ಗೋವಿನ ಹೆಸರಿನ ರಾಜಕೀಯಕ್ಕೆ ಮಾನವ ಜೀವದ ಬಲಿ : ಕ. ಕೋ.ಸೌ.ವೇದಿಕೆ ಖಂಡನೆ

ಗೋವಿನ ಹೆಸರಿನ ರಾಜಕೀಯಕ್ಕೆ ಮಾನವ ಜೀವದ ಬಲಿ : ಕ.ಕೋ.ಸೌ.ವೇದಿಕೆ ಖಂಡನೆ

ಉಡುಪಿಯಲ್ಲಿ ಪ್ರವೀಣ ಪೂಜಾರಿ ಕೊಲೆ- ಉಡುಪಿ ಚಲೋ ಜಾಥಾಕ್ಕೆ ಚಿಂತನೆ.

ಗೋವಿನ ಹೆಸರಿನಲ್ಲಿ ನಡೆಯುತ್ತಿರುವ ಹಿಂದೂತ್ವದ ರಾಜಕೀಯ ಹಲ್ಲೆ – ಲೂಟಿ-ದರೋಡೆಗಳಿಗೆ ಎಡೆ ಮಾಡಿಕೊಡುತ್ತಿದೆಯಲ್ಲದೇ, ಕೊಲೆಗಳನ್ನೂ ನಡೆಸುತ್ತಿದೆ. ಇತ್ತೀಚೆಗೆ ಚಿಕ್ಕಮಗಳೂರಿನ ಜಯಪುರದ ಕುಂದೂರಿನಲ್ಲಿ ದಲಿತರ ಮೇಲೆ ದೌರ್ಜನ್ಯಗಳನ್ನು ನಡೆಸುವ ವಿಷಯ ಜನ ಮಾನಸದಲ್ಲಿ ಮಾಸುವ ಮುನ್ನವೇ, ನಿನ್ನೆ ( ಆಗಸ್ಟ್,18-2016) ಉಡುಪಿ ಜಿಲ್ಲೆಯ ಹೆಬ್ರಿ ಸಂತೆಕಟ್ಟೆಯ ಪರಿಸರದಲ್ಲಿ ಜಾನುವಾರು ಸಾಗಾಟ ಮಾಡುತ್ತಿದ್ದ ಬಿಜೆಪಿಯ ಸಕ್ರಿಯ ಕಾರ್ಯಕರ್ತ ಪ್ರವೀಣ ಪೂಜಾರಿಯನ್ನು ಕೊಂದು ಮುಗಿಸುವಲ್ಲಿಗೆ ಮುಟ್ಟಿದೆ. ಆತನ ಜೊತೆಗಿದ್ದ ಇನ್ನೋರ್ವ ಅಕ್ಷಯ ಎಂಬಾತನಿಗೂ ಹಲ್ಲೆ ಮಾಡಲಾಗಿದೆ.
ಈ ಪ್ರಕರಣವನ್ನು ಕರ್ನಾಟಕ ಕೋಮು ಸೌಹಾರ್ದ ವೇದಿಕೆ ತೀವ್ರವಾಗಿ ಖಂಡಿಸುತ್ತಿದೆ. ಈ ವರೆಗೆ ಮುಸ್ಲಿಮ್ – ದಲಿತರ ಮೇಲೆ ಗೋವಿನ ಹೆಸರಲ್ಲಿ ಹಲ್ಲೆ ನಡೆಸುತ್ತಿದ್ದ ಹಿಂದೂ ಸಂಘಟನೆಗಳು ಇಂದು ಬಿಜೆಪಿಯ ಕಾರ್ಯಕರ್ತನನ್ನೇ ಬಲಿ ಪಡೆಯುವ ಮಟ್ಟಕ್ಕೆ ಬಂದಿದೆ. ಅಂದರೇ, ಮುಸ್ಲಿಮ್- ದಲಿತರ ಬಳಿಕ ಈಗ ಹಿಂದುಳಿದ ವರ್ಗದವರನ್ನೂ ಬಲಿ ಪಡೆದುಕೊಳ್ಳುವ ಈ ನೀಚ ಗೋ – ರಾಜಕೀಯದ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ವೇದಿಕೆ ಒತ್ತಾಯಿಸುತ್ತದೆ.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವ ವೇದಿಕೆ , ಶೀಘ್ರದಲ್ಲೆ ಪ್ರಕರಣದ ಬಗ್ಗೆ ರಾಜ್ಯದ ವಿವಿಧ ಪ್ರಗತಿಪರ ಮತ್ತು ಮಾನವ ಪರ – ಎಡಪಂಥೀಯ ಸಂಘಟನೆಗಳನ್ನು ಮತ್ತು ಚಿಂತಕರು ಗಳನ್ನು ಒಡಗೂಡಿಸಿಕೊಂಡು ‘ ಉಡುಪಿ ಚಲೋ’ ಕಾರ್ಯಕ್ರಮ ಹಾಕಿಕೊಳ್ಳಲು ಚಿಂತನೆ ನಡೆಸಿದೆ.

– ಪ್ರಧಾನ ಕಾರ್ಯದರ್ಶಿಗಳು ಮತ್ತು ಕಾರ್ಯದರ್ಶಿ ಮಂಡಳಿ,
ಕರ್ನಾಟಕ ಕೋಮು ಸೌಹಾರ್ದ ವೇದಿಕೆ, ಕೇಂದ್ರ ಸಮಿತಿ ಮತ್ತು

ಉಡುಪಿ ಜಿಲ್ಲಾ ಸಮಿತಿ ಕ.ಕೋ.ಸೌ.ವೇದಿಕೆ ಹಾಗೂ ಸಹಭಾಗಿ ಸಂಘಟನೆಗಳು, ಉಡುಪಿ ಜಿಲ್ಲೆ

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s