ಅತ್ತಾವರದಲ್ಲಿ ಮೊನ್ನೆ ನಡೆದ ಅನೈತಿಕ ಗೂಂಡಾಯಿಸ ಂನ್ನು ಖಂಡಿಸಿ ನಾಳೆ (ಅಗಸ್ಟ್,28, ಶುಕ್ರವಾರ ) ಉಡುಪಿಯ ಲ್ಲಿ ಪ್ರತಿಭಟನೆ

ಮಂಗಳೂರಿನ ಅತ್ತಾವರದಲ್ಲಿ ಮೊನ್ನೆ ನಡೆದ ಅನೈತಿಕ ಗೂಂಡಾಯಿಸಂನ್ನು ಖಂಡಿಸಿ ನಾಳೆ (ಅಗಸ್ಟ್,28, ಶುಕ್ರವಾರ ) ಉಡುಪಿಯಲ್ಲಿ ಪ್ರತಿಭಟನೆಉಡುಪಿ : ಮಂಗಳೂರಿನ ಅತ್ತಾವರದಲ್ಲಿ ಮೊನ್ನೆ ನಡೆದ ಅನೈತಿಕ ಗೂಂಡಾಯಿಸಂನ್ನು ಖಂಡಿಸಿ ನಾಳೆ (ಅಗಸ್ಟ್,28, ಶುಕ್ರವಾರ ) ಸಂಜೆ 5.30 ಕ್ಕೆ ಉಡುಪಿಯ ಕ್ಲಾಕ್ ಟವರ್ ಬಳಿ ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಮತ್ತು ಸಹಭಾಗಿ ಸಂಘಟನೆಗಳ ವತಿಯಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.
ಅತ್ತಾವರದಲ್ಲಿ ಕಾನೂನು ಕೈಗೆತ್ತಿಕೊಂಡು ವರ್ತಿಸಿದ ಹಿಂದೂತ್ವ ಸಂಘಟನೆಯ ಮಂದಿಯ ಮಾತುಗಳು ಮತ್ತು ಇಡೀ ಕೃತ್ಯದ ವಿವರ ಈಗಾಗಲೇ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಸಾರ್ವಜನಿಕರ ಗಮನಕ್ಕೆ ಬಂದಿದ್ದರೂ, ಯುವತಿಯಿಂದ ಸುಳ್ಳು ದೂರು ಕೊಡಿಸುವ ಮೂಲಕ ತಾವೇ ಕೈಗೆತ್ತಿಕೊಂಡ ಕಾನೂನಿನ ಶಿಕ್ಷೆಯಿಂದ ಪಾರಾಗಲು ಆರೋಪಿಗಿಳುಿಬ ಯತ್ನಿಸುತ್ತಿದ್ದಾರೆ. ಹಾಡ ಹಗಲೇ ಜನ ನಿಬಿಡ ಪ್ರದೇಶದಲ್ಲಿ ಇಂತಹ ಕೃತ್ಯ ನಡೆದದಿದ್ದರೂ ಪೊಲೀಸ್ಇಲಾಖೆ ಸರಿಯಾಗಿ ತನಿಖೆ ನಡೆಸುತ್ತಿಲ್ಲ. ಸರಕಾರ ಬದಲಾಗಿದೆ ಆದರೇ, ಇಂತಹ ಅಮಾನವೀಯ – ಹೀನ ಕೃತ್ಯಗಳು ಜರಗುವುದು ನಿಂತಿಲ್ಲ. ಇಂತಹ ಹಲವು ಕೃತ್ಯಗಳು ಪ್ರತಿನಿತ್ಯ ಜರಗುತ್ತಿದ್ದರೂ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಸರಿಯದ ಕ್ರಮಗಳನ್ನು ಜರಗಿಸುತ್ತಿಲ್ಲ. ಸರಕಾರವೂ ಇದರಬಗ್ಗೆ ಕಣ್ಣು ತೆರೆದಿಲ್ಲ. ಇವೆಲ್ಲವನ್ನೂ ಖಂಡಿಸುವುದರ ಜೊತೆಗೆ ಸರಕಾರವನ್ನು ಎಚ್ಚರಿಸಲು ಈ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.
ಮಾನವೀಯ ಮೌಲ್ಯಗಳನ್ನು ಸಮಾಜದಲ್ಲಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ, ಕಾನೂನು ಕೈಗೆತ್ತಿಕೊಳ್ಳುವ ನಿಟ್ಟಿನಲ್ಲಿ ನಡೆಯುವ ಈ ಪ್ರತಿಭಟನೆಯಲ್ಲಿ ಪ್ರಜ್ಞಾವಂತ ನಾಗರಿಕರು ಭಾಗವಹಿಸಬೇಕಾಗಿ ಕೋರಲಾಗಿದೆ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s