Invitation – Seminar – IWD, Bengaluru. please share.

KKSV Central Committee Condemnation of Mohan Bhagavath

ಕರ್ನಾಟಕ ಕೋಮು ಸೌಹಾರ್ದ ವೇದಿಕೆ, ಕೇಂದ್ರ ಸಮಿತಿ.

ದಿನಾಂಕ: 24.2.2015

ಭಾರತರತ್ನ ಮದರ್ ತೆರೆಸಾರ ಕುರಿತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಘ ಚಾಲಕರಾದ ಮೋಹನ್ ಭಾಗವತ್ ಆಡಿರುವ ಅವಹೇಳನಕಾರಿ, ಮತದ್ವೇಷ ಪ್ರಚೋದನೆಯ ಮಾತುಗಳನ್ನು ಕ.ಕೋ.ಸೌ.ವೇ. ಕೇಂದ್ರ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ.

ದಿ. 24.2.2015ರಂದು, ರಾಜಾಸ್ಥಾನದ ಭಾರತ್‌ಪುರ್ ಪಟ್ಟಣದ ಸಮೀಪದಲ್ಲಿರುವ ಬಜ್ಹೇರದಲ್ಲಿ, ಸ್ವಯಂಸೇವಾ ಸಂಸ್ಥೆಯೊಂದು ಆಯೋಜಿಸಿದ್ದ ಕಾರ‍್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಮೋಹನ್ ಭಾಗವತ್ "ಮದರ್ ತೆರೆಸಾರ ಸೇವಾ ಕಾರ್ಯ, ಸೇವೆ ಪಡೆದುಕೊಂಡವರನ್ನು ಕ್ರಿಶ್ಚಿಯನ್ ಮತಕ್ಕೆ ಮತಾಂತರ ಮಾಡುವ ಉದ್ದೇಶದಿಂದ ಸೇವೆ ಮಾಡಿದ್ದಾರೆ; ಅಂತಹ ಸೇವೆಗೆ ಯಾವ ಮೌಲ್ಯವೂ ಇರದು’ ಎಂದಿದ್ದಾರೆ.

ಇದು, ದೇಶದ ಬಿಡಿ ಪ್ರಜೆಯೊಬ್ಬನ ಅಭಿಪ್ರಾಯವಾಗಿದ್ದರೆ ಮದರ್ ತೆರಸಾರ ಬದುಕು ಮತ್ತು ಸೇವೆಗಳ ನೈಜ ಮಾಹಿತಿಗಳನ್ನು ಪರಿಶೀಲಿಸಿ, ಅವರ ಈ ಮಾತಿನ ಪೊಳ್ಳುತನ ಎಷ್ಟೆಂದು ವಿವೇಕ-ವಿವೇಚನೆಯುಳ್ಳವರಿಗೆ ವಿವರಿಸಬಹುದ್ದಿತ್ತು. ಆದರೆ, ಇಸ್ಲಾಂ ಮತ್ತು ಕ್ರಿಶ್ಚಿಯನ್ ಮತಗಳ ವಿರುದ್ಧ ಹಿಂದುಗಳನ್ನು ಎತ್ತಿಕಟ್ಟಿ, ಸಂಖ್ಯಾಬಲವನ್ನು ಪ್ರಯೋಗಿಸಿ ಅಲ್ಪಸಂಖ್ಯಾತ ಮತಸ್ಥರನ್ನು ನಮ್ಮ ದೇಶದ ಕೀಳು ದರ್ಜೆಯ ನಾಗರಿಕರನ್ನಾಗಿಸುವ ರಾಜಕೀಯ ಯೋಜನೆಯನ್ನು ತನ್ನ ಹುಟ್ಟಿನಾರಭ್ಯದಿಂದಲೇ ಮಾಡಿಕೊಂಡು ಬಂದಿರುವ ಸಂಘಟನೆಯ ಅತ್ತ್ಯುನ್ನತ ಸರ್ವಾಧಿಕಾರಿಯ ಬಾಯಿಂದ ಈ ಮಾತು ಬಂದಿದೆ ಎನ್ನುವುದನ್ನು ನಾವು ಮರೆಯ ಕೂಡದು.

ಕಳೆದ ಒಂದು ತಿಂಗಳಿಂದ ದೆಹಲಿಯಲ್ಲಿ ಕ್ರಿಶ್ಚಿಯನ್ ಚರ್ಚು, ಸಂಸ್ಥೆಗಳ ಮೇಲೆ ದಾಳಿ ನಡೆಯುತ್ತಿದೆ.

ಸಂಘಪರಿವಾರದ ಸಂಘಟನೆಗಳು ’ಘರ್ ವಾಪ್ಸಿ’ ಕಾರ‍್ಯಕ್ರಮಗಳನ್ನು ಬಲಪೂರ್ವಕವಾಗಿ ಆಯೋಜಿಸುತ್ತಿವೆ. ಈ ಯೋಜಿತ ಕಾರ‍್ಯಕ್ರಮ ಮೋಹನ್ ಭಾಗವತ್ ಭೌದ್ಧಿಕ-ಸಂಘಟನಾತ್ಮ ನಾಯಕತ್ವದಲ್ಲಿ ನಡೆಯುತ್ತಿವೆ. ಸ್ವತಃ ಭಾಗವತ್, ’ಘರ್ ವಾಪ್ಸಿ’ ಕಾರ‍್ಯಕ್ರಮದ ಪ್ರಮುಖ ಭೌದ್ಧಿಕ ಸಮರ್ಥನೆಗಳನ್ನು ಸಾರ್ವಜನಿಕವಾಗಿ ನೀಡುತ್ತಿದ್ದಾರೆ. ಸಂಘಪರಿವಾರದ ಆಣತಿಗೆ ಬದ್ಧರಾಗಿರುವ ಕೇಂದ್ರ ಸಚಿವರುಗಳೂ ಸದರಿ ಕಾರ‍್ಯಕ್ರಮದ ಫಲವಾಗಿ ಉಂಟಾಗಿರುವ ಸಾಮಾಜಿಕ ಆಶಾಂತಿಯನ್ನು ನೆಪವಾಗಿಟ್ಟುಕೊಂಡು ’ಮತಾಂತರ ನಿಷೇಧ ಕಾಯ್ದೆ’ಯ ಇರಾದೆಯನ್ನು ಪ್ರಕಟಿಸಿದ್ದಾರೆ. ಈ ಯೋಜನೆಯ ಮೂಲಕ ಭಾರತದ ಪ್ರಜಾತಾಂತ್ರಿಕ ಸಂವಿಧಾನವು ಪ್ರಜೆಗಳಿಗೆ ನೀಡಿರುವ ಮತ ಆಯ್ಕೆ, ಆಚರಣೆಯ ಸ್ವಾತಂತ್ರ‍್ಯಗಳನ್ನು ಸಂಖ್ಯಾಬಲದ ರಾಜಕೀಯದಿಂದ ಬುಡಮೇಲು ಮಾಡುವ ಯೋಜಿತ ಕೃತ್ಯಕ್ಕೆ ಸಂಘಪರಿವಾರ ಕೈಹಾಕಿರುವುದು ನಿಚ್ಚಳವಾಗಿ ಕಾಣುತ್ತಿದೆ.

ಈಗ, ಕ್ರಿಶ್ಚಿಯನ್ ಮತಸ್ಥರು ’ಸಂತ’ಳೆಂದು ಗೌರವಿಸುವ, ಮತಾಂತರಗೊಳದಯೆಯೂ ಅವರ ಸೇವೆಯ ಫಲದಿಂದ ಲೌಕಿಕ ಜೀವನದ ಕರುಣೆಗೆ ಉಪಕೃತರಾಗಿರುವವರಿಗೆ ’ಮಾತೆ’ಯಾಗಿರುವ ತೆರೆಸಾರ ಕಾಯಕವನ್ನು ತುಚ್ಛಗೊಳಿಸುವ ಮಾತುಗಳನ್ನು ಮೋಹನ್ ಭಾಗವತ್ ಆಡಿದ್ದಾರೆ. ಇದು, ವ್ಯಕ್ತಿಯೊಬ್ಬನ ಬಿಡಿ ಅಭಿಪ್ರಾಯವಾಗಿರದೆ, ದೇಶದ ಸಂವಿಧಾನಿಕ ಹಕ್ಕುಗಳನ್ನು ಬುಡಮೇಲುಗೊಳಿಸುವ ಯೋಜನೆಯುಳ್ಳ ಸಂಘಟನೆಯ ಮುಖ್ಯಸ್ಥನ ಯೋಜಿತ ಕೃತ್ಯವಾಗಿದೆ.

ರಾ.ಸ್ವ.ಸೇ.ಸಂ.ನ ಈ ಸಂವಿಧಾನ ಬುಡಮೇಲು ಕೃತ್ಯ ಯೋಜನೆಗೆ ಚೋದಕವಾಗಿರುವ ಮೋಹನ್ ಭಾಗವತರ ಮಾತುಗಳನ್ನು ತೀವ್ರವಾಗಿ ಖಂಡಿಸುತ್ತದೆ. ಪ್ರಜೆಗಳ ಪ್ರಜಾತಾಂತ್ರಿಕ ಹಕ್ಕುಗಳ ಬಗ್ಗೆ ಕಾಳಜಿಯುಳ್ಳ ಸಾಮಾಜಿಕ-ರಾಜಕೀಯ ಶಕ್ತಿಗಳು ಜಾಗೃತವಾಗಿ ರಾ.ಸ್ವ.ಸೇ.ಸಂ.ದ ಬುಡಮೇಲು ಸಂಚಿನ ಪ್ರತಿ ಸಂಘಟಿತ ಹೋರಾಟಕ್ಕೆ ಬದ್ಧತೆ ತೋರಬೇಕೆಂದು ಆಗ್ರಹಿಸುತ್ತದೆ.

– ಕೆ.ಎಲ್.ಅಶೋಕ್, ಪ್ರಧಾನ ಕಾರ್ಯದರ್ಶಿ ಮತ್ತು ಕಾರ್ಯದರ್ಶಿ ಮಂಡಳಿ,

ಕರ್ನಾಟಕ ಕೋಮು ಸೌಹಾರ್ದ ವೇದಿಕೆ, ಕೇಂದ್ರ ಸಮಿತಿ.

ದಕ್ಷಿಣ ಕನ್ನಡದಲ್ಲಿ ನಡೆಯುತ್ತಿರುವ ವಿದ್ಯಮಾ ನಗಳ ಬಗ್ಗೆ ಪೊಲೀಸ್ ಇಲಾಖೆ ಎಚ್ಚೆತ್ತುಕೊಳ್ಳಬೇಕಿದ ೆ!

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂದಿನ ಮಾರ್ಚ್,1 ರಂದು ಬೃಹತ್ ಹಿಂದೂ ಸಮಾಜೋತ್ಸವ ನಡೆಯಲಿದೆ ಎಂಬುದು ಈಗಾಗಲೇ ಸುದ್ದಿಯಲ್ಲಿದೆ.ನಿನ್ನೆ ಸುರತ್ಕಲ್ ನ ಕಾಲೇಜೊಂದರ ವಿದ್ಯಾರ್ಥಿನಿಯರ ಜೊತೆ ವಿದ್ಯಾರ್ಥಿಯೊಬ್ಬ ಮಲಗಿಕೊಂಡಂತಿರುವ ಚಿತ್ರ ಫೇಸ್ ಬುಕ್ ಮತ್ತು ವ್ಯಾಟ್ಸಪ್ ಗಳಲ್ಲಿ ಅಚಾನಕ್ ಆಗಿ ಮೂಡಿಬಂದು ಕೆಲವು ಸ್ಥಳೀಯ ಮಾಧ್ಯಮಗಳಲ್ಲೂ ಸುದ್ದಿಯಾಗಿ ಸೌಹಾರ್ದದ ವಾತಾವರಣವನ್ನು ಕಲುಷಿತಗೊಳಿಸಲು ಯತ್ನ ನಡೆದಂತಿದೆ. ಇನ್ನೊಂದು ಸುದ್ದಿಯ ಪ್ರಕಾರ ಻ಅಲ್ಲಿನ ಬೀಚ್ನಲ್ಲಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆದಿದೆಯಂತೆ.
ಒಟ್ಟಾರೆ ಕರಾವಳಿಯಲ್ಲಿ ಮತ್ತೆ ಕೋಮು ಹಿಂಸೆಗಳನ್ನು ಹುಟ್ಟುಹಾಕುವ ಸಂಚು ನಡೆಯತ್ತಿದೆ ಎನ್ನುವದು ಮೇಲ್ನೋಟಕ್ಕೆ ಕಾಣಿಸಿಕೊಳ್ಳಲಾರಂಭಿಸಿವೆ.
ಸುರತ್ಕಲ್ ನ ಕಾಲೇಜಿನ ಪ್ರಕರಣದ ಹಿಂದಿರುವ ಶಕ್ತಿ ಮತ್ತು ವ್ಯಕ್ತಿಗಳನ್ನು ಪತ್ತೆಹಚ್ಚಿ ಇಡೀ ಪ್ರಕರಣದ ವಾಸ್ತಾವಾಂಶಗಳನ್ನು ಬಯಲಿಗೆಳೆಎದು ತಪ್ಪಿತಸ್ತರನ್ನು ಶಿಕ್ಷೆಗೆ ಗುರಿಯಾಗಿಸಬೇಕು. ಹಿಂದೂ ಸಮಾಜೋತ್ಸವ ಸಾಧ್ಯವಾದಷ್ಟು ಕತ್ತಲಾಗುವ ಮೊದಲೇ ಮುಗಿದು ಅದರಲ್ಲಿ ಭಾಗಿಗಳಾಗುವವರು ಮನೆ ಸೇರಿಕೊಳ್ಳುವಂತೆ ನೋಡಿಕೊಳ್ಳಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆಯನ್ನು ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಆಗ್ರಹಿಸುತ್ತದೆ. ಜಿಲ್ಲಾಡಳಿತವೂ ಈ ಬಗ್ಗೆ ಗಮನ ಹರಿಸಬೇಕಿದೆ.

ಶಾಂತಿ ಕಾಪಾಡಲು ಮತ್ತು ಕೋಮು ಗಲಭೆಗೆ ಕಾರಣರಾದ ವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಆಗ್ರಹಿಸಿ ಮನವಿ

Appeal.pdf
Appeal.docx