ಗಾಂಧೀಜಿಯ ಕೊಲೆ ನೆನಪಿಸಲು – ಸೌಹಾರ್ದ ಸಂಸ್ಕೃತ ಿ – ಸಹಬಾಳ್ವೆಯ ಪರಂಪರೆಯನ್ನು ಉಳಿಸಲು ಜನವರಿ, 30-2017 ರಂ ದು ಉಡುಪಿಯಲ್ಲಿ ಸೌಹಾರ್ದ ದಿನಾಚರಣೆ

ಗಾಂಧೀಜಿಯ ಕೊಲೆ ನೆನಪಿಸಲು – ಸೌಹಾರ್ದ ಸಂಸ್ಕೃತಿ – ಸಹಬಾಳ್ವೆಯ ಪರಂಪರೆಯನ್ನು ಉಳಿಸಲು

ಜನವರಿ, 30-2017 ರಂದು ಉಡುಪಿಯಲ್ಲಿ ಸೌಹಾರ್ದ ದಿನಾಚರಣೆ

ಉಡುಪಿ : ಮಹಾತ್ಮಗಾಂಧಿಯವರ ಕೊಲೆಯಾದ ಜನವರಿ, 30 ದಿನವನ್ನು ‘ಸೌಹಾರ್ದ ದಿನ’ ವನ್ನಾಗಿ ಆಚರಿಸಬೇಕು ಎಂಬ ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಕೇಂದ್ರ ಸಮಿತಿಯ ನಿರ್ಧಾರದಂತೆ, ಪ್ರತಿ ವರ್ಷವೂ ಜನವರಿ 30 ರ ದಿನವನ್ನು ಸೌಹಾರ್ದ ದಿನವನ್ನಾಗಿ ವೇದಿಕೆ ಆಚರಿಸಿಕೊಂಡು ಬರುತ್ತಿದ್ದು, ಅದರಂತೆ ಈ ಬಾರಿಯೂ ಜನವರಿ,30-2017 ನೇ ಸೊಮವಾರ ಉಡುಪಿಯ ಬಸ್ ಸ್ಟ್ಯಾಂಡ್ ಬಳಿಯ ಗಾಂಧಿ ಪ್ರತಿಮೆಯ ಬಳಿ ಸೌಹಾರ್ದ ದಿನವನ್ನು ಆಚರಿಸಲು ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಉಡುಪಿ ಜಿಲ್ಲಾ ಘಟಕ ನಿರ್ಧರಿಸಿದೆ. ಅಂದು ಸಂಜೆ 5.30 ರಿಂದ ಸೌಹಾರ್ದ ದಿನಾಚರಣೆಯ ಬಹಿರಂಗ ಕಾರ್ಯಕ್ರಮ ನಡೆಯಲಿದೆ

ಗಾಂಧೀಜಿಯನ್ನು ಕೊಲೆ ಮಾಡುವ ಮೂಲಕ ಸ್ವತಂತ್ರ ಭಾರತದಲ್ಲಿ ಮೊದಲ ಭಯೋತ್ಪಾದನಾ ಕೃತ್ಯ ನಡೆಸಲು ಮುಂದಾಗಿರುವ ವಿಚಾರವನ್ನು ಜನರ ಮುಂದಿಡುವ – ಗಾಂಧಿ ಪ್ರಣೀತ ಧರ್ಮದರ್ಶಿತ್ವವನ್ನೂ ದೂರ ಮಾಡುತ್ತಿರುವ, ಸಹಬಾಳ್ವೆಯ ಪರಂಪರೆಯನ್ನು ಹಾಳು ಮಾಡುತ್ತಿರುವ ಶಕ್ತಿಗಳಿಗೆ ಸೌಹಾರ್ದತೆಯ ಮಹತ್ವವನ್ನು ನೆನಪಿಸಲು ಮತ್ತು ಗಾಂಧೀಜಿಯವರ ಸಿದ್ಧಾಂತಗಳನ್ನು ಮರೆ ಮಾಚಿ ದೇಶದಲ್ಲಿ ಏಕ ಸಂಸ್ಕೃತಿಯನ್ನು ಹೇರ ಹೊರಟು ಸೌಹಾರ್ದ ಸಂಸ್ಕೃತಿಯನ್ನು ನಾಶ ಮಾಡುವ ಶಕ್ತಿಗಳ ಸಂಚನ್ನು ಬಹಿರಂಗ ಪಡಿಸಿ , ಸಹಬಾಳ್ವೆಯ ಉದಾತ್ತ ಪರಂಪರೆಯನ್ನು ಉಳಿಸಿ – ಬೆಳೆಸುವ ಅಗತ್ಯತೆಯ ಬಗ್ಗೆ ಜನಜಾಗೃತಿ ಮೂಡಿಸಲು ಪ್ರಯತ್ನ ನಡೆಸಲಾಗುವುದು. ಜೊತೆಗೆ ಉಡುಪಿಯ ಸೌಹಾರ್ದತೆಯ ಪ್ರತೀಕವಾದ ಹಾಜಿ ಅಬ್ದುಲ್ಲಾ ಸಾಹೇಬರ ನೆನಪನ್ನು ಮತ್ತು ಅವರು ನೀಡಿದ ದಾನ ಪರಂಪರೆಯನ್ನು ಮರೆಮಾಚುವ ಸಲುವಾಗಿ ಅವರ ದಾನದಿಂದ ನಿರ್ಮಾಣವಾಗಿರುವ ಉಡುಪಿ ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಮತ್ತು ದಾನ ನೀಡಿದ ಭೂಮಿಯನ್ನೂ ಖಾಸಗಿಯವರ ಕೈಗೆ ನೀಡ ಹೊರಟಿರುವ ರಾಜ್ಯ ಸರಕಾರವೂ ಅಂತಹ ಮಹಾನ್ ವ್ಯಕ್ತಿತ್ವಕ್ಕೆ ಅಪಚಾರ ಮಾಡ ಹೊರಟಿರುವುದನ್ನೂ ಇದೇ ಸಂದರ್ಭದಲ್ಲಿ ನೆನಪಿಸಿಕೊಳ್ಳುವುದರ ಮೂಲಕ ಸರಕಾರ ಗಾಂಧಿ ತತ್ವಗಳಿಗೆ ತಿಲಾಂಜಲಿ ನೀಡ ಹೊರಟಿರುವುದನ್ನು ಈ ಕಾರ್ಯಕ್ರಮದ ಮೂಲಕ ಸಾರ್ವಜನಿಕರಿಗೆ ತಿಳಿಸಲು ನಿರ್ಧರಿಸಲಾಗಿದೆ.

ವೇದಿಕೆಯ ಎಲ್ಲಾ ಸಹಭಾಗಿ ಸಂಘಟನೆಗಳು, ಸೌಹಾರ್ದತೆಯನ್ನು ಬೆಂಬಲಿಸುವ – ಸಹಬಾಳ್ವೆಯನ್ನು ಆಶಿಸುವ ಜನಪರ – ಪ್ರಗತಿಪರ ಸಂಘಟನೆಗಳು ಮತ್ತು ವ್ಯಕ್ತಿಗಳು – ಗಾಂಧೀಜಿಯವರ ಕೊಲೆಯನ್ನು ಮತ್ತು ಕೊಲೆಗಡುಕ ಸಂಸ್ಕೃತಿಯನ್ನು ವಿರೋಧಿಸುವವರು ಈ ‘ಸೌಹಾರ್ದ ದಿನಾಚರಣೆ’ ಯಲ್ಲಿ ಜೊತೆಗೂಡಬೇಕಾಗಿ ಈ ಮೂಲಕ ವಿನಂತಿಸಲಾಗಿದೆ.

*ಜಿ.ರಾಜಶೇಖರ್, ಜಿಲ್ಲಾಧ್ಯಕ್ಷರು, ಕ.ಕೋ.ಸೌ.ವೇದಿಕೆ, ಉಡುಪಿ ಜಿಲ್ಲಾ ‍ಘಟಕ

Advertisements

ಬ್ಯಾರಿ ಭಾಷೆಯ ತಾಳಮದ್ದಳೆ ಬೇಕೆ? ‘ಬ್ಯಾರಿ ತಾಳ ಮದ್ದೊಳಿ ಬೋಡ’ : ಒಂದು ಸಂವಾದ ಕಾರ್ಯಕ್ರಮ

ಮಾನ್ಯರೇ,

ಜನವರಿ 21 ರಂದು ಮಂಗಳೂರಿನಲ್ಲಿ ಪೆರೂರು ಜಾರು ಇವರು ಆಯೋಜಿಸಿರುವ ಮುಕ್ತ ಸಂವಾದಕ್ಕೆ ಎಲ್ಲರಿಗೂ ಆದರದ ಸ್ವಾಗತವಿದೆ.

ವಿಷಯ : ಬ್ಯಾರಿ ಭಾಷೆಯ ತಾಳಮದ್ದಳೆ ಬೇಕೆ? ‘ಬ್ಯಾರಿ ತಾಳಮದ್ದೊಳಿ ಬೋಡ’

ಇದೇ ಜನವರಿ ೨೧ರ ಶನಿವಾರ ಸಂಜೆ ೪ ಗಂಟೆಯಿಂದ ಮಂಗಳೂರಿನ ಡಾನ್ ‌ಬಾಸ್ಕೋ ಮಿನಿ ಹಾಲ್ ನಲ್ಲಿ ತುಳು ಸಂವಾದ ಕಾರ್ಯಕ್ರಮ ನಡೆಯಲಿದೆ.ಪೇರೂರಿನ ತುಳು ಸಂಶೋಧನಾ ಕೇಂದ್ರ ಏರ್ಪಡಿಸಿರುವ ಸಂವಾದ ಕಾರ್ಯಕ್ರಮದಲ್ಲಿ ಎಲ್ಲ ಕಲಾಸಕ್ತರಿಗೆ ಮುಕ್ತ ಪರ-ವಿರೋಧ ಅಭಿಪ್ರಾಯ ವ್ಯಕ್ತ ಮಾಡುವ ಅವಕಾಶವಿದೆ.

Whether Beary Thaalamaddhale is Required ?

Tulu Debate on January 21, 2017 Saturday evening 4 pm onwards,

Subject: ‘Is Beary Language Thaalamaddhale Required ?’

Place : Don Bosco mini hall in Mangalore.

Organized By: Tulu Research Centre Perooru.

Debate is open for all. Tulunadu Art & Music lovers are welcome to express their views.

ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಸ್ವೀಕರಿಸಲಾರೆ : ಜಿ.ರಾಜಶೇಖರ್

ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಸ್ವೀಕರಿಸಲಾರೆ : ಜಿ.ರಾಜಶೇಖರ್
ರಾಜ್ಯ ಸಾಹಿತ್ಯ ಅಕಾಡೆಮಿ ನನ್ನ ‘ಬಹುವಚನ ಭಾರತ’ ಕೃತಿಗೆ ಪ್ರಶಸ್ತಿ ನೀಡಿದೆ. ಅಕಾಡೆಮಿ ನನ್ನ ಬಗ್ಗೆ ತೋರಿದ ಗೌರವಕ್ಕೆ ನಾನು ಕೃತಜ್ಞ. ಆದರೆ, 2015ರಲ್ಲಿ ಸಾಹಿತಿಗಳು ತಮಗೆ ನೀಡಿದ ಪ್ರಶಸ್ತಿಗಳ ನಿರಾಕರಣೆ / ವಾಪಾಸಾತಿಗೆ ಯಾವ ಸನ್ನಿವೇಶ ಕಾರಣವಾಯಿತೋ, ಆ ಸನ್ನಿವೇಶ ಈಗ ಇನ್ನಷ್ಟು ಹದಗೆಟ್ಟಿದೆ. ಹಾಗಾಗಿ ಈ ಪ್ರಶಸ್ತಿಯನ್ನ ನಾನು ಸ್ವೀಕರಿಸಲಾರೆ.

ಜಿ ರಾಜಶೇಖರ್
11 January, 2017

ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಸ್ವೀಕರಿಸಲಾರೆ : ಜಿ.ರಾಜಶೇಖರ್

ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಸ್ವೀಕರಿಸಲಾರೆ : ಜಿ.ರಾಜಶೇಖರ್
ರಾಜ್ಯ ಸಾಹಿತ್ಯ ಅಕಾಡೆಮಿ ನನ್ನ ‘ಬಹುವಚನ ಭಾರತ’ ಕೃತಿಗೆ ಪ್ರಶಸ್ತಿ ನೀಡಿದೆ. ಅಕಾಡೆಮಿ ನನ್ನ ಬಗ್ಗೆ ತೋರಿದ ಗೌರವಕ್ಕೆ ನಾನು ಕೃತಜ್ಞ. ಆದರೆ, 2015ರಲ್ಲಿ ಸಾಹಿತಿಗಳು ತಮಗೆ ನೀಡಿದ ಪ್ರಶಸ್ತಿಗಳ ನಿರಾಕರಣೆ / ವಾಪಾಸಾತಿಗೆ ಯಾವ ಸನ್ನಿವೇಶ ಕಾರಣವಾಯಿತೋ, ಆ ಸನ್ನಿವೇಶ ಈಗ ಇನ್ನಷ್ಟು ಹದಗೆಟ್ಟಿದೆ. ಹಾಗಾಗಿ ಈ ಪ್ರಶಸ್ತಿಯನ್ನ ನಾನು ಸ್ವೀಕರಿಸಲಾರೆ.

ಜಿ ರಾಜಶೇಖರ್
11 January, 2017