ದಲಿತ – ಪ್ರಗತಿಪರ ಮುಖಂಡ ದೋಗೂರು ಪರಮೇಶ್ವರ್ ಮೇಲ ೆ ಹಲ್ಲೆ ನಡೆಸಿದ ಶ್ರೀ ರಾಘವೇಶ್ವರ ಬೆಂಬಲಿಗರನ್ನು ಕೂಡಲೇ ಬಂಧಿಸಿ!

ಸಾಗರದಲ್ಲಿ ನಿನ್ನೆ ಶ್ರೀ ರಾಘವೇಶ್ವರ ಪರ ನಡೆದ ಕಾರ್ಯಕ್ರಮದಲ್ಲಿ , ವಾಸ್ತವತೆಯ ಮತ್ತು ವಿವಾದದ ಬಗ್ಗೆ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ ಸಾಮಾಜಿಕ ಕಾರ್ಯ ಕರ್ತ,ದಲಿತ ಮತ್ಪ್ರತು ಗತಿಪರ ಮುಖಂಡ ದೋಗೂರು ಪರಮೇಶ್ವರ್ ಮೇಲೆ ಶ್ರೀ ರಾಘವೇಶ್ವರ ಬೆಂಬಲಿಗರ ಪೈಕಿ ಕೆಲವರು ಹಲ್ಲೆ ನಡೆಸಿದ್ದು, ಇದನ್ನು ವೇದಿಕೆ ತೀವ್ರವಾಗಿ ಖಂಡಿಸುತ್ತದೆ. ಕೂಡಲೇ ಈ ಪ್ರಕರಣದ ಎಲ್ಲಾ ಆರೋಪಿಗಳನ್ನು ಬಂಧಿಸಿ, ಹಲ್ಲೆಕೋರರಿಗೆ ತಕ್ಕ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸುತ್ತಿದೆ.ಸ್ವಾಮೀಜಿಯ ಪರ ಇರುವವರು ಆರೋಪಗಳನ್ನು ಒಪ್ಪದೇ ಇರುವವರನ್ನು ಮತ್ತು ಆರೋಪದ ಬಗ್ಗೆ ಮಾತನಾಡುವವರ ಮೇಲೆ ಈ ರೀತಿಯಲ್ಲಿ ದೈಹಿಕ ಹಲ್ಲೆ ನಡೆಸುವ ಮೂಲಕ ಭೀತಿ ಹುಟ್ಟಿಸಿ, ಸ್ವಾಮೀಜಿಯನ್ನು ಆರೋಪದಿಂದ ಮುಕ್ತಗೊಳಿಸಲು ಹೊರಟಿರುವುದರ ಬಗ್ಗೆ ಈಗಾಗಲೇ ಹಲವು ಘಟನೆಗಳು ನಡೆದಿದ್ದು, ಸರಕಾರ ಈ ಪ್ರಕರಣವನ್ನೂ ಜೊತೆ ಸೇರಿಸಿಕೊಂಡು, ಅನ್ಯಾಯಕ್ಕೆ ಒಳಗಾದವರ ರಕ್ಷಣೆಗೆ ಆದ್ಯತೆ ನೀಡಬೇಕು ಎಂದು ವೇದಿಕೆ ಒತ್ತಾಯಿಸುತ್ತದೆ.
– ಪ್ರಧಾನ ಕಾರ್ಯದರ್ಶಿಗಳು / ಕಾರ್ಯದರ್ಶಿ ಮಂಡಳಿ, ಕೇಂದ್ರ ಸಮಿತಿ, ಕರ್ನಾಟಕ ಕೋಮು ಸೌಹರ್ದ ವೇದಿಕೆ

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s