19 November, 2015 07:33

http://thootejaru.com/%e0%b2%ac%e0%b2%82%e0%b2%9f-%e0%b2%8e%e0%b2%82%e0%b2%a6%e0%b2%b0%e0%b3%86-%e0%b2%85%e0%b2%b0%e0%b2%b8%e0%b3%81-%e0%b2%85%e0%b2%b2%e0%b3%8d%e0%b2%b2-%e0%b2%8e%e0%b2%82%e0%b2%a6%e0%b3%81-%e0%b2%85/

ಬಂಟ ಎಂದರೆ ಅರಸು ಅಲ್ಲ ಎಂದು ಅರ್ಥವೆ? ಮಂಗಳೂರಿನಲ್ಲಿ ನಡೆದ ಸಂವಾದ

Leave a reply

OLYMPUS DIGITAL CAMERA

ಸೆಪ್ಟೆಂಬರ ೧೯ರ ಶನಿವಾರ ಸಂಜೆ ಮಂಗಳೂರಿನ ಡಾನ್ ಬಾಸ್ಕೋ ಮಿನಿ ಹಾಲ್‌ನಲ್ಲಿ ಬಂಟ ಎಂದರೆ ಅರಸು ಅಲ್ಲ ಎಂದು ಅರ್‍ಥವೇ ಎಂಬ ಸಂವಾದ ಕಾರ್‍ಯಕ್ರಮವು ನಡೆಯಿತು. ಬಹುಪಾಲು ಜನರು ಅಹುದಹುದೆಂದರು.
ಪೇರೂರಿನ ತುಳು ಧರ್‍ಮ ಸಂಶೋಧನಾ ಕೇಂದ್ರದ ಸಂಚಾಲಕ ಪೇರೂರು ಜಾರು ಈ ಸಂದರ್‍ಭದಲ್ಲಿ ಇದನ್ನು ವಿವರಿಸಿ ಮಾತನಾಡಿದರು. ಬಂಟೆ ಇಲ್ಲವೇ ಬಂಟ ಎಂಬ ದ್ರಾವಿಡ ತುಳು ಶಬ್ದವು ವೀರ ಎಂಬ ಅರ್‍ಥವನ್ನು ನೀಡುವಂತೆಯೇ ಕಯ್ಯಾಳು ಎಂಬ ಅರ್‍ಥವನ್ನೂ ನೀಡುತ್ತದೆ. ಕಯ್ಯಾಳು ಎಂದ ಮೇಲೆ ಅರಸು ಅಲ್ಲ ಎಂಬುದು ಸುಸ್ಪಷ್ಟ. ಅಂದರೆ ಬಂಟನಾದವನು ದೊರೆಯನ್ನು, ದಣಿಯನ್ನು ಅಪಾಯದ ಸಮಯದಲ್ಲಿ, ಯುದ್ಧದಲ್ಲಿ ಕಾಪಾಡಬೇಕಾದ ಜವಾಬ್ದಾರಿ ಹೊತ್ತವನಾಗಿದ್ದಾನೆ. ದೆಯ್ವಗಳಲ್ಲಿ ಕೂಡ ರಾಜ ದೆಯ್ವಗಳಿಗೆ ಬಂಟ ದೆಯ್ವ ಇರುತ್ತದೆ. ಉದಾಹರಣೆಗೆ ಜಾರಂದಾಯ ರಾಜನ್ ದೆಯ್ವಕ್ಕೆ ಮಯ್ಸಂದಾಯ ಎಂಬುದು ಬಂಟ ದೆಯ್ವವಾಗಿದೆ. ಹುಂಜಗಳಲ್ಲಿ ಹೆಚ್ಚು ಗೆದ್ದ ಕೋಳಿ ಬಂಟ ಕೋಳಿ; ಅದು ಕೂಡ ಸಾಕಿದವನ ಆಜ್ಞೆಯಂತೆ ಕಾದುವುದಾಗಿದೆ. ಬಂಟ ಎಂಬ ಶಬ್ದವು ತುಳುವಿನಲ್ಲಿ ಒಂದು ಜಾತಿಯನ್ನು ಬೊಟ್ಟು ಮಾಡುವ ನುಡಿ ಕಂಡಿತ ಅಲ್ಲ. ತುಳು ಜನಪದದಲ್ಲಿ ಕೋಟಿ ಚೆನ್ನಯರಿಗೆ ಎಣೆಯಿಲ್ಲದ ಬಂಟರು ಎಂಬ ಬಿರುದಿದೆ ಎಂದೂ ಜಾರು ಅವರು ವಿವರಿಸಿದರು.
ಸಂವಾದದಲ್ಲಿ ಪಾಲ್ಗೊಂಡ ಮೊಹಮ್ಮದ್ ಬಡ್ಡೂರು, ಪ್ರವೀಣ್ ಶೆಟ್ಟಿ, ದಿನೇಶ್ ಮೂಲ್ಕಿ, ಮೆಲ್ವಿಲ್ ಪಿಂಟೋ, ಸತೀಶ್ ಚಿಲಿಂಬಿ ಈ ವಿಷಯದ ಬಗೆಗೆ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು; ಇನ್ನಿತರರು ಪಾಲ್ಗೊಂಡಿದ್ದರು.

This entry was posted in Tulunaadu on September 21, 2015.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s