ಪ್ರ್ಯಾಕ್ಸಿಸ್/Praxis

ಕರ್ನಾಟಕಕೋಮುಸೌಹಾರ್ದವೇದಿಕೆ

ಜೂನ್ 1, 2014 ರಂದುತುಮಕೂರಿನಲ್ಲಿನಡೆದಕೇಂದ್ರಸಮಿತಿಸಭೆಯನಿರ್ಣಯಗಳು

ಆತ್ಮೀಯರೆ,

ಲೋಕಸಭಾಚುನಾವಣಾಫಲಿತಾಂಶದಬಳಿಕಮೊದಲಕೇಂದ್ರಸಮಿತಿಸಭೆಯನ್ನುತುಮಕೂರಿನಲ್ಲಿ  ನಡೆಸಲಾಯಿತು.

ಸಭೆಯಅಜೆಂಡಾಈಕೆಳಗಿನಂತಿತ್ತು.

1.            ಚುನಾವಣಾಫಲಿತಾಂಶದವಿಶ್ಲೇಷಣೆ.

2.            ಮುಂದಿನಕಾರ್ಯಯೋಜನೆಗಳು.

3.            ಸರ್ವಸದಸ್ಯರಸಭೆ

4.            ಹಣಕಾಸು.

 

1.            ಫಲಿತಾಂಶದವಿಶ್ಲೇಷಣೆ : ಇದೊಂದುಅನಿರೀಕ್ಷಿತವಾದಫಲಿತಾಂಶ. ಕರ್ನಾಟಕದಬಹುತೇಕಪ್ರಗತಿಪರರುಈರೀತಿಯಫಲಿತಾಂಶವನ್ನುಊಹಿಸಿಯೂಇರಲಿಲ್ಲ. ಕಿಚಿಡಿಸರ್ಕಾರಅಥವಾತೃತೀಯರಂಗದಸರ್ಕಾರಬರಬಹುದೆಂದುಹೆಚ್ಚ್ಚಿನಜನರವಿಶ್ಲೇಷಣೆಯಾಗಿತ್ತು. ಬಿಜೆಪಿಯಈಜಯಕಾರ್ಪೋರೇಟ್ಕಂಪನಿಗಳು, ಮಾಧ್ಯಮಗಳು, ಅರ್.ಎಸ್. ಎಸ್ಮತ್ತುಬಿಜೆಪಿರೂಪಿಸಿದಭ್ರಮೆ, ಹುಸಿಕನಸುಮತ್ತುನಿರೀಕ್ಷೆಯವಿಜಯವಾಗಿದೆ.

ನಮ್ಮವೇದಿಕೆಯುಬಿಜೆಪಿಯಈಪ್ರಮಾಣದಜಯವನ್ನುಊಹಿಸಿರಲಿಲ್ಲವಾದರೂ 2014ರಚುನಾವಣೆಸೆಮಿಫೈನಲ್ಎಂದು 2017-2019ರಲ್ಲಿನಡೆಯುವಚುನಾವಣೆಫೈನಲ್ಎಂದುಅಂದಾಜಿಸಿದ್ದೆವು. ನಾವುಎಣಿಸಿದ್ದಕ್ಕಿಂತಮುಂಚೆಯೇದೊಡ್ಡಅಂತರದಲ್ಲಿಬಿಜೆಪಿವಿಜಯಸಾಧಿಸಿದೆ. ಬಹುಸಂಖ್ಯಾತಮತದಾರರುಹಿಂದುತ್ವಕ್ಕೆಮಾತ್ರವೇಮತದಾನಮಾಡಿಲ್ಲವೆಂದುಸ್ಪಷ್ಟ. ಆದರೆಇಂದುಇರುವಚುನಾವಣಾಪದ್ಧತಿಯಲ್ಲಿಬಿಜೆಪಿಯುಅಧಿಕಾರಕ್ಕೆಏರುವಲ್ಲಿಬೇಕಾಗುವಷ್ಟುಮತಗಳನ್ನುಹಾಗೂಸೀಟುಗಳನ್ನುಗೆದ್ದುಕೊಳ್ಳುವಲ್ಲಿಸಫಲವಾಗಿದೆ.

10 ವರ್ಷಗಳಕಾಂಗ್ರೆಸ್ನೇತೃತ್ವದಯುಪಿಎಸರ್ಕಾರದಭ್ರಷ್ಟಾಚಾರ, ಬೆಲೆಯೇರಿಕೆ, ಆಡಳಿತವಿರೋಧಿಅಲೆ, ಸಮರ್ಥನಾಯಕತ್ವದಕೊರತೆಇವುಗಳೆಲ್ಲವೂಒಟ್ಟುಗೂಡಿಬಿಜೆಪಿಯುದಾಖಲೆಯಅಂತರದಲ್ಲಿಗೆಲುವುಸಾಧಿಸಿದೆ. ಬಿಜೆಪಿರೂಪಿಸಿದಚುನಾವಣಾಪ್ರಚಾರದವೈಖರಿಯೂಭಾರೀತಯಾರಿಯಿಂದಕೂಡಿತ್ತು.

ಜಾತಿವಾದ, ಕೋಮುವಾದ, ಕಾರ್ಪೋರೇಟ್‍ವಾದಗಳುಬಿಜೆಪಿಯಗೆಲುವಿನಲ್ಲಿಪ್ರಮುಖಪಾತ್ರವಹಿಸಿವೆ. ಬ್ರಾಹ್ಮಣಶಾಹಿಮತ್ತುಬಂಡವಾಳಶಾಹಿಗಳುಇವುಗಳಸೈದ್ಧಾಂತಿಕಬುನಾದಿಯಾಗಿದೆ. ಕಾರ್ಪೋರೇಟ್ಕಂಪನಿಗಳುಈಬಾರಿಬಿಜೆಪಿಯನ್ನುಸ್ಪಷ್ಟವಾಗಿಬೆಂಬಲಿಸಿಸಾವಿರಾರುಕೋಟಿರೂಗಳನ್ನುಚುನಾವಣಾಪ್ರಚಾರಕ್ಕಾಗಿನೀಡಿದ್ದವು. ತಮ್ಮಒಡೆತನದಮಾಧ್ಯಮಗಳಲ್ಲಿತಿಂಗಳಾನುಗಟ್ಟಲೇಸುಳ್ಳುಅಭಿವೃದ್ಧಿಮಂತ್ರವನ್ನುಬಿತ್ತರಿಸಿನರೇಂದ್ರಮೋದಿಯನ್ನುಈಭುವಿಗೆಬಂದಪವಾಡಪುರುಷನಂತೆಬಿಂಬಿಸಿದ್ದನ್ನೂಒಳಗೊಂಡಂತೆಅನೇಕಅಂಶಗಳುಬಿಜೆಪಿಗೆಲುವಿನಲ್ಲಿಪಾತ್ರವಹಿಸಿವೆ.

ಅದರಲ್ಲೂದೃಶ್ಯಮಾಧ್ಯಮಗಳುಭಾರತದಗ್ರಾಮೀಣಪ್ರದೇಶದಅನಕ್ಷರಸ್ಥಜನರಲ್ಲಿಈಭ್ರಮೆಯನ್ನು, ಮೋದಿಪರವಾದಅಲೆಯನ್ನುಪ್ರಜ್ಞಾಪೂರ್ವಕವಾಗಿಉತ್ಪಾದಿಸಿದವು. ಹೊಸಆಕಾಂಕ್ಷೆಗಳಮಧ್ಯಮವರ್ಗಅದರಲ್ಲೂಯುವಸಮೂಹಸ್ಪಷ್ಟವಾಗಿಬದಲಾವಣೆಯನ್ನುಬಯಸುತ್ತಿತ್ತು. ಆಬದಲಾವಣೆಯನ್ನುಕಾಂಗ್ರೆಸ್ತರಲಾರದುಎಂದುಈಸಮೂಹಭಾವಿಸಿತು. ಗುಜರಾತ್ಹತ್ಯಾಕಾಂಡ, ಮೋದಿಯಸರ್ವಾಧಿಕಾರಿಧೋರಣೆಕಂಡರಿಯದಹೊಸಮತದಾರರು, ಅಭಿವೃದ್ಧಿಯಮಂಕುಬೂದಿ (ಮೋದಿ)ಗೆಮರುಳಾಗಿಮತನೀಡಿರುವುದುಬಹುತೇಕಸಮೀಕ್ಷೆಗಳಿಂದತಿಳಿದುಬರುತ್ತದೆ. ಈರೀತಿಆಲೋಚಿಸುವಇದೇಯುವಸಮೂಹಕೆಲವೇತಿಂಗಳುಗಳಹಿಂದೆದೆಹಲಿಯಲ್ಲಿಆಮ್ಆದ್ಮಿಪಕ್ಷಪರ್ಯಾಯವೆಂದುಭಾವಿಸಿದ್ದನ್ನುನಾವುಮರೆಯಬಾರದು.

1984ರಚುನಾವಣೆಯನಂತರಬಿಜೆಪಿಪಕ್ಷದೊಡ್ಡಸಂಖ್ಯೆಯಲ್ಲಿಓಟುಗಳನ್ನುಮತ್ತುಸೀಟುಗಳನ್ನುಪಡೆದುಕೊಂಡಿದೆ. ಹಿಂದಿಮಾತನಾಡುವರಾಜ್ಯಗಳಲ್ಲಂತೂನಿರ್ಣಾಯಕವಾಗಿಬಿಜೆಪಿಮತವನ್ನುಗಳಿಸಿಕೊಂಡಿದೆ. ಕೇರಳಮತ್ತುಈಶಾನ್ಯರಾಜ್ಯಗಳಕೆಲವುಭಾಗಗಳನ್ನುಹೊರತುಪಡಿಸಿದಂತೆದೇಶದೆಲ್ಲೆಡೆಬಿಜೆಪಿಖಾತೆತೆರೆದಿದ್ದುಮಾತ್ರವಲ್ಲಓಟುಶೇರನ್ನುಹೆಚ್ಚಿಸಿಕೊಂಡಿದೆ. ಎಡಪಕ್ಷಗಳಪರಿಸ್ಥಿತಿತೀವ್ರನಿರಾಶದಾಯಕವಾಗಿಯೂ, ಕಾಂಗ್ರೆಸ್, ಡಿಎಂಕೆ, ಜೆಡಿಯು, ಬಿಎಸ್‍ಪಿಇನ್ನಿತರಪಕ್ಷಗಳಿಗೆತೀವ್ರಹಿನ್ನಡೆಮತ್ತುಮುಖಭಂಗಉಂಟಾಗಿದೆ. ಎಡಪಕ್ಷಗಳು, ಪ್ರಗತಿಪರಚಳುವಳಿಗಳುಜನಮಾನಸದಲ್ಲಿವಿಶ್ವಾಸಮತ್ತುಭವಿಷ್ಯದಕುರಿತಾಗಿಕನಸುಮೂಡಿಸಲುವಿಫಲವಾಗಿರುವುದುಮತ್ತುಆಚಳುವಳಿಗಳಎದ್ದುಕಾಣುವಗೈರುಹಾಜರಿಯುಕೋಮುವಾದದವಿಜೃಂಭಣೆಗೆಕಾರಣವಾಗಿದೆ.

ಮೇಲಿನವಿಶ್ಲೇಷಣೆಯುಭಾರತದರಾಜಕಾರಣಮತ್ತುಸಮಾಜಬಲಪಂಥೀಯಮಾರ್ಗಕ್ಕೆಪಲ್ಲಟಗೊಂಡಿರುವುದನ್ನುಸ್ಪಷ್ಟವಾಗಿಗಮನಿಸಬಹುದು. ನವಬ್ರಾಹ್ಮಣ್ಯಪ್ರಣೀತಕಾರ್ಪೋರೇಟ್ಹಿಂದುತ್ವ(ಮೋದಿತ್ವ) ಸಿದ್ಧಾಂತವುಮುಂಬರುವದಿನಗಳಲ್ಲಿಬಡವರನ್ನು, ಅಲ್ಪಸಂಖ್ಯಾತರನ್ನು, ದಲಿತರನ್ನು, ಮಹಿಳೆಯರನ್ನುಇನ್ನಷ್ಟುದಮನಮಾಡುವಸೂಚನೆಯಾಗಿದೆ.

 

2.            ಮುಂದಿನಕಾರ್ಯಯೋಜನೆಗಳು : ಫ್ಯಾಸಿಸ್ಟ್ಬಲಪಂಥೀಯಶಕ್ತಿಗಳಗೆಲುವುನಮ್ಮೆಲ್ಲರಿಗೂದೊಡ್ಡಸವಾಲಾಗಿದೆ. ಇದನ್ನುನಾವುಗಳುದೃಢವಾಗಿ, ಸಮರ್ಥವಾಗಿ, ಉನ್ನತವಾದಐಕ್ಯತೆಯಿಂದಎದುರಿಸಬೇಕಾಗಿರುವುದುಇಂದಿನಅನಿವಾರ್ಯವಾದಚಾರಿತ್ರಿಕಸಂದರ್ಭವಾಗಿದೆ. ಈನಿಟ್ಟಿನಲ್ಲಿಕೆಳಗಿನಚಟುವಟಿಕೆಗಳನ್ನುಹಮ್ಮಿಕೊಳ್ಳಬೇಕೆಂದುತೀರ್ಮಾನಿಸಲಾಯಿತು.

1.            ದೇಶದಲ್ಲಿಮತ್ತುರಾಜ್ಯದಲ್ಲಿಕೋಮುವಾದದವಿರುದ್ಧನಿರತವಾಗಿರುವಎಲ್ಲಾಸಂಘಟನೆಗಳುಮತ್ತುವ್ಯಕ್ತಿಗಳಜೊತೆಗೆಸಮಾಲೋಚನಾಸಭೆನಡೆಸಬೇಕು. ಕೋಮುವಾದ, ಜಾತಿವಾದ, ಕಾರ್ಪೋರೇಟ್‍ವಾದದವಿರುದ್ಧವಿಶಾಲಐಕ್ಯರಂಗರೂಪಿಸುವ, ಒಗ್ಗೂಡಿಹೋರಾಟನಡೆಸುವಅನಿವಾರ್ಯತೆಯಕುರಿತುಚರ್ಚಿಸಬೇಕು.

2.            2 ತಿಂಗಳಈಪ್ರಕ್ರಿಯೆಪೂರ್ಣಗೊಂಡಬಳಿಕಆಗಸ್ಟ್ 16-17ರಂದುಬೆಂಗಳೂರಿನಲ್ಲಿಅಖಿಲಭಾರತಮಟ್ಟದಪ್ರಗತಿಪರಮತ್ತುಜಾತ್ಯತೀತಶಕ್ತಿಗಳಸಭೆನಡೆಸಬೇಕು.

3.            ಕ.ಕೋ.ಸೌ.ವೇಕೋಮುವಾದಿಗಳವಿರುದ್ದದಹೋರಾಟವನ್ನುಇನ್ನಷ್ಟುತೀವ್ರಗೊಳಿಸಬೇಕು. ನರೇಂದ್ರಮೋದಿಯಜೊತೆಪ್ರಗತಿಪರರೆನಿಸಿಕೊಂಡಕೆಲವುಅವಕಾಶವಾದಿಗಳುಗುರುತಿಸಿಕೊಳ್ಳುತ್ತಿರುವುದುನಡೆಯುತ್ತಿದೆ. ಅದರಬಗ್ಗೆನಾವುಗಳುಗಲಿಬಿಲಿಗೊಳ್ಳದೆ, ಜನರನ್ನುವಿಶ್ವಾಸಕ್ಕೆತೆಗೆದುಕೊಳ್ಳುತ್ತಾ, ಕ್ರಿಯಾಶೀಲವಾಗಿಹೋರಾಟರೂಪಿಸುತ್ತಾಮುನ್ನಡೆಯಬೇಕು.

4.            ಶಿಕ್ಷಣ, ಮಿಲಿಟರಿ, ಕಾರ್ಯಾಂಗ, ನ್ಯಾಯಾಂಗಮುಂತಾದಕ್ಷೇತ್ರಗಳಲ್ಲಿಆರ್.ಎಸ್.ಎಸ್.ನಉಗ್ರಬಲಪಂಥೀಯವ್ಯಕ್ತಿಗಳನ್ನುಆಯಕಟ್ಟಿನಸ್ಥಾನಗಳಲ್ಲಿನೇಮಿಸಿಮುಸ್ಲಿಂವಿರೋಧಿಭಾವನೆ, ಅಭಿವ್ಯಕ್ತಿಸ್ವಾತಂತ್ರ್ಯದಹರಣಮತ್ತುಪ್ರಗತಿಪರರಮೇಲೆಹಲ್ಲೆಯಂತಹಆಕ್ರಮಣಕಾರಿಧೋರಣೆಗಳನ್ನುಪ್ರದರ್ಶಿಸಬಹುದು. ಇವುಗಳಸಂಪೂರ್ಣಅಧ್ಯಯನಮತ್ತುತರ್ಕದಜೊತೆಗೆಮೋದಿವಾದಿಗಳನ್ನುಮತ್ತುಸಂಘಪರಿವಾರವನ್ನುಬಯಲುಗೊಳಿಸಬೇಕು.

 

3.            ಸರ್ವಸದಸ್ಯರಸಭೆ : 2014 ಜೂನ್ 4, 5 ಕ್ಕೆವೇದಿಕೆಯಸರ್ವಸದಸ್ಯರಸಭೆ(ಜನರಲ್ಬಾಡಿ) ನಡೆದು 3 ವರ್ಷಗಳಾಯಿತು. ನಮ್ಮಪ್ರಣಾಳಿಕೆಪ್ರಕಾರ 3 ವರ್ಷಕ್ಕೊಮ್ಮೆಸರ್ವಸದಸ್ಯರಸಭೆನಡೆಸಬೇಕು. ಅನಿವಾರ್ಯಕಾರಣಗಳಿಗಾಗಿ 6 ತಿಂಗಳುಗಳಕಾಲಮುಂದೂಡಿ 2014 ಡಿಸೆಂಬರ್ 27,28ರಂದುನಡೆಸಬೇಕೆಂದುತಿರ್ಮಾನಿಸಲಾಯಿತು.

 

4.            ಹಣಕಾಸು : ಸಭೆಯಲ್ಲಿ  ಆಯವ್ಯಯಪತ್ರವನ್ನುಮಂಡಿಸಿಅನುಮೋದನೆಪಡೆಯಲಾಯಿತು. ವಿವಿಧಬಾಬ್ತುಗಳಿಗೆಖರ್ಚುಹೆಚ್ಚಾಗುತ್ತಿರುವುದರಿಂದಸಂಗ್ರಹವನ್ನುಹೆಚ್ಚಿಸಬೇಕೆಂದುತೀರ್ಮಾನಿಸಲಾಯಿತು.

 

 

ವಂದನೆಗಳೊಂದಿಗೆ

 

ರಾಜ್ಯಕಾರ್ಯದರ್ಶಿಮಂಡಳಿಪರವಾಗಿ             ಕೇಂದ್ರಸಮಿತಿಕಾರ್ಯಕಾರಿಸಮಿತಿಪರವಾಗಿ

 

ಕೆ.ಎಲ್. ಅಶೋಕ್                     ಡಾ. ವಿ.ಎಲ್. ಲಕ್ಷ್ಮೀನಾರಾಯಣ,

ಪ್ರೊ. ಕೆ. ಫಣಿರಾಜ್

ಸಂಪರ್ಕವಿಳಾಸ : ಭೈರವಕೃಪ, ಗಣಪತಿಬಡಾವಣೆ 1 ನೇತಿರುವು, ವಿದ್ಯಾನಗರ, ಶಿವಮೊಗ್ಗ.

ಮೊ: 9448256216, 9448220998, 8722797111. Email:souharda.vedike@gmail.com

Website:  http://www.communalharmony.wordpress.com

Copy of the resolution is available here KKSV Central Committee Meeting Resolutions

————————————————————————————————————

‘ಶೃಂಗೇರಿ ಚಲೋ’

ಕಬೀರ್ ಹತ್ಯೆ ಪ್ರಕರಣ: ‘ಶೃಂಗೇರಿ ಚಲೋ’ ಹಂತಕನ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ

(ಕೃಪೆ : ವಾರ್ತಾಭಾರತಿ, ಶುಕ್ರವಾರ – ಏಪ್ರಿಲ್ –25-2014)

ಚಿಕ್ಕಮಗಳೂರು, ಎ.24: ತನಿಕೋಡು ಚೆಕ್‌ಪೋಸ್ಟ್ ನಲ್ಲಿ ಕಬೀರ್ ಹತ್ಯೆಯು ದುರುದ್ದೇಶಪೂರ್ವಕವಾಗಿ ನಡೆಸಲಾಗಿದ್ದು, ತಕ್ಷಣ ಹಂತಕ ಸಿಬ್ಬಂದಿಯನ್ನು ಬಂಧಿಸಿ ಕಠಿಣ ಕ್ರಮ ಜರಗಿಸಬೇಕು ಎಂದು ಪ್ರೊ.ನಗರಿಬಾಬಯ್ಯ ಒತ್ತಾಯಿಸಿದ್ದಾರೆ.
ಅವರು ಗುರುವಾರ ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಶೃಂಗೇರಿ ಚಲೋ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಾಲೂಕು ಕಚೇರಿ ಎದುರು ಬಹಿರಂಗ ಸಭೆಯಲ್ಲಿ ಮಾತನಾಡುತ್ತಿದ್ದರು.ಯಾವುದೇ ಕಾರ್ಯವನ್ನು ಆವೇಶದಿಂದ ಎದುರಿಸಬಾರದು. ಪೊಲೀಸರು ಯೋಚನಾ ಲಹರಿಯ ಮೂಲಕ ಬುದ್ದಿಶಕ್ತಿಗೆ ಕೆಲಸ ಕೊಟ್ಟು ಕೆಲಸ ಮಾಡಬೇಕು. ಮುಸ್ಲಿಮರು, ದಲಿತರು, ಆದಿವಾಸಿಗಳು, ಗಿರಿಜನರು, ಮಹಿಳೆಯರು, ನಕ್ಸಲರು ಎಲ್ಲರೂ ಮನುಷ್ಯರು ಎನ್ನುವುದನ್ನು ಅರಿತುಕೊಳ್ಳಬೇಕು. ನೀವು ಗುಂಡಿಕ್ಕುವವರು ಕೂಡ ಮನುಷ್ಯರು ಎನ್ನುವ ಕನಿಷ್ಠ ಪ್ರಜ್ಞೆ ಇರಲಿ ಎಂದು ಹೇಳಿದರು.
ಕಬೀರ್‌ನಿಗೆ ಬದುಕಲು ಜಾನುವಾರುಗಳ ಸಾಗಾಟ ಅಗತ್ಯವಾಗಿತ್ತು. ಆದ್ದರಿಂದ ಆತ ಮನೆಯ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಹೋಗಿದ್ದ. ಅಂತಹವನನ್ನು ಕರುಣೆ ಇಲ್ಲದಂತೆ ನಿರ್ಧಯವಾಗಿ ಗುಂಡಿಟ್ಟು ಕೊಲ್ಲುವ ಪರಿಸ್ಥಿತಿ ಬಂದಿದ್ದನ್ನು ಆಕಸ್ಮಿಕ ಎನ್ನಲು ಸಾಧ್ಯವಿಲ್ಲ. ದೇಶದಲ್ಲಿ ಎಲ್ಲರಿಗೂ ಸಮಾನವಾದ ಸಂವಿಧಾನವಿದೆ. ಇದರ ನಡುವೆ ಮನುವಾದವನ್ನು ತುರುಕುವ ಪ್ರಯತ್ನ ನಡೆಯಬಾರದು. ಮಾನವತೆಯಿಂದ ಅನ್ಯಾಯವನ್ನು ಖಂಡಿಸಿ ಹೋರಾಟ ನಡೆಸಬೇಕು ಕರೆ ನೀಡಿದರು.
ವೇದಿಕೆಯ ರಾಜ್ಯ ಪ್ರದಾನ ಕಾರ್ಯದರ್ಶಿ ಕೆ.ಎಲ್.ಅಶೋಕ್ ಮಾತನಾಡಿ, ಹಾಡ ಹಗಲೇ ಕಗ್ಗೊಲೆ ನಡೆಯುತ್ತಿದೆ. ಹನ್ನೊಂದು ವರ್ಷಗಳ ಹಿಂದೆ ಗಿರಿಜನರ ಮನೆಗೆ ನುಗ್ಗಿ ಎಎನ್‌ಎಫ್ ಪಡೆ ಒಂದಿಡೀ ಕುಟುಂಬವನ್ನು ಕಗ್ಗೊಲೆ ಮಾಡಿದೆ. ಭವಿಷ್ಯದಲ್ಲಿ ಇಂತಹ ಕೃತ್ಯಗಳು ನಡೆಯಬಾರದು. ಆದ್ದರಿಂದ ಕಬೀರ್‌ನನ್ನು ಗುಂಡಿಟ್ಟು ಕೊಂದ ಎಎನ್‌ಎಫ್ ಸಿಬ್ಬಂದಿಯನ್ನು ತಕ್ಷಣ ಕೊಲೆ ಪ್ರಕರಣದಡಿ ಬಂಧಿಸಿ ಕ್ರಮ ಜರಗಿಸುವ ಮೂಲಕ ಸೇವೆಯಿಂದ ವಜಾಗೊಳಿಸಬೇಕು. ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದರು.
ಪರಿಸರವಾದಿ ಕಲ್ಕುಳಿ ವಿಠಲ ಹೆಗ್ಡೆ ಮಾತನಾಡಿ, ಪೊಲೀಸರಿಗೂ ಸಂಘ ಪರಿವಾರದ ಕಾರ್ಯಕರ್ತರಿಗೂ ಅನೈತಿಕ ಸಂಬಂಧ ಇರುವುದರಿಂದ ಕಬೀರ್‌ನ ಹತ್ಯೆ ನಡೆದಿದೆ ಎನ್ನುವುದರಲ್ಲಿ ಸಂಶಯವಿಲ್ಲ. ಯಾವ ಪೊಲೀಸರೂ ನಾಗರಿಕರ ಮೇಲೆ ಮೇಲಾಧಿಕಾರಿಗಳ ಆದೇಶವಿಲ್ಲದೆ ಗುಂಡು ಹಾರಿಸಲು ಸಾಧ್ಯವಿಲ್ಲ. ಮೆಣಸಿನಹಾಡ್ಯದಲ್ಲಿ ಗಿರಿಜನರ ಕುಟುಂಬವನ್ನು ಮನೆಯೊಳಗೆ ಕೂಡಿ ಹಾಕಿ ಗುಂಡಿಕ್ಕಿ ಕೊಂದಾಗ ಜನರು ಪ್ರತಿಭಟಿಸಿದ್ದಿದ್ದರೆ ಇಂದು ಕಬೀರ್‌ನಿಗೆ ಈ ಗತಿ ಒದಗಿ ಬರುತ್ತಿರಲಿಲ್ಲ ಎಂದರು.
ಎಎನ್‌ಎಫ್ ಸಿಬ್ಬಂದಿ ಅನಾಗರಿಕ ಕೃತ್ಯ ಎಸಗಿದ್ದಾನೆ. ಮಾನವೀಯತೆ ಇಲ್ಲದ ಸಂಘ ಪರಿವಾರದ ಕಾರ್ಯಕರ್ತರು ಮೃತನ ಕುಟುಂಬಸ್ಥರ ಮೇಲೆ ಹಲ್ಲೆ ನಡೆಸಿದ್ದಾರೆ. ಆದರೆ ಗುಂಡಿಕ್ಕಿದವನನ್ನು ಬಂಧಿಸಿಲ್ಲ. ಹಾಗೆಯೇ ಹಲ್ಲೆಕೋರರನ್ನು ಬಂಧಿಸಿಲ್ಲ. ಸಂಘ ಪರಿವಾರದ ಮಂದಿ ಮಂಗಳೂರಿನಲ್ಲಿ ಸುರೇಶ್ ಭಟ್‌ರ ಮುಖಕ್ಕೆ ಸಗಣಿ ಎರಚುವ ಮೂಲಕ ಸಗಣಿ ತಿನ್ನುವ ಕೆಲಸ ಮಾಡಿದ್ದಾರೆ. ಮೋದಿ ಕೈಗೆ ಆಡಳಿತ ಸಿಕ್ಕಿದರೆ ಏನಾಗಬಹುದು ಎನ್ನುವುದನ್ನು ತೋರಿಸಿದ್ದಾರೆ ಎಂದು ಕಿಡಿಗಾರಿದರು.
ಬಾಕ್ರಬೈಲ್ ಸುರೇಶ್ ಭಟ್ ತಮಟೆ ಬಾರಿಸುವ ಮೂಲಕ ಶೃಂಗೇರಿ ಚಲೋ ರ್ಯಾಲಿಯನ್ನು ಹಳೆ ಬಸ್ ನಿಲ್ದಾಣದ ಬಳಿ ಉದ್ಘಾಟಿಸಿದರು. ರ್ಯಾಲಿಯು ಹರಿಹರ ಬೀದಿ ಮುಖ್ಯರಸ್ತೆಯಲ್ಲಿ ತಾಲೂಕು ಕಚೇರಿಯ ಆವರಣದವರೆಗೆ ಸಾಗಿದ ಬಳಿಕ ಬಹಿರಂಗ ಸಭೆ ನಡೆಯಿತು. ಈ ಸಮಯದಲ್ಲಿ ಮಂಗಳೂರು ವಿಶ್ವ ವಿದ್ಯಾಲಯದ ಉಪನ್ಯಾಸಕ ಡಾ.ಭೂಮಿಗೌಡ, ಖ್ಯಾತ ಚಿಂತಕ ಶಿವಸುಂದರ್, ಕೆಪಿಸಿಸಿ ಕಿಸಾನ್ ಸೆಲ್‌ನ ರಾಜ್ಯ ಉಪಾಧ್ಯಕ್ಷ ಸಚ್ಚಿನ್ ಮಿಗಾ, ರಾಜ್ಯ ರೈತ ಸಂಘದ ದುಗ್ಗಪ್ಪಗೌಡ, ಉಡುಪಿ ಕೋಮು ಸೌಹಾರ್ದ ವೇದಿಕೆಯ ಜಿಲ್ಲಾಧ್ಯಕ್ಷ ಜಿ.ರಾಜಶೇಖರ್, ರಾಜ್ಯ ಕಾರ್ಯದರ್ಶಿ ಗೌಸ್ ಮೊಹಿದ್ದೀನ್, ಕರ್ನಾಟಕ ಜನಶಕ್ತಿಯ ರಾಜ್ಯ ಕಾರ್ಯದರ್ಶಿ ಡಾ.ವಾಸು, ಮಹಿಳಾ ಮುನ್ನಡೆಯ ಮಲ್ಲಿಗೆ, ಶಿವಮೊಗ್ಗದ ಸರ್ಜಾಶಂಕರ್ ಅರಳೀಮಠ, ಶೃಂಗೇರಿಯ ಗೌಸ್ ಸಾಬ್, ದಾದು ಸಾಬ್ ಖುರೇಶಿ, ದಲಿತ ಸಂಘದ ಶ್ರೀನಿವಾಸ್, ಗಣೇಶ್, ಮುಸ್ಲಿಂ ಹಿತರಕ್ಷಣಾ ವೇದಿಕೆಯ ಕಿರುಗುಂದ ಅಬ್ಬಾಸ್, ಯೂಸುಫ್ ಹಾಜಿ, ರಫೀಕ್ ಅಹ್ಮದ್, ದಿನಕರ ಬೇಂಗ್ರೆ, ದಾವಣಗೆರೆಯ ಹನೀಫ್ ಪಾಷ, ಚಕ್ಕಮಕ್ಕಿ ಅಯ್ಯೂಬ್ ಹಾಜಿ, ಅಬ್ದುಲ್ ವಹ್ಹಾಬ್ ಮತ್ತಿತರರು ಉಪಸ್ಥಿತರಿದ್ದರು.

ಜವಾಬ್ದಾರಿಯಿಂದ ಜಾರಿಕೊಂಡ ಅಧಿಕಾರಿಗಳ ವಿರುದ್ಧ ಆಕ್ರೋಶ
ಕಾರ್ಯಕ್ರಮದ ಕೊನೆಯಲ್ಲಿ ತಹಶೀಲ್ದಾರರ ಮೂಲಕ ಗೃಹ ಸಚಿವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಪ್ರತಿಭಟನಕಾರರು ಕಬೀರ್ ಹತ್ಯೆ ಮತ್ತು ಕಬೀರನ ಬಂಧುಗಳ ಮೇಲೆ ನಡೆಸಲಾದ ಹಲ್ಲೆಯ ಕುರಿತಂತೆ ಅಧಿಕಾರಿಗಳು ಮುಖ್ಯವಾಗಿ ತಾಲೂಕು ದಂಡಾಧಿಕಾರಿ ಕೈಗೊಂಡ ಕ್ರಮಗಳ ಬಗ್ಗೆ ತಿಳಿಯ ಬಯಸಿದರು. ತಾಲೂಕು ದಂಡಾಧಿಕಾರಿಯಾಗಿ ಸಮರ್ಪಕ ಉತ್ತರ ನೀಡಲು ತಡವರಿಸಿದ ತಹಶೀಲ್ದಾರ್ ದೇವಮ್ಮ, ಈ ವಿಷಯವಾಗಿ ಡಿವೈಎಸ್ಪಿ ಉತ್ತರಿಸುತ್ತಾರೆ ಎಂದ ಜಾರಿಕೊಂಡರು. ಆಗ ಒಂದು ಕ್ಷಣ ಕಕ್ಕಾಬಿಕ್ಕಿಯಾದ ಡಿವೈಎಸ್ಪಿ ವಿಶ್ವನಾಥ್ ನಾಯ್ಕಿ ನಂತರ ಸಾವರಿಸಿಕೊಂಡು ‘‘ಮನವಿ ಸ್ವೀಕರಿಸಿದ್ದೇವೆ, ಸೂಕ್ತ ಕ್ರಮ ಕೈಗೊಳ್ಳುತ್ತೇವೆ’’ ಎಂದು ಉತ್ತರಿಸಿ ನುಣುಚಿಕೊಳ್ಳಲು ಯತ್ನಿಸಿದರು. ಆದರೆ ಪ್ರತಿಭಟನಕಾರರು ಅಧಿಕಾರಿಗಳ ಬೇಜವಾಬ್ದಾರಿ ಉತ್ತರಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಆಗಲೇ ಮಧ್ಯಪ್ರವೇಶಿಸಿ ಪ್ರತಿಭಟನಕಾರರನ್ನು ಸಮಾಧಾನಪಡಿಸಿದ್ದು ಇನ್‌ಸ್ಪೆಕ್ಟರ್ ಸುಧೀರ್ ಹೆಗಡೆ. ಹಲ್ಲೆ ನಡೆಸಿದ ಘಟನೆಯ ಕುರಿತ ದೂರಿನಲ್ಲಿ ನಾಲ್ವರ ಹೆಸರುಗಳನ್ನು ನೀಡಲಾಗಿತ್ತು. ಆದರೆ ನಾನೇ ಮುತುವರ್ಜಿ ವಹಿಸಿ ಇನ್ನೂ ಹತ್ತು ಮಂದಿಯನ್ನು ಗುರುತಿಸಿದ್ದೇನೆ. ಅವರೆಲ್ಲರನ್ನೂ ಬಂಧಿಸುವವರೆಗೂ ಸುಮ್ಮನಿರುವುದಿಲ್ಲ. ಈಗಾಗಲೇ ನಾಲ್ವರನ್ನು ಬಂಧಿಸಲಾಗಿದೆ. ಅವರು ಜಾಮೀನು ಕೋರಿದ್ದರು. ನ್ಯಾಯಾಲಯದಲ್ಲಿ ಜಾಮೀನು ಸಿಗದಂತೆ ಪೊಲೀಸ್ ಇಲಾಖೆಯ ವತಿಯಿಂದ ವಾದ ಮಂಡಿಸಿದ್ದರಿಂದ ಅವರಿಗೆ ಜಾಮೀನು ಸಿಕ್ಕಿಲ್ಲ ಎಂದು ತಿಳಿಸಿದರು. ಇನ್‌ಸ್ಪೆಕ್ಟರ್‌ರ ಉತ್ತರ ಸಮಾದಾನ ತರಿಸಿತ್ತಾದರೂ, ತಾಲೂಕ ದಂಡಾಧಿಕಾರಿ ಘಟನಾ ಸ್ಥಳದ ಪರಿಶೀಲನೆ ನಡೆಸಿದ ಬಗ್ಗೆ ಪ್ರತಿಕ್ರಿಯಿಸದೆ ಇದ್ದುದು ಪ್ರತಿಭಟನಕಾರರಲ್ಲಿ ಬೇಸರ ಮೂಡಿಸಿತ್ತು. ನಾಯಕರ ಒತ್ತಡಕ್ಕೆ ಮಣಿದು ತಮ್ಮ ಆಕ್ರೋಶವನ್ನು ತಾವೇ ದಮನಿಸಿಕೊಂಡಿದ್ದರು.

IMG_20140424_104854 IMG_20140424_104900 IMG_20140424_105458 IMG_20140424_110319 IMG_20140424_110352 IMG_20140424_110741 IMG_20140424_110805 IMG_20140424_111259 IMG_20140424_111314 IMG_20140424_112356 IMG_20140424_112709 IMG_20140424_112718 IMG_20140424_114145 IMG_20140424_120600 IMG_20140424_120611 IMG_20140424_120617 IMG_20140424_120702 IMG_20140424_120705 IMG_20140424_120710 IMG_20140424_120717 IMG_20140424_120847 IMG_20140424_121531 IMG_20140424_121550 IMG_20140424_121553 IMG_20140424_121555 IMG_20140424_121612 IMG_20140424_121718 IMG_20140424_121721 IMG_20140424_121738 IMG_20140424_122128 IMG_20140424_122134 IMG_20140424_122148 IMG_20140424_122151 IMG_20140424_122209 IMG_20140424_122221 IMG_20140424_122233 IMG_20140424_122247 IMG_20140424_122255 IMG_20140424_122302 IMG_20140424_122308 IMG_20140424_122549 IMG_20140424_122553 IMG_20140424_122555 IMG_20140424_122559 IMG_20140424_122601 IMG_20140424_123029 IMG_20140424_123030 IMG_20140424_123033 IMG_20140424_123318 IMG_20140424_123320 IMG_20140424_123322 IMG_20140424_140330 IMG_20140424_140350 IMG_20140424_140604

 

 

——————————————————————————————————————————————

ಶೃಂಗೇರಿಎಎನ್ಎಫ್ನವರಿಂದಜಾನುವಾರುಸಾಗಾಟಗಾರನಕೊಲೆಖಂಡಿಸಿಕ.ಕೋ.ಸೌ.ವೇದಿಕೆಯಿಂದಎಪ್ರಿಲ್ 24, ಗುರುವಾರಶೃಂಗೇರಿಹಳೆಬಸ್ಸ್ಟ್ಯಾಂಡಲ್ಲಿಬೃಹತ್ಪ್ರತಿಭಟನಾಸಭೆ

ಬೆಂಗಳೂರು, ಎ.20 :

ಶೃಂಗೇರಿತಪಾಸಣಾಕೇಂದ್ರದಲ್ಲಿಜಾನುವಾರುಸಾಗಾಟಗಾರರಮೇಲೆಎಎನ್‌ಎಫ್ಪೊಲೀಸರಗುಂಡುಹಾರಾಟಪ್ರಕರಣಹಲವಾರುಸಂಶಯಗಳಿಗೆಕಾರಣವಾಗಿದೆ.ಎಎನ್‌ಎಫ್ಸಿಬ್ಬಂದಿಯಅವಾಂತರದಿಂದಒಬ್ಬಅಮಾಯಕಯುವಕನಜೀವಬಲಿಯಾಗಿದೆ.ಈಪ್ರಕರಣನಡೆದನಂತರದಲ್ಲಿಭಜರಂಗಿಗಳುಮೃತದೇಹತರಲುಹೋದವರಮೇಲೆನಡೆಸಿದಹಲ್ಲೆಮತ್ತುಪೊಲೀಸರವರ್ತನೆಯನ್ನುಗಮನಿಸಿದಾಗಇದೊಂದುವ್ಯವಸ್ಥಿತವಾಗಿನಡೆದಹತ್ಯೆಎಂಬಗುಮಾನಿಹುಟ್ಟಿದೆ.

ಈಘಟನೆಯನ್ನುಖಂಡಿಸಿ,ಬೃಹತ್ಪ್ರತಿಭಟನೆಯನ್ನು ಕರ್ನಾಟಕಕೋಮುಸೌಹಾರ್ದವೇದಿಕೆ ಶೃಂಗೇರಿಯಲ್ಲಿನಡೆಸಲುಉದ್ದೇಶಿಸಿದೆ. ಇದೇಬರುವ ಎಪ್ರಿಲ್ , 24 ಗುರುವಾರ  ಶೃಂಗೇರಿಹಳೆಬಸ್ನಿಲ್ದಾಣದಲ್ಲಿ ರಾಜ್ಯಮಟ್ಟದಪ್ರತಿಭಟನಾಸಭೆನಡೆಯಲಿದೆ. ಅಂದು ಬೆಳಿಗ್ಗೆ 10 ಘಂಟೆಗೆಳೆ ಬಸ್ಸ್ಟ್ಯಾಂಡಿನಿಂದ ಸಭೆಸೇರಿಮೆರವಣಿಗೆಹೊರಟು,ಸರಕಾರವನ್ನುಆಗ್ರಹಿಸಲಾಗುವುದು. ಈಬೃಹತ್ಪ್ರತಿಭಟನೆಯಲ್ಲಿವೇದಿಕೆಯಎಲ್ಲಾಸಹಭಾಗಿಸಂಘಟನೆಗಳವರು – ಜಾನುವಾರುವ್ಯಾಪಾರಿಗಳು – ಜನಪರ – ಮಾನವಹಕ್ಕುಸಂಘಟನೆಗಳವರುಭಾಗವಹಿಸಬೇಕಾಗಿವೇದಿಕೆಯಪ್ರಧಾನಕಾರ್ಯದರ್ಶಿ ಕೆ.ಎಲ್.ಅಶೋಕ್ ಕೇಳಿಕೊಂಡಿದ್ದಾರೆ.

————————————————————————————————————————————–

‘ಮೋದಿತ್ವ ಸೋಲಿಸಿ, ಸೌಹಾರ್ದ ಭಾರತ ಗೆಲ್ಲಿಸಿ’: ಕಕೋಸೌವೇಯಿಂದ ಜನರ ಪ್ರಣಾಳಿಕೆ ಬಿಡುಗಡೆ

‘ಮೋದಿತ್ವ ಸೋಲಿಸಿ, ಸೌಹಾರ್ದ ಭಾರತ ಗೆಲ್ಲಿಸಿ’: ಕಕೋಸೌವೇಯಿಂದ ಜನರ ಪ್ರಣಾಳಿಕೆ ಬಿಡುಗಡೆ

‘ಮೋದಿತ್ವ ಸೋಲಿಸಿ, ಸೌಹಾರ್ದ ಭಾರತ ಗೆಲ್ಲಿಸಿ’: ಕಕೋಸೌವೇಯಿಂದ ಜನರ ಪ್ರಣಾಳಿಕೆ ಬಿಡುಗಡೆ

(ಕೃಪೆ : ವಾರ್ತಾ ಭಾರತಿ, ಮಂಗಳವಾರ – ಏಪ್ರಿಲ್ -08-2014)

ಮಂಗಳೂರು, ಎ.7: ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ದ.ಕ.ಜಿಲ್ಲಾ ಘಟಕವು ಇತರ ಕೆಲ ಸಮಾನ ಮನಸ್ಕ ಸಂಘಟನೆಗಳ ಸಹ ಭಾಗಿತ್ವದಲ್ಲಿ ಇಂದು ‘ಮೋದಿತ್ವ ಸೋಲಿಸಿ, ಸೌಹಾರ್ದ ಭಾರತ ಗೆಲ್ಲಿಸಿ’ ಎಂಬ ಘೋಷಣೆ ಯಿಂದ ಕೂಡಿದ ಜನರ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದೆ.

ನಗರದಲ್ಲಿಂದು ಎಸ್‌ಐಒ, ಅಹಿಂದ ಮತ್ತು ಪ್ರೊಟೆಸ್ಟೆಂಟ್ ಕ್ರಿಶ್ಚಿಯನ್ನರ ಸಂಘಟನೆ ಪ್ರತಿನಿಧಿ ಗಳ ಉಪಸ್ಥಿತಿಯಲ್ಲಿ ವೇದಿಕೆಯ ಜಿಲ್ಲಾಧ್ಯಕ್ಷ ಸುರೇಶ್ ಭಟ್ ಬಾಕ್ರಬೈಲ್ ಪ್ರಣಾಳಿಕೆ ಬಿಡುಗಡೆಗೊಳಿಸಿದರು.

ಈ ಸಂದರ್ಭ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಬಾರಿಯ ಚುನಾ ವಣಾ ಪ್ರಚಾರ ವೈಖರಿ ಆತಂಕವನ್ನು ಸೃಷ್ಟಿಸು ತ್ತಿದ್ದು, ಕೀಳು ಮಟ್ಟದ ಆರೋಪ ಪ್ರತ್ಯಾರೋಪ ಗಳ ಸುನಾಮಿಯಿಂದ ಸಾರ್ವಜನಿಕರು ಹೈರಾಣಾಗಿದ್ದಾರೆ ಎಂದರು. ಸಾಮಾಜಿಕ ಜನತಂತ್ರ ಇಂದಿನ ಅಗತ್ಯ ವಾಗಿದ್ದು, ಮೂಲೆಗುಂಪಾಗಿರುವ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವ ಆಡಳಿತ ನಮಗಿಂದು ಬೇಕಾಗಿದೆ ಎಂದವರು ಹೇಳಿದರು. ಸಂವಿಧಾನದ ಹಕ್ಕುಗಳನ್ನು ನಿಜಾರ್ಥದಲ್ಲಿ ಜಾರಿಗೆ ತರುವುದು, ಅಲ್ಪಸಂಖ್ಯಾತ ಸಮುದಾಯ ಗಳಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸಾಚಾರ್ ಮತ್ತು ರಂಗನಾಥ್ ಮಿಶ್ರಾ ವರದಿಗಳನ್ನು ಜಾರಿ ಗೊಳಿಸುವುದು, ನೈತಿಕ ಪೊಲೀಸ್‌ಗಿರಿ, ಮತಾಂತರ ತಡೆ, ಕೋಮು ಪ್ರಚೋದನಕಾರಿ ಭಾಷಣ, ಅಧಿಕೃತ ಜಾನುವಾರು ಸಾಗಾಟಕ್ಕೆ ಅಡ್ಡಿ ಮೊದಲಾದ ಕಾನೂನುಬಾಹಿರ ಕೃತ್ಯಗಳಿಗೆ ಶಾಶ್ವತ ಪರಿಹಾರ, ಅಭಿವೃದ್ಧಿ ಹೆಸರಿನಲ್ಲಿನ ಅಕ್ರಮ ಭೂಕಬಳಿಕೆಗೆ ತಡೆ, ಅಲ್ಪಸಂಖ್ಯಾತರು- ದಲಿತರು-ಹಿಂದುಳಿದವರಿಗೆ ಖಾಸಗಿ ವಲಯ ದಲ್ಲೂ ಮೀಸಲಾತಿ, ರಾಜ್ಯ ಮಟ್ಟದಲ್ಲಿ ಪಠ್ಯ ಪುಸ್ತಕಗಳು-ಗ್ರಂಥಾಲಯಗಳ ಕೇಸರೀಕರಣ ತಡೆಯಲು ರಾಜ್ಯದಲ್ಲಿ ಎನ್‌ಸಿಇಆರ್‌ಟಿ ನೇತೃತ್ವದ ಕಾವಲು ಸಮಿತಿಗಳ ನೇಮಕ, ಸಂಸತ್ತು ಹಾಗೂ ಸದನಗಳಲ್ಲಿ ಕನಿಷ್ಠ ಶೇ. 33 ಮಹಿಳಾ ಪ್ರಾತಿನಿಧ್ಯ, ಲೈಂಗಿಕ ಅಲ್ಪ ಸಂಖ್ಯಾತರಿಗೆ ಸೂಕ್ತ ವಿದ್ಯಾಭ್ಯಾಸ/ತರಬೇತಿ/ಉದ್ಯೋಗಾವಕಾಶ, ಮಾನವ ಹಕ್ಕು ಆಯೋಗ ವನ್ನು ಬಲಪಡಿಸು ವುದು, ರಾಜ್ಯದಲ್ಲಿ ಸುಪ್ರೀಂ ಕೋರ್ಟ್‌ನ ನ್ಯಾಯಪೀಠ ಸ್ಥಾಪನೆ, ರಾಷ್ಟ್ರದ್ರೋಹ-ಯುಎಪಿಎ-ಎಎಫ್‌ಎಸ್‌ಪಿಎ ಯಂತಹ ಕಾಯ್ದೆ ಗಳನ್ನು ಮರುಪರಿಶೀಲನೆಗೊಡ್ಡಿ ಹಿಂದೆೆಗೆಯುವುದು ಸೇರಿದಂತೆ ಇತರ ಹಲವಾರು ಬೇಡಿಕೆಗಳನ್ನು ವೇದಿಕೆಯ ಪ್ರಣಾಳಿಕೆಯಲ್ಲಿ ಸೇರಿಸಲಾಗಿದೆ. ಕೋಮುವಾದಿಯಾಗಿರುವ ಬಿಜೆಪಿಗೆ ನಿಕಟ ಸ್ಪರ್ಧಿಯಾಗಿರುವ ಜಾತ್ಯತೀತ ಪಕ್ಷವನ್ನು ಬೆಂಬಲಿ ಸಬೇಕೆಂಬುದು ಮತದಾರರಿಗೆ ನಮ್ಮ ಮನವಿಯೇ ಹೊರತು ಯಾವುದೇ ನಿರ್ದಿಷ್ಟ ಪಕ್ಷಕ್ಕೆ ಮತ ಚಲಾಯಿಸುವಂತೆ ಮನವಿ ಮಾಡುವುದಿಲ್ಲ. ವೇದಿಕೆಗೆ ಯಾವುದೇ ರೀತಿಯ ರಾಜಕೀಯ ಆಕಾಂಕ್ಷೆಗಳಿಲ್ಲ. ಆದರೆ ಫ್ಯಾಸಿಸ್ಟ್ ಶಕ್ತಿಗಳನ್ನು ಸೋಲಿಸಿ ಕೋಮು ಸೌಹಾರ್ದತೆ ಕಾಯ್ದುಕೊಳ್ಳು ವುದು ಮಾತ್ರವೇ ನಮ್ಮ ಉದ್ದೇಶ ಎಂದು ಸುರೇಶ್ ಭಟ್ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಗೋಷ್ಠಿಯಲ್ಲಿ ವೇದಿಕೆಯ ಜಿಲ್ಲಾ ಕಾರ್ಯ ದರ್ಶಿ ಇಸ್ಮತ್ ಪಜೀರ್, ಎಸ್‌ಐಒನ ಶಬೀರ್, ಅಹಿಂದ ಸಂಘಟನೆಯ ವಾಸುದೇವ ಬೋಳೂರು, ಪ್ರಾಟೆಸ್ಟೆಂಟ್ ಕ್ರೈಸ್ತ ಸಂಘಟನೆಯ ಸತೀಶ್ ಪೆಂಗಲ್ ಉಪಸ್ಥಿತರಿದ್ದರು.

——————————————————————————-

Face to Face Talk on Development and Communalism with non-bjp parties

The Hindu Article

Available at:

http://www.thehindu.com/news/national/karnataka/bjps-communal-agenda-must-be-defeated/article5879928.ece

Click here ‘BJP’s communal agenda m…e defeated’ – The Hindu to download

Bangalore: On 6.04.2014, Souhardha Vedike called upon representatives from different political parties excluding bjp for a discussion on Development and Communalism. A total of 7 political parties participated in the program. Representatives from Congress, JDS, Bahujan Samaj Party, Sarvodaya Karnataka, CPIML(Liberation), CPIML (Red Star),Indian Union of Muslim League. The discussion was attended by leaders from different districts of Karnataka who are primarily working with dalits, women, farmers and other minorities organisations, activists and students actively participated in the program.

IMG-20140406-WA0002

DSC01648

DSC01661

IMG_20140406_112728

IMG_20140406_112853 IMG_20140406_112954

IMG_20140406_125543

DSC01674

————————————————————————-

web poster

——————————————————————————————–

Manku (Boo) Modi – Book Release in Mandya

Karnataka Communal Harmony Forum as  part of its state wide campaign released the book Manku boodhi – Manku Modi at Mandya in a press conference. The attachment below is a glimpse of the media coverage of the event.

Click Mandya – Book Release

Click here  Mandya - Book Release (Kemmugilu)

————————————————————————————–

ಗಂಗೊಳ್ಳಿ ಮತ್ತು ನೇಜಾರು ಎಂಬ ಪ್ರದೇಶಗಳಲ್ಲಿ ನಡೆದ ಹಲ್ಲೆ ಪ್ರಕರಣದ ವಿರುದ

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಗಂಗೊಳ್ಳಿಯಲ್ಲಿ ಹಿಂದೂ ಸಮಾಜೋತ್ಸವದ ಸಂದರ್ಭದಲ್ಲಿ ಬೈಕಿನಲ್ಲಿ ತೆರಳುತ್ತಿದ್ದ ಮುಸ್ಲಿಮ್ ದಂಪತಿಗಳ ಮೇಲಿನ ಹಲ್ಲೆ ಮತ್ತು ಉಡುಪಿ ತಾಲೂಕಿನ ನೇಜಾರು – ನಿಡಂಬಳ್ಳಿ ರಸ್ತೆಯಲ್ಲಿ ಬೈಕ್ ನಲ್ಲಿ ತೆರಳುತ್ತಿದ್ದ ಹುಮೇರ್ ಎಂಬ ಮತಾಂತರಗೊಂಡ ಯುವಕನ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ಬಂಧಿಸಬೇಕು ಹಾಗೂ ಈ ಪ್ರಕರಣವನ್ನು ತಿರುಚಿದ ಗಂಗೊಳ್ಳಿ ಮತ್ತು ಮಲ್ಪೆ ಠಾಣಾ ಪೊಲೀಸರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ವೇದಿಕೆಯ ಉಡುಪಿ ಜಿಲ್ಲಾ ಘಟಕವು ಮಾರ್ಚ್,5 ರ ಬುಧವಾರ ಉಡುಪಿ ನಗರದ ಕ್ಲಾಕ್ ಟವರಿನ ಗಾಂಧಿ ಪ್ರತಿಮೆಯ ಎದುರು ಪ್ರತಿಭಟನಾ ಸಭೆ ನಡೆಸಿ, ಮೆರವಣಿಗೆಯ ಮೂಲಕ ಎಸ್ಪಿ ಕಛೇರಿಗೆ ತೆರಳಿ ತನ್ನ ಹಕ್ಕೊತ್ತಾಯವನ್ನು ಮಂಡಿಸಿತು. ಈ ಪ್ರತಿಭಟನಾ ಸಭೆಯಲ್ಲಿ ಜಿಲ್ಲಾಧ್ಯಕ್ಷ ಜಿ.ರಾಜಶೇಖರ್, ಕೇಂದ್ರ ಸಮಿತಿ ಸದಸ್ಯರಾದ ಕೆ.ಫಣಿರಾಜ್, ರೆ.ಫಾ.ವಿಲಿಯಂ ಮಾರ್ಟೀಸ್, ಡಾ.ವನಜಾಕ್ಷಿ. ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಜಯನ್ ಮಲ್ಪೆ, ಮುಸ್ಲಿಮ್ ಒಕ್ಕೂಟದ ಮಹಮ್ಮದ್ ಇದ್ರೀಸ್, ಹುಸೇನ್ ಕೋಡಿಬೆಂಗ್ರೆ ಮತ್ತಿತರರು ವೇದಿಕೆಯ ಸಹಭಾಗಿ ಸಂಘಟನೆಗಳ ಸಂಗಾತಿಗಳ ಜೊತೆ ಭಾಗವಹಿಸಿದ್ದರು

https://www.facebook.com/media/set/?set=a.505524182892363.1073741838.115958431848942&type=1&l=6d651b28e7

———————————————————————————————————–

ಕಾನೂನು ರಕ್ಷಕ ಪೊಲೀಸರಿಂದ ಕ್ರಿಮಿನಲ್ ವರ್ತನೆ;ಜಿ. ರಾಜಶೇಖರ್ ಆಕ್ರೋಶ

ಕಾನೂನು ರಕ್ಷಕ ಪೊಲೀಸರಿಂದ ಕ್ರಿಮಿನಲ್ ವರ್ತನೆ;ಜಿ. ರಾಜಶೇಖರ್ ಆಕ್ರೋಶ
ಕಾನೂನು ರಕ್ಷಕ ಪೊಲೀಸರಿಂದ ಕ್ರಿಮಿನಲ್ ವರ್ತನೆ;ಜಿ. ರಾಜಶೇಖರ್ ಆಕ್ರೋಶ

(ಕೃಪೆ : ವಾರ್ತಾಭಾರತಿ,ಗುರುವಾರ – ಮಾರ್ಚ್ -06-2014)

ನೇಜಾರು, ಗಂಗೊಳ್ಳಿ ಪ್ರಕರಣ ವಿರೋಧಿಸಿ ಪ್ರತಿಭಟನೆ
ಉಡುಪಿ, ಮಾ.5: ಕಾನೂನು ರಕ್ಷಣೆ ಮಾಡಬೇಕಾದ ಪೊಲೀಸರೇ ಇಂದು ಕ್ರಿಮಿನಲ್‌ಗಳಂತೆ ವರ್ತಿಸುತ್ತಿದ್ದಾರೆ. ಹಲ್ಲೆಕೋರರೊಂದಿಗೆ ಕೈಜೋಡಿಸುವ ಮೂಲಕ ಸ್ವತಃ ಅವರೇ ಹಲ್ಲೆಕೋರರಾಗುತ್ತಿದ್ದಾರೆ ಎಂದು ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷ ಹಾಗೂ ಹಿರಿಯ ಚಿಂತಕ ಜಿ. ರಾಜಶೇಖರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗಂಗೊಳ್ಳಿಯಲ್ಲಿ ದಂಪತಿ ಮೇಲಿನ ಹಲ್ಲೆ ಹಾಗೂ ಕೆಳ ನೇಜಾರಿನಲ್ಲಿ ಹುಮೈರ್ ಎಂಬಾತನ ಮೇಲೆ ನಡೆದ ಗುಂಪು ಹಲ್ಲೆ ಪ್ರಕರಣದ ಆರೋಪಿಗಳ ಹಾಗೂ ಹಲ್ಲೆಗೊಳಗಾದವರ ದೂರನ್ನು ತಿರುಚಿದ ಗಂಗೊಳ್ಳಿ ಹಾಗೂ ಮಲ್ಪೆ ಪೊಲೀಸರ ವಿರುದ್ಧ ಕ್ರಮ ಜರಗಿಸುವಂತೆ ಆಗ್ರಹಿಸಿ ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಉಡುಪಿ ಜಿಲ್ಲಾ ಘಟಕವು ಉಡುಪಿ ಕ್ಲಾಕ್ ಟವರ್ ಎದುರು ನಡೆಸಿದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಅನಾಗರಿಕವಾಗಿ ಗುಂಪು ಕಟ್ಟಿಕೊಂಡು ಯುವಕರ ಮೇಲೆ ಮಾರಣಾಂತಿಕ ವಾಗಿ ಹಲ್ಲೆ ನಡೆಸುವ ಮೂಲಕ ಉಡುಪಿಯಲ್ಲಿ ನ್ಯಾಯ, ಧರ್ಮ ಎಂಬುದು ಇದೆಯಾ ಎಂಬ ಪ್ರಶ್ನೆ ಮೂಡಿದೆ. ಹಲ್ಲೆಕೋರರ ಮೇಲೆ ಸಣ್ಣಪುಟ್ಟ ಕೇಸುಗಳು, ಅದೇ ಹಲ್ಲೆಗೊಳಗಾದವರ ವಿರುದ್ಧ ಗಂಭೀರ ಪ್ರಕರಣಗಳನ್ನು ದಾಖಲಿಸುವ ಮೂಲಕ ಪೊಲೀಸರು ಹಲ್ಲೆಕೋರರ ಜೊತೆ ಶಾಮೀಲಾಗಿದ್ದಾರೆ ಎಂದು ಅವರು ಆರೋಪಿಸಿದರು.
ಇದು ಕೇವಲ ಒಬ್ಬ ವ್ಯಕ್ತಿಯ, ಸಮುದಾಯದ ಮೇಲೆ ನಡೆದ ಹಲ್ಲೆ ಅಲ್ಲ. ದೇಶದ ಸಂವಿಧಾನ, ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇರಿಸಿದ ಪ್ರತಿಯೊಬ್ಬ ಪ್ರಜೆಗಳ ಮೇಲೆ ನಡೆದ ಹಲ್ಲೆಯಾಗಿದೆ ಎಂದು ಅವರು ಟೀಕಿಸಿದರು. ಸಭೆ ಯನ್ನುದ್ದೇಶಿಸಿ ಜಮಾಅತೆ ಇಸ್ಲಾಮಿ ಹಿಂದ್‌ನ ಇದ್ರೀಸ್ ಹೂಡೆ, ಚಿಂತಕ ಕೆ.ಫಣಿರಾಜ್ ಮಾತನಾಡಿದರು.
ಎಸ್ಪಿ ಕಚೇರಿಗೆ ಜಾಥಾ: ಬಳಿಕ ಪ್ರತಿಭಟನಕಾರರು ಕ್ಲಾಕ್ ಟವರ್‌ನಿಂದ ಸರ್ವಿಸ್ ಬಸ್ ನಿಲ್ದಾಣ, ಶಿರಿಬೀಡು ಮಾರ್ಗವಾಗಿ ಬನ್ನಂಜೆಯಲ್ಲಿರುವ ಎಸ್ಪಿ ಕಚೇರಿ ವರೆಗೆ ಜಾಥಾ ನಡೆಸಿದರು. ಅಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಈ ಕುರಿತ ಮನವಿಯನ್ನು ಸಲ್ಲಿಸಲಾಯಿತು.
ಗಂಗೊಳ್ಳಿಯಲ್ಲಿ ಮೆರವಣಿಗೆ ಸಾಗುತ್ತಿದ್ದ ಗುಂಪು ತ್ರಾಸಿಯ ಹನೀಫ್ ದಂಪತಿ ಮೇಲೆ ಹಾಗೂ ಕೆಳನೇಜಾರಿನಲ್ಲಿ ಹೂಡೆಯ ಹುಮೈರ್ ಮೇಲೆ ಗುಂಪು ಹಲ್ಲೆ ನಡೆಸಿತ್ತು. ಪೊಲೀಸರು ಹಲ್ಲೆಗೆ ಒಳಗಾದ ಹುಮೈರ್‌ನಿಂದ ಒತ್ತಡದಲ್ಲಿ ಪಡೆದ ದೂರನ್ನು ಬರ್ಖಾಸ್ತುಗೊಳಿಸಿ ಪ್ರಸ್ತುತ ಈ ದೂರನ್ನೇ ಅಧಿಕೃತ ಎಂದು ಪರಿಗಣಿಸಿ ಹಲ್ಲೆ ಆರೋಪಿಗಳ ವಿರುದ್ಧ ಸೂಕ್ತ ಕೇಸು ದಾಖಲಿಸಬೇಕು.
ಕಾನೂನಿಗೆ ವಿರೋಧವಾಗಿ ಹಲ್ಲೆಕೋರರ ಕೋಮುದ್ವೇಷಕ್ಕೆ ಪೂರಕವಾಗಿ ಹುಮೈರ್ ವಿರುದ್ಧ ಕಾನೂನು ಬಾಹಿರವಾಗಿ ನಡೆದುಕೊಂಡ ಮಲ್ಪೆ ಪೊಲೀಸರ ವಿರುದ್ಧ ಇಲಾಖೆ ತನಿಖೆ ನಡೆಸಿ ಕ್ರಮ ಜರಗಿಸಬೇಕು. ಅದೇ ರೀತಿ ಗಂಗೊಳ್ಳಿ ಪ್ರಕರಣದಲ್ಲೂ ನ್ಯಾಯ ಒದಗಿಸಬೇಕು ಎಂದು ವೇದಿಕೆ ಮನವಿಯಲ್ಲಿ ಆಗ್ರ ಹಿಸಿದೆ.
ಪ್ರತಿಭಟನೆಯಲ್ಲಿ ದಸಂಸ ಮುಖಂಡ ಜಯನ್ ಮಲ್ಪೆ, ಉಡುಪಿಯ ಧರ್ಮಗುರು ರೆ.ಫಾ.ವಿಲಿಯಂ ಮಾರ್ಟಿಸ್, ಡಾ.ವನಜಾಕ್ಷಿ, ಗಂಗೊಳ್ಳಿಯ ವೌಲಾನ ತೌಫೀಕ್ ಸಲಫಿ, ಹುಸೈನ್ ಕೋಡಿಬೆಂಗ್ರೆ, ಅಶ್ಫಾಕ್, ಹಲ್ಲೆಗೊಳಗಾದ ಹುಮೈರ್ ಉಪಸ್ಥಿತರಿದ್ದರು.

———————————————————————————————-

ಕ.ಕೋ.ಸೌ.ವೇ,ಉಡುಪಿ – ಇತ್ತೀಚೆಗೆ ಗಂಗೊಳ್ಳಿಯಲ್ಲಿ ದಂಪತಿಗಳ ಮೇಲೆ ಮತ್ತು ಉಡುಪಿಯ ಕೆಳ ನೇಜಾರು ಬಳಿ ಹುಮೇರ್ ಎಂಬ ಯುವಕನ ಮೇಲೆ ನಡೆದ ಗುಂಪು ಹಲ್ಲೆಯ ಅಪರಾಧಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರಗಿಸಲು ಹಾಗೂ ಅಪರಾಧಿಗಳ ಸಮ್ಮುಖ ಮೃದುವಾಗಿ ವರ್ತಿಸಿ ಹಲ್ಲೆಗೊಳಗಾದವರ ದೂರನ್ನು ತಿರುಚುವ ಕ್ರಮ ಜರಗಿಸಿರುವ ಗಂಗೊಳ್ಳಿ ಮತ್ತು ಮಲ್ಪೆ ಪೊಲೀಸರ ಮೇಲೆ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮಜರಗಿಸಲು ಹಕ್ಕೊತ್ತಾಯ 

For a Copy of the memorandum click KKSV – Udupi The memorandum was submitted to  The Superintendent of Police, Udupi.

———————————————————————————————-

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s