ಕಂಡ್ಲೂರಿನಲ್ಲಿ ನಡೆದ ದಲಿತ ಯುವಕರ ಮೇಲಿನ ಹಲ್ಲ ೆ, ಮೂಡಬಿದ್ರೆಯ ಪ್ರಶಾಂತನ ಕೊಲೆ ಮತ್ತು ಇವುಗಳನ್ನು ಪ್ರಚೋದಿಸುವ ಕೋಮುವಾದಿ ರಾಜಕೀಯವನ್ನು ಖಂಡಿಸಲು ಪ್ ರತಿಭಟನಾ ಸಭೆ

ಕರ್ನಾಟಕ ಕೋಮ ಸೌಹಾರ್ದ ವೇದಿಕೆಯ ಸಹಭಾಗಿ ಸಂಘಟನೆಗಳು

ಮತ್ತು

ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ.) ಉಡುಪಿ ಜಿಲ್ಲೆ

ಕಂಡ್ಲೂರಿನಲ್ಲಿ ನಡೆದ ದಲಿತ ಯುವಕರ ಮೇಲಿನ ಹಲ್ಲೆ, ಮೂಡಬಿದ್ರೆಯ ಪ್ರಶಾಂತನ ಕೊಲೆ ಮತ್ತು ಇವುಗಳನ್ನು ಪ್ರಚೋದಿಸುವ ಕೋಮುವಾದಿ ರಾಜಕೀಯವನ್ನು ಖಂಡಿಸಲು ಪ್ರತಿಭಟನಾ ಸಭೆ

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕಂಡ್ಲೂರು ಗ್ರಾಮದ ನಾಗರಿಕರು ಈ ಸಾರಿಯ ನವರಾತ್ರಿ ಪ್ರಯುಕ್ತದ ಶಾರದಾ ಪೂಜೆಯ ಮಹೋತ್ಸವವನ್ನು ಮತ – ಬೇಧ ಮೀರಿ ಊರಿನ ಹಬ್ಬವಾಗಿ ಆಚರಿಸುವ ತಯಾರಿಯಲ್ಲಿದ್ದರು. ಆದರೂ ಹಿಂದೂತ್ವವಾದಿ ಸಂಘಟನೆಗಳ ಕಾರ್ಯಕರ್ತರು ಮಹೋತ್ಸವದ ಬ್ಯಾನರ್ ಮತ್ತು ಬಂಟಿಂಗ್ಸ್ ಗಳನ್ನು ಕಟ್ಟುವ ವೇಳೆ ಕೋಮು ಪ್ರಚೋದಕ ಘೋಷಣೆಗಳನ್ನು ಕೂಗುತ್ತಾ ವೈಷಮ್ಯದ ಕಿಡಿಯನ್ನು ಹಚ್ಚಲು ಯತ್ನಿಸಿದರು. ಈ ಸಂದರ್ಭದಲ್ಲಿ ಹಿಂದೂತ್ವ ಸಂಘಟನೆಗಳ ಕಾರ್ಯಕರ್ತರು ಮತ್ತು ಮುಸ್ಲಿಮ್ ಯುವಕರ ನಡುವೆ ಮಾತಿನ ಚಕಮಕಿ ನಡೆದಿದ್ದರೂ ಊರಿನ ನಾಗರಿಕರು ಮತ್ತು ಪೊಲೀಸರ ಮಧ್ಯ ಪ್ರವೇಶದಿಂದ ಪರಿಸ್ಥಿತಿಯು ತಹಬಂಧಿಗೆ ಬಂದಿತ್ತು. ದಿನಾಂಕ : 14-10-2015 ರ ಬುಧವಾರ ರಾತ್ರಿ ಕಂಡ್ಕೂರು ಪೇಟೆಯಲ್ಲಿ ಬ್ಯಾನರ್ ಮತ್ತು ಬಂಟಿಂಗ್ಸ್ ಕಟ್ಟುವ ವೇಳೆ ಮತ್ತೆ ಪ್ರಚೋದನೆಯ ಪ್ರಸಂಗ ನಡೆದಿದೆ. ಬ್ಯಾನರ್ ಕಟ್ಇ ವಾಪಾಸಾಗುತ್ತಿದ್ದ ದಲಿತ ಯುವಕರಾದ ವಿಜಯ ಕುಮಾರ್ ಮತ್ತು ಮಂಜುನಾಥ್ ಇವರುಗಳನ್ನು ನಾಲ್ಕೈದು ಜನ ಮುಸ್ಲಿಮ್ ಯುವಕರ ಗುಂಪು ತಡೆಗಟ್ಟಿ ಅವರ ರ ಮೇಲೆ ಹಲ್ಲೆ ನಡೆಸಿದೆ. ಕೋಮು ಪ್ರಚೋದನೆಯೂ ಮತ್ತು ಅದರಿಂದ ಉದ್ರೇಕಿತರಾಗಿ ಹಿಂಸೆಯಲ್ಲಿ ತೊಡಗುವುದೂ ಎರಡೂ ತಪ್ಪು. ದಲಿತ ಯುವಕರ ಮೇಲೆ ನಡೆದ ಹಿಂಸೆಯು ಕಾನೂನು ಬಾಹಿರವಾದದ್ದು ; ಹಿಂಸೆ ನಡೆಸಿದ ಆರೋಪಿಗಳು ಬಂಧಿತರಾಗಿದ್ದಾರೆ. ಅವರ ಮೇಲೆ ಕಾನೂನು ರೀತಿಯ ವಿಚಾರಣೆ ನಡೆದು ಸೂಕ್ತ ಶಿಕ್ಷೆಯಾಗಬೇಕೆಂದು ನಾವು ಆಗ್ರಹಿಸುತ್ತೇವೆ,

ದಿನಾಂಕ :,9-10-2015 ರ ರ ಶುಕ್ರವಾರ ಬೆಳಗ್ಗೆ ಮೂಡಬಿದ್ರೆಯಲ್ಲಿ ಹಿಂದೂತ್ವವಾದಿ ಸಂಘಟನೆಗೆ ಸೇರಿದ ಹೂವಿನ ವ್ಯಾಪಾರಿ ಪ್ರಶಾಂತ್ ಪೂಜಾರಿಯನ್ನು ಮುಸುಕುಧಾರಿಗಳಾಗಿ ಬಂದ ದುಷ್ಕರ್ಮಿಗಳು ತಲೆವಾರಿನಿಂದ ಹಲ್ಲೆ ನಡೆಸಿ ಕೊಲೆಗೈದ ಭೀಕರ ಘಟನೆ ನಡೆದಿದೆ. ನಿನ್ನೆ ಪೊಲೀಸರು ಆ ಕೃತ್ಯದಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಶಾಂತನ ರಾಜಕೀಯ ನಂಬಿಕೆ ಮತ್ತು ಆಚರಣೆಗಳು ನಮಗೆ ಸಮ್ಮತವಲ್ಲದಿದ್ದರೂ ಆತನನ್ನು ಕೊಲ್ಲುವ ಅಧಿಕಾರ ಪ್ರಜಾಪ್ರಭುತ್ವದಲ್ಲಿ ಯಾರಿಗೂ ಇಲ್ಲ. ಕೊಲೆಗೆ ಏನೇ ಕಾರಣಗಳಿದ್ದರೂ ಆದು ಅಸಂವಿಧಾನಿಕ – ಪ್ರಜಾತಂತ್ರ ವಿರೋಧಿ – ಕಾನೂನುಬಾಹಿರ ಕೃತ್ಯವಾಗಿದೆ. ಈ ಕೃತ್ಯವನ್ನು ನಾವು ತೀವೃವಾಗಿ ಖಂಡಿಸುತ್ತೇವೆ ಮತ್ತು ಆರೋಪಿಗಳಿಗೆ ಕಾನೂನು ರೀತ್ಯಾ ಸೂಕ್ತ ಶಿಕ್ಷೆಯಾಗಬೇಕೆಂದು ನಾವು ಆಗ್ರಹಿಸುತ್ತೇವೆ.

ಈ ಎರಡೂ ಬಿಡಿ ಬಿಡಿಯಾದ ಘಟನೆಗಳೇನು ಅಲ್ಲ. ಎರಡರ ಹಿಂದೆಯೂ ಸಂಘಪರಿವಾರದ ಎರಡು ದಶಕಗಳ ಹಿಂಸಾತ್ಮಕ ಮತೀಯ ರಾಜಕೀಯವೂ , ಪ್ರತಿಕ್ರಿಯಾತ್ಮಕವಾದ ಮತೀಯ ಹಿಂಸೆಯ ರಾಜಕಿಯಗಳ ಏಕ ಸೂತ್ರವಿದೆ. ಸಂಘ ಪರಿವಾರವು ಕೆಳ ಜಾತಿಯವರು ಮತ್ತು ದಲಿತರನ್ನು ಅಲ್ಪಸಂಖ್ಯಾತರ ವಿರುದ್ಧ ಎತ್ತಿಕಟ್ಟಿ ನಿರಂತರವಾಗಿ ಬೀದಿ ಹಿಂಸೆಯಲ್ಲಿ ತೊಡಗಿಸಿರುವುದನ್ನು ನಮ್ಮ ಊರುಗಳಲ್ಲಿ ಕಳೆದೆರಡು ದಶಕಗಳಿಂದ ನೋಡುತ್ತಿದ್ದೇವೆ. ಸಮಾಜದ ಅಂಚಿನಲ್ಲಿ ಬದುಕುತ್ತಿರುವ ದಲಿತರು – ಕೆಳಜಾತಿಯ ಹಿಂದೂಗಳು ಹಾಗೂ ಅಲ್ಪಸಂಖ್ಯಾತರು ಅರ್ಥಿಕವಾಗಿಯೂ – ಸಾಮಾಜಿಕವಾಗಿಯೂ ಸಂಕಷ್ಟಕ್ಕೆ ಒಳಗಾದ ವರ್ಗಗಳಾಗಿದ್ದು ಸಮಾನ ದುಖಿಗಳಾಗಿದ್ದಾರೆ. ಇಂತಹ ಜನರನ್ನು ಮತೀಯ ನೆಲೆಯಲ್ಲಿ ಪರಸ್ಪರ ಎತ್ತಿಕಟ್ಟಿ ಪರಸ್ಪರ ಹಿಂಸೆಯಲ್ಲಿ ತೊಡಗುವಂತೆ ಪ್ರಚೋದಿಸುತ್ತಿರುವ ಮತೀಯ ರಾಜಕೀಯವೂ ದೈಹಿಕ ಹಲ್ಲೆ ಮತ್ತು ಕೊಲೆಗಳಷ್ಟೆ ಹೀನವಾದದ್ದೂ, ತೀವೃ ಖಂಡನೆಗೆ ಅರ್ಹವಾದದ್ದು. ದಲಿತ- ಕೆಳಜಾತಿಯ ವರ್ಗಗಳು ಮತ್ತು ಅಲ್ಪಸಂಖ್ಯಾತ ವರ್ಗಗಳು ಈ ಮತೀಯ ರಾಜಕೀಯದ ಹುನ್ನಾರವನ್ನು ಅರಿತು ದ್ವೇಷ ಮುಕ್ತರಾಗಬೇಕೆಂದು ನಾವು ಮನವಿ ಮಾಡಿಕೊಳ್ಳುತ್ತಿದ್ದೇವೆ. ಮತ ಬೇಧವು ಅಸಮಾನತೆಯನ್ನು ಮುಂದುವರೆಸುತ್ತದೆ. ಸಹ ಬಂಧುತ್ವವು ಎಲ್ಲಾ ಜಾತಿ – ಮತಗಳ ಬಡವರನ್ನೂ ಒಗ್ಗೂಡಿಸಿ ಸಾಮಾಜಿಕ ಅನ್ಯಾಯ – ಅಸಮಾನತೆಗಳ ವಿರುದ್ಧ ಧ್ವನಿ ಎತ್ತಲು ಶಕ್ತಿಯನ್ನು ನೀಡುತ್ತದೆ. ಜನ ಇದನ್ನು ಅರಿತಷ್ಟೂ ಸಮಾಜವು ಶಾಂತಿಯುತವಾಗಿರುತ್ತದೆ ಎನ್ನುವುದು ನಮ್ಮ ಒಕ್ಕೊರಲಿನ ಅಭಿಪ್ರಾಯವಾಗಿದೆ ಮತ್ತು ಅಂತಹ ಕಾರ್ಯಕ್ಕಾಗಿ ನಾವು ಶ್ರಮಿಸುತ್ತೇವೆ.

ಜಿ.ರಾಜಶೇಖರ್ ಶ್ಯಾಮರಾಜ ಬಿರ್ತಿ

(ಅಧ್ಯಕ್ಷರು, ಕ.ಕೋ.ಸೌ.ವೇದಿಕೆ) (ಜಿಲ್ಲಾ ಸಂಚಾಲಕರು,ಕ.ದ.ಸಂ.ಸ.(ರಿ.),ಉಡುಪಿ ಜಿಲ್ಲೆ )

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s