನು ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿತ್ತು. ಆದರೇ, ಇತ್ತೀಚೆಗಿನ ಘಟನೆಗಳ ಬಗ್ಗೆ ಅವರುಗಳ ಉತ್ಸಾಹವನ್ನು ಗಮನಿಸುವಾಗ ಅವರಿಗೆ ಮರೆವಿನ ರೋಗ ಆವರಿಸಿಕೊಂಡಿದೆಯೇನೋ ಎನ್ನುವಂತೆ ಕಂಡು ಬರುತ್ತಿದೆ.

ತೀರ್ಥಹಳ್ಳಿಯ ಮುಗ್ಧ ವಿದ್ಯಾರ್ಥಿನಿ ನಂದಿತಾ ಸಾವು ಇದ್ದಕ್ಕಿದ್ದಂತೆ ಬೆಂಕಿಯಾಗಲು ಕಾರಣಗಳೇನು ಎನ್ನುವುದು ತಿಳಿಯುತ್ತಿಲ್ಲ. ಬಹುಶಃ ರಾಜ್ಯದ ಗುಪ್ತಚರ ಇಲಾಖೆ ಎಲ್ಲಿ ನಿದ್ದೆ ಹೋಗಿದೆಯೋ ತಿಳಿಯದಾಗಿದೆ. ಗುಪ್ತಚರ ಇಲಾಖೆಯವರು ಜನಪರ – ಪ್ರಗತಿಪರ ಸಂಘಟನೆಗಳ ನಾಯಕರುಗಳ , ಕಾರ್ಯಕರ್ತರ ಮೊಬೈಲ್ ಟ್ಯಾಪಿಂಗ್ ಮಾಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಅವರು ಈ ರೀತಿಯ ಟ್ಯಾಪಿಂಗ್ ಕೆಲಸಕ್ಕೆಂದೆ ನಿಯೋಜಿತರಾದಂತೆ ಕಂಡು ಬರುತ್ತಿದೆ. ಇಲ್ಲವಾದಲ್ಲಿ ಒಂದು ಮಗುವಿನ ಸಾವಿನ ಹಿನ್ನಲೆಯಲ್ಲಿ ಬೆಂಕಿ ಹಬ್ಬಲಿದೆ ಎನ್ನುವುದನ್ನು ಅವರಿಗೆ ಯಾಕೆ ಗ್ರಹಿಸಲು ಸಾಧ್ಯವಾಗಿಲ್ಲ. ಅಷ್ಟಕ್ಕೂ ಮುಗ್ಧ ಹುಡುಗಿ ಸಾವು ಅತ್ಯಾಚಾರದಿಂದಾಗಿದೆ ಎಂಬ ಹುಯಿಲೆದ್ದು ಅದೇ ಈ ಬೆಂಕಿಗೆ ಕಾರಣವಾಗಿದ್ದು ಎನ್ನುವುದರಲ್ಲಿ ಸಂದೇಹಗಳಿಲ್ಲ. ನಿನ್ನೆ ಮಣಿಪಾಲದ ಕೆ ಎಂ ಸಿ ಯ ಶವಪರೀಕ್ಷೆಯ ವರದಿಯಲ್ಲಿ ಅತ್ಯಾಚಾರ ನಡೆದಿಲ್ಲ ಎನ್ನುವುದು ಬೆಳಕಿಗೆ ಬಂದಿದೆ. ಹಾಗಿದ್ದ ಮೇಲೆ ಈ ‘ಅತ್ಯಾಚಾರ’ ನಡೆಸಿದವರು ಯಾರು?! ಅಥವಾ ಇದು ಅಮಾಯಕರ ಸಾವಿನಲ್ಲಿ ಬಳಕೆಗೆ ಯೋಗ್ಯ ಅಂದುಕೊಂಡವರು ಮಾಡಿದ ಕುತಂತ್ರವೇ?! ಸತ್ತ ಹುಡುಗಿಯ ಮಾನವನ್ನು ಹರಾಜು ಮಾಡಿದವರಿಗೆ ಶಿಕ್ಷೆ ಆಗಬೇಕಲ್ಲವೇ? ಇದು ಯೋಚಿಸಬೇಕಾದ ಸಂಗತಿ! ಅಲ್ಲದೇ ಯುವತಿಯ ಸಾವು ವಿಷ ಪ್ರಾಶನದಿಂದ ಆಗಿದೆ ಎನ್ನಲಾಗಿದೆ. ಹಾಗಿದ್ದರೇ, ಆ ಹುಡುಗಿಯ ದೇಹದಲ್ಲಿ ವಿಷ ಸೇರಿಕೊಂಡಿದ್ದು ಹೇಗೆ?! ಅವಳಾಗಿಯೇ ತೆಗೆದುಕೊಂಡದ್ದೇ?! ಹಾಗಿದ್ದರೇ ಯಾಕೆ ಎನ್ನುವುದನ್ನು ತನಿಖೆ ಮಾಡಿ ಸತ್ಯ ಸಂಗತಿಯನ್ನು ಬಯಲಿಗೆ ತರಬೇಕಿದೆ.

ಸುಮ್ಮನೇ ಸಾವಿಗೆ ಸಂತಾಪ ಸೂಚಿಸುತ್ತಾ, ಪ್ರತಿಭಟಿಸುತ್ತಾ, ಅಮಾಯಕ ಜನ ವರ್ಗವನ್ನು ಬೆಂಕಿಯ ಭಯದಲ್ಲಿ ನಿಲ್ಲುವಂತೆ ಮಾಡುವ ಬದಲು ಈ ರೀತಿ ಆಗಬೇಕಿದೆ. ಈ ಘಟನಾವಳಿಯ ಎಲ್ಲಾ ವಿವರಗಳು ಬಯಲಾದಾಗ ಮಾತ್ರ ಸಾವಿಗೆ ಒಂದು ನ್ಯಾಯ ಸಿಗಲು ಸಾಧ್ಯ ! ಬಹುಜನರಿಗೆ ಇದರ ಅರಿವಿದೆ. ಕೆಲವು ಉಗ್ರರ ಹೊರತು. ಸಿಓಡಿಯ ತನಿಖೆಯೇ ಆಗಲಿ ಸಿಬಿಐಯ ತನಿಖೆಯೇ ಆಗಲಿ ಸತ್ಯ ಬಯಲಾಗಲಿ. ಸಿಬಿಐ ಎಂದು ಬೊಬ್ಬಿಡುವವರು ಧರ್ಮಸ್ಥಳದ ಸೌಜನ್ಯ ಕೇಸು ಏನಾಗುತ್ತಿದೆ. ಧಾರಾವಾಡದ ಬ್ಯಾಂಕ್ ಉದ್ಯೋಗಿ …. ಶೆಟ್ಟರ್ ಪ್ರಕರಣ ಏನಾಯಿತು ಎನ್ನುವುದನ್ನು ಅರಿತುಕೊಂಡರೇ ಒಳಿತು. ಏನೇ ಇರಲಿ, ಈ ಅತ್ಯುತ್ಸಾಹದ ಮಂದಿಗೆ ಇನ್ನಾದರೂ ವಿವೇಕ ಜಾಗೃತವಾಗಲಿ/Post Mrtum ReportNanditha

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s