ದಲಿತ – ಪ್ರಗತಿಪರ ಮುಖಂಡ ದೋಗೂರು ಪರಮೇಶ್ವರ್ ಮೇಲ ೆ ಹಲ್ಲೆ ನಡೆಸಿದ ಶ್ರೀ ರಾಘವೇಶ್ವರ ಬೆಂಬಲಿಗರನ್ನು ಕೂಡಲೇ ಬಂಧಿಸಿ!

ಸಾಗರದಲ್ಲಿ ನಿನ್ನೆ ಶ್ರೀ ರಾಘವೇಶ್ವರ ಪರ ನಡೆದ ಕಾರ್ಯಕ್ರಮದಲ್ಲಿ , ವಾಸ್ತವತೆಯ ಮತ್ತು ವಿವಾದದ ಬಗ್ಗೆ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ ಸಾಮಾಜಿಕ ಕಾರ್ಯ ಕರ್ತ,ದಲಿತ ಮತ್ಪ್ರತು ಗತಿಪರ ಮುಖಂಡ ದೋಗೂರು ಪರಮೇಶ್ವರ್ ಮೇಲೆ ಶ್ರೀ ರಾಘವೇಶ್ವರ ಬೆಂಬಲಿಗರ ಪೈಕಿ ಕೆಲವರು ಹಲ್ಲೆ ನಡೆಸಿದ್ದು, ಇದನ್ನು ವೇದಿಕೆ ತೀವ್ರವಾಗಿ ಖಂಡಿಸುತ್ತದೆ. ಕೂಡಲೇ ಈ ಪ್ರಕರಣದ ಎಲ್ಲಾ ಆರೋಪಿಗಳನ್ನು ಬಂಧಿಸಿ, ಹಲ್ಲೆಕೋರರಿಗೆ ತಕ್ಕ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸುತ್ತಿದೆ.ಸ್ವಾಮೀಜಿಯ ಪರ ಇರುವವರು ಆರೋಪಗಳನ್ನು ಒಪ್ಪದೇ ಇರುವವರನ್ನು ಮತ್ತು ಆರೋಪದ ಬಗ್ಗೆ ಮಾತನಾಡುವವರ ಮೇಲೆ ಈ ರೀತಿಯಲ್ಲಿ ದೈಹಿಕ ಹಲ್ಲೆ ನಡೆಸುವ ಮೂಲಕ ಭೀತಿ ಹುಟ್ಟಿಸಿ, ಸ್ವಾಮೀಜಿಯನ್ನು ಆರೋಪದಿಂದ ಮುಕ್ತಗೊಳಿಸಲು ಹೊರಟಿರುವುದರ ಬಗ್ಗೆ ಈಗಾಗಲೇ ಹಲವು ಘಟನೆಗಳು ನಡೆದಿದ್ದು, ಸರಕಾರ ಈ ಪ್ರಕರಣವನ್ನೂ ಜೊತೆ ಸೇರಿಸಿಕೊಂಡು, ಅನ್ಯಾಯಕ್ಕೆ ಒಳಗಾದವರ ರಕ್ಷಣೆಗೆ ಆದ್ಯತೆ ನೀಡಬೇಕು ಎಂದು ವೇದಿಕೆ ಒತ್ತಾಯಿಸುತ್ತದೆ.
– ಪ್ರಧಾನ ಕಾರ್ಯದರ್ಶಿಗಳು / ಕಾರ್ಯದರ್ಶಿ ಮಂಡಳಿ, ಕೇಂದ್ರ ಸಮಿತಿ, ಕರ್ನಾಟಕ ಕೋಮು ಸೌಹರ್ದ ವೇದಿಕೆ

Advertisements

ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ 4 ನೇ ರಾಜ್ಯ ಸ ಮ್ಮೇಳನ ಮತ್ತು ಸೌಹಾರ್ಧ ಪರಂಪರೆಯ ಸಮಾಗಮ ಕಾರ್ಯಕ್ರ ಮಕ್ಕೆ ತಮಗೆ ಪ್ರೀತಿಯ ಸ್ವಾಗತ.

ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ 4 ನೇ ರಾಜ್ಯ ಸಮ್ಮೇಳನ ಮತ್ತು ಸೌಹಾರ್ಧ ಪರಂಪರೆಯ ಸಮಾಗಮ ಕಾರ್ಯಕ್ರಮಕ್ಕೆ ತಮಗೆ ಪ್ರೀತಿಯ ಸ್ವಾಗತ. ಡಿಸೆಂಬರ್ 27 ಮತ್ತು 28ರಂದು ಸೌಹಾರ್ಧ ತಾಣ ತಿಂತಣಿಯಲ್ಲಿ (ಯಾದಗಿರಿ ಜಿಲ್ಲೆ, ಸುರಪುರ ತಾಲ್ಲೂಕು,) ನಡೆಯಲಿರುವ ಕರ್ನಾಟಕದ ಎಲ್ಲಾ ಪ್ರಗತಿಪರ ಎಡಪಂಥೀಯರು, ಸೌಹಾರ್ದ ಪ್ರೇಮಿಗಳು ಸೇರಲಿರುವ ಐತಿಹಾಸಿಕ ಕಾರ್ಯಕ್ರಮಕ್ಕೆ ತಾವು ಸಹ ಸಾಕ್ಷಿಯಾಗಿ. ಸೌಹಾರ್ದ ಭಾರತ ಕಟ್ಟುವ ನಮ್ಮ ಸಂಕಲ್ಪದಲ್ಲಿ ನಿಮ್ಮದೂ ಪಾಲಿರಲಿ.

ನಿಮ್ಮ ಬರುವಿಕೆಯ ನಿರೀಕ್ಷೆಯಲ್ಲಿ

ಧನ್ಯವಾದಗಳು

K L Ashok
State Secretary
Karnataka Komu Souhardha Vedike