ಸೌಹಾರ್ದತೆ ಕಾಪಾಡಲು ಸರ್ಕಾರ ಮುಂದಾಗಲಿ: ಅಶೋಕ್

ಸೌಹಾರ್ದತೆ ಕಾಪಾಡಲು ಸರ್ಕಾರ ಮುಂದಾಗಲಿ: ಅಶೋಕ್
Sep 4 2015 7:39AM

EmailPrintFontSizeFontSize

2015_9$advtcontent104_Sep_2015_073807677.jpgಶಿವಮೊಗ್ಗ: ಬಾಬಾ ಬುಡಾನ್ ಗಿರಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಸ್ವಾಗತಿಸಿರುವ ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ಎಲ್. ಅಶೋಕ್ ಇದೊಂದು ಐತಿಹಾಸಿಕ ಮತ್ತು ಮಹತ್ವದ ತೀರ್ಪು ಎಂದು ಬಣ್ಣಿಸಿದ್ದಾರೆ.

ಬಾಬ್ ಬುಡಾನ್ ಗಿರಿಯಲ್ಲಿ ನೆಲೆಯೂರಿರುವ ಶತಮಾನಗಳ ಕಾಲದ ಸೌಹಾರ್ದ ಪರಂಪರೆ ಮತ್ತು ಕರ್ನಾಟಕದ ಬಹುಸಂಸ್ಕೃತಿಗೆ ಈ ತೀರ್ಪು ಇನ್ನಷ್ಟು ಬಲ ನೀಡಿದ್ದು ಸರ್ಕಾರ ಶೀಘ್ರದಲ್ಲಿ ಈ ತೀರ್ಪನ್ನು ಅನುಷ್ಠಾನಗೊಳಿಸಲು ಮುಂದಾಗಬೇಕಿದೆ ಎಂದು ಹೇಳಿದ್ದಾರೆ. ‘ಕರಾವಳಿ ಕರ್ನಾಟಕ’ದ ಜೊತೆ ಮಾತನಾಡಿರುವ ಕೆ. ಎಲ್. ಅಶೋಕ್ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಸಂಘಪರಿವಾರ ಬಾಬಾ ಬುಡಾನ್ ಗಿರಿ ವಿಚಾರದಲ್ಲಿ ನಡೆಸಿದ ಹುನ್ನಾರಗಳಿಗೆ ದೊಡ್ಡ ಆಘಾತ ನೀಡಿದೆ ಎಂದು ಹೇಳಿದ್ದಾರೆ.

ಬಿಜೆಪಿ ಮತ್ತು ಸಂಘಪರಿವಾರ ಬಾಬಾ ಬುಡಾನ್ ಗಿರಿ ವಿವಾದ ಇತ್ಯರ್ಥಕ್ಕಾಗಿ ಪಾರ್ಲಿಮೆಂಟ್ ಕಾಯ್ದೆಗಳನ್ನು ಉಲ್ಲಂಘಿಸಿ ತಮಗೆ ಬೇಕಾದ ಹಾಗೆ ಸಾರ್ವಜನಿಕ ವಿಚಾರಣೆ ನಡೆಸಬೇಕೆಂದು ಮುಂದಾಗಿತ್ತು. ಮಾತ್ರವಲ್ಲ ತಮ್ಮ ಸರ್ಕಾರವಿದ್ದಾಗ ತಮಗೆ ಬೇಕಾದ ಹಾಗೆ ಧಾರ್ಮಿಕ ದತ್ತಿ ಆಯುಕ್ತರನ್ನು ಬಳಸಿಕೊಂಡ ಬಿಜೆಪಿ ಬಾಬಾ ಬುಡಾನ್ ಗಿರಿಯಲ್ಲಿ ಇಲ್ಲದ ಆಚರಣೆಗಳನ್ನು ಸೇರಿಸಿಕೊಂಡು ಸುಪ್ರೀಮ್ ಕೋರ್ಟ್ಗೆ ವರದಿ ಸಲ್ಲಿಸಿತ್ತು. ಇದೀಗ ಸುಪ್ರೀಂ ಕೋರ್ಟ್ ಈ ವರದಿಯನ್ನು ತಿರಸ್ಕರಿಸಿ ಸಂಘಪರಿವಾರಕ್ಕೆ ಆಘಾತ ನೀಡಿದೆ. ಸುಪ್ರೀಂ ಕೋರ್ಟ್ ನೀಡುವ ತೀರ್ಪಿನ ಮೇಲೆ ಕೇಸರಿ ನೆರಳು ಬೀರಬೇಕೆಂದು ಹೊರಟವರಿಗೆ ನಿರಾಸೆಯಾಗಿದೆ. ಇದು ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಮತ್ತು ಇತರ ನೂರಾರು ಸಂಘಟನೆಗಳು ಮತ್ತು ಕರ್ನಾಟಕದ ಸೌಹಾರ್ದ ಪ್ರಿಯ ನಾಗರಿಕರಿಗೆ ಸಂತಸ ತಂದ ತೀರ್ಪು ಎಂದು ಅಶೋಕ್ ಹೇಳಿದ್ದಾರೆ.

ಇದೀಗ ಕರ್ನಾಟಕ ಸರ್ಕಾರಕ್ಕೆ ಬಾಬಾ ಬುಡಾನ್ ಗಿರಿಯ ಶತನಾಮಗಳ ಸೌಹಾರ್ದ ಪರಂಪರೆ ಎತ್ತಿ ಹಿಡಿಯಲು ಸದವಕಾಶವೊಂದನ್ನು ಕೋರ್ಟ್ ನೀಡಿದೆ. ಫೆಬ್ರವರಿ 25, 1989ರಂದು ಅಂದಿನ ಧಾರ್ಮಿಕ ದತ್ತಿ ಆಯುಕ್ತರು ಬಾಬಾ ಬುಡಾನ್ ಗಿರಿಯಲ್ಲಿ 1975ಕ್ಕೂ ಮುಂಚೆ ನಡೆಯುತ್ತಿದ್ದ ಧಾರ್ಮಿಕ ಆಚರಣೆಗಳನ್ನು ಪಟ್ಟಿ ಮಾಡಿ ವರದಿ ತಯಾರಿಸಿದ್ದಾರೆ. ಆ ವರದಿಯನ್ನು ಅನೂಚಾನವಾಗಿ ಸರ್ಕಾರ ಜಾರಿಗೆ ತರಬೇಕು. ಅದೊಂದೆ ಈ ವಿವಾದಕ್ಕೆ ಶಾಶ್ವತ ಪರಿಹಾರ ಎಂದು ಅಭಿಪ್ರಾಯಪಟ್ಟಿರುವ ಕೆ. ಎಲ್. ಅಶೋಕ್ ಕರ್ನಾಟಕದ ಬಹುಸಂಸ್ಕೃತಿ ಮತ್ತು ಸೌಹಾರ್ದ ಪರಂಪರೆ ರಕ್ಷಿಸುವ ಜವಾಬ್ದಾರಿಯನ್ನು ಸರ್ಕಾರ ನಿರ್ವಹಿಸಲಿ ಎಂದು ಹೇಳಿದ್ದಾರೆ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s