ಶೈವ ವೈಷ್ಣವ ತಿಕ್ಕಾಟದಿಂದಾಗಿ ಗೋವಿಗೆ ಹಿಂದೂ ಧ ರ್ಮದಲ್ಲಿ ಅನಗತ್ಯ ಮಹತ್ವ ಕೊಡಲಾಗಿದೆಯೇ ? :ಶನಿವಾರ ಆ ಗಷ್ಟ್ 20 ಕ್ಕೆ ಸಂಜೆ 4 ಗಂಟೆಗೆ ಡಾನ್ ಬಾಸ್ಕೋ ಮಂಗಳೂರಿ ನಲ್ಲಿ ಪೆರೂರು ಜಾರು ಇವರ ಸಂವಾದ ಕಾರ್ಯಕ್ರಮ.

ಶೈವ ವೈಷ್ಣವ ತಿಕ್ಕಾಟದಿಂದಾಗಿ ಗೋವಿಗೆ ಹಿಂದೂ ಧರ್ಮದಲ್ಲಿ ಅನಗತ್ಯ ಮಹತ್ವ ಕೊಡಲಾಗಿದೆಯೇ ?

ಎತ್ತಿಗೆ ಭಾರತದೆಲ್ಲೆಡೆ ಆಲಯ ಆದರೆ ದನಕ್ಕೆಲ್ಲಿದೆ ಆಲಯ? ಶೈವರ ನಂದಿಯ ವಿರುದ್ಧ ವೈಷ್ಣವರು ರಚಿಸಿರುವ ಷಡ್ಯಂತ್ರವೇ ಹಸುವಿನ ಮೇಲ್ಮೆ ಆಗಿದೆಯೇ? ಎಂಬ ಅತಿ ಧರ್ಮ ಸೂಕ್ಷ್ಮ ಪ್ರಶ್ನೆಗಳನ್ನು ತುಳು ಸಂಸ್ಕೃತಿಯ ಸಂಶೋಧಕ ಪೆರೂರು ಜಾರು ಇವರು ಎತ್ತಿದ್ದಾರೆ. ಸಾಮಾನ್ಯವಾಗಿ ಪ್ರತಿಯೊಂದು ಶಿವನ ದೇವಾಲಯಗಳಲ್ಲಿ ಶಿವನಿಗೆ ಎದುರಾಗಿ ದರ್ಶನ ಪಡೆಯುತ್ತಿರುವ ನಂದಿಯ (ಎತ್ತಿನ) ವಿಗ್ರಹವನ್ನು ಎಲ್ಲೆಡೆ ಕಾಣಬಹುದು. ಅಷ್ಟೇ ಅಲ್ಲ ನಂದಿಗೆಂದೇ ಮುಡಿಪಾದ ಕೆಲವು ಪ್ರತ್ಯೇಕ ದೇವಾಲಯಗಳೂ ಭಾರತದಲ್ಲಿ ಕಂಡುಬರುತ್ತವೆ. ಆದರೆ ಹಸುವಿಗೆ ಮುಡಿಪಾದ ಆಲಯ ಎಲ್ಲಿಯೂ ಕಂಡು ಬರುವುದಿಲ್ಲ ಯಾಕೆ? ಗೋವು ಕೃಷ್ಣನಿಗೆ ತುಂಬಾ ಪ್ರೀಯವಾದುದು ಎನ್ನಲಾಗುತ್ತದೆ. ಆದರೆ ಕೇವಲ 130 ವರ್ಷ ಹಿಂದಿನ ರಾಜಾ ರವಿವರ್ಮನ ಚಿತ್ರಗಳ ಹೊರತು ಬೇರೆ ಯಾವುದೇ ಪುರಾತನ ಶಿಲ್ಪಾಗಳಲ್ಲಿ ಕೃಷ್ಣನು ಗೋವುಗಳೊಟ್ಟಿಗೆ ಇರುವಂತಹಾ ಶಿಲ್ಪಾ ಅಥವಾ ಭಿತ್ತಿಚಿತ್ರಗಳು ಕಾಣ ಸಿಗುವುದಿಲ್ಲ. ಕೃಷ್ಣ ಎಲ್ಲೆಡೆ ಕಾಣ ಸಿಗುವುದು ರಾಧೆಯೊಂದಿಗೆ. ಈ ರಾಧೆ ಗೋವಿನ ಅವತಾರ ಅಲ್ಲವಲ್ಲ?

ಜಗಜ್ಯೋತಿ ಬಸವೇಶ್ವರರು ನಂದಿಯ ಅವತಾರ ಎನ್ನುತ್ತಾರೆ ವೀರಶೈವರು. ಆದರೆ ಅವರ ಇಬ್ಬರು ಪತ್ನಿಯರು ಅಥವಾ ಅವರ ತಾಯಿಯನ್ನು ಕಾಮಧೇನು ಅಥವಾ ಬೇರೆ ದೈವಿ ಹಸುವಿನ ಅವತಾರ ಎಂದು ಯಾಕೆ ಹೇಳಲಾಗುತ್ತಿಲ್ಲ ಗೊತ್ತೇ? ಯಾಕೆಂದರೆ ಹಸುವಿಗೆ ವೀರಶೈವ ಲಿಂಗಾಯತ ಧರ್ಮದಲ್ಲಿ ಪ್ರಾಮುಖ್ಯತೆಯಿಲ್ಲ. ಮಹಂಜೊದಾರೋ ಹರಪ್ಪ ಸಂಸ್ಕೃತಿಯಲ್ಲೂ ಕೇವಲ ಹೋರಿಗೆ ಪ್ರಾಮುಖ್ಯತೆ ಇತ್ತೇ ಹೊರತು ಹಸುವಿಗೆ ಪ್ರಾಮುಖ್ಯತೆ ಇರಲಿಲ್ಲ ಎಂದು ಅಲ್ಲಿಯ ಉತ್ಖನನದಲ್ಲಿ ದೊರೆತ ವಸ್ತುಗಳಿಂದ ಸಾಬೀತಾಗುತ್ತದೆ.

ಬಸವ ಅರ್ಥಾತ್ ನಂದಿಯನ್ನು ಸಾಮಾನ್ಯವಾಗಿ ಶಿವನ ವಾಹನ ಎಂದೆ ಗುರುತಿಸಲಾಗುತ್ತದೆ. ಆದರೆ ನಿಜವಾಗಿ ನಂದಿ ಕೇವಲ ಶಿವನ ವಾಹನವಷ್ಟೇ ಅಲ್ಲ, ಅವನು ಕೈಲಾಸದ ಮೇಲ್ವಿಚಾರಕ ಸಹಾ ಆಗಿದ್ದಾನೆ. ಸದೃಢ ಮೈಕಟ್ಟು ಹಾಗೂ ವಿವೇಕದ ಸಂಕೇತ ನಂದಿ ಎನ್ನುತ್ತದೆ ಶಿವಪುರಾಣ. ಹಾಗಾಗಿ ನಂದಿಗೆ ಎಲ್ಲೆಡೆ ಆಲಯಗಳಿವೆ. ಮೈಸೂರಿನ ಚಾಮುಂಡಿ ಬೆಟ್ಟದಲ್ಲಂತೂ 20 ಅಡಿ ಎತ್ತರದ ನಂದಿಯ ವಿಶ್ವ ಪ್ರಸಿದ್ಧ ಅದ್ಭುತ ಏಕಶಿಲಾ ಮೂರ್ತಿಯಿದೆ. ಆದರೆ ಅಲ್ಲೆಲ್ಲೂ ಹಸುವಿನ ಮೂರ್ತಿ ಕಂಡು ಬರುವುದಿಲ್ಲ. ಬೆಂಗಳೂರಿನ ಬಸವನಗುಡಿಯು ಬುಲ್ ಟೆಂಪಲ್ ಎಂದೇ ಪ್ರಸಿದ್ಧ. ಉತ್ತರ ಕರ್ನಾಟಕದಲ್ಲಿ ಜುಲೈ ತಿಂಗಳಲ್ಲಿ ಮಣ್ಣೆತ್ತಿನ ಅಮವಾಸ್ಯೆಯನ್ನು (ಮೃಣ್ಮಯ ವೃಷಭ ಪೂಜಾ) ಎಲ್ಲಾ ರೈತರು ಬಹಳ ಉತ್ಸಾಹದಿಂದ ಆಚರಿಸುತ್ತಾರೆ. ಆದರೆ ಮಣ್ಣು-ಹಸುವಿನ ಅಮಾವಾಸ್ಯೆ ಅಥವಾ ಗೋವಿನ ಹುಣ್ಣಿಮೆ ಯಾರೂ ಆಚರಿಸುವುದಿಲ್ಲ. ಹಾಗಿರುವಾಗ ಹಸುವಿಗೆ ಗೋಮಾತೆ ಎಂದು ಕರೆಯುತ್ತಾ ಇತ್ತೀಚಿಗೆ ಒಮ್ಮೆಲೇ ಇಷ್ಟು ಪವಿತ್ರತೆ ಬರಲು ಕಾರಣವೇನು? ನಂದಿಯ ಹೆಸರಲ್ಲಿ ನಂದಿಗುಡ್ಡ, ನಂದಿಗಿರಿ, ನಂದಿಹೊಳೆ, ನಂದಿಹಳ್ಳಿ, ನಂದಿಗೆರೆ, ಬಸವನ ಹಳ್ಳಿ, ಬಸವನ ಗುಡಿ, ಮುಂತಾದ ಊರುಗಳಿವೆ. ಆದರೆ ಹಸುವಿನ ಹೆಸರಿನ ಊರುಗಳಿಲ್ಲ. ಹಸುವಿನ ಮೈಯಲ್ಲಿ 33 ಕೋಟಿ ದೇವರಿದ್ದರೆ ಪುರುಷ ಪ್ರಧಾನ ಆರ್ಯ ಸಂಸ್ಕೃತಿಯ ಪ್ರಕಾರ ಹಸುವಿನ ಪತಿದೇವರಾದ ಎತ್ತಿನ ಮೈಯಲ್ಲಿ ಕಡೇ ಪಕ್ಷ 33 ಕೋಟಿಗಿಂತ ಒಂದು ದೇವರಾದರೂ ಹೆಚ್ಚು ಇರಬೇಕಲ್ಲವೇ? ಹಾಗಾದರೆ ವೈಷ್ಣವರಿಗೆ ಮತ್ತು ಸಂಘ ಪರಿವಾರದ ಪುಂಡ ಹೋರಿಗಳಿಗೆ ಎತ್ತು ಪೂಜಾರ್ಹ ಯಾಕಿಲ್ಲ? ಈ ಎಲ್ಲಾ ಪ್ರಶ್ನೆಗಳನ್ನೆತ್ತಿಕೊಂಡು ಸಂಶೋಧಕ ಸಾಹಿತಿ ಪೆರೂರು ಜಾರು ಇವರು ಇದೇ ಶನಿವಾರ ( ಆಗಷ್ಟ 20 ಕ್ಕೆ ) ಸಾಯಂಕಾಲ ನಾಲ್ಕು ಗಂಟೆಗೆ ಮಂಗಳೂರಿನ ಡಾನ್ ಬಾಸ್ಕೋ ಹಾಲಿನಲ್ಲಿ ಸಂವಾದ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಈ ಬಗ್ಗೆ ಆಸಕ್ತಿ ಇರುವವರು ಬಂದು ಮುಕ್ತವಾಗಿ ತಮ್ಮ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಬಹುದು ಎಂದು ಆಯೋಜಕರು ತಮಗೆಲ್ಲಾ ವಿನಂತಿಸಿದ್ದಾರೆ.

ತಮ್ಮ ವಿಶ್ವಾಸಿ,

ಪ್ರವೀಣ್. ಎಸ್. ಶೆಟ್ಟಿ , ಮಂಗಳೂರು.

ತಾ: 18-8-2016.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s