ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಕೋಮು ದ್ವೇ ಷ ಹೆಚ್ಚಿಸಿದ ಪುತ್ತೂರಿನ ಹಿಂದೂ ಸಮಾಜೋತ್ಸವ! ಬುದ್ಧ ಿ ಜೀವಿಗಳನ್ನು ನಾಯಿಗಳೆಂದು ಕರೆಯುವ ಮೂಲಕ ತನ್ನ ನಾ ಲಗೆಯಿಂದ ಕುಲ ಗುರುತಿಸಿಕೊಂಡ ಕಲ್ಲಡ್ಕ ಪ್ರಭಾಕರ ಭಟ ್!

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಕೋಮು ದ್ವೇಷ ವನ್ನು ಹೆಚ್ಚಿಸಿಕೊಳ್ಳಲು ಕಾವು ಹಚ್ಚಲಾಗಿದೆ. ನಿನ್ನೆ (ದಿ.16-01-2015, ಶುಕ್ರವಾರ) ನಡೆದ ಹಿಂದೂ ಸಮಾಜೋತ್ಸವ ಇದಕ್ಕಾಗಿಯೇ ಮಾಡಲಾಗಿತ್ತು ಎನ್ನುವುದನ್ನು ಆನಂತರ ನಡೆದ ವಿದ್ಯಮಾನಗಳೇ ಒತ್ತಿ ಹೇಳುತ್ತಿವೆ. ಸಮಾಜೋತ್ಸವದಲ್ಲಿ ಹಿಂದೂ ಧರ್ಮದಲ್ಲಿರುವ ಕಳಂಕಗಳಾದ ಻ಅಸ್ಪೃಶ್ಯತೆ – ಜಾತಿ ಪದ್ಧತಿ, ಮೌಢ್ಯಗಳ ವಿರುದ್ಧ ತುಟಿ ಬಿಚ್ಚುವ ಬದಲು, ಅನ್ಯ ಧರ್ಮದ ಬಗ್ಗೆ ದ್ವೇಷ ಕಾರುವ ಮಾತುಗಳೇ ಮತ್ತೆ ಮಾರ್ದನಿಸಿವೆ. ಧರ್ಮದ ಅಮಲನ್ನು ಶೂದ್ರ ಯುವಕರ ತಲೆಗೆ ಹಚ್ಚಿ, ಅವರನ್ನು ಧರ್ಮ ರಕ್ಷಣೆಯ ಕಾಲಾಳುಗಳನ್ನಾಗಿಸುವ ಮೂಲಕ ಬಲಿ ಪೀಠದ ಪ್ರಾಣಿಯನ್ನಾಗಿಸಿ, ಬಲಿ ಕೊಡಲು ತಯಾರಿ ಮಾಡಲಾಗಿದೆ. ಆದ್ದರಿಂದಲೇ ಅಲ್ಲಿ ಅಮಲೇರಿಸಿಕೊಂಡವರು ವಾಪಾಸಾಗುವಾಗ ಮಸೀದಿಗೆ – ಮನೆಗಳಿಗೆ ಕಲ್ಲು ಹೊಡೆಯಲಾಗಿದೆ. ಇದರ ಪರಿಣಾಮ ಮುಸ್ಲಿಮ್ ದ್ವೇಷವನ್ನು ಹೆಚ್ಚಿಸಿದ ಕೀರ್ತಿಯಷ್ಟೇ ಪುತ್ತೂರಿನ ಹಿಂದೂ ಸಮಾಜೋತ್ಸವದ್ದುಎನ್ನುವಂತಾಗಿದೆ! ಬುದ್ಧಿ ಜೀವಿಗಳನ್ನು ನಾಯಿಗಳೆಂದು ಕರೆಯುವ ಮೂಲಕ ತನ್ನ ನಾಲಗೆಯಿಂದ ಕುಲ ಗುರುತಿಸಿಕೊಂಡ ಕಲ್ಲಡ್ಕ ಪ್ರಭಾಕರ ಭಟ್!

ಹಿಂದೆ ಮುಸ್ಲಿಮ್ ಮಹಿಳೆಯರ ವಿರುದ್ಧ ನಾಲಿಗೆ ಹರಿಯಬಿಟ್ಟಿದ್ದ, ಹಿಂದೂ ಧರ್ಮದ ಮಹಿಳೆಯರು ಬ್ಯಾರಿಗಳ ಜೊತೆ ಮಾತಾಡಿದರೇ, ಹೋದಳೆಂದೇ ಲೆಕ್ಕ ಎಂದು ಮಹಿಳೆಯ ಸ್ವಾಭಿಮಾನಕ್ಕೆ ಕುತ್ತು ತರುವಂತಹ ಹೇಳಿಕೆ ನೀಡಿದ್ದ ಕಲ್ಲಡ್ಕ ಪ್ರಭಾಕರ ಭಟ್ ಈ ಬಾರಿ ಬುದ್ಧಿಜೀವಿಗಳ ಬಗ್ಗೆ ನಾಲಗೆ ಹರಿಯಬಿಟ್ಟಿದ್ದ. ಬಹುಶಃ ಬುದ್ಧಿ ಜೀವಿಗಳೆಂಬ ಜೀವಿಗಳ ಪೈಕಿ ಈತ ಪ್ರಚೋದಿಸುವ ಹಿಂದೂತ್ವದ ರಾಜಕೀಯವನ್ನೂ ಪ್ರಚುರ ಪಡಿಸುತ್ತಿದ್ದಾರೆಂಬುದನ್ನೂ ಮರೆತು ಬಿಟ್ಟಿರುವಂತೆ ಕಾಣಿಸುತ್ತದೆ. ಇಲ್ಲವಾದಲ್ಲಿ ಈತ ನಿನ್ನೆ ಬಳಸಿದ್ದ ಮಾತಿನಂತೆಯೇ ಹೇಳುವುದಾದರೇ, ಎಡ ಪಂಥೀಯ ಬುದ್ಧಿಜೀವಿಗಳೆನ್ನಬೇಕಿತ್ತು! ಆದರೇ ಹಾಗೆ ಹೇಳದೇ, ಬುದ್ಧಿ ಜೀವಿಗಳಿಂದಲೇ ಹಿಂದೂ ಧರ್ಮಕ್ಕೆ ಹಾನಿ ಅಂತ ಹೇಳುವುದರ ಮೂಲಕ ತಾನು ಬುದ್ಧಿವಂತ ಻ಅಲ್ಲ ಎನ್ನುವ ಕೀಳರಿಮೆ ಈತನನ್ನು ಕಾಡುತ್ತಿದೆ ಎನ್ನುವುದನ್ನೂ ಬಯಲಾಗಿಸಿದಂತಾಗಿದೆ. ಆದ್ದರಿಂದ ಈತನ ಈ ಕೀಳರಿಮೆಗೆ ಸರಿಯಾದ ಮಾನಸಿಕ ಚಿಕಿತ್ಸೆಯನ್ನು ಸರಕಾರ ಉಚಿತವಾಗಿ ನೀಡಿದ್ದಲ್ಲಿ ಸಮಾಜದ ಸ್ವಾಸ್ಥ್ಯ ಕಾಪಾಡಬಹುದಾಗಿದೆ. ಇನ್ನಾದರೂ ಖಾಕಿ ತೊಟ್ಟ ವರ್ಗ ಇದರ ಬಗ್ಗೆ ಚಿಂತಿಸಿಸಬಲ್ಲುದೇ? ಕಾರ್ಯೋನ್ಮುಖವಾಗಬಹುದೇ ಎನ್ನುವುದನ್ನು ಕಾದು ನೋಡಬೇಕಿದೆ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s