ಜನವರಿ,30 – ಕೋಮು ಸೌಹಾರ್ದ ದಿನಾಚರಣೆ -” ಗಾಂಧಿ ಹತ್ ಯೆಯ ನೆನಪಿಸಿಕೊಳ್ಳೋಣ ; ಹಂತಕ ಸಂತತಿಯ ಮರೆಯದಿರೋಣ”

ದೇಶಕ್ಕೆ ಸ್ವಾತಂತ್ರ್ಯ ತರುವಲ್ಲಿ ಅಹಿಂಸಾತ್ಮಕ ಹೋರಾಟ ಕಟ್ಟಿಕೊಟ್ಟ ನೇತಾರ ಮಹಾತ್ಮಾ ಗಾಂಧೀಜಿಯವರನ್ನು 1948 ರ ಜನವರಿ 30 ರಂದು ಮತಾಂಧ ಶಕ್ತಿಗಳು ಸೇರಿಕೊಂಡು ಹತ್ಯೆ ನಡೆಸುವುದರ ಮೂಲಕ ದೇಶದಲ್ಲಿ ಒಂದೇ ಧರ್ಮದವರಿಗೆ ಮಾತ್ರ ಅವಕಾಶ ಎನ್ನ ತೊಡಗಿದ್ದವು. ನಂತರ ಡಾ.ಬಿ.ಆರ್.ಅಂಬೇಡ್ಕರ್ ನೇತೃತ್ವದಲ್ಲಿ ಜಾರಿಗೆ ಬಂದ ಸಂವಿಧಾನ ನಮ್ಮ ದೇಶ ಹಿಂದಿನಂತೆ ಬಹು ಧರ್ಮೀಯರ ನೆಲೆವೀಡು – ಬಹು ಸಂಸ್ಕೃತಿಯನ್ನು ಮುಂದೆಯೂ ಉಳಿಸಿಕೊಳ್ಳಬೇಕೆಂಬ ನಿಟ್ಟಿನಲ್ಲಿ ವಿಶ್ವಕ್ಕೆ ಮಾದರಿಯಾದ ಸಂವಿಧಾನವನ್ನು ಭಾರತದಲ್ಲಿ ಅಳವಡಿಸಿಕೊಳ್ಳಲಾಗಿತ್ತು.1920 ರಿಂದ ನಮ್ಮ ದೇಶದಲ್ಲಿ ಸಂಘಟಿತಗೊಂಡ ಮತಾಂಧರ ಒಂದು ಗುಂಪು ತನ್ನ ಹಿಡನ್ ಅಜೆಂಡಾದ ಮೂಲಕ ದೇಶವನ್ನು ಒಂದು ಧರ್ಮದ ಹಿಡಿತದಲ್ಲಿಟ್ಟುಕೊಳ್ಳಬೇಕೆಂದು ನಡೆಸಿದ ಸಂಚಿಗೆ ಬಹು ಸಂಖ್ಯೆಯ ಭಾರತೀಯರು ಬಲಿ ಬಿದ್ದ ಪರಿಣಾಮ ಇಂದು ದೇಶವನ್ನಾಳುವ ಚುಕ್ಕಾಣಿ ಸದ್ಯ ಆ ಶಕ್ತಿಗಳ ಕೈಗೆ ಬಂದಿದೆ. ಶಾಂತಿ – ಸಾಮರಸ್ಯ- ಸೌಹಾರ್ದತೆಯನ್ನು ಒಪ್ಪದ ಮನಸ್ಥಿತಿಯ ಆ ವರ್ಗ ದೇಶವನ್ನು ಮತ್ತೆ ವಿದೇಶೀಯರ ತೆಕ್ಕೆಗೆ ಒಪ್ಪಿಸಲು ಮುಂದಾಗುತ್ತಿದೆ. ಬಂಡವಾಳ ಶಾಹಿ ಶಕ್ತಿಗಳನ್ನು ಅವು ಬೆಂಬಲಿಸುತ್ತಿವೆ. ಹೀಗೆಯೇ ಮುಂದುವರಿದರೇ ದೇಶದಲ್ಲಿ ಕಾಣಿಸತೊಡಗಿರುವ ಹಿಂಸಾತ್ಮಕ ಧೋರಣೆ – ಅಲ್ಪ ಸಂಖ್ಯಾತರ ದಮನ ಮುಂದುವರೆಯುವುದು ಸ್ಪಷ್ಟವಾಗತೊಡಗಿದೆ. ಈ ಹಿನ್ನಲೆಯಲ್ಲಿ ಮಹಾತ್ಮಾ ಗಾಂಧೀಜಿಯ ಸರ್ವ ಧರ್ಮ ಸಮಭಾವನೆಯನ್ನು ಗಟ್ಟಿಗೊಳಿಸುವುದೇ ಇದಕ್ಕಿರುವ ಪರಿಹಾರ. ಇಲ್ಲವಾದಲ್ಲಿ ಅತ್ಯುತ್ಕೃಷ್ವವಾದ ನಮ್ಮ ಸಂವಿಧಾನವೇ ಮೂಲೆ ಗುಂಪಾಗಬಹುದು. ಇದಕ್ಕಾಗಿ ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಈ ಬಾರಿಯ ಜನವರಿ,30 ನ್ನು ‘ಕೋಮು ಸೌಹಾರ್ದ ದಿನ‘ವಾಗಿ ಆಚರಿಸಲು ನಿರ್ಧರಿಸಿದೆ. ಅದಕ್ಕಾಗಿ ವೇದಿಕೆಯ ಎಲ್ಲಾ ಜಿಲ್ಲಾ ಘಟಕಗಳು ಆ ದಿನ ವಿವಿಧ ಕಾರ್ಯಕ್ರಮಗಳ ಮೂಲಕ ‘ಗಾಂಧಿ ಹತ್ಯೆಯನ್ನು ನೆನಪಿಸಿಕೊಳ್ಳೋಣ; ಗಾಂಧಿ ಹಂತಕರ ಮರೆಯದಿರೋಣ’ ಎನ್ನುವ ಧ್ಯೇಯ ವಾಕ್ಯದೊಂದಿಗೆ ವಿಭಿನ್ನ ರೀತಿಯಲ್ಲಿ ಸೌಹಾರ್ದ ಪರಂಪರೆಯನ್ನು ಎತ್ತಿ ಹಿಡಿಯಲು ಮುಂದಾಗಿವೆ. ಜನಪರ – ಪ್ರಗತಿಪರ – ಮಾನವ ಪರ ಸಂಘಟನೆಗಳು ಮತ್ತದರ ಕಾರ್ಯಕರ್ತೆರು, ಸಜ್ಜನ ಬಂಧುಗಳು ನಮ್ಮ ಈ ಆಶಯವನ್ನು ಬೆಂಬಲಿಸುವುದರ ಮೂಲಕ ಸಹಕರಿಸಬೇಕಾಗಿ ಕೋರಲಾಗಿದೆ.
– ಕಾರ್ಯದರ್ಶಿ ಮಂಡಳಿ, ಕೇಂದ್ರ ಸಮಿತಿ, ಕರ್ನಾಟಕ ಕೋಮು ಸೌಹಾರ್ದ ವೇದಿಕೆ,

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s