9 October, 2015 14:11

‘ದಲಿತ ಎಂದು ಸುಟ್ಟು ಕೊಂದರು’

‘ಮುಸ್ಲಿಮ್ ಅಂತ ಹೊಡೆದು ಕೊಂದರು’

ಉತ್ತರ ಪ್ರದೇಶದಲ್ಲಿನ ಹೀನ ಘಟನೆಯನ್ನು ಖಂಡಿಸಿ ಉಡುಪಿಯಲ್ಲಿ ಅಕ್ಟೋಬರ್,9 -2015 ರ ಶುಕ್ರವಾರ ನಡೆದ ಪ್ರತಿಭಟನಾ ಮೆರವಣಿಗೆ – ಖಂಡನಾ ಸಭೆ

ಉತ್ತರ ಪ್ರದೇಶದಲ್ಲಿ ದನದ ಮಾಂಸ ತಂದಿಟ್ಟುಕೊಂಡಿದ್ದಾರೆಂಬ ಶಂಕೆಯಲ್ಲಿ ಮುಸಲ್ಮಾನ ವ್ಯಕ್ತಿಯನ್ನು ಹೊಡೆದು ಕೊಂದ ಮನುವಾದಿಗಳು ದೇಗುಲ ಪ್ರವೇಶಿದ್ದಾನೆಂದು ದಲಿತ ವ್ಯಕ್ತಿಯನ್ನು ಜೀವಂತ ದಹಿಸಿದರು….
ಮಾನವೀಯತೆ ಕಳಕೊಂಡ ಮೃಗಗಳು ಧರ್ಮದ ರಕ್ಷಣೆಯ ಹೆಸರಲ್ಲಿ ನಡೆಸುತ್ತಿರುವ ಇಂತಹ ಅಮಾನವೀಯ ಘಟನೆಗಳನ್ನು ಖಂಡಿಸಿ ಉಡುಪಿಯ ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಸಹಭಾಗಿ ಸಂಘಟನೆಗಳು ಜೊತೆಗೂಡಿ ಪ್ರತಿಭಟನಾ ಮೆರವಣಿಗೆ ಮತ್ತು ಖಂಡನಾ ಸಭೆಯನ್ನು ನಡೆಸಿದವು.
ಇಂದು (ಅಕ್ಟೋಬರ್ , 9- 2015 ರ ಶುಕ್ರವಾರ) ಸಂಜೆ 4.45 ಗಂಟೆಗೆ ಉಡುಪಿಯ ಜೋಡುಕಟ್ಟೆ (ಹಳೆಯ ತಾಲೂಕು ಕಛೇರಿಬಳಿ) ಯಿಂದ ಹೊರಟ ಪ್ರತಿಭಟನಾ ಮೆರವಣಿಗೆಗೆ ಕರಪತ್ರವನ್ನು ವಿತರಿಸುವ ಮೂಲಕ ವೇದಿಕೆಯ ರಾಜ್ಯ ಸಮಿತಿ ಸದಸ್ಯ ರೆ.ಫಾ.ವಿಲಿಯಂ ಮಾರ್ಟೀಸ್ ಚಾಲನೆ ನೀಡಿದರು. ನಂತರ ಅಲ್ಲಿಂದ ಹೊರಟ ಮೆರವಣಿಗೆಯು ನಗರದ ಸರ್ವೀಸ್ ಬಸ್ ನಿಲ್ದಾಣದ ಬಳಿಯ ಕ್ಲಾಕ್ ಟವರಿನ ಗಾಂಧಿ ಪ್ರತಿಮೆಯ ಎದುರು ಖಂಡನಾ ಸಭೆಯೊಂದಿಗೆ ಸಮಾಪನಗೊಂಡಿತು.

ಸಭೆಯಲ್ಲಿ ರೆ.ಫಾ.ವಿಲಿಯಂ ಮಾರ್ಟಿಸ್, ಕರ್ನಾಟಕ ದಲಿತ ಸಂಘರ್ಷ ಸಮಿತಿ(ರಿ.) ನ ನೇತಾರ ಜಯನ್ ಮಲ್ಪೆ, ಮುಸ್ಲಿಂ ಮುಖಂಡ ವೆಲ್ಫೇರ್ ಪಾರ್ಟಿಯ ರಾಜ್ಯಾಧ್ಯಕ್ಷ ಕೆ.ಅಕ್ಬರ್ ಆಲಿ ಮತ್ತು ವೇದಿಕೆಯ ಜಿಲ್ಲಾಧ್ಯಕ್ಷ ಜಿ.ರಾಜಶೇಖರ್ ಮಾತನಾಡಿದರು.
ಈ ಪ್ರತಿಭಟನಾ ಮೆರವಣಿಗೆಯಲ್ಲಿ ಮನುಷ್ಯತ್ವವನ್ನು ಗೌರವಿಸುವ – ಮಾನವಿಯ ಕಳಕಳಿಯುಳ್ಳ ಸಾರ್ವಜನಿಕರು ಕ.ಕೋ.ಸೌ.ವೇದಿಕೆಯ ಸಹಭಾಗಿ ಸಂಘಟನೆಗಳ ಮುಖಂಡರು ಮತ್ತು ಸದಸ್ಯರುಗಳು ಪಾಲ್ಗೊಂಡಿದ್ದರು. ವೇದಿಕೆಯ ಜೊತೆ ಕಾರ್ಯದರ್ಶಿ ಹುಸೇನ್ ಕೋಡಿಬೆಂಗ್ರೆ ಧನ್ಯವಾದ ನೀಡಿದರು. ಕಾರ್ಯದರ್ಶಿ ಡಿ.ಎಸ್.ಬೆಂಗ್ರೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s