‘ತುಳುನಾಡ್‌ದ ಊರಪುದರ್ ನ್ ಕೆರಿನಕುಲು ಏರ್?’ ಅಂ ದರೆ ತುಳುನಾಡಿನ ಊರ ಹೆಸರುಗಳನ್ನು ಕೊಂದವರು ಯಾರು? ಎ ಂಬ ಸಂವಾದ ಕಾರ್ಯಕ್ರಮ, ಜೂನ್ 18 ರ ಸಂಜೆ 5 ಗಂಟೆಗೆ – ಮಂಗ ಳೂರಿನ ಡಾನ್ ಬಾಸ್ಕೋ ಮಿನಿ ಹಾಲ್ ನಲ್ಲಿ

ಮಾನ್ಯರೇ, ಅಕ್ಕನನ್ನು ತಂಗಿಯೆಂದೂ ತಂಗಿಯನ್ನು ಅಕ್ಕ ಎಂದೂ ಹೇಳಿದ ಅನೇಕ ಉದಾಹರಣೆಗಳಿವೆ. ಆದರೆ ತಾಯಿಯನ್ನು ಮಗಳೆಂದೂ ಮಗಳನ್ನು ತಾಯಿಯೆಂದೂ ಹೇಳಿದ ಉದಾಹರಣೆಗಳು ಇಲ್ಲವೇ ಇಲ್ಲ. ಆದರೆ ನಮ್ಮ ಭಾರತದ ಸಂಸ್ಕೃತ ಅಭಿಮಾನಿಗಳು ಇದನ್ನು ಮಾಡುತ್ತಿದ್ದಾರೆ, ಅಂದರೆ ಸಂಸ್ಕೃತ ಎಲ್ಲ ಭಾಷೆಯ ತಾಯಿ ಮತ್ತು ಇತರ ಭಾರತೀಯ ಭಾಷೆಗಳು ಸಂಸ್ಕೃತದ ಮಕ್ಕಳು ಎನ್ನುವ ರೀತಿಯಲ್ಲಿ ಯಾವಾಗಲೂ ಸಂಸ್ಕೃತದ ವೈಭವೀಕರಣ ಆಗುತ್ತಲೇ ಇರುತ್ತದೆ. ಮೂಲತಃ ಸಂಸ್ಕೃತ ತಾಯಿಯಲ್ಲ ಅದು ಮಗಳು ಎಂದು ಹೆಚ್ಚಿನ ಭಾಷಾ ವಿಜ್ನಾನಿಗಳು ಹೇಳುತ್ತಾರೆ. ಸಂಸ್ಕೃತಕ್ಕೆ ಕೇವಲ 1700 ವರ್ಷದ ಲಿಖಿತ ಇತಿಹಾಸ ಮಾತ್ರ ಇರುವುದು. ಅದಕ್ಕಿಂತ ಮೊದಲು ಸುಮಾರು ಒಂದೂವರೆ ಸಾವಿರ ವರ್ಷ ಅಂದರೆ ರಾಮಾಯಣ-ಮಹಾಭಾರತದ ಕಾಲದಿಂದಲೂ ಸಂಸ್ಕೃತ ಕೇವಲ ಮೌಖಿಕ ಭಾಷೆಯಾಗಿಯೇ ಉಳಿದಿದ್ದು ಇತರ ಎಲ್ಲಾ ಮೌಖಿಕ ಭಾಷೆಗಳಂತೆ ಸಂಸ್ಕೃತವೂ ವ್ಯಾಕರಣ ಮತ್ತೂ ಉಚ್ಛಾರದ ಅನೇಕ ಬದಲಾವಣೆಗೆ ಗುರಿಯಾಗಿತ್ತಂತೆ. ಈಗ 1700 ವರ್ಷಕ್ಕಿಂತ ಹೆಚ್ಚು ಹಳೆಯದಾದ ಮೂಲ ಸಂಸ್ಕೃತ ಶಾಸನ ಅಥವಾ ಯಾವುದೇ ಸಂಸ್ಕೃತ ಗ್ರಂಥ ಲಭ್ಯವೇ ಇಲ್ಲ ಎಂದು ವಿದ್ವಾಂಸರು ಹೇಳುತ್ತಾರೆ. ದ್ರಾವಿಡ ತಮಿಳು ಭಾಷೆ ಸಂಸ್ಕೃತಕ್ಕಿಂತ ತುಂಬಾ ಹೆಚ್ಚು ಹಳೆಯದು.

ಎರಡೂವರೆ ಸಾವಿರ ವರ್ಷ ಹಳೆಯ ಬೌದ್ಧ ಗ್ರಂಥಗಳೆಲ್ಲಾ ಇರುವುದು ಪಾಲಿ ಭಾಷೆಯಲ್ಲಿ ಹಾಗೂ ಜೈನ ಗ್ರಂಥಗಳು ಇರುವುದು ಪ್ರಾಕೃತ ಭಾಷೆಯಾದ ಅರ್ಧಮಾಗಧಿಯಲ್ಲಿ. ಇವುಗಳು ಉಪಯೋಗಿಸಿರುವ ಲಿಪಿ ನಾಗರಿ ಅಥವಾ ಖರೋಷ್ಟಿ ಲಿಪಿಗಳಾಗಿವೆ. ಇದರ ಅರ್ಥ ಸಂಸ್ಕೃತಕ್ಕೆ ಸ್ವಂತ ಲಿಪಿ ಸಹಾ ಇಲ್ಲ. ಅದು ಎರವಲು ಪಡೆದಿರುವುದು ಪಾಲಿ ಮತ್ತು ಅರ್ಧಮಾಗಧಿ ಭಾಷೆಯ ನಾಗರಿ ಲಿಪಿಯನ್ನು. ಅದಕ್ಕೆ ದೇವ ಎಂಬ ಶಬ್ಧ ಜೋಡಿಸಿ ದೇವನಾಗರಿ ಎಂದು ಕರೆದು ತಮ್ಮದಾಗಿಸಿಕೊಂಡಿದ್ದಾರೆ ಅಷ್ಟೇ.

ಇತ್ತೀಚೆಗೆ ಸಂಸ್ಕೃತದ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಸಿದ ಕೆಲವು ವಿದ್ವಾಂಸರು ಹೇಳಿರುವುದೇನೆಂದರೆ– ಇಂಗ್ಲೀಷ್ ಭಾಷೆ ಜಗತ್ತಿನ ಎಲ್ಲಾ ಭಾಷೆಗಳಿಂದಲೂ ಶಬ್ಧಗಳನ್ನು ಎರವಲು ಪಡೆದು ಸಮೃದ್ಧವಾಯಿತು, ಆದರೆ ಇಂಗ್ಲಿಷನ್ನು ಜಗತ್ತಿನ ಎಲ್ಲಾ ಭಾಷೆಗಳ ತಾಯಿಯೆಂದು ಯಾರೂ ಕರೆಯುವುದಿಲ್ಲವಲ್ಲ! ಅದೇ ಪ್ರಕಾರ ಸಂಸ್ಕೃತ ಸಹಾ ಭಾರತದ ಎಲ್ಲಾ ಭಾಷೆಗಳಿಂದ ಶಬ್ಧ ಹಾಗೂ ವ್ಯಾಕರಣ ಎರವಲು ಪಡೆದು ಸಮೃದ್ಧವಾಯಿತು. ಬುಡಕಟ್ಟು ಭಾಷೆಗಳಿಂದಲೂ ಸಂಸ್ಕೃತವು ಶಬ್ಧಗಳನ್ನು ಎರವಲು ಪಡೆದಿದೆಯಂತೆ. ಇತ್ತೀಚೆಗೆ ಜಾರ್ಖಂಡ್- ಛತ್ತಿಸ್ಗಡ-ಓಡಿಶಾದಲ್ಲಿ ಬುಡಕಟ್ಟು ಜನರು ಮಾತನಾಡುವ ಮುಂಡಾರಿ ಮತ್ತು ಸಂತಾಲಿ ಭಾಷೆಗಳಿಂದಲೂ ಶಬ್ಧಗಳನ್ನು ಮತ್ತು ವಿಶಿಷ್ಟ ಉಚ್ಚಾರಗಳನ್ನು ಸಂಸ್ಕೃತವು ಎರವಲು ಪಡೆದಿದೆ ಎಂದು ಭಾಷಾ ವಿಜ್ನಾನಿಗಳು ಸಾಬೀತು ಮಾಡಿದ್ದರೆ. ಹಾಗಿರುವಾಗ ಸಾಹಿತಿ ಭೈರಪ್ಪ ಸಹಿತ ಎಲ್ಲರೂ ಸಂಸ್ಕೃತವನ್ನು ಎಲ್ಲಾ ಭಾಷೆಗಳ ತಾಯಿ ಎನ್ನುತ್ತಿರುವುದು ಎಷ್ಟು ಸರಿ? ದಾನ ಕೊಟ್ಟವನನ್ನು ದಾನ ಪಡೆದವ ಎನ್ನುವುದು ಮತ್ತು ದಾನ ಪಡೆದವನನ್ನು ದಾನ ಕೊಟ್ಟವ ಎಂದು ಉಲ್ಟಾ ಆಗಿಸಿದ್ದು ಯಾರ ಕುತಂತ್ರ ?

ಹಾಗೆ ನೋಡಿದರೆ ತಮಿಳಿನಂತೆ ನಮ್ಮ ತುಳು ಸಹಾ ಸಂಸ್ಕೃತಕ್ಕಿಂತ ಹೆಚ್ಚು ಹಳೆಯದೆಂದು ತುಳು ಸಂಶೋಧಕ ಪೆರೂರು ಜಾರು ಇವರು ಹೇಳುತ್ತಾರೆ. ಹಾಗಾಗಿ ಸಂಸ್ಕೃತಕ್ಕಿಂತ ಹೆಚ್ಚು ಹಳೆಯದಾದ ನಮ್ಮ ತುಳುನಾಡಿನ ಊರುಗಳ ಅಚ್ಚ ತುಳು ಹೆಸರುಗಳನ್ನು ಸಂಸ್ಕೃತ ಅಥವಾ ಕನ್ನಡ ತಾಗಿಸಿ ಕುಲಗೆಡಿಸಿದವರು ಯಾರು? ಎಂಬ ವಿಷಯದ ಬಗ್ಗೆ ಅವರು ಸಂವಾದ ಕಾರ್ಯಕ್ರಮವನ್ನು ಜೂನ್ 18 ಕ್ಕೆ ಶನಿವಾರ ಸಂಜೆ 4 ಗಂಟೆಗೆ ಮಂಗಳೂರಿನ ಡಾನ್ ಬಾಸ್ಕೋ ಮಿನಿ ಹಾಲ್ ನಲ್ಲಿ ಆಯೋಜಿಸಿದ್ದಾರೆ. ಆಸಕ್ತಿ ಉಳ್ಳವರು ಯಾರೇ ಆಗಲಿ ಇದರಲ್ಲಿ ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಬಹುದು ಎಂದು ಪೆರೂರು ಜಾರು ಹೇಳಿರುತ್ತಾರೆ. ತುಳುವರ ಪವಿತ್ರ ಭೂತ-ದೈವಗಳ ಹೆಸರುಗಳನ್ನೂ ವೈದಿಕರು ಸಂಸ್ಕೃತೀಕರಣ ಮಾಡಿರುವ ಬಗ್ಗೆಯೂ ಸಂವಾದ ಇದೆ.

ತಮ್ಮ ವಿಶ್ವಾಸಿ,

ಪ್ರವೀಣ್. ಎಸ್. ಶೆಟ್ಟಿ , ಮಂಗಳೂರು.

Who Corrupted Tulu Nadu Toponymy

Debate on June 18 Evening at Don Bosco

A debate on the subject that who corrupted Tulu Nadu Toponomy to be held on June 18, at 4pm, evening at Don Bosco mini hall, to be conducted by Tulu Relegion Research Centre, Perooru said in a released press note.

ತುಳುನಾಡಊರಹೆಸರುಗಳನ್ನುಕೊಂದವರುಯಾರು? ಜೂನ್ ೧೮ರ ಸಂಜೆ ಡಾನ್ ಬಾಸ್ಕೋದಲ್ಲಿ ಸಂವಾದ. ತುಳು ಧರ್‍ಮ ಸಂಶೋಧನಾ ಕೇಂದ್ರ, ಪೇರೂರು ಆಯೋಜಿಸುವ ‘ತುಳುನಾಡ್‌ದ ಊರಪುದರ್ ನ್ ಕೆರಿನಕುಲು ಏರ್?’ ಅಂದರೆ ತುಳುನಾಡಿನ ಊರ ಹೆಸರುಗಳನ್ನು ಕೊಂದವರು ಯಾರು ಎಂಬ ಸಂವಾದ ಕಾರ್‍ಯಕ್ರಮವು ಜೂನ್ ೧೮ರ ಸಂಜೆ ೪ ಗಂಟೆಗೆ ಮಂಗಳೂರಿನ ಡಾನ್ ಬಾಸ್ಕೋ ಮಿನಿ ಹಾಲ್‌ನಲ್ಲಿ ನಡೆಯಲಿದೆ ಎಂದು ಸಂಘಟಕರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s