ಬಾಬಾ ಬುಡಾನ್ ಗಿರಿ: ರಾಜ್ಯ ಸರ್ಕಾರ ನಿರ್ಣಯಿಸಲಿ

ಬಾಬಾ ಬುಡಾನ್ ಗಿರಿ: ರಾಜ್ಯ ಸರ್ಕಾರ ನಿರ್ಣಯಿಸಲಿ
Sep 4 2015 6:50AM

EmailPrintFontSizeFontSize

ನವದೆಹಲಿ: ಬಾಬಾ ಬುಡಾನ್ ಗಿರಿ ವಿವಾದವನ್ನು ರಾಜ್ಯ ಸರ್ಕಾರವೇ ಬಗೆಹರಿಸಿಕೊಳ್ಳಬೇಕೆಂದು ಸುಪ್ರೀಂ ಕೋರ್ಟ್ ಕರ್ನಾಟಕ ಸರ್ಕಾರಕ್ಕೆ ಸಲಹೆ ನೀಡಿದೆ. ಬಾಬಾಬುಡಾನ್ ಗಿರಿಯನ್ನು ಇನ್ನೊಂದು ಅಯೋಧ್ಯೆ ಮಾಡುತ್ತೇವೆ ಎಂದು ರಾದ್ಧಾಂತ ಮಾಡಿದ್ದ ಸಂಘಪರಿವಾರಕ್ಕೆ ಈ ತೀರ್ಪು ನಿರಾಸೆ ಉಂಟುಮಾಡಿದ್ದರೆ ಬಾಬಾ ಬುಡಾನ್ ಗಿರಿಯ ಪರಂಪರೆಯನ್ನು ಎತ್ತಿಹಿಡಿಯಲು ಶ್ರಮಿಸಿದ್ದ ಕರ್ನಾಟಕದ ಸೌಹಾರ್ದ ಪ್ರಿಯರಿಗೆ ತೀರ್ಪು ಸಮಾಧಾನ ತಂದಿದೆ. ಇದೀಗ ರಾಜ್ಯ ಸರ್ಕಾರ ಗುರು ದತ್ತಾತ್ರೇಯ ಬಾಬಾಬುಡಾನ್ ಸ್ವಾಮಿ ದರ್ಗಾದ ಸೌಹಾರ್ದ ಪರಂಪರೆಯನ್ನು ಉಳಿಸಿಕೊಳ್ಳುವಂತಹ ನಿರ್ಣಯ ಕೈಗೊಳ್ಳುತ್ತದೆ ಎಂದು ನಿರೀಕ್ಷಿಸಲಾಗಿದೆ.
2015_9$advtcontent104_Sep_2015_064616580.jpg
ಕಳೆದ ಕೆಲವು ಶತಮಾನಗಳಿಂದಲೂ ಹಿಂದೂ ಮುಸ್ಲಿಮರ ಏಕತೆ ಮತ್ತು ಸೌಹಾರ್ದತೆಯ ಸಂಗಮ ಕ್ಷೇತ್ರವಾಗಿದ್ದ ಬಾಬಾಬುಡಾನ್ ಗಿರಿಯಲ್ಲಿರುವ ದರ್ಗಾವನ್ನು ಕೇಂದ್ರವಾಗಿರಿಸಿಕೊಂಡು ಕರ್ನಾಟಕದ ಬಿಜೆಪಿ ಮತ್ತು ಸಂಘಪರಿವಾರ ಬೃಹತ್ ವಿವಾದ ಸೃಷ್ಟಿಸುವ ಹುನ್ನಾರ ನಡೆಸಿತ್ತು. ಮೂಲತಃ ಇದು ದತ್ತಪೀಠ ವಿನಃ ದರ್ಗಾ ಅಲ್ಲ, ಇಲ್ಲಿ ಹಿಂದೂ ವೈದಿಕ ಪದ್ದತಿಯ ಪೂಜೆ ಮತ್ತು ಧಾರ್ಮಿಕ ಆಚರಣೆಗಳಿಗೆ ಅವಕಾಶ ನೀಡಬೆಕೆಂದು ಹೋರಾಟ ನಡೆಸಿತ್ತು. ಬಾಬಾ ಬುಡಾನ್ ಗಿರಿಯನ್ನು ದಕ್ಷಿಣ ಭಾರತದ ಅಯೋಧೆಯನ್ನಾಗಿ ಮಾಡುತ್ತೇವೆ ಎಂದೂ ಸಹ ಸಂಘಪರಿವಾರ ಘೋಷಿಸಿತ್ತು. ದರ್ಗಾದ ಒಳಗೆ ಅತಿಕ್ರಮ ಪ್ರವೇಶ ಮಾಡಿ ವೈದಿಕ ಪದ್ದತಿಯ ಹೋಮ ಹವನಗಳನ್ನು ಸಹ ಬಾಬಾಬುಡಾನ್ ಗಿರಿ ಪರಿಸರದಲ್ಲಿ ಮಾಡಿತ್ತು. ವಿವಾದವನ್ನು ಇನ್ನಷ್ಟು ದೊಡ್ಡದಾಗಿಸುವ ಸಲುವಾಗಿ ಚಿಕ್ಕಮಗಳೂರಿನಲ್ಲಿ ಬೃಹತ್ ಸಭೆಗಳನ್ನು ಸಹ ಆಯೋಜಿಸಿತ್ತು. ಮಾತ್ರವಲ್ಲ ಪ್ರತಿ ವರ್ಷ ಶೋಭಾಯಾತ್ರೆ, ದತ್ತ ಜಯಂತಿ, ದತ್ತಮಾಲೆ ಮುಂತಾದ ಅನೇಕ ಹೊಸ ಸಂಪ್ರದಾಯಗಳನ್ನು ಹುಟ್ಟುಹಾಕಿ ಪಾಲಿಸುತ್ತಾ ಬಂದಿತ್ತು. ಬಜರಂಗದಳ ಮತ್ತು ಶ್ರೀರಾಮ ಸೇನೆ ಈ ವಿವಾದದ ಬಿಸಿಯನ್ನು ಕಾಯ್ದುಕೊಂಡಿದ್ದವು.
2015_9$advtcontent104_Sep_2015_064815090.jpg
2015_9$advtcontent104_Sep_2015_064730537.jpg

2015_9$advtcontent104_Sep_2015_064708333.jpgಆದರೆ ಸಂಘಪರಿವಾರದ ಈ ನಿಲುವಿಗೆ ಸೆಡ್ಡುಹೊಡೆದು ನಿಂತ ಕರ್ನಾಟಕದ ಪ್ರಗತಿಪರರು ಬಾಬಾಬುಡಾನ್ ಗಿರಿಯ ಸೌಹಾರ್ದ ಪರಂಪರೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮಹತ್ವದ ಹೋರಾಟಕ್ಕೆ ಸಜ್ಜಾಗಿದ್ದರು. ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಎನ್ನುವ ಸಂಘಟನೆ ಹುಟ್ಟಿದ್ದೇ ಬಾಬಾಬುಡಾನ್ ಗಿರಿಯನ್ನು ಸಂಘಪರಿವಾರದ ಹುನ್ನಾರಗಳಿಂದ ರಕ್ಷಿಸಿಕೊಳ್ಳಬೇಕೆಂಬ ಇರಾದೆಯಿಂದ. ಕಳೆದ ಹತ್ತುವರ್ಷಗಳಲ್ಲಿ ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಬಾಬಾಬುಡಾನ್ ಗಿರಿಗೆ ಸಂಬಂಧಿಸಿದಂತೆ ಚಿಕ್ಕಮಗಳೂರಿನಲ್ಲಿ ಹಲವಾರು ಬೃಹತ್ ಸಮಾವೇಶಗಳನ್ನು ನಡೆಸಿತ್ತು. ನಾಡಿನ ಅನೇಕ ಹಿರಿಯ ಸಾಹಿತಿಗಳು, ಹೋರಾಟಗಾರರು, ಚಿಂತಕರನ್ನು ಒಂದೇ ವೇದಿಕೆಯಲ್ಲಿ ಸಂಘಟಿಸಿ ಬೃಹತ್ ಹೋರಾಟಕ್ಕೆ ಕಕೋಸೌವೇ ಚಾಲನೆ ನೀಡಿತ್ತು.

ಬಳಿಕ ಬಾಬಾ ಬುಡಾನ್ ಗಿರಿ ಹೋರಾಟ ಕೋರ್ಟ್ ಮೆಟ್ಟಿಲೇರಿದಾಗ ಸಿಟಿಝನ್ ಫಾರ್ ಪೀಸ್ ಎಂಡ್ ಜಸ್ಟೀಸ್ ಮತ್ತು ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಕರ್ನಾಟಕ ಹೈಕೋರ್ಟ್ ಈ ವಿವಾದದ ಕುರಿತು ನೀಡಿದ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದವು.

ಇದೀಗ ಬಾಬಾ ಬುಡನಗಿರಿ ವಿಚಾರದಲ್ಲಿ ಮಧ್ಯ ಪ್ರವೇಶಿಸಲು ಸುಪ್ರೀಂಕೋರ್ಟ್ ನಿರಾಕರಿಸಿದ್ದು ಧಾರ್ಮಿಕ ಆಚರಣೆ ಹೇಗಿರಬೇಕೆಂಬುದೂ ಸೇರಿದಂತೆ ವಿವಿಧ ಅಂಶಗಳನ್ನು ನಿರ್ಧರಿಸುವ ಜವಾಬ್ದಾರಿಯನ್ನು ಕರ್ನಾಟಕ ಸರ್ಕಾರದ ಹೆಗಲಿಗೆ ಹೊರಿಸಿದೆ. ರಾಜ್ಯ ಸರ್ಕಾರ ತನ್ನ ನಿರ್ಧಾರ ಪ್ರಕಟಿಸುವ ಮುನ್ನ ಉಭಯ ಧರ್ಮಗಳ ಪ್ರತಿನಿಧಿಗಳ ಅಭಿಪ್ರಾಯ ಮತ್ತು ಆಕ್ಷೇಪ ಆಲಿಸಬೇಕು ಎಂದು ಸೂಚಿಸಿದೆ.

ರಾಜ್ಯ ಸರ್ಕಾರ ಪ್ರಕರಣ ಇತ್ಯರ್ಥ ಪಡಿಸುವರೆಗೂ 1989ರಲ್ಲಿ ನೀಡಿರುವ ಆದೇಶದಂತೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆಯೂ ಸುಪ್ರೀಂಕೋರ್ಟ್ ತಾಕೀತು ಮಾಡಿದೆ. ಯಾವುದೇ ಧರ್ಮದ ಪ್ರತಿನಿಧಿಗಳಿಗೆ ರಾಜ್ಯ ಸರ್ಕಾರದ ತೀರ್ಮಾನ ಒಪ್ಪಿಗೆ ಯಾಗದೇ ಇದ್ದರೆ, ನ್ಯಾಯಾಲಯದ ಮೆಟ್ಟಿಲು ಏರಲು ಮುಕ್ತರಾಗಿರುತ್ತಾರೆ ಎಂದು ಸುಪ್ರೀಮ್ ಕೋರ್ಟ್ ಸ್ಪಷ್ಟಪಡಿಸಿದೆ.

ಬಾಬಾ ಬುಡನಗಿರಿಯಲ್ಲಿ ಹಿಂದೂ ಮತ್ತು ಮುಸ್ಲಿಮರ ಯಾವ ಆಚಾರಗಳಿಗೆ ಅವಕಾಶ ನೀಡಬೇಕು ಎಂಬುದರ ಬಗ್ಗೆ ಧಾರ್ಮಿಕ ಇಲಾಖೆಯ ಆಯುಕ್ತರು ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೂಲಕ ಸುಪ್ರೀಂಕೋರ್ಟ್ಗೆ ವರದಿ ಸಲ್ಲಿಸಿ ದ್ದರು. ನಂತರ ಜಿಲ್ಲಾಧಿಕಾರಿಗಳು ಅಭಿಪ್ರಾಯ ಸಂಗ್ರಹಿಸಿ ಸುಪ್ರೀಂಕೋರ್ಟ್ಗೆ 2010ರಲ್ಲಿ ಮೊಹರು ಮಾಡಿದ ಲಕೋಟೆಯಲ್ಲಿ ವರದಿ ಸಲ್ಲಿಸಿದ್ದರು.

1989ರಲ್ಲಿ ಧಾರ್ಮಿಕ ದತ್ತಿ ಆಯುಕ್ತರು ನೀಡಿದ್ದ ವರದಿಯ ಪ್ರಕಾರ ಬಾಬಾ ಬುಡಾನ್ ಗಿರಿಯಲ್ಲಿರುವುದು ಕೇವಲ ದರ್ಗಾ ಮತ್ತು ಈ ದರ್ಗಾದ ಆಡಳಿತ ಮತ್ತು ಅಧಿಕಾರ ಅಲ್ಲಿಯ ಶಾಖಾದ್ರಿಗೆ ಸೇರಿದೆ. ಅಲ್ಲಿ ವಾರ್ಷಿಕ್ ಉರುಸ್ ನಡೆಯಬೇಕೆಂದು ಸಹ ವರದಿಯಲ್ಲಿ ಹೇಳಲಾಗಿದೆ.

ಈ ತೀರ್ಪು ಸಂಘಪರಿವಾರಕ್ಕೆ ನಿರಾಶೆಯನ್ನುಂಟು ಮಾಡಿದ್ದು ಬಾಬಾಬುಡಾನ್ ಗಿರಿಯನ್ನು ಇನ್ನೊಂದು ಅಯೋಧ್ಯೆ ಮಾಡುವ ಪರಿವಾರದ ಹೋರಾಟಕ್ಕೆ ದೊಡ್ಡ ಹಿನ್ನಡೆಯಾಗಿದೆ. ಕರ್ನಾಟಕ ಕೋಮು ಸೌಹಾರದ ವೇದಿಕೆಯ ರಾಜ್ಯ ಪ್ರಧಾನ ಸಂಚಾಲಕ ಕೆ. ಎಲ್. ಅಶೋಕ್ ತೀರ್ಪನ್ನು ಸ್ವಾಗತಿಸಿದ್ದು ಕರ್ನಾಟಕ ಸರ್ಕಾರ ಬಾಬಾ ಬುಡಾನ್ ಗಿರಿಯ ಸೌಹಾರ್ದ ಪರಂಪರೆ ರಕ್ಷಣೆ ಮಾಡಲು ಮುಂದಾಗಬೇಕಿದೆ ಎಂದು ಹೇಳಿದ್ದಾರೆ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s