ನಾಡ ಪ್ರೇಮಿ, ಮೈಸೂರು ಹುಲಿ ಟಿಪ್ಪು ಸುಲ್ತಾನರ ಬಗ ್ಗೆ ಅವಮಾನ ಮಾಡುವ ಮೂಲಕ ಸಾರ್ವಜನಿಕರನ್ನು ದ್ವೇಷಕ ್ಕೆ ತಳ್ಳುತ್ತಿರುವ ಹಾಗೂಸರಕಾರಿ ಪ್ರಾಯೋಜಿತ ಟಿಪ್ ಪು ಜಯಂತಿಯನ್ನು ವಿರೋಧಿಸಿ, ಶಾಂತಿ ಭಂಗ ಮಾಡಿ, ಅಮಾಯಕ ಎರಡು ಜೀವಗಳ ಸಾವಿಗೆ ಕಾರಣರಾದವರ ಮೇಲೆ ಕಠಿಣ ಕಾನೂನ ು ಕ್ರಮ

ಕರ್ನಾಟಕ ಕೋಮು ಸೌಹಾರ್ದ ವೇದಿಕೆ , ಕೇಂದ್ರ ಸಮಿತಿ

ಮಾನ್ಯ ಮುಖ್ಯಮಂತ್ರಿಗಳು,

ಕರ್ನಾಟಕ ಸರಕಾರ,

ವಿಧಾನ ಸೌಧ – ಬೆಂಗಳೂರು _______________ ಇವರಿಗೆ,

ಮಾನ್ಯ ಜಿಲ್ಲಾಧಿಕಾರಿಗಳು,

ಜಿಲ್ಲಾಧಿಕಾರಿಗಳ ಕಛೇರಿ,

ಜಿಲ್ಲೆ____________________ ಇವರ ಮೂಲಕ

ಮಾನ್ಯರೇ,

ವಿಷಯ : ನಾಡ ಪ್ರೇಮಿ, ಮೈಸೂರು ಹುಲಿ ಟಿಪ್ಪು ಸುಲ್ತಾನರ ಬಗ್ಗೆ ಸುಳ್ಳು ದಾಖಲೆಗಳಿಂದ

ಅವಮಾನ ಮಾಡುವ ಮೂಲಕ ಸಾರ್ವಜನಿಕರನ್ನು ದ್ವೇಷಕ್ಕೆ ತಳ್ಳುತ್ತಿರುವ ಹಾಗೂ

ಸರಕಾರಿ ಪ್ರಾಯೋಜಿತ ಟಿಪ್ಪು ಜಯಂತಿಯನ್ನು ವಿರೋಧಿಸಿ, ಶಾಂತಿ ಭಂಗ ಮಾಡಿ,

ಅಮಾಯಕ ಎರಡು ಜೀವಗಳ ಸಾವಿಗೆ ಕಾರಣರಾದವರ ಮೇಲೆ ಕಠಿಣ ಕಾನೂನು ಕ್ರಮ

ಜರುಗಿಸುವ ಕುರಿತು

ಈ ಮೇಲಿನ ವಿಷಯದಲ್ಲಿ ನಮೂದಿಸಿರುವಂತೆ, ಮೈಸೂರು ರಾಜನಾಗಿ, ಬ್ರಿಟೀಷರ ವಿರುದ್ಧ ಸಮರ ಸಾರಿ, ನಾಡಿನ ರಕ್ಷಣೆಗೆ ಮುಂದಾದ, ನಾಡಿನ ಶೂದ್ರ ಸಮುದಾಯಕ್ಕೆ ಕ್ರಾಂತಿಕಾರಿ ನಿರ್ಧಾರಗಳ ಮೂಲಕ ಚೈತನ್ಯ ಒದಗಿಸಿ ಸ್ವಾವಲಂಬಿ – ಸ್ವಾಭಿಮಾನದ ಬದುಕು ನೀಡಿದ, ಶೃಂಗೇರಿ, ಶ್ರೀರಂಗಪಟ್ಟಣ, ನಂಜನಗೂಡು , ಕೊಲ್ಲೂರು ಮೊದಲಾದ ದೇಗುಲಗಳಿಗೆ ರಕ್ಷಣೆ ನೀಡಿ ಧತ್ತಿನೀಡಿದ ಮೈಸೂರ ಹುಲಿ, ನಾಡಪ್ರೇಮಿ, ಬ್ರಿಟೀಷರ ವೈರಿ ಟಿಪ್ಪು ಸುಲ್ತಾನರವರ ಜನ್ಮ ದಿನಾಚರಣೆಯನ್ನು ಸರಕಾರಿ ಕಾರ್ಯಕ್ರಮದ ಮೂಲಕ ಆಚರಿಸಲು ಮುಂದಾಗಿ ಆ ದಿವ್ಯ ಚೇತನದ ಸಮಾಜ ಪರ ಕಾಳಜಿಯನ್ನು ಸ್ಮರಿಸಲು ಅವಕಾಶ ಮಾಡಿಕೊಟ್ಟ ತಮ್ಮ ಸರಕಾರವನ್ನು ಈ ಮೂಲಕ ಅಭಿನಂದಿಸಲು ಬಯಸುತ್ತೇವೆ.

ಆದರೇ, ಇಂತಹ ಸಮಾಜಪರ – ಬಹುಜನಪರ ಕಾಳಜಿಯಿಂದ ಶೋಷಿತ ಸಮುದಾಯವನ್ನು ಸಂಕಷ್ಟಗಳಿಂದ ಪಾರು ಮಾಡಿದ ಟಿಪ್ಪು ಸುಲ್ತಾನರ ಬಗ್ಗೆ ಸರಕಾರ ಜನ್ಮ ದಿನಾಚರಣೆಯನ್ನು ಮುಂದಾದ ವೇಳೆಯಲ್ಲಿ ಇದನ್ನು ಸಹಿಸಲಾಗದ ಕೆಲವು ಪುರೋಹಿತಶಾಹಿ ಮನಸ್ಸುಗಳ ವ್ಯಕ್ತಿಗಳು ಮತ್ತು ಸಮಾನತೆಯನ್ನು – ಸೌಹಾರ್ದತೆಯನ್ನು ಬಯಸದ ಕೆಲವು ಸಂಘಟನೆಗಳು ಟಿಪ್ಪು ಸುಲ್ತಾನರ ಬಗ್ಗೆ ಸುಳ್ಳು ದಾಖಲೆಗಳ ಮೂಲಕ ಅವಮಾನಿಸುವುದು ಮಾತ್ರವಲ್ಲದೇ, ತಮ್ಮ ಸುಳ್ಳುಗಳನ್ನು ಸತ್ಯವೆಂದು ನೂರಾರು ಬಾರಿ ಹೇಳುವ ಮೂಲಕ ಜನ ಸಾಮಾನ್ಯರನ್ನು ಪ್ರಚೋದಿಸಿ, ನಾಡಿನ ಸೌಹಾರ್ದತೆಗೆ ಭಂಗ ಉಂಟು ಮಾಡಿದ್ದಾರೆ. ಇದನ್ನು ಮುಂಚಿತವಾಗಿ ಗ್ರಹಿಸಿ ಸರಕಾರ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕಿತ್ತು. ಈ ವರೆಗೆ ಅದನ್ನು ತಮ್ಮ ಸರಕಾರ ಮಾಡಿಲ್ಲ. ಕೂಡಲೇ ಅದನ್ನು ಮಾಡಬೇಕಾಗಿ ನಾವು ಒತ್ತಾಯಿಸುತ್ತೇವೆ.

ನವೆಂಬರ್,10-2016 ರ ಸೋಮವಾರ ನಡೆದ ಟಿಪ್ಪು ಜಯಂತಿಯ ಸರಕಾರಿ ಕಾರ್ಯಕ್ರಮವು ಕೆಲವೆಡೆ ವಿರೋಧಗಳನ್ನು ಎದುರಿಸಿ ಮುಜುಗುರ ಉಂಟಾಗಲು ಇಂತಹ ವ್ಯಕ್ತಿ ಮತ್ತು ಸಂಘಟನೆಗಳೇ ಕಾರಣ ಎನ್ನುವುದನ್ನು ಸರಕಾರ ಗಮನಿಸಬೇಕು. ಇಂತಹ ವಿರೋಧವೂ ಸರಕಾರದ ಪ್ರಭುತ್ವದ ಸಮಾನತೆಯ ಆಶಯವನ್ನು ಮೂಲೆಗೆ ತಳ್ಳುವ ವಿಚ್ಛಿದ್ರಕಾರಿ ಶಕ್ತಿಗಳ ಷಡ್ಯಂತ್ರ ಎನ್ನುವುದನ್ನು ಸರಕಾರ ಪರಿಗಣಿಸಬೇಕು. ಈ ರೀತಿಯ ಪ್ರಚೋದನಾತ್ಮಕ ಹೇಳಿಕೆಗಳು ಮತ್ತು ಭಾಷಣಗಳಿಂದ ಸಮಾಜ ಉದ್ರೇಕಗೊಂಡು ಪ್ರತಿಭಟನೆಯ ಹಿಂಸೆಯಲ್ಲಿ ಕುಟ್ಟಪ್ಪ ಮತ್ತು ರಾಜು ಎಂಬ ಎರಡು ಅಮೂಲ್ಯ ಜೀವಗಳು ಬಲಿಯಾಗುವಂತಹದ್ದು ದುರಂತ. ಸರಕಾರ ಇದನ್ನು ಮೊದಲೇ ಗ್ರಹಿಸಿ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಬೇಕಿತ್ತು. ಈ ಎರಡು ಬಲಿಗಳಿಗೆ ಕರಾವಳಿ ಮತ್ತು ಮಲೆನಾಡಲ್ಲಿ ಕಾರ್ಯನಿರತವಾಗಿ ಜನಾಂಗೀಯ ದ್ವೇಷವನ್ನು ಹಬ್ಬಿಸುತ್ತಿರುವ ಸಂಘ ಪರಿವಾರವೇ ನೇರ ಹೊಣೆಯೆಂದು ನಾವು ಸರಕಾರಕ್ಕೆ ತಿಳಿಸಬಯಸುತ್ತೇವೆ ಮತ್ತು ಸರಕಾರದ ವಿರುದ್ಧ ಸಂಘಟಿತ ವಿರೋಧ ವ್ಯಕ್ತಪಡಿಸಿ, ಅಮಾಯಕರ ಬಲಿ ಪಡೆದ ಸಂಘಟನೆಗಳು ಮತ್ತು ಅದರ ಹಿಂದಿರುವ ನಾಯಕರುಗಳನ್ನು ಸೂಕ್ತ ಕಾನೂನು ಕ್ರಮಕ್ಕೆ ಒಳಪಡಿಸಬೇಕು ಎಂದು ನಾವು ಆಗ್ರಹಿಸುತ್ತೇವೆ.

ಬಿಹಾರದ ಚುನಾವಣಾ ಫಲಿತಾಂಶದಿಂದ ಮಾನಸಿಕ ಸ್ವಾಸ್ಥ್ಯವನ್ನು ಕಳೆದುಕೊಂಡ ಸಂಘಪರಿವಾರ ಮತ್ತು ಬಿಜೆಪಿಯ ಜನ ಪ್ರತಿನಿಧಿಗಳು ಕೂಡಾ ಸರಕಾರ ಕಾರ್ಯಕ್ರಮವನ್ನು ಬಹಿಷ್ಕರಿಸಿ, ತಾವು ತೆರೆಯ ಮರೆಯಲ್ಲಿ ನಿಂತು ಮಾನವ ಜೀವದ ಜೊತೆ ಚೆಲ್ಲಾಟವಾಡುತ್ತಿವೆ. ಟಿಪ್ಪು ಜಯಂತಿ ಮಾತ್ರವಲ್ಲದೇ, ಸರಕಾರದ ಸಮಾನತೆ ಮತ್ತು ಶೂದ್ರಪರ ಕಾರ್ಯಕ್ರಮಗಳನ್ನು ಲೇವಡಿ ಮಾಡುವ ,ಅದರ ಬಗ್ಗೆ ಸಮಾಜದಲ್ಲಿ ಸುಳ್ಳು ಸುದ್ದಿ ಹಬ್ಬಿಸುವ ಮೂಲಕ ಸಾರ್ವಜನಿಕರಲ್ಲಿ ಗೊಂದಲ ಉಂಟು ಮಾಡುವ ಮೂಲಕ ಅವರನ್ನು ಸರಕಾರದ ವಿರುದ್ಧ ಎತ್ತಿಕಟ್ಟಲಾಗುತ್ತಿದೆ. ಇನ್ನೊಂದೆಡೆ ಕರಾವಳಿ ಭಾಗದ ಪೊಲೀಸ್ ಇಲಾಖೆಯಲ್ಲಿ ಶೇ.60 ರಷ್ಟು ಮಂದಿ ಇಂತಹ ಸಂಘಟನೆಗಳ ಅನಧಿಕೃತ ಸದಸ್ಯತ್ವವನ್ನು ಹೊಂದಿರುವವರು ಇದ್ದಾರೆ ಎನ್ನುವುದನ್ನು ಕೋಬ್ರಾ ಪೋಸ್ಟ್ ರಹಸ್ಯ ಕಾರ್ಯಾಚರಣೆಯ ಮೂಲಕ ಆ ನಾಯಕರುಗಳ ಬಾಯಿಂದಲೇ ಹೊರಗೆಡವಿದೆ. ಇಂತಹ ಮನಸ್ಥಿತಿಯ ಪೊಲೀಸರಿಂದ ಸರಕಾರಕ್ಕೆ ಕೆಟ್ಟ ಹೆಸರು ಮಾತ್ರವಲ್ಲ ಕರಾವಳಿಯಲ್ಲಿ ಕೋಮು ದ್ವೇಷಗಳು ಹೆಚ್ಚುತ್ತಿವೆ. ಆದುದರಿಂದ ಇದನ್ನು ಕೂಡಾ ಮಟ್ಟ ಹಾಕಲು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಆಗ್ರಹಿಸುತ್ತದೆ.

ಪ್ರಧಾನ ಕಾರ್ಯದರ್ಶಿಗಳು

ಕರ್ನಾಟಕ ಕೋಮು ಸೌಹಾರ್ದ ವೇದಿಕೆ,

ಕೇಂದ್ರ ಸಮಿತಿ

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s