ಕ.ಕೋ.ಸೌ.ವೇದಿಕೆಗೆ – ಮಾನವ ಬಂಧುತ್ವ ವೇದಿಕೆಯಿಂದ ಪ್ರಶಸ್ತಿ – ನಾಳೆ ದಾವಣಗೆರೆಯಲ್ಲಿ ‘ದಲಿತೋತ್ಸವ’ ಕಾ ರ್ಯಕ್ರಮದಲ್ಲಿ ಪ್ರದಾನ

ಕರ್ನಾಟಕ ಕೋಮು ಸೌಹಾರ್ದ ವೇದಿಕೆ ರಾಜ್ಯದಲ್ಲಿ ಕಳೆದ ಒಂದುವರೆ ದಶಕಗಳಿಂದ ನಡೆಸುತ್ತಿರುವ ಸೌಹಾರ್ದ ಚಳುವಳಿಯ ಚಟುವಟಿಕೆಗಳನ್ನು ಗುರುತಿಸಿದ ಮಾನವ ಬಂಧುತ್ವ ವೇದಿಕೆ ಎಂಬ ನೂತನ ವೇದಿಕೆಯೊಂದು ಅದು ನೀಡುವ ಆರಂಭಿಕ ವರ್ಷದ ಪ್ರಥಮ ಪ್ರಶಸ್ತಿಗೆ ಆಯ್ಕೆ ಮಾಡಿದೆ.ಈ ವಿಷಯವನ್ನು ಎರಡ್ಮೂರು ದಿನಗಳ ಹಿಂದೆ ಮಾನವ ಬಂಧುತ್ವ ವೇದಿಕೆಯವರು ನಮಗೆ ತಿಳಿಸಿದ್ದು, ಅಕ್ಟೋಬರ್,10 ರಂದು ದಾವಣಗೆರೆಯಲ್ಲಿ ನಡೆಯುವ ಅವರ ‘ದಲಿತೋತ್ಸವ’ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದ್ದರು.
ನಮ್ಮ ವೇದಿಕೆ ಈ ವರೆಗೆ ಪ್ರಶಸ್ತಿಯನ್ನು ಸ್ವೀಕರಿಸಬಾರದೆಂಬ ಮನೋಭಾವನೆಯನ್ನು ಹೊಂದಿದ್ದು, ಅವರು ತುರ್ತಾಗಿ ಈ ವಿಷಯವನ್ನು ತಿಳಿಸಿದ್ದರಿಂದ, ಕೇಂದ್ರ ಸಮಿತಿಯ ಸಭೆ ಆಗದೇ ತೀರ್ಮಾನಿಸುವುದರ ಬಗ್ಗೆ ಗೊಂದಲಗಳಿತ್ತು. ಅದಕ್ಕಾಗಿ ವೇದಿಕೆಯ ಕೇಂದ್ರ ಸಮಿತಿ ಸದಸ್ಯರುಗಳಿಗೆ ಮತ್ತು ಕಾರ್ಯದರ್ಶಿ ಮಂಡಳಿಯವರಿಗೆ ಫೋನ್ – ಮೆಸೆಜ್ ಗಳ ಮೂಲಕ ಸಂಪರ್ಕಿಸಿ ಅಭಿಪ್ರಾಯ ಕೇಳಲಾಯಿತು. ಬಂದ ಅಭಿಪ್ರಾಯಗಳಲ್ಲಿ ಅನೇಕರು ಪ್ರಶಸ್ತಿ ಸ್ವೀಕರಿಸುವುದು ಬೇಡ ಎಂದರೇ, ಇನ್ನೂಅನೇಕ ಮಂದಿ ಪ್ರಶಸ್ತಿಯನ್ನು ತೆಗೆದುಕೊಳ್ಳಬಹುದು, ಯಾಕೆಂದರೇ, ಇದು ಅರ್ಜಿ ಹಾಕಿ ಪಡೆಯುತ್ತಿರುವಂತಹದ್ದಲ್ಲ ಹಾಗೂ ಸರಕಾರ ದಿಂದ ನೀಡುವ ಪ್ರಶಸ್ತಿ ಅಲ್ಲವಾಗಿರುವುದರಿಂದ ವೇದಿಕೆಯ ಕಾರ್ಯಚಟುವಟಿಕೆಗಳಿಗೆ ಪೂರಕವಾದ ಉದ್ದೇಶದ ಸಂಘಟನೆಯೊಂದು ನಮ್ಮನ್ನು ಗುರುತಿಸಿರುವುದರಿಂದ ಇದನ್ನು ಪಡೆಯುವುದರಲ್ಲಿ ತಪ್ಪೇನಿಲ್ಲ ಅಂತ ತಿಳಿಸಿದ್ದರು.
ಬಂದ ಅಭಿಪ್ರಾಯಗಳಲ್ಲಿ ಬಹುತೇಕರು ಸ್ವೀಕರಿಸಬಹುದು ಅಂತ ಅಭಿಪ್ರಾಯಿಸಿರುವುದರಿಂದ ವೇದಿಕೆ ನಾಳೆ ಆ ಪ್ರಶಸ್ತಿಯನ್ನು ಸ್ವೀಕರಿಸಲು ತೀರ್ಮಾನಿಸಿದೆ.
ನಾಳೆ (ಅಕ್ಟೋಬರ್,10-2015) ದಾವಣಗೆರೆಯಲ್ಲಿ ನಡೆಯುವ ದಲಿತೋತ್ಸವ ಕಾರ್ಯಕ್ರಮದಲ್ಲಿ ಇದನ್ನು ಕಾರ್ಯದರ್ಶಿ ಮಂಡಳಿಯ ಕೆಲವು ಕಾರ್ಯದರ್ಶಿಗಳು ಮತ್ತು ಕೇಂದ್ರ ಸಮಿತಿಯ ಸದಸ್ಯರು ಇದನ್ನು ಪಡೆದುಕೊಳ್ಳಲಿದ್ದಾರೆ.
– ಕಾರ್ಯದರ್ಶಿ ಮಂಡಳಿ, ಕರ್ನಾಟಕ ಕೋಮು ಸೌಹಾರ್ದ ವೇದಿಕೆ

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s