ತೀಸ್ತಾ ಸೆಟಲ್‌ವಾಡ್ ಮೇಲೆ ರಾಜಕೀಯ ದುರುದ್ದೇಶ ದಿಂದ ನಡೆಸಲಾಗುತ್ತಿರುವ ಸಿ.ಬಿ.ಐ. ದಾಳಿಯನ್ನು ಖಂಡಿ ಸೋಣ. ಸಂವಿಧಾನಿಕ ಸಂಸ್ಥೆಗಳ ಮಾನ-ಸಂವಿಧಾನಿಕ ನ್ಯಾಯಕ ್ಕಾಗಿ ದನಿ ಎತ್ತೋಣ.

ಕರ್ನಾಟಕ ಕೋಮು ಸೌಹಾರ್ದ ವೇದಿಕೆ, ಉಡುಪಿ ಜಿಲ್ಲಾ ಘಟಕ

ತೀಸ್ತಾ ಸೆಟಲ್‌ವಾಡ್ ಮೇಲೆ ರಾಜಕೀಯ ದುರುದ್ದೇಶದಿಂದ ನಡೆಸಲಾಗುತ್ತಿರುವ ಸಿ.ಬಿ.ಐ. ದಾಳಿಯನ್ನು ಖಂಡಿಸೋಣ.

ಸಂವಿಧಾನಿಕ ಸಂಸ್ಥೆಗಳ ಮಾನ-ಸಂವಿಧಾನಿಕ ನ್ಯಾಯಕ್ಕಾಗಿ ದನಿ ಎತ್ತೋಣ.

ಮಾನ್ಯರೇ-

ತೀಸ್ತಾ ಸೆಟಲ್‌ವಾಡ್ ೧೯೯೩ರಲ್ಲಿ ಸಬ್‌ರಂಗ್ ಕಮ್ಯುನಿಕೇಶನ್ಸ್ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಆಗಷ್ಟೇ ೧೯೯೨-೯೩ರ ಮುಂಬೈ ಕೋಮುಹಿಂಸೆ ನಡೆದ್ದಿತ್ತು. ನಮ್ಮ ಪ್ರಭುತ್ವ ಹಾಗು ಕಾನೂನು ಪಾಲಕರು ಕೈಕಟ್ಟಿ ಕೂತು ಹಿಂಸೆಗೆ ಈಡದ ಪ್ರಜೆಗಳಿಗೆ ನ್ಯಾಯ ಹಾಗು ರಕ್ಷಣೆ ಇರದಂತಹ ವಾತಾವರಣ ನಿರ್ಮಾಣವಾಗುತ್ತಿರುವುದು ಅವರನ್ನು ದಂಗು ಹೊಡೆಸಿತ್ತು. ಹಿಂಸೆ ನಡೆಸುತ್ತಿರುವವರ ಬೆನ್ನಿಗೆ ನಿಂತಿರುವ ಅಧಿಕಾರಸ್ಥರ ಮುಖಗಳನ್ನು ಬಯಲಿಗೆಳೆಯುವುದು ಮತ್ತು ಹಿಂಸೆಗೆ ತುತ್ತಾದ ನಾಗರಿಕರಿಗೆ ನ್ಯಾಯ ದೊರಕಿಸಿಕೊಡುವ ಮಾನವ ಹಕ್ಕು ಕಾರ‍್ಯಗಳಲ್ಲಿ ಸಬ್‌ರಂಗ್ ಕಮ್ಯುನಿಕೇಶನ್ಸ್ ಸಕ್ರಿಯವಾಗಿ ತೊಡಗಿಕೊಂಡಿತು. ೧೯೯೨-೯೩ರ ಮುಂಬೈ ಕೋಮುಹಿಂಸೆಯ ವಿಚಾರಣೆ ನಡೆಸಿದ ಶ್ರೀಕೃಷ್ಣ ಆಯೋಗದ ವರದಿಯನ್ನು ಸಬ್‌ರಂಗ್ ಕಮ್ಯುನಿಕೇಶನ್ಸ್ ಪ್ರಕಟಿಸಿ ಪ್ರಸಾರ ಮಾಡಿತು. ಆ ಮೂಲಕ ನಾಗರಿಕ ನ್ಯಾಯ, ಸಂವಿಧಾನಿಕ ಹಕ್ಕುಗಳಿಗಾಗಿ ಎಂಥ ಅಧಿಕಾರಶಕ್ತಿಯ ಎದಿರು ಸಾಮಾನ್ಯ ನಾಗರಿಕರು ಹೋರಾಡಲು ಸಾಧ್ಯವಿದೆ ಎನ್ನುವ ಚಾರಿತ್ರಿಕವಾದ ಪ್ರಜ್ಞೆಯನ್ನು ತೀಸ್ತಾ ಅವರ ಸಂಸ್ಥೆ ಬಿತ್ತಲು ಶುರುಮಾಡಿತು. ಇಂತಹ ಕಾರ‍್ಯಕ್ರಮದ ಭಾಗವಾಗಿ, ಜಾತಿ ಸಮಾನತೆ ಹಾಗು ಕೋಮುಸೌಹಾರ್ದದ ಪ್ರಜ್ಞೆಯನ್ನು ಸಮಾಜದಲ್ಲಿ ಪ್ರಸಾರಿಸು ಉದ್ದೇಶವುಳ್ಳ ಖೋಜ್ ಎನ್ನುವ ಕಾರ‍್ಯಕ್ರಮವನ್ನೂ ಸಬ್‌ರಂಗ್ ಕಮ್ಯುನಿಕೇಶನ್ಸ್ ಕೈಗೆತ್ತಿಕೊಂಡಿತು.

ಈ ರೀತಿಯ ನಾಗರಿಕ ನ್ಯಾಯ, ಹಕ್ಕುಗಳ ಕುರಿತ ಬದ್ಧತೆಯಿಂದಲೇ, ತೀಸ್ತಾ ಸೆಟಲ್‌ವಾಡ್ ಹಾಗು ಅವರ ಸಂಸ್ಥೆಯ ಬೆಂಬಲಿಗರು ೨೦೦೨ರ ಗುಜರಾತ್ ಕೋಮುಹಿಂಸೆಯ ವಿದ್ಯಮಾನಗಳಲ್ಲಿ ಸಕ್ರಿಯ ಮಧ್ಯಪ್ರವೇಶ ಮಾಡಿದರು. ಎಂದಿನಂತೆ, ಕೋಮುಹಿಂಸೆ ನಡೆಸಿದ ಶಕ್ತಿಗಳು ಮತ್ತು ಅವರಿಗೆ ಇರುವ ಅಧಿಕಾರಸ್ಥ ಬೆಂಬಲ, ಹಿಂಸೆಗೆ ತುತ್ತಾದವರ ಬದುಕಿನ ದಾರುಣತೆ ಹಾಗು ನಾಗರಿಕರಿಗೆ ನ್ಯಾಯ- ರಕ್ಷಣೆಗಳನ್ನು ಒದಗಿಸುವಲ್ಲಿ ಜಾಣ ನಿಷ್ಕ್ರಿಯತೆ ಮಾರ್ಗ ಅನುಸರಿಸುತ್ತಿರುವ ಸಾಂವಿಧಾನಿಕ ಸಂಸ್ಥೆಗಳ ಅಪರಾಧಗಳನ್ನು ಬಯಲುಗೊಳಿಸುವ ಗುಜರಾತ್ ನರಮೇಧವೆಂಬ ದಾಖಲೆಯನ್ನು ಪ್ರಕಟಿಸಿದರು. ಈ ಸಾರಿ, ಅಷ್ಟಕ್ಕೆ ನಿಲ್ಲದೆ, ಹಿಂಸೆ ನಡೆಸಿದವರಿಗೆ ಶಿಕ್ಷೆ ಮತ್ತು ಹಿಂಸೆಗೆ ತುತ್ತಾದವರಿಗೆ ನ್ಯಾಯವನ್ನು ದೊರಕಿಸಿಕೊಡುವ ಸಲುವಾಗಿ ಸಕ್ರಿಯ ಕಾನೂನು ಹೋರಾಟ ನಡೆಸಲು CITIZENS FOR JUSTICE AND PEACE (CJP) ಎಂಬ ಸಂಸ್ಥೆ ಕಟ್ಟಿದರು. CJP ಯ ಸಕ್ರಿಯ ಹೋರಾಟದ ಫಲವಾಗಿ, ಭಾರತದ ಸರ್ವೋಚ್ಛ ನ್ಯಾಯಾಲಯವು ಗುಜರಾತ್ ಹತ್ಯಾಕಾಂಡದ ೫೭ ಪ್ರಮುಖ ಕೇಸುಗಳನ್ನು, ಗುಜರಾತಿನ ನ್ಯಾಯಾಲಯಗಳ ಕಕ್ಷೆಯಿಂದ ಮುಕ್ತಗೊಳಿಸಿ, ತನ್ನ ಉಸ್ತುವಾರಿಯಲ್ಲಿ ಮುಂಬೈಯ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆಸುವ ಆದೇಶ ಹೊರಡಿಸಿತು. ಈಗಾಗಲೇ ೨೭ ಕೇಸುಗಳಲ್ಲಿ ಅಪರಾಧಿಗಳಿಗೆ ಶಿಕ್ಷೆ ವಿಧಿಸಲಾಗಿದೆ-ಇದು ನಾಡಿನ ದಶಕಗಳ ಕೋಮುಹಿಂಸೆಯ ಚರಿತ್ರೆಯಲ್ಲಿ ಅಭೂತಪೂರ್ವವಾದದ್ದು. ಈ ಪಟ್ಟಿಯಲ್ಲಿ ಎರಡು ಪ್ರಮುಖ ಕೇಸುಗಳಿವೆ. ಒಂದನೇಯದು: ನರೋಡ ಪಟಿಯಾ ಹತ್ಯಾಕಾಂಡ; ಅದರಲ್ಲಿ ಅಂದಿನ ನರೇಂದ್ರ ಮೋದಿ ಸಂಪುಟದಲ್ಲಿ ಸಚಿವೆಯಾಗಿದ್ದ ಮಾಯ ಕೊಂಡ್ನಾನಿ ಮುಖ್ಯ ಆರೋಪಿಯಾಗಿದ್ದರು; ಅವರ ಅಪರಾಧ ಸಾಬೀತಾಗಿ ಅವರಿಗೆ ಜೀವಾವಧಿ ಸೆರೆವಾಸದ ಶಿಕ್ಷೆ ವಿಧಿಸಲಾಯಿತು. ಎರಡನೆಯದು: ಕಾಂಗ್ರಸ್ಸಿನ ಮಾಜಿ ಸಂಸದರಾದ ಎಹ್ಸಾನ್ ಜಾಫ್ರಿಯವರು ವಾಸವಾಗಿದ್ದ ಗುಲ್ಬಾರ್ಗ್ ಸೊಸೈಟಿ ವಸತಿ ಸಮುಚ್ಚಯದಲ್ಲಿ ನಡೆದ ಹಿಂಸೆ; ಈ ಘಟನೆಯಲ್ಲಿ ಎಹ್ಸಾನ್ ಜಾಫ್ರಿಯವರೂ ಸೇರಿದಂತೆ ೫೯ ಜನರನ್ನು ಸಜೀವ ದಹನಗೊಳಿಸುವ ಅಪರಾಧ ಜರುಗಿತ್ತು. ಈ ಘಟನೆಯಲ್ಲಿ, ಅಂದು ಗುಜರಾತಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಕೂಡ ಪಾತ್ರವಹಿಸಿದ್ದಾರೆ, ಅವರನ್ನೂ ವಿಚಾರಣೆಯ ವ್ಯಾಪ್ತಿಗೆ ತರಬೇಕೆಂಬ ಆರೋಪವಿದೆ. ಸರ್ವೋಚ್ಛ ನ್ಯಾಯಾಲಯ ನೇಮಿಸಿದ್ದ ವಿಶೇಷ ತನಿಖಾ ತಂಡ ಮೋದಿಯವರನ್ನು ಈ ಆರೋಪದಿಂದ ಮುಕ್ತಗೊಳಿಸಿದ್ದರೂ, ಈ ಕೇಸುಗಳ ಸಂಬಂಧ ಸರ್ವೋಚ್ಛ ನ್ಯಾಯಲಯ ನೇಮಿಸಿರುವ ವಿಶೇಷ ಅಧೀಕ್ಷಕರು ತಮ್ಮ ಭಿನ್ನಮತವನ್ನು ದಾಖಲಿಸಿದ್ದಾರೆ; ಈ ಅಭಿಪ್ರಾಯ ಹಾಗು ಲಭ್ಯವಿರುವ ಸಾಕ್ಷ್ಯಾಧಾರಗಳ ಆಸರೆಯಲ್ಲಿ ಎಹ್ಸಾನ್ ಜಾಫ್ರಿಯವರ ಪತ್ನಿ ಝಕೀಯ ಜಾಫ್ರಿ ಅಎP ಯ ಸಹಯೋಗದೊಂದಿಗೆ ಸರ್ವೋಚ್ಛ ನ್ಯಾಯಾಲಯದಲ್ಲಿ ಹೋರಾಟ ಮುಂದುವರೆಸಿದ್ದಾರೆ-ಕಾನೂನಿನ ದೃಷ್ಟಿಯಲ್ಲಿ ಮೋದಿ ಇನ್ನೂ ಆರೋಪಮುಕ್ತರಾಗಿಲ್ಲ.

೨೦೧೪ರ ಮೇ ತಿಂಗಳಲ್ಲಿ ನರೇಂದ್ರ ಮೋದಿ ದೇಶದ ಪ್ರಧಾನಿಯಾದ ನಂತರ, ಈ ಕೇಸುಗಳಲ್ಲಿ ವಿಚಿತ್ರ ತಿರುವುಗಳು ಪ್ರಾರಂಭವಾಗಿವೆ. ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಮಾಯ ಕೊಂಡ್ನಾನಿಯವರಿಗೆ ಜಾಮೀನು ನೀಡಿ, ಸೆರೆವಾಸದಿಂದ ಮುಕ್ತ ಮಾಡಲಾಗಿದೆ ಮಾತ್ರವಲ್ಲ, ಅವರನ್ನು ಶಿಕ್ಷೆಯಿಂದ ಮುಕ್ತಗೊಳಿಸುವ ಯತ್ನಗಳನ್ನು ಗುಜರಾತಿನ ಸರಕಾರ ನಡೆಸುತ್ತಿದೆ; CJP ಈ ಕಾನೂನಿನ ವಿಲಕ್ಷಣತೆಯ ವಿರುದ್ಧ ತನ್ನ ನ್ಯಾಯಾಂಗ ಹೋರಾಟ ಮುಂದುವರೆಸಿದೆ. ಪ್ರಭುತ್ವದ ಆಯಾಕಟ್ಟಿನ ಸ್ಥಾನದಲ್ಲಿರುವ ಅಧಿಕಾರಸ್ಥರ ವಿರುದ್ಧವೇ ರಾಜಿರಹಿತ ಕಾನೂನಿ ಹೋರಾಟವನ್ನು ಜ್ಯಾರಿಯಲ್ಲಿಟ್ಟಿರುವ ಮೂಲಕ ಅವರಿಗೆ ಮಗ್ಗುಲ ಮುಳ್ಳಾಗಿರುವ ತೀಸ್ತಾ ಸೆಟಲ್‌ವಾಡ್ ಮತ್ತವರ ಸಂಸ್ಥೆಗಳನ್ನು ಬಗ್ಗುಬಡಿಯಲು ಅನೇಕ ಪ್ರಯತ್ನಗಳು ನಡೆಯುತ್ತಿವೆ. ಅದರಲ್ಲಿ ಒಂದು: ಗುಲ್ಬಾರ್ಗ್ ಸೊಸೈಟಿಯ ಸಂತ್ರಸ್ಥರಿಂದ ಕಾನೂನು ಹೊರಾಟಕ್ಕೆಂದು ಹಣವೆತ್ತಿ, ತೀಸ್ತಾ ಅದನ್ನು ವೈಯಕ್ತಿಕ ಐಷರಾಮಕ್ಕೆ ದುರುಪಯೋಗಪಡಿಸಿಕೊಂಡಿದ್ದಾರೆ ಎನ್ನುವುದು. ಈ ಆರೋಪದ ನೆಪದಲ್ಲಿ ತೀಸ್ತಾ ಹಾಗು ಅವರ ಪತಿ ಜಾವೇದ್ ಆನಂದರನ್ನು ಪೋಲಿಸು ಕಸ್ಟಡಿಗೆ ತೆಗೆದುಕೊಂಡು, ಜೈಲಲ್ಲಿ ಹಾಕಿ ವಿಚಾರಣೆ ನಡೆಸುತ್ತೇವೆಂದು ಗುಜರಾತಿನ ಪೊಲಿಸರು ಪಟ್ಟು ಹಿಡಿದಿದ್ದರು! ತೀಸ್ತಾ ಇದರ ವಿರುದ್ಧ ಸರ್ವೋಚ್ಛ ನ್ಯಾಯಾಲಯಕ್ಕೆ ಹೋದರು; ನ್ಯಾಯಾಲಯವು ಗುಜರಾತ್ ಪೋಲಿಸರಿಗೆ ಛೀಮಾರಿ ಹಾಕಿ, ವಿಚಾರಣೆಗೆ ಬಂಧನದ ಅಗತ್ಯವಿಲ್ಲ ಎಂದು ತೀರ್ಪಿತ್ತಿದೆ. ಈ ಮುಖಭಂಗವಾದ ಕೂಡಲೇ, ಗುಜರಾತಿನ ಗೃಹ ಸಚಿವಾಲಯವು ಕೇಂದ್ರ ಗೃಹ ಸಚಿವಾಲಯಕ್ಕೆ ತೀಸ್ತಾ ಮತ್ತು ಸಬ್‌ರಂಗ್ ಕಮ್ಯುನಿಕೇಶನ್ಸ್ ಸಂಸ್ಥೆ ವಿರುದ್ಧ ವಿದೇಶಿ ದೇಣಿಗೆ ಕಾಯ್ದೆಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ದೂರಿತ್ತಿತ್ತು. ಕೇಂದ್ರ ಸಚಿವಾಲಯದ FOREIGN CONTRIBUTION REGULATION (FCR) ವಿಭಾಗವು ಕೂಡಲೆ ತನಿಖೆ ಶುರುವು ಮಾಡಿತು. ತೀಸ್ತಾ ತಮ್ಮ ಸಂಸ್ಥೆಯ ವ್ಯವಹಾರದ ಸಾವಿರಾರು ಪುಟಗಳ ಲೆಖ್ಖಶೋಧಿತ ದಾಖಲೆಗಳನ್ನು ತನಿಖೆಗೆ ಒಪ್ಪಿಸಿದ್ದಾರೆ. ಅಷ್ಟಾಗಿಯೂ, ಯಾವುದೇ ಸಮಜಾಯಿಷಿ ನೀಡದೆ, ಕೇಂದ್ರದ ಗೃಹ ಸಚಿವಾಲಯವು ಈ ವಿಚಾರವನ್ನು ಸಿ.ಬಿ.ಐ. ತನಿಖೆಗೆ ಒಪ್ಪಿಸಿದೆ! ಸಿ.ಬಿ.ಐ. FIR ದಾಖಲಿಸಿ, ಒಂದು ವಾರದೊಳಗೆ ಕಾರ‍್ಯಾಚರಣೆ ಶುರುವಿಟ್ಟುಕೊಂಡಿದೆ!. ತೀಸ್ತಾ ಹಾಗು ಅವರ ಸಂಸ್ಥೆಗಳಿಗೆ ಸೇರಿದ ಬ್ಯಾಂಕು ಖಾತೆಗಳಿಗೆ ದಿಗ್ಭಂದನ ವಿಧಿಸಿದೆ; ದಿನಾಂಕ ೧೪ ಜುಲೈ, ೨೦೧೫ರ ಮಂಗಳವಾರ ಮುಂಬೈನ ಸಬ್‌ರಂಗ್ ಕಮ್ಯುನಿಕೇಶನ್ಸ್ ಕಛೇರಿಯ ಮೇಲೆ ದಾಳಿ ನಡೆಸಿದೆ!

ಕೇಂದ್ರ ಸರಕಾರದ ಈ ಕ್ರಮ, ಅಧಿಕಾರಸ್ಥರ ವಿರುದ್ಧ ರಾಜಿರಹಿತವಾಗಿ ನ್ಯಾಯಂಗ ಹೋರಾಟ ನಡೆಸುತ್ತಿರುವ ತೀಸ್ತಾ ಹಾಗು ಅವರ ಸಂಸ್ಥೆಗಳ ಬೆನ್ನೆಲುಬು ಮುರಿದು ದಮನಿಸುವ, ದುರುದ್ದೇಶ ಹೊಂದಿರುವುದನ್ನು ನಿಚ್ಚಳವಾಗಿ ತೋರುತ್ತಿದೆ. ಇದು ಅಪರಾಧಿಗಳ ಹಿತ ಕಾಯಲೂ, ನ್ಯಾಯಯುತ ಹೋರಾಟವನ್ನು ದಮನಿಸಲೂ, ಸಾಂವಿಧಾನಿಕ ಸಂಸ್ಥೆಗಳನ್ನು ಬಳಸಿಕೊಳ್ಳುವ ಹೀನ ಕೃತ್ಯವಾಗಿದೆ. ಇದು ಹೀಗೆಮುಂದುವರೆದರೆ, ಈ ದೇಶದಲ್ಲಿ ಸಂವಿಧಾನ, ಕಾನೂನಿನ ನಿಷ್ಪಕ್ಷಪಾತಿ ಆಳ್ವಿಕೆ, ನಾಗರಿಕರ ನ್ಯಾಯಿಕ ಹಕ್ಕುಗಳು ನಾಶವಾಗಿ, ಭೀಕರ ಸಾಂವಿಧಾನಿಕ ಬಿಕ್ಕಟ್ಟಿಗೆ ದಾರಿ ಮಾಡಿಕೊಡುತ್ತದೆ. ದೇಶದ ರಾಷ್ಟ್ರಪತಿಗಳು ಈ ವಿದ್ಯಮಾನಗಳನ್ನು ತುರ್ತಾಗಿ ಗಮನಕ್ಕೆ ತಂದುಕೊಂಡು, ಶೀಘ್ರ ಮಧ್ಯಪ್ರವೇಶಿಸಿ ನಾಗರಿಕ ನ್ಯಾಯ ಮತ್ತು ಹಕ್ಕುಗಳನ್ನು ಕಾಪಾಡಬೇಕೆಂದು ವೇದಿಕೆಯು ಒತ್ತಾಯಿಸುತ್ತದೆ.

***** ***** ********* ****** ***** ******* ****** ****** ****** ******

ಜಿ.ರಾಜಶೇಖರ್ (ಅಧ್ಯಕ್ಷರು) ಗೋಪಾಲ ಬಿ.ಶೆಟ್ಟಿ (ಗೌರವಾಧ್ಯಕ್ಷರು) ಕೆ.ಫಣಿರಾಜ್ ,ಜಯನ್ ಮಲ್ಪೆ, ರೆ.ಫಾ.ವಿಲಿಯಂ ಮಾರ್ಟೀಸ್, ಹಯವದನ ಮೂಡುಸಗ್ರಿ, ಡಾ.ವನಜಾಕ್ಷಿ , ಶಶಿಧರ ಹೆಮ್ಮಾಡಿ (ಉಪಾಧ್ಯಕ್ಷರುಗಳು) ಡಿ.ಎಸ್.ಬೆಂಗ್ರೆ (ಕಾರ್ಯದರ್ಶಿ) ಸಿರಿಲ್ ಮಥಾಯಿಸ್, ವಾಸು ನೇಜಾರು, ಹುಸೇನ್ ಕೋಡಿಬೆಂಗ್ರೆ (ಜೊತೆ ಕಾರ್ಯದರ್ಶಿಗಳು) ಮನ್ ದೀಪ್ ಶೆಟ್ಟಿ (ಖಜಾಂಚಿ) ಮತ್ತು ಕಾರ್ಯಕಾರಿ ಸಮಿತಿ,ಉಡುಪಿ ಜಿಲ್ಲಾ ಘಟಕ

Press Statement – Support Teeta.docx

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s