ಜನವರಿ 30,2015 ರಂದು’ ಉಡುಪಿಯಲ್ಲಿ ‘ಗಾಂಧಿ ಹತ್ಯೆಯ ನ ೆನಪಿಸೋಣ ; ಹಂತಕ ಸಂತತಿಯ ಮರೆಯದಿರೋಣ’ ಬಹಿರಂಗ ಧರಣಿ ಕಾರ್ಯಕ್ರಮ

ಉಡುಪಿ : ಜನವರಿ,30, 1948 ರಂದು ಮಹಾತ್ಮಾ ಗಾಂಧಿಯನ್ನು ಮತಾಂಧತೆಯ ಶಕ್ತಿಗಳು ಗುಂಡೇಟಿನಿಂದ ಕೊಂದ ದಿನ! ಭಾರತದ ಸ್ವಾತಂತ್ರ್ಯ ಚಳವಳಿಯನ್ನು ತನ್ನ ಅಹಿಂಸಾತ್ಮಕ ಧರಣಿ ಸತ್ಯಾಗ್ರಹ ಎಂಬ ಅಸ್ತ್ರದ ಮೂಲಕ ಹೊಸ ಭಾಷ್ಯ ಬರೆದ ಗಾಂಧಿಯ ಸರ್ವಧರ್ಮ ಸಮಭಾವನೆಯನ್ನು ಒಪ್ಪದ ಶಕ್ತಿಗಳು ಅವರನ್ನು ಮುಗಿಸುವುದರ ಮೂಲಕ ತಮ್ಮ ಶಕ್ತಿಯನ್ನು ತೋರ್ಪಡಿಸಿಕೊಂಡವು. ನಮ್ಮ ದೇಶದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಬಹುತೇಕ ಘಟನಾವಳಿಗಳ ಹಿಂದೆ ಅಂತಹ ಶಕ್ತಿಗಳ ಕೈವಾಡ ಬಲವಾಗಿರುವುದು ಕಂಡು ಬಂದಿದೆ. ಅಂತಹ ಶಕ್ತಿಗಳಿಗೆ ಸಂವಿಧಾನದ ಬಗ್ಗೆಯೂ ಗೌರವವೇ ಇಲ್ಲವಾಗಿವೆ! ಬೇಕಾದಾಗ ಸಂವಿಧಾನವನ್ನು ಬಳಸಿಕೊಳ್ಳುವ ಮನಸ್ಸುಗಳ ಆ ಶಕ್ತಿಗಳಿಗೆ ಅದು ತಮ್ಮ ಲಾಭಕ್ಕಾಗಿ ಮಾತ್ರ ಬೇಕಿದೆ.ಇವುಗಳನ್ನು ಸಾರ್ವಜನಿಕರಿಗೆ ಮತ್ತೆ ನೆನಪಿಸಿಕೊಳ್ಳುವುದರ ಜೊತೆಗೆ – ಕರ್ನಾಟಕ ದ ಕರಾವಳಿ ಮತ್ತು ನಮ್ಮ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಇಂತಹ ಶಕ್ತಿಗಳನ್ನು ನಿಯಂತ್ರಿಸಲು ಪೊಲೀಸ್ ಇಲಾಖೆ ವಿಫಲವಾಗುತ್ತಿರುವುದನ್ನು ಖಂಡಿಸುವುದರ ಮೂಲಕ ಸರಕಾರದ ಗಮನ ಸೆಳೆಯುವ ಉದ್ದೇಶದಿಂದ ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಉಡುಪಿ ಜಿಲ್ಲಾ ಘಟಕವು ‘ಗಾಂಧಿ ಹತ್ಯೆಯ ನೆನಪಿಸೋಣ ; ಹಂತಕ ಸಂತತಿಯ ಮರೆಯದಿರೋಣ’ ಎಂಬ ಘೋಷಾ ವಾಕ್ಯದೊಂದಿಗೆ ಜನವರಿ,30,2015 ನೇ ಶುಕ್ರವಾರ ಉಡುಪಿ ನಗರದ ಕ್ಲಾಕ್ ಟವರ್ ನ ಎದುರಿನ ಗಾಂಧಿ ಪ್ರತಿಮೆಯ ಎದುರು ಬೆಳಿಗ್ಗೆ 9.50 ರಿಂದ ಸಂಜೆ 5.00 ರ ವರೆಗೆ ಒಂದು ದಿನದ ಬಹಿರಂಗ ಧರಣಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಗಾಂಧೀಜಿಯ ಹತ್ಯೆಯನ್ನು ಖಂಡಿಸುವ, ಹಂತಕ ಸಂತತಿಯನ್ನು ವಿರೋಧಿಸುವ ಎಲ್ಲಾ ಜೀವಪರ ಸಂಘಟನೆಗಳು ಕಾರ್ಯಕ್ರಮಕ್ಕೆ ಕೈ ಜೋಡಿಸುವುದರ ಮೂಲಕ ಅಹಿಂಸಾತ್ಮಕತೆಯನ್ನು – ಗಾಂಧೀಜಿಯ ಆಶಯವನ್ನು ಬೆಂಬಲಿಸಬೇಕಾಗಿ ಈ ಮೂಲಕ ಕೋರಲಾಗಿದೆ.
– ಅಧ್ಯಕ್ಷರು ಮತ್ತು ಸರ್ವ ಸದಸ್ಯರು, ಕರ್ನಾಟಕ ಕೋಮು ಸೌಹಾರ್ದ ವೇದಿಕೆ, ಉಡುಪಿ ಜಿಲ್ಲಾ ಘಟಕ ಮತ್ತು ಸಹಭಾಗಿ ಸಂಘಟನೆಗಳು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s