ನಕ್ಸಲೀಯಂ ತೊರೆದು ಮುಖ್ಯವಾಹಿನಿಯ ಚಳುವಳಿಗೆ ಬ ಂದ ಸಿರಿಮನೆ ನಾಗರಾಜ್ ಮತ್ತು ನೂರ್ ಜುಲ್ಫಿಕರ್!

ಕರ್ನಾಟಕದ ಹಲವು ಜನಪರ ಚಳವಳಿಗಳಲ್ಲಿ ತೊಡಗಿಗೊಂಡು ಹಲವು ನಾಯಕರುಗಳನ್ನು ಸೃಷ್ಟಿಸಿದ್ದ ಇಬ್ಬರು ನಾಯಕರು ಪ್ರಭುತ್ವ ಜನಪರ ಹೋರಾಟಗಳನ್ನು ಹತ್ತಿಕ್ಕಲು ಹೊರಟದ್ದರಿಂದ ಈ ರೀತಿ ಚಳುವಳಿ ಕಟ್ಟುವ ಬದಲು ಭೂಗತರಾಗಿ ಕ್ರಾಂತಿ ಮಾಡಬಹುದೆಂಬ ಕಲ್ಪನೆಯ ಮೊರೆ ಹೋಗಿ ಭೂಗತರಾಗಿದ್ದರು. ನಮ್ಮ ಪ್ರಭುತ್ವಕ್ಕೆ ಅವರು ಭೂಗತರಾಗಿದ್ದು, ಅವರನ್ನು ಹಣಿಯಲು ಇನ್ನಷ್ಟು ಸುಲಭವಾಗಿತ್ತು. ಕರ್ನಾಟಕದ ಜನ ಮಾನಸವೂ ಕಳೆದ ಒಂದು ದಶಕದಿಂದ ಐಕ್ಯವಾಗಿರುವ ಹೋರಾಟಗಳು ಇಲ್ಲದೇ ಸೊರಗಿದ್ದರೂ, ಅದ್ಯಾಕೋ ಭೂಗತವಾಗಿದ್ದುಕೊಂಡು ಮಾಡುವ ಚಳುವಳಿಗೆ ಹೆಚ್ಚಿನ ಬೆಂಬಲವನ್ನು ನೀಡಲೇ ಇಲ್ಲ! ಇನ್ನೊಂದೆಡೆ ಭೂಗತರಾಗಿದ್ದುಕೊಂಡು ಕ್ರಾಂತಿಯನ್ನು ಕಲ್ಪಿಸಿದವರಿಗೂ ಬರೇ ರಕ್ತಪಾತ ಹೊರತು ಯಾವುದೇ ಪರಿವರ್ತನೆ ಕಾಣಿಸಲೇ ಇಲ್ಲ!! ಇದರ ಪರಿಣಾಮ ಕರ್ನಾಟಕದ ಭೂಗತ ಚಳುವಳಿಯಾಗಿದ್ದ ನಕ್ಸಲಿಸಂ ನಲ್ಲಿ ಬಂಡಾಯ ಕಾಣಿಸಿಕೊಂಡಿತ್ತು. ಭೂಗತವಾಗಿ ಪ್ರಭುತ್ವವನ್ನು ಬಂದೂಕು ಹಿಡಿದು ಮಾಡುವುದಕ್ಕಿಂತ ಸಮಾಜದ ಮುಖ್ಯವಾಹಿನಿಗೆ ಬಂದು ಜನರ ಶಕ್ತಿಯ ಪ್ರಜಾಸತ್ತಾತ್ಮಕ ಮಾರ್ಗದ ಚಳವಳಿಗಳನ್ನು ಒಂದು ಗೂಡಿಸಿಕೊಂಡು ಪ್ರಭುತ್ವವನ್ನು ಎದುರಿಸಬಹುದೆಂಬ ಮಾತುಗಳು ಕೇಳಿ ಬಂದವು. ನಕ್ಸಲೀಯಂ ನಲ್ಲಿ ಇಂತಹ ಮಾರ್ಗಗಳಿಗೆ ಬೆಲೆ ಇಲ್ಲವೆಂದು ಗೊತ್ತಾದಾಗ, ಭೂಗತರಾಗಿದ್ದ ಇಬ್ಬರು ಅದನ್ನು ತೊರೆದು 2006 ರಲ್ಲೆ ಹೊರಬಂದಿದ್ದರು! ಆದರೂ ಪೊಲೀಸ್ ಇಲಾಖೆ ಮಾತ್ರ ಅವರ ಮೇಲೆ ಕೇಸು ದಾಖಲಿಸುವುದನ್ನು ಬಿಟ್ಟಿರಲೇ ಇಲ್ಲ! 2006 ರಲ್ಲೇ ನಕ್ಸಲೀಸಂನಿಂದ ಹೊರಬಂದ ಇಬ್ಬರು ನಾಯಕರೆಂದರೇ, ಚಿಕ್ಕಮಗಳೂರಿನ ಶೃಂಗೇರಿಯ ಸಿರಿಮನೆ ನಾಗರಾಜ್ ಮತ್ತು ಚಿತ್ರದುರ್ಗ ಮೂಲದ ನೂರ್ ಜುಲ್ಫಿಕರ್ ಅಲಿಯಾಸ್ ಶ್ರೀಧರ್! ಭೂಗತ ಚಟುವಟಿಕೆಯಿಂದ ಹೊರಬಂದರೂ ಅವರು ಇತರ ಚಳುವಳಿಯ ಜೊತೆಗೂಡಲು ಆಗಲೇ ಇಲ್ಲ! ಅದಕ್ಕಾಗಿನೇ ಅವರು ತಲೆ ಮರೆಸಿಕೊಂಡಿದ್ದರು! ಸಮಾಜದ ಮುಖ್ಯ ವಾಹಿನಿಗೆ ಬಂದು ಪ್ರಭುತ್ವದ ದೌರ್ಜನ್ಯ ಮತ್ತು ಸಮಾಜದ ಅಸಮಾನತೆಗಳನ್ನು ಹೋಗಲಾಡಿಸಲು ಜನಜಾಗೃತಿ ಮೂಡಿಸಬೇಕೆಂಬ ಅವರ ಸಂಕಲ್ಪ ಸುಮಾರು 8 ವರ್ಷಗಳಿಂದ ಕನಸಾಗೇ ಉಳಿದಿತ್ತು! ಇದನ್ನು ಗಮನಿಸಿದ ಹಲವು ಜನ ಹೋರಾಟಗಾರರು, ಬುದ್ಧಿ ಜೀವಿಗಳು ಮತ್ತು ಸಾಹಿತಿಗಳು ಇದಕ್ಕೊಂದು ಅಂತ್ಯ ಕಾಣಿಸಬೇಕೆಂದು ನಿರ್ಧರಿಸಿದರು. ಅದಕ್ಕಾಗಿಯೇ ಹುಟ್ಟಿಕೊಂಡಿತು ‘ಶಾಂತಿಗಾಗಿ ನಾಗರಿಕ ವೇದಿಕೆ’! ಈ ವೇದಿಕೆ ನೂತನ ಸರಕಾರದ ಮುಂದೆ ಇಟ್ಟ ಪ್ರಸ್ತಾಪವನ್ನು ಸರಕಾರ ಒಪ್ಪಿತ್ತು. ಆದರೇ ಅದು ಕಾರ್ಯಗತವಾಗಲು ಹಿಡಿದ ಸಮಯ ಒಂದೂವರೆ ವರುಷ! ಅಂದರೇ ನಿನ್ನೆ ಡಿಸೆಂಬರ್,8-2014 ನೇ ಸೋಮವಾರ ಚಿಕ್ಕಮಗಳೂರಿನ ಜಿಲ್ಲಾಡಳಿತದ ಮುಂದೆ ತಮ್ಮ ವಕೀಲ ಕೆ.ಪಿ.ಶ್ರೀಪಾಲ್ ಅವರ ಜೊತೆ ಬಂದು ಹಾಜರಾದ ಈ ಸಿರಿಮನೆ ಮತ್ತು ನೂರ್ ಅವರನ್ನು ಸ್ವಾಗತಿಸಲು ಇಡೀ ಕರ್ನಾಟಕದ ಜನಪರ ಚಳವಳಿಯ ನಾಯಕರುಗಳೇ ಜೊತೆಗೂಡಿದ್ದರು! ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಪತ್ರಕರ್ತೆ ಗೌರಿ ಲಂಕೇಶ್, ಎಡಪಂಥೀಯ ಚಳುವಳಿಯ ನೇತಾರರಾದ ಜಿ.ಎನ್.ನಾಗರಾಜ್, ಸಿದ್ದನಗೌಡ ಪಾಟೀಲ್ ಸಹಿತ ಹಲವು ಲೇಖಕರು – ಪತ್ರಕರ್ತರ ಸಹಿತ ಎಲ್ಲಾ ಜನಪರ – ಪ್ರಗತಿಪರ ಹೋರಾಟಗಾರರೂ ಜೊತೆಗೂಡಿದ್ದರು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s