ಪಾಕಿಸ್ತಾನದಲ್ಲಿ ನಿನ್ನೆ ನಡೆದ ಪೈಶಾಚಿಕತೆಯನ್ ನು ಖಂಡಿಸೋಣ; ಜೊತೆಗೆ ನಮ್ಮ ದೇಶವನ್ನು ಅದರಿಂದ ಉಳಿಸ ೋಣ

ಪಾಕಿಸ್ತಾನವೆನ್ನುವುದು ಯಾವ ರೀತಿಯಲ್ಲಿ ಧರ್ಮಾಂದರ ಬೆಂಕಿಯಲ್ಲಿ ಬೇಯುತ್ತಿದೆ ಎನ್ನುವುದು ನಿನ್ನೆಯ ಘಟನೆಯಿಂದ ಮತ್ತೊಮ್ಮೆ ಬಯಲಿಗೆ ಬಂದಿದೆ. ನಮ್ಮ ಭಾರತವನ್ನು ಇವುಗಳಿಂದ ಮುಕ್ತವಾಗಿರಿಸಿದ್ದಕ್ಕೆ ಬ್ರಿಟೀಷರಿಂದ ಸ್ವಾತಂತ್ರ್ಯ ದೊರಕಿಸಿಕೊಟ್ಟ ಅನೇಕ ಮಹನೀಯರು, ಅದರಲ್ಲೂ ಈ ದೇಶವನ್ನು ಜಾತ್ಯಾತೀತ, ಧರ್ಮ ನಿರಪೇಕ್ಷ ದೇಶವಾಗಿಸಿ, ಇಲ್ಲೊಂದು ಅತ್ಯುತ್ತಮ ಸಂವಿಧಾನವನ್ನು ಒದಗಿಸಿಕೊಟ್ಟ ನಮ್ಮನ್ನು ಅಗಲಿರುವ ಎಲ್ಲಾ ಹಿರಿಯರನ್ನು ನಾವು ಮತ್ತೊಮ್ಮೆ ಅವರ ಈ ಕಾಳಜಿಯ ಕಾರಣಕ್ಕಾಗಿಯಾದರೂ ಸ್ಮರಿಸಿಕೊಳ್ಳಲೇಬೇಕಿದೆ! ಧರ್ಮ ವನ್ನು ಯಾರ್ಯಾರು, ಯಾವೆಲ್ಲಾ ರೀತಿ ಬಳಸಿಕೊಂಡು ಏನೇನು ಮಾಡಬಲ್ಲರು ಎನ್ನುವುದಕ್ಕೆ ನಿನ್ನೆ ಸುಮಾರು 132 ಜನ ಮಕ್ಕಳ ಬಲಿ ಪಡೆದ ಘಟನೆ ಸಾಕ್ಷ್ಯ ಒದಗಿಸುತ್ತದೆ! ಈ ಬಗ್ಗೆ ನಾವು ಎಚ್ಚರದಿಂದ ಇರುವ ಅಗತ್ಯ ಈಗ ಹೆಚ್ಚಾಗಿದೆ!ಇತ್ತೀಚೆಗೆ ದೇಶವನ್ನು ಕೇವಲ ಒಂದು ಧರ್ಮದ ಆಳ್ವಿಕೆಗೆ ಒಳಪಡಿಸಬೇಕು ಎನ್ನುವ ಕಾರ್ಯತಂತ್ರಗಳು ನಡೆಯುತ್ತಿದೆ. ಇದಕ್ಕಾಗಿ 1990 ರಿಂದಲೇ ಹೆಚ್ಚು ಕ್ರಿಯಾಶೀಲ ಚಟುವಟಿಕೆಗಳು ನಡೆದಿತ್ತು. 1992 ರ ಡಿಸೆಂಬರ್,6 ರಲ್ಲಿ ನಡೆದ ಬಾಬರಿ ಮಸೀದಿ ದ್ವಂಸ, 2012 ರ ಗುಜರಾತ್ ಹತ್ಯಾಕಾಂಡ …. ಹೀಗೆ ಇಂತಹ ಅನೇಕ ಘಟನೆಗಳನ್ನು ಉದಾಹರಿಸಬಹುದಾಗಿದೆ. ಇವುಗಳ ಅಪಾಯದ ಬಗ್ಗೆ ನಾವು ಜಾಗೃತರಾದಾಗಷ್ಟೇ ಇಂತಹ ಘಟನೆಗಳು ನಮ್ಮಲ್ಲಿ ಮತ್ತೆ ಅನುರಣಿಸದಂತೆ ಮಾಡಬಹುದು. ಕೇವಲ ಸಂತಾಪ – ಶ್ರದ್ಧಾಂಜಲಿ ಎಂಬ ಸೆರಗಿನ ಮೇಲಿನ ಹೊಡೆತಗಳಿಂದ ಇದನ್ನು ಸಾಧಿಸಲು ಸಾಧ್ಯವಿಲ್ಲ ಎನ್ನುವುದೂ ನಮಗೆ ಅರ್ಥವಾಗಬೇಕು. ಬಂಡವಾಳಶಾಹಿಗಳೇ ಆಳ್ವಿಕೆಯ ಮುಖ್ಯ ರೂವಾರಿಗಳಾಗಿರುವ ಈ ಕಾಲ ಘಟ್ಟದಲ್ಲಿ ಇಂತಹ ಕೇವಲ ಮಾತಿನ ಮಂಟಪಗಳು ನಮ್ಮನ್ನು ಮರಳು ಮಾಡಬಹುದೇ ಹೊರತು ನೆಮ್ಮದಿಯನ್ನು ಕರುಣಿಸಲಾರವು!
ಹಾಗಾಗಿ ಪಾಕಿಸ್ತಾನದಲ್ಲಿನ ಪಾಪಿಗಳ ಪೈಶಾಚಿಕ ಕೃತ್ಯವನ್ನು ಖಂಡಿಸುವುದರ ಜೊತೆಗೆ ಭಾರತದ ಸಹಬಾಳ್ವೆಯ ಪರಂಪರೆಯನ್ನು ಉಳಿಸಿಕೊಳ್ಳಲು ಕಾರ್ಯ ಪ್ರವೃತ್ತರಾಗಬೇಕು. ನಮ್ಮ ದೇಶವನ್ನು ಇಂತಹ ಕಂಟಕದಿಂದ ಉಳಿಸುವತ್ತ ಮನ ಮಾಡಬೇಕಿದೆ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s