ಪ್ರಕಟಣೆಗಳು/Publications

(1)

ಗುಜರಾತ್ ಮಾದರಿ ಅಭಿವೃದ್ಧಿ ಎಂದರೇನು?

ನರೇಂದ್ರಮೋದಿಯ ಹಿಂಸಾತ್ಮಕ ಆಡಳಿತದ ಬಗ್ಗೆ ಒಂದು ವರದಿ

ಗುಜರಾತ್ ಮಾದರಿ ಅಭಿವೃದ್ಧಿ ಎಂದರೆ…           ಬಡತನ

                                                             ಅಲ್ಪಸಂಖ್ಯಾತರ ಕಗ್ಗೊಲೆ

                                                             ಅಸಮಾನತೆ    

                                                             ಪರಿಸರ ನಾಶ

                                                             ದಲಿತ – ಶೂದ್ರರ ಮೇಲೆ ಹಲ್ಲೆ

                                                  ಪುಸ್ತಕದ ಅಂತರಾಳ:

ಮೋದಿ ಮಾದರಿ ಎಂಬ ನರಕದ ದಾರಿ

1. ಹಂತಕ ಮೋದಿ – ಕಂಟಕ ಅಭಿವೃದ್ಧಿ
2. ಅಂಬರಕ್ಕೇರಿದ ಅಂಬಾನಿಗಳು – ಪಾತಾಳಕ್ಕಿಳಿದ ಬಡಜನರು
3. ಮೋದಿ ಕೊಂದ ಶಿಶುಗಳು
4. ಮೋದಿ ಅವಧಿಯಲ್ಲೆ ರೈತರ ಆತ್ಮಹತ್ಯೆಗಳು ಹೆಚ್ಚಾದವು
5. ಬಡವರ ಮೇಲೆ ಸವಾರಿ ಶ್ರೀಮಂತರಿಗೆ ಉದಾರಿ – ಮೋದಿ ಮಾದರಿ
6. ಆಧುನಿಕ ಹಿಟ್ಲರ್ ನರೇಂದ್ರಮೋದಿ

ಮೋದಿ ಹಾದಿಯಲ್ಲಿ ಯಡ್ಡಿ ಸರ್ಕಾರ ರಾಜ್ಯ ಬಜೆಟ್ – ಕೇಸರೀಕರಣದ ಹೊಸ ಅಜೆಂಡಾಗಳು…!!

1. ಸಾಲ ಮನ್ನಾ ಎಂಬ ಕನ್ನಡಿಯೊಳಗಿನ ಗಂಟು..!
2. ಚುನಾವಣಾ ಬಜೆಟ್ಟಲ್ಲ… ಅಪ್ಪಟ ಕೇಸರಿ ಬಜೆಟ್!
3. ಗುಪ್ತ ಕೇಸರೀಕರಣದ ಅಜೆಂಡಾಗಳು

ಪುಸ್ತಕದ ಪ್ರತಿಗಾಗಿ ಇಲ್ಲಿ ಕ್ಲಿಕ್ ಮಾಡಿ  ಗುಜರಾತ್ ಮಾದರಿ ಅಭಿವೃದ್ಧಿ ಎಂದರೇನು (Kannada)

ಪ್ರಕಾಶಕರು:
ಪ್ರಜಾಪ್ರಭುತ್ವಕ್ಕಾಗಿ ಜನರ ಒಕ್ಕೂಟ
ದುರ್ಗಾ ನಿಲಯ, ಬಾಪೂಜಿ ನಗರ
ಶಿವಮೊಗ್ಗ

(ಮೇ 2008ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ನೂರಾರು ಪ್ರಗತಿಪರ ಸಂಘಟನೆಗಳು ಮತ್ತು ವ್ಯಕ್ತಿಗಳ ಐಕ್ಯ ವೇದಿಕೆಯಾದ ಪ್ರಜಾಪ್ರಭುತ್ವಕ್ಕಾಗಿ ಜನರ ಒಕ್ಕೂಟದಿಂದ ಪ್ರಕಟವಾದುದು)

(2)

ಗೋಮುಖ ವ್ಯಾಘ್ರಗಳಿಂದ ನಾಡನ್ನು ರಕ್ಷಿಸೋಣ!
‘ಗೋಹತ್ಯೆ ನಿಷೇಧ ಕಾಯ್ದೆ – 2010’ನ್ನು ಏಕೆ ವಿರೋಧಿಸಬೇಕು?

ಬಿಜೆಪಿ ಅಧಿಕಾರದಲ್ಲಿದೆ. ಬಾಯಲ್ಲಿ ಬೆಣ್ಣೆ – ಬಗಲಲ್ಲಿ ದೊಣ್ಣೆ ಇದರ ಹುಟ್ಟುಗುಣವಾಗಿದೆ. ತಾರತಮ್ಯಾಧಾರಿತ ಸನಾತನ ಸಮಾಜದ ಸ್ಥಾಪನೆ ಇದರ ಕನಸಾಗಿದೆ. ಪರ ಧರ್ಮ ಅಸಹಿಷ್ಣುತೆ ಇದರ ನೀತಿಯಾಗಿದೆ. ಗೋ ಹತ್ಯೆ ನಿಷೇಧದ ಹೆಸರಲ್ಲಿ ಬಡ ಮತ್ತು ದಮನಿತ ಜನರ ಬದುಕಿನ ಹಕ್ಕನ್ನು ಕಿತ್ತುಕೊಳ್ಳಲು ಹೊರಟಿದೆ. ಕಾನೂನು ಪಾಲನೆಯ ಹೆಸರಲ್ಲಿ ಅಪರಾಧಿಗಳ ಕೈಗೆ ಪರಮಾಧಿಕಾರವನ್ನು ನೀಡಲು ಹೊರಟಿದೆ. ಈ ನಯವಂಚನೆಯನ್ನು ಬಯಲಿಗೆಳೆಯುವುದು, ವ್ಯಾಘ್ರಗಳ ಕೈಯಿಂದ ಗೋವನ್ನು ರಕ್ಷಿಸುವುದು, ಕಟುಕರ ಕೈಯಿಂದ ಬಡಪಾಯಿ ಬದುಕುಗಳನ್ನು ಕಾಪಾಡುವುದು ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕರ ಕರ್ತವ್ಯವಾಗಿದೆ.

ಪರಿವಿಡಿ:

1. ವಿವಾದದ ಸುತ್ತ ಒಂದು ಸುತ್ತು

2. ಸಂಪೂರ್ಣ ನಿಷೇಧ ನ್ಯಾಯಸಮ್ಮತವೆ?
ಅ. ಚಾರಿತ್ರಿಕ ಆಯಾಮ : ದನದ ಮಾಂಸದ ಸೇವನೆ ಬಗ್ಗೆ ಚರಿತ್ರಾಕಾರರು ಏನೆನ್ನುತ್ತಾರೆ?
ಆ. ಧಾರ್ಮಿಕ ಆಯಾಮ : ಭಾರತದ ಧರ್ಮ ಶಾಸ್ತ್ರಗಳು ಗೋ/ ದನದ ಮಾಂಸವನ್ನು ವರ್ಜಿತ ಎನ್ನುತ್ತವೆಯೆ?
ಇ. ಸಮಾಜಿಕ ಆಯಾಮ : ಸಮಾಜಿಕ ಶ್ರೇಣೀಕರಣ ಹಾಗು ಭಾರತದ ಆಹಾರ ಪದ್ದತಿ
ಈ. ಆರ್ಥಿಕ ಆಯಾಮ : ಹೆತ್ತೋಳ್ಗೇ ಗೊತ್ತು ಹೆರೋ ಕಷ್ಟ
1. ಸತ್ವ ಇಲ್ಲದ್ದನ್ನೂ ಸಾಕುವ ಹೊರೆ ರೈತನಿಗೆ
2. ಉಲ್ಭಣಗೊಳ್ಳಲಿರುವ ಮೇವಿನ ಬವಣೆ
3. ಗಂಡು ಹುಟ್ಟಿದರೆ ಗೋವಿಂದ
4. ದನಗಳ ಮಾರುಕಟ್ಟೆಯನ್ನು ನಂಬಿ ಬದುಕುತ್ತಿರುವವರು ಬೀದಿಪಾಲು
5. ಚರ್ಮದ ಉದ್ದಿಮೆಯ ಚರಮಗೀತೆ
6. ಬಡವರ ತಟ್ಟೆಗೆ ಕಲ್ಲು
7. ಎಲ್ಲಾ ಮಾಂಸಹಾರವೂ ತುಟ್ಟಿ
ಉ. ಸಂವಿಧಾನಾತ್ಮಕ ಆಯಾಮ
1. ಸಂಪೂರ್ಣ ನಿಷೇಧವನ್ನು ನಿರಾಕರಿಸಿದ ಸಂವಿಧಾನದ 48ನೇ ಪರಿಛ್ಛೇಧದ ನಿರಾಕರಣೆ
2. ಪಾತಕಿಗಳಿಗೂ ನೀಡದ ಶಿಕ್ಷೆ ಬಡಪಾಯಿಗಳಿಗೆ
3. ಅಪರಾಧಿಗಳ ಕೈಗೇ ಅಧಿಕಾರದ ಕತ್ತಿ

3. ಗೋಪ್ರೀತಿಯ ಹಿಂದಿನ ರಾಜಕಾರಣ

4. ಸರ್ಕಾರ : ಮಾಡಬಾರದ್ದೇನು? ಮಾಡಬೇಕಾದ್ದೇನು?

ಪ್ರಕಟಣೆ:
ಕರ್ನಾಟದ ಕೋಮು ಸೌಹಾರ್ದ ವೇದಿಕೆ (2010)

ಪುಸ್ತಕದ ಪ್ರತಿಗಾಗಿ ಇಲ್ಲಿ ಕ್ಲಿಕ್ ಮಾಡಿ ಗೋಮುಖ ವ್ಯಾಘ್ರಗಳಿಂದ ನಾಡನ್ನು ರಕ್ಷಿಸೋಣ (Kannada)

(3)

ಬಾಬರಿ ಮಸೀದಿ ಧ್ವಂಸ
(ಕಳೆದ ಇಪ್ಪತ್ತು ವರ್ಷಗಳ ಭಾರತದ ಮತೀಯ ರಾಜಕಾರಣದ ವಿಶ್ಲೇಷಣೆ)
– ಜಿ. ರಾಜಶೇಖರ್

“……ಹಿಂಸೆಯನ್ನು ಕುರಿತು ಮಾಡುತ್ತ ಬಂದಿರುವ ತಾತ್ವಿಕ ಮತ್ತು ರಾಜಕೀಯ ಚಿಂತನೆ, ನಮ್ಮ ತಲೆಮಾರಿನ ಪ್ರಜ್ಞೆಯನ್ನು ರೂಪಿಸುತ್ತಾ ಬಂದಿದ್ದಾರೆ (ಲೇಖಕರು). ಅದರ ಭಾಗವಾಗಿ ಈ ಪುಸ್ತಿಕೆಯೂ ಮೂಡಿಬಂದಿದೆ. ಚರಿತ್ರೆಯನ್ನು ಸಮಕಾಲೀನಗೊಳಿಸಿ ನೋಡುವುದು, ವರ್ತಮಾನದ ಬೇರುಗಳನ್ನು ಗತದಲ್ಲಿ ಗುರುತಿಸುವುದು, ಕೊನೆಗೆ ಇವರೆಡರ ನಡುವಣ ಸಾತ್ಯತ್ಯವನ್ನು ಮನಗಾಣಿಸುವುದು ಈ ಬರಹದ ವಿಶಿಷ್ಟತೆಯಾಗಿದೆ. ಈ ಪುಸ್ತಿಕೆ ನಮ್ಮ ಚರಿತ್ರೆಯನ್ನು ಅರಿಯಲು ವರ್ತಮಾನವನ್ನು ವಿಶ್ಲೇಷಿಸಲು ಮತ್ತು ಭವಿಷ್ಯವನ್ನು ಕಟ್ಟಲು ಅಗತ್ಯವಾದ ತಿಳುವಳಿಕೆಯನ್ನು ಒಳಗೊಂಡಿದೆ. ಇಲ್ಲಿರುವ ಸರಳತೆ ಸ್ಪಷ್ಟತೆ ಹರಿತತೆ ನಿಷ್ಠುರತೆ ಹಾಗು ಬದ್ಧತೆಗಳು ನೇರವಾಗಿ ನಮ್ಮ ಮನಸ್ಸಿಗೆ ತಾಕುವಂತಿವೆ. ನಮ್ಮ ಸಮಾಜದಲ್ಲಿ ಹುಟ್ಟುತ್ತಿರುವ ಮತೀಯ ರಾಜಕಾರಣದ ಹಿಂಸೆಯನ್ನು ಪ್ರತಿರೋಧಿಸುವ ಎಲ್ಲರೂ, ಸಮಾಜವಾದಿ ಸಮಾಜವನ್ನು ಕಟ್ಟಬೇಕೆಂಬ ಕನಸುಳ್ಳ ಸಮಸ್ತರೂ, ಈ ಪುಸ್ತಿಕೆಯೊಳಗೆ ನೆತ್ತರಿನಂತೆ ಹರಿಡಾಡುತ್ತಿರುವ ತಳಮಳವನ್ನೂ ಆಶಯವನ್ನು ತಮ್ಮೆದೆಗೆ ಹಾಯಿಸಿಕೊಳ್ಳಬೇಕಿದೆ”.
ಡಾ. ರಹಮತ್ ತರೀಕೆರೆ, ಕನ್ನಡ ವಿಶ್ವವಿದ್ಯಾನಿಲಯ, ಹಂಪಿ

ಪ್ರಕಟಣೆ:
ಕರ್ನಾಟದ ಕೋಮು ಸೌಹಾರ್ದ ವೇದಿಕೆ (2012)

ಪುಸ್ತಕದ ಪ್ರತಿಗಾಗಿ ಇಲ್ಲಿ ಕ್ಲಿಕ್ ಮಾಡಿ ಬಾಬರಿ ಮಸೀದಿ ಧ್ವಂಸ (Kannada)

(4)

ಮಂಗಳೂರಿನಲ್ಲಿ ನಡೆಯುತ್ತಿರುವುದೇನು?
(An analysis of recent communal disturbance in Mangalore)

“…ಇಂದು ಮಂಗಳೂರು ಮತ್ತೊಮ್ಮೆ ಇತಿಹಾಸದ ಪುನರಾವರ್ತನೆಯಾಗಿ ನಮ್ಮ ಮುಂದೆ ನಿಂತಿದೆ. ದಮನಿತ ಮತ್ತು ಶೋಷಿತ ಜನೆತೆಯ ವರ್ತಮಾನದ ಬದುಕು ಫಾಸಿಸ್ಟರ ದಾಳಿಯಿಂದ ಕಂಗೆಡುತ್ತಿದೆ. ಇದನ್ನು ನಿಲ್ಲಿಸಿ ಈ ನಾಡನ್ನು ಸರ್ವಜನಾಂಗದ ಶಾಂತಿಯ ತೋಟವನ್ನಾಗಿಯೂ, ನೆಮ್ಮದಿಯ ನೆಲೆಬೀಡನ್ನಾಗಿಯೂ ಉಳಿಸಿಕೊಳ್ಳುವ ಜವಬ್ದಾರಿ ನಮ್ಮೆಲ್ಲರ ಮೇಲಿದೆ”

ಪುಸ್ತಕದ ಒಳಗೆ:

ಮಂಗಳೂರು ಗಲಭೆಗಳು : ಪೋಲೀಸ್ ಮತ್ತು ಸಂಘಪರಿವಾರದ ಟೆರ್ರರ್
– ಪೋಲೀಸರೋ ಪರಿವಾರದ ಕಾರ್ಯಕರ್ತರೋ
– ಊರಾಗುವುದೇ ಮಂಗಳೂರು
– ಹಿಂಸೆಗೆ ತುತ್ತಾದವರೇ ಅಪರಾಧಿಗಳು
– ಮಂಗಳೂರು ಕೋಮು ಗಲಭೆ : ಅಖಿಲ ಭಾರತ ಸತ್ಯ ಶೋಧನಾ ತಂಡದ ಪ್ರಾಥಮಿಕ ವರದಿ

ಪ್ರಕಟಣೆ:
ಕರ್ನಾಟದ ಕೋಮು ಸೌಹಾರ್ದ ವೇದಿಕೆ (2006)

ಪುಸ್ತಕದ ಪ್ರತಿಗಾಗಿ ಇಲ್ಲಿ ಕ್ಲಿಕ್ ಮಾಡಿ ಮಂಗಳೂರಿನಲ್ಲಿ ನಡೆಯುತ್ತಿರುವುದೇನು (Kannada)

(5)

ಚುನಾವಣೆ 2008 – ಜನತೆಯ ಪ್ರಣಾಳಿಕೆ


“………. ಕರ್ನಾಟಕದ ಜನ ಸಾಮಾನ್ಯರ ಅಶೋತ್ತರಗಳನ್ನು ಬಿಂಬಿಸುವ ಈ ಪ್ರಣಾಳೆಕೆಗೆ ರಾಜಕೀಯ ಪಕ್ಷಗಳು ಪ್ರತಿಕ್ರಿಯಿಸಬೇಕೆಂದು ನಾವು ಒತ್ತಾಯಿಸುತ್ತೇವೆ. ಬಿಜೆಪಿಯಂತಹ ಪಕ್ಷದ ತಳಹದಿಯೇ ಜನವಿರೋಧಿ ಮತ್ತು ಪ್ರಜಾತಂತ್ರ ವಿರೋಧಿಯಾಗಿರುವುದರಿಂದ ಆ ಪಕ್ಷ ಅಧಿಕಾರಕ್ಕೆ ಬರುವುದನ್ನು ತಡೆಯಬೇಕಾದ್ದು ನಮ್ಮೇಲ್ಲರ ಕರ್ತವ್ಯವಾಗಿದೆ. ಆ ಪಕ್ಷಕ್ಕೆ ಯಾರೂ ಓಟು ನೀಡಬಾರದು. ಇತರೆ ಪಕ್ಷಗಳು ಈ ಪ್ರಣಾಳಿಕೆಗೆ ಯಾವ ರೀತಿ ಪ್ರತಿಕ್ರಿಯಿಸುತ್ತಾರೆಂಬುದರ ಆಧಾರದ ಮೇಲೆ ಅವರಿಗೆ ಬೆಂಬಲ ನೀಡುವ ಬಗ್ಗೆ ಈ ನಾಡಿನ ಜನತೆ ತೀರ್ಮಾನಿಸುತ್ತಾರೆ”.

ಪ್ರಣಾಳಿಕೆಯಲ್ಲಿ:

1. ನಾವು ಎಂತಹ ಪ್ರಜಾಪ್ರಭುತ್ವವನ್ನು ಬಯಸುತ್ತೇವೆ?

2. ನಾವು ಎಂತಹ ಸಮಾಜವನ್ನು ಬಯಸುತ್ತೇವೆ?

3. ನಾವು ಎಂತಹ ಅಭಿವೃದ್ಧಿಯನ್ನು ಬಯಸುತ್ತೇವೆ?

4. ಜನತೆಯ ಪ್ರಣಾಳಿಕೆಯಲ್ಲಿ ಜನರ ಮುಖ್ಯ ಹಕ್ಕೊತ್ತಾಯಗಳು
– ರೈತರು – ಅನಾಥರಾಗಿರುವ ಅನ್ನದಾತರು
– ನಗರಗಳ ಬಡವರು ಮತ್ತು ಸ್ಲಂ ಜನತೆ – ದೀಪದ ಕೆಳಗಿನ ಕತ್ತಲೆ
– ಕಾರ್ಮಿಕರು – ಅಭದ್ರತೆಯಲ್ಲಿರುವ ಕಷ್ಟಜೀವಿಗಳು
– ಮಹಿಳೆಯರು – ಮೆಟ್ಟಲ್ಪಡುತ್ತಿರುವ, ಮಾರಲ್ಪಡುತ್ತಿರುವ ‘ಮಾತೆಯರು’
– ಅಲ್ಪಾಸಂಖ್ಯಾತರು – ಅತಂತ್ರದಲ್ಲಿರುವ ಈ ನೆಲದ ಮಕ್ಕಳು
– ಕಾರ್ಪೋರೇಟ್ ಸುನಾಮಿಯ ಆತಂಕದಲ್ಲಿ ಸಣ್ಣ, ಮಧ್ಯಮ ವ್ಯಾಪಾರಸ್ಥರು
– ಕಾಕ ದೃಷ್ಟಿಗೆ ಸಿಲುಕಿರುವ ಆದಿವಾಸಿಗಳು ಮತ್ತು ಅರಣ್ಯ ಸಂಪನ್ಮೂಲ
– ಪಟ್ಟಭದ್ರರ ಬಲೆಯಲ್ಲಿ ಮೀನುಗಾರರು ಮತ್ತು ಕರಾವಳಿ
– ಪಾದೇಶಿಕ ಅಸಮಾನತೆ
– ಆಹಾರ, ಆರೋಗ್ಯ, ವಸತಿ ಮತ್ತು ಶಿಕ್ಷಣ; ಕನಿಷ್ಠ ಅಗತ್ಯಗಳಿಗೂ ಕುತ್ತು
– ಅಪಾಯದಲ್ಲಿ ನಮ್ಮ ನೆಲ – ಜಲ – ಭಾಷೆ – ಸಂಸ್ಕೃತಿ
– ಭ್ರಷ್ಟಾಚಾರ, ಬೆಲೆ ಏರಿಕೆ – ಆಳುವವರ ಹಗಲು ಸುಲಿಗೆ
– ಜನರ ಹೋರಾಟಗಳಿಗೆ ಮನ್ನಣೆ ನೀಡಿ – ಜನ ವಿರೋಧಿ ಯೋಜನೆಗಳನ್ನು ಕೈಬಿಡಿ
– ಜನತೆಯೆ ಪ್ರಣಾಳಿಕೆಯ ಶರತ್ತು ಮತ್ತು ಅದರ ಅನುಷ್ಠಾನಕ್ಕಾಗಿ ಜನಾಂದೋಲನ

ಪ್ರಕಟಣೆ:ಪ್ರಜಾಪ್ರಭುತ್ವಕ್ಕಾಗಿ ಜನರ ಒಕ್ಕೊಟ

ಪುಸ್ತಕದ ಪ್ರತಿಗಾಗಿ ಇಲ್ಲಿ ಕ್ಲಿಕ್ ಮಾಡಿ ಚುನಾವಣೆ 2008 – ಜನತೆಯ ಪ್ರಣಾಳಿಕೆ (Kannada)

(6)

ಕೋಮುಹಿಂಸೆ ನಿಯಂತ್ರನ ಮಸೂದೆ ಯಾಕೆ ಬೇಕು?

“ಕೋಮು ಹಿಂಸೆ ಹಾಗು ನಿರ್ದಿಷ್ಟ ಸಮುದಾಯಗಳನ್ನು ಗುರಿಯಾಗಿಸಿಕೊಂಡು ನಡೆಸುವ ಹಿಂಸೆಯ ನಿಯಂತ್ರಣ ಮತ್ತು ಸಂತ್ರಸ್ತರಿಗೆ ನ್ಯಾಯ ಪರಿಹಾರಗಳನ್ನು ಒದಗಿಸುವ ಮಸೂದೆ – 2011” ಎಂಬ ಶೀರ್ಷಿಕೆಯನ್ನು ಪಡೆದ ಮಸೂದೆಯ ಕರಡು ಈಗ ಕೇಂದ್ರ ಸರಕಾರದ ಪರಿಶೀಲನೆಯಲ್ಲಿದ್ದು ಮುಂಬರುವ ಲೋಕ ಸಭೆಯ ಪಾರ್ಲಿಮೆಂಟ್ ಅಧಿವೇಶನದಲ್ಲಿ ಮಂಡಿಸಲ್ಪಡುವ ನಿರೀಕ್ಷೆ ಇದೆ. ದೇಶಾದ್ಯಂತ ಈ ಮಸೂದೆ ಕುರಿತು ಚರ್ಚೆನಡೆದಿದ್ದು ಬಿ.ಜಿ.ಪಿ. ಮತ್ತು ಅದರ ಸಂಘ ಪರಿವಾರ ಪ್ರಸ್ತಾಪಿತ ಮಸೂದೆಯನ್ನು ಉಗ್ರವಾಗಿ ವಿರೋಧಿಸುತ್ತಿದೆ. ಆದರೆ ಎಡಪಕ್ಷಗಳು ಮತ್ತು ಪ್ರಗತಿಪರ ಸಂಘಟನೆಗಳು ಮಸೂದೆಯ ಲೋಪದೋಷಗಳನ್ನು ಎತ್ತಿ ತೋರುತ್ತಲೇ, ಅದು ಜಾರಿಗೆ ಬರುವುದನ್ನು ಸ್ವಾಗತಿಸಿವೆ. ಕೋಮುವಾದ ಮತ್ತು ಕೋಮುಹಿಂಸೆ, ದೇಶದ ಪ್ರಜಾಪ್ರಭುತ್ವದ ಉಳಿವಿಗೇನೆ ಗಂಡಾಂತರಕಾರಿಯಾಗುವಷ್ಟು ವ್ಯಾಪಕವಾಗಿ ಹಬ್ಬಿರುವ ಹಿನ್ನಲೆಯಲ್ಲಿ ಈ ರೋಗಗಳನ್ನು ನೇರವಾಗಿ ಎದುರಿಸುವ ಉದ್ದೇಶವನ್ನು ಹೊಂದಿರುವ ಪ್ರಸ್ತಾಪಿತ ಮಸೂದೆಯ ಸಾಧಕ ಬಾಧಕಗಳ ಕುರಿತು ವಿವೇಚನೆ ನೆಡೆಸುವುದು ಅತ್ಯಗತ್ಯವಾಗಿದೆ”.

ಪ್ರಕಟಣೆ: ಕರ್ನಾಟಕ ಕೊಮು ಸೌಹಾರ್ದ ವೇದಿಕೆ

ಪುಸ್ತಕದ ಪ್ರತಿಗಾಗಿ ಇಲ್ಲಿ ಕ್ಲಿಕ್ ಮಾಡಿ ಕೋಮುಹಿಂಸೆ ನಿಯಂತ್ರನ ಮಸೂದೆ ಯಾಕೆ ಬೇಕು (Kannada)

(7)

ಬಿಜೆಪಿ  ಆಡಳಿತದ 5 ವರ್ಷಗಳು

ಮಹಾದ್ರೋಹದ ಕರಾಳ ದಿನಗಳು

“……ಎಲ್ಲ ಶಾಂತಿ, ಸೌಹಾರ್ದ ನೆಲೆಸಿಲ್ಲವೋ, ಎಲ್ಲಿ ಕಾನೂನು ಸುವ್ಯವಸ್ಥೆ ಸರಿಯಿಲ್ಲವೋ ಅಲ್ಲಿ ಸಮಾಜದ ಮೇಲ್ಚಲನೆಗೆ ಪೂರಕವಾದ ವಾತಾವರಣ ಇರುವುದಿಲ್ಲ. ಇದನ್ನು ದೃಷ್ಟಿಯಲ್ಲಿಟ್ಟುಕೊಂಡ ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಕಳೆದ 12 ವರ್ಷಗಳಿಂದಲೂ ಸೌಹಾರ್ದ ಕರ್ನಾಟಕವನ್ನು ಕಟ್ಟುವ ನಿಟ್ಟಿನಲ್ಲಿ ಅವಿರತ ಪ್ರಯತ್ನಗಳನ್ನು ಮಾಡುತ್ತಾ ಬಂದಿದೆ. ಬಾಬಾಬುಡನ್‍ಗಿರಿಯನ್ನು ಮತ್ತೊಂದು ಆಯೋಧ್ಯೆ ಮಾಡಲು ಹೊರಟ ದುಷ್ಟ ಶಕ್ತಿಗಳನ್ನು ಹಿಮ್ಮೆಟ್ಟಿಸುವಲ್ಲಿ ಬಹಳಷ್ಟು ಮಟ್ಟಿಗೆ ಯಶಸ್ವಿಯಾಗಿದೆ. ಕೋಮುವಾದದ ಪ್ರಯೋಗಶಾಲೆಯಾಗಿರುವ ಕರಾವಳಿಯಲ್ಲಿ ಸವಾಲಾಗಿ ನಿಂತಿದೆ. ಕೋಮು ಗಲಭೆಗಳು, ಚರ್ಚ್ ದಾಳಿಗಳು, ಪಬ್ ದಾಳಿಗಳು ನಡೆದಾಗ ನೊಂದವರ ಬೆಂಬಲಕ್ಕೆ ಧಾವಿಸಿದೆ. ಬಿಜೆಪಿ ಸರ್ಕಾರ ಜಾರಿಗೊಳಿಸಲು ಹೊರಟ ಜಾನುವಾರು ಹತ್ಯಾ ನಿಷೇಧ ಕಾಯ್ದೆಯ ಬಗ್ಗೆ ರಾಜ್ಯಾದ್ಯಂತ ಜನಜಾಗೃತಿ ಮೂಡಿಸಿ ವ್ಯಾಪಕ ಪ್ರತಿರೋಧವನ್ನು ಹುಟ್ಟುಹಾಕಿದೆ. ಶಾಲಾ ಪಠ್ಯಪುಸ್ತಕಗಳ ಕೇಸರೀಕರಣ ಆಗುತ್ತಿರುವಿದನ್ನು ಜನರ ಗಮನಕ್ಕೆ ತಂದಿರುವಷ್ಟೆ ಅಲ್ಲ, ಸಂಬಂಧಪಟ್ಟ ಪ್ರಾಧಿಕಾರಗಳನ್ನು ತರಾಟೆಗೆ ತೆಗೆದುಕೊಂಡಿದೆ. ಅನೇಕ ಬೀದಿ ಹೋರಾಟಗಳನ್ನು ಮಾಡಿದೆ. ಅಖಿಲ ಭಾರತ ಮಟ್ಟದ ಸಂಗೀತ ಕಾರ್ಯಕ್ರಮಗಳನ್ನು ನಡೆಸಿದೆ. ಹಲವಾರು ಪ್ರಕಟಣೆಗಳನ್ನು ಹೊರತಂದಿದೆ. ಕಳೆದ ಚುನಾವಣೆಯ ಸಂದರ್ಭದಲ್ಲಿ ಸಕ್ರಿಯವಾಗಿ ಮಧ್ಯಪ್ರವೇಶಿಸಿ ಕೋಮುವಾದಿ ಶಕ್ತಿಗಳನ್ನು ಸೋಲಿಸಲು ಕರೆಕೊಟ್ಟಿದೆ. ಇದೀಗ ಮತ್ತೊಂದು ಚುನಾವಣೆ ಎದುರಾಗಿರುವ ಪ್ರಸಕ್ತ ಸನ್ನಿವೇಶದಲ್ಲಿ ಬಿಜೆಪಿ ಸರ್ಕಾರದ ಕಳೆದೈದು ವರ್ಷಗಳ ಕರಾಳ ಆಡಳಿತ ಹೇಗೆ ಜನಸಾಮಾನ್ಯರ, ರೈತರ, ಮಹಿಳೆಯರ, ದಲಿತರ, ಹಿಂದುಳಿದವರ ಮತ್ತು ಅಲ್ಪಸಂಖ್ಯಾತರ ಬದುಕನ್ನು ದುರ್ಭರಗೊಳಿಸಿದೆ ಎಂಬುದನ್ನು ಜನರ ಗಮನಕ್ಕೆ ತರಬೇಕೆಂಬ ಉದ್ದೇಶವಿಟ್ಟುಕೊಂಡು ಈ ಕಿರುಹೊತ್ತುಗೆಯನ್ನು ಹೊರತರಲಾಗುತ್ತಿದೆ. ಇದನ್ನು ಎಲ್ಲರೂ ಓದಬೇಕು, ಕೋಮುವಾದಿ ಶಕ್ತಿಗಳನ್ನು ಸೋಲಿಸಬೇಕು, ಸೌಹಾರ್ದ ಕರ್ನಾಟಕ ಕಟ್ಟುವ ಮಹತ್ಕಾಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ಕೊಡುತ್ತಿದ್ದೇವೆ.”

ಕೇಂದ್ರ ಸಮಿತಿ
ಕರ್ನಾಟಕ ಕೋಮು ಸೌಹಾರ್ದ ವೇದಿಕೆ

“ಅತ್ಯಂತ ಭ್ರಷ್ಟರ, ಪಕ್ಷಾಂತರಿಗಳ, ಪಜಾತಂತ್ರವನ್ನೇ ಖರೀದಿಸುವವರ, ಭೂಮಿ ಬಗೆದು ಜನರನ್ನು ಕೊಂಡುಕೊಳ್ಳುವವರ, ಜೈಲಿನಲ್ಲೇ ಸಚಿವ ಸಂಪುಟ ಹೊಂದಿರುವವರ, ಅತ್ಯಾಚಾರಿಗಳ, ಲಂಪಟರ ಪಕ್ಷವನ್ನು ತಿರಸ್ಕರಿಸಿ”

ಪ್ರಕಟಣೆ: ಕರ್ನಾಟಕ ಕೊಮು ಸೌಹಾರ್ದ ವೇದಿಕೆ
            ಕೇಂದ್ರ ಸಮಿತಿ

ಪುಸ್ತಕದ ಪ್ರತಿಗಾಗಿ ಇಲ್ಲಿ ಕ್ಲಿಕ್ ಮಾಡಿ ಮಹಾದ್ರೋಹದ ಕರಾಳ ದಿನಗಳು (Kannada)

(8)

ಕೃಷಿ ಮತ್ತು ದನದ ಸಮಸ್ಯೆ

ನಾಡೋಜ ಡಾ. ಯು.ಆರ್. ಅನಂತಮೂರ್ತಿ

“ನಮ್ಮ ಸಂದರ್ಭದಲ್ಲಿ ಎದುರಾರಿರುವ ಬಿಕ್ಕಟ್ಟುಗಳ ಬಗ್ಗೆ ನಮ್ಮ ನಡುವಿನ ಶ್ರೇಷ್ಠ ಲೇಖಕರೂ, ದಣಿವರಿಯದ ಸಾಕ್ಷಿಪ್ರಜ್ಞೆಯೂ ಆಗಿರುವ ಪ್ರೊ. ಯು. ಆರ್. ಅನಂತಮೂರ್ತಿಯವರು ಚಿಂತಿಸಿದ್ದು ಈ ಲೇಖನಗಳಲ್ಲಿದೆ. ಇವು ನಮ್ಮ ಸಾಮಾಜಿಕ, ರಾಜಕೀಯ ವಿವೇಕವನ್ನು ಉದ್ದೀಪಿಸುತ್ತಿವೆ. ಜಾನುವಾರುಗಳನ್ನು ತಿನ್ನುವುದು ಪ್ರಪಂಚದ ಇತರ ಕಡೆಗಳಲ್ಲಿಯಂತೆಯೇ ನಮ್ಮ ಸಮಾಜದಲ್ಲೊ ಸಾವಿರಾರು ವರ್ಷಗಳಿಂದ ನಡೆದುಕೂಂಡು ಬಂದಿದೆ. ಜಾನುವಾರುಗಳನ್ನು ಕೊಯ್ದು ತಿನ್ನುವ ಈ ಕ್ರಿಯೆಯಲ್ಲಿ ನಿಸರ್ಗ ವಿರೋಧಿಯಾದ ನಡವಳಿಕೆ ಇಲ್ಲ. ಪ್ರಾಣಿಗಳನ್ನು ನೋಯಿಸಬೇಕೆಂಬ ಹಿಂಸಾನಂದದ ಮನೋಭಾವವಿಲ್ಲ. ಗಬ್ಬದ ಪ್ರಾಣಿಗಳನ್ನು, ಎಳೆಮರಿಗಳನ್ನು ಕುಯ್ಯಲು ಯಾವ ಮಾಂಸಹಾರಿಯೂ ಇಚ್ಚಿಸುವುದಿಲ್ಲ ಮಾತ್ರವಲ್ಲ ನಾಳೆ ಹೇಗೂ ಕೊಯ್ಯಲಿಕ್ಕಿದೆಯೆಂದು ಯಾವೂದೇ ಪ್ರಾಣಿಯನ್ನಾಗಲೀ ಇಂದೇ ಗಾಯಗೊಳಿಸಿದರೆ ಸಹಿಸುವಿದಿಲ್ಲ. ಹೀಗಿರುವ ಒಂದು ಸಹಜ ಆಹಾರ ಸಂಸ್ಕೃತಿಯನ್ನು ಅಮಾನ್ಯಗೂಳಿಸಲು, ಅಪರಾಧಿಯನ್ನಾಗಿಸಲು ಪ್ರಯತ್ನಿಸುವ ಕಾನೂನು ತರಲು ನಮ್ಮ ರಾಜ್ಯ ಸರ್ಕಾರ ಹೊರಟಿದೆ. ಜಾನುವಾರು ಹತ್ಯೆ ಮತ್ತು ಸಾಗಾಣೆಕೆ ನಿಷೇಧ ಕಾಯ್ದೆ ತನ್ನ ಉದ್ದೇಶದಲ್ಲಿ ಕೋಮುವಾದಿ ಹಾಗು ಪರಿಣಾಮದಲ್ಲಿ ರೈತ ವಿರೋಧಿ ಎಂಬ ಸೂಕ್ಷ್ಮವನ್ನು ಅನಂತಮೂರ್ತಿಯವರು ನಮ್ಮ ಮುಂದೆ ಬಿಡಿಸಿಟ್ಟಿದ್ದಾರೆ. ಅಪರಾಧಿಗಳಲ್ಲದವರನ್ನು ಅಪರಾಧಿಗಳನ್ನಾಗಿಸುವ ಇಂತಹ ಕಾನೂನುಗಳನ್ನು ಜಾರಿಗೊಳಿಸುವ ಉದ್ದೇಶ ಹೊಂದಿರುವ ಸರ್ಕಾರದ ತಲೆಯಲ್ಲಿ ಏನು ತುಂಬಿದೆ ಎಂಬುದನ್ನು, ಗೋಹತ್ಯೆ ಮಹಾಪಾಪ ಎಂದು ಅರಚಿಕೂಳ್ಳುವವರ ಎದೆಯಲ್ಲಿ ಎಂತಹ ಕುಟಿಲ ಚೂರಿಗಳಿವೆಯೆಂಬುದನ್ನು ಅನನ್ಯ ‘ಸಂಕಥನ’ ಶೈಲಿಯಲ್ಲಿ ರೂಪಕವಾಗಿ ಮಂಡಿಸುವ ಈ ಲೇಖನಗಳು ನಮ್ಮೆಲ್ಲರ ಅಂತಃಸಾಕ್ಷಿಯನ್ನು ಜಾಗ್ರತಗೊಳಿಸಿತ್ತಿದೆ. ಸರ್ಕಾರದ ದುರುಳತನವನ್ನು ನೈತಿಕವಾಗಿ ದಂಡಿಸುತ್ತಿವೆ.”

-ಡಾ. ಬಂಜಗೆರೆ ಜಯಪ್ರಕಾಶ

ಪ್ರಕಟಣೆ: ಚೆ ರೀಡಿಂಗ್ (2010)

ಪುಸ್ತಕದ ಪ್ರತಿಗಾಗಿ ಇಲ್ಲಿ ಕ್ಲಿಕ್ ಮಾಡಿ ಕೃಷಿ ಮತ್ತು ದನದ ಸಮಸ್ಯೆ (Kannada)

(9)

KARNATAKA UNDER SAFFRON SIEGE?

 • Combating Communalism – A Karnataka experience

“Communalism, given its rapid intensification, is a haunting spectre across India – reaching flashpoints in several states including Gujrat, Orissa, Chattisgarh and Karnataka to mention a few. An example of its growing impact can be mapped when we consider that the main plank of the Central Government’s election campaign was to counter the communal forces in this country. Given this context, Karnataka Komy Souharda Vedike believes it is important to share its experience about the on-going struggle with the Sangh Parivar and the successes we have countered through the years in Karnataka..”

 • Communalism and Media – Discourses in public sphere

The Communalisation of media in Karnataka is one of the major concerns of the Karnataka Komy Souharda Vedike. Given the fact that the media stands firm as one of the pillars of democracy, the greatest triumph that the RSS-BJP combine affected has been the take over of the regional media and the partial co-option of the national media including the television and print. This has resulted in the secular space considerably shrinking in regional and national newspapers in Karnataka. In particular, during the past six years, a major section of the media has provided legitimacy and respectability to some crude and blatant communal expositions. The acceptability and legitimacy thus gained by the communal, often through crude misrepresentation of facts, has helped to redefine key concepts like nationalism, secularism and communalism. Additionally, the space between the political establishment and the media is decreasing day by day, which means that the media cannot play the adversarial role it is supposed to play.”

Published by Karnataka Komu Souharda Vedike

To download a copy of the booklet click here KARNATAKA UNDER SAFFRON SIEGE (English)

(10)

ಸೇತುಸಮುದ್ರಂ ಯೋಜನೆ ರದ್ದಾಗಲಿ
ಸಂಘಪರಿವಾರದ ಹುನ್ನಾರವು ಬಯಲಾಗಲಿ
(‘ರಾಮಸೇತು’ ವಿವಾದದ ಅಸಲೀ ಸತ್ಯಗಳು ಮತ್ತು ನಕಲಿ ರಾಮಭಕ್ತರ ಅಸಲೀ ರೂಪದ ಕುರಿತು ಒಂದು ಕಿರುಪುಸ್ತಿಕೆ)

ಸೇತುಸಮುದ್ರಂ ಯೋಜನೆ ರದ್ದಾಗಲಿ ಸಂಘಪರಿವಾರದ ಹುನ್ನಾರವು ಬಯಲಾಗಲಿ 

 • ‘ರಾಮಸೇತು’ ನಿಜವೇ?
 • ಏನೀ ಸೇತು ಸಮುದ್ರ ಯೋಜನೆ?
 • ವಾಣಿಜ್ಯ ಹಿತಾಸಕ್ತಿ ಮತ್ತು ಅಮೇರಿಕಾದ ಹಿತಾಸಕ್ತಿ
 • ಹಾಗಾದರೆ ಈ ಯೋಜನೆ ಸರಿಯೇ?
 • ಸಂಘಪರಿವಾರದ ವಿರೋಧ ಮತ್ತು ಅದು ಮುಂದುಡುತ್ತಿರುವ ಕಾರಣಗಳು
 • ಎನ್‍ಡಿಎ ಪಾತ್ರ
 • ಸಂಘ ಪರಿವಾರದ ಅಪಾಯಕಾರಿ ಬದಲಿ ಪ್ರಸ್ತಾಪ
 • ಈಗ ಒಂದೊಂದಾಗಿ ಅವರ ವಾದಗಳನ್ನು ಪರಿಶೀಲಿಸೋಣ
 • ಮೀನುಗಾರರ ಹೋರಾಟ ಎನ್‍ಡಿಎ ಮತ್ತು ಯುಪಿಎ ಸರ್ಕಾರಗಳ ನೀತಿಯ ವಿರುದ್ಧ 2000ರಿಂದ, ಎನ್‍ಡಿಎ ಹೋರಾಟ 2005ರಿಂದ
 • ಸಂಘಪರಿವಾರದ ನಕಲಿ ವಿಜ್ಞಾನಿಗಳು
 • ಒಂದು ಲಕ್ಷ ಎಪ್ಪೈತೈದು ಸಾವಿರಕ್ಕೆ ಎಷ್ಟು ಸೊನ್ನೆಗಳು?
 • ರಾಮಶ್ರದ್ಧೆ, ನಂಬಿಕೆಯ ವಿಚಾರ
 • ಏನೇ ಆಗಲಿ, ‘ರಾಮಸೇತು’ ಉಳಿಯಲಿ – ಸರಿಯೇ?

ಪ್ರಕಟಣೆ: ಕರ್ನಾಟಕ ಕೋಮು ಸೌಹಾರ್ದ ವೇದಿಕೆ

ಪುಸ್ತಕದ ಪ್ರತಿಗಾಗಿ ಇಲ್ಲಿ ಕ್ಲಿಕ್ ಮಾಡಿ ಸೇತುಸಮುದ್ರಂ ಯೋಜನೆ ರದ್ದಾಗಲಿ (Kannada)

(11)

ಬಾಬಾ ದತ್ತ – ವಿವಾದದ ಸುತ್ತ
ಅಸಲೀ ಸತ್ಯಗಳು
ಸಂಘಪರಿವಾರದ ದತ್ತಪೀಠ ಸತ್ಯ ಸಂದೇಶ ಯಾತ್ರೆ
ಹುಸಿ ಸವಾಲುಗಳು – ಹಸಿ ಸುಳ್ಳುಗಳು

“ಬಾಬಾಬುಡನ್‍ಗಿರಿಯ ಸುತ್ತ ಸಂಘಪರಿವಾರದ ಎಬ್ಬಿಸುತ್ತಿರುವ ವಿವಾದದ ಹಿಂದೆಯೂ ಇದೇ ಹುನ್ನಾರವಿದೆ. ಸುಳ್ಳು ಇತಿಹಾಸ, ಸುಳ್ಳು ಆಚರಣೆ ಹಾಗು ಪೊಳ್ಳು ಧಾರ್ಮಿಕತೆಯನ್ನು ಕೃತಕವಾಗಿ ಪರಿಚಯಿಸಿರುವ ಮೂಲಕ ಅಸ್ತಿತ್ವದಲ್ಲಿರುವ ಜನೆತೆಯೆ ನಂಬಿಕೆಗಳನ್ನು ಅಸ್ಥಿರಗೊಳಿಸುವುದು ಪರಿವಾರ ಅಯೋಧ್ಯಯಿಂದಲೂ ನಡೆಸಿಕೊಂಡು ಬಂದಿರುವ ತಂತ್ರ”

ಪ್ರಕಟಣೆ: ಕರ್ನಾಟಕ ಕೋಮು ಸೌಹಾರ್ದ ವೇದಿಕೆ (ಡಿಸೆಂಬರ್ 2005)

ಪುಸ್ತಕದ ಪ್ರತಿಗಾಗಿ ಇಲ್ಲಿ ಕ್ಲಿಕ್ ಮಾಡಿ ಬಾಬಾ ದತ್ತ – ವಿವಾದದ ಸುತ್ತ (Kannada)

(12)

‘ಬಾಬಾಬುಡನ್‍ಗಿರಿ ಪ್ರಯೋಗ – ಕರ್ನಾಟಕ ಮಾದರಿ’

ದಶಕದ ಕೋಮು ಸೌಹಾರ್ದ ಚಳವಳಿ ಮಾಡಿದ್ದೇನು? ಇರುವ ಸವಾಲುಗಳೇನು?

“…….ಈ 10 ವರ್ಷಗಳಲ್ಲಿ ನಡೆದ ಚಟುವಟಿಕೆಗಳ ಒಂದು ದಾಖಲೆಯನ್ನು ಇಲ್ಲಿ ಮುಂದಿಡಲಾಗಿದೆ. ಅದರ ಜೊತೆಗೆ ಎದುರಿಸಿದ ಸಮಸ್ಯೆಗಳು ಮತ್ತು ಮುಂದಿರುವ ಸವಾಲುಗಳ ಕುರಿತಾಗಿಯೂ ಒಂದು ಇಣುಕು ನೋಟವಿದೆ. ಸೌಹಾರ್ದ ಬಯಸುವ ಎಲ್ಲರೂ ಇದರಿಂದ ಸ್ಪೊರ್ತಿಯನ್ನು ಹೊಂದಲಿ, ಅದೇ ಸಂದರ್ಭದಲ್ಲಿ ಮುಂದಿರುವ ಜವಾಬ್ದಾರಿಗಳ ಹಿನ್ನಲೆಯಲ್ಲಿ ಹಳೆಯ ಚಟುವಳಿಕೆಗಳಿಂದ ಕಲಿಯಬೇಕಾದ ಪಾಠಗಳನ್ನು ಸೂಚಿಸಲಿ, ಮುಂದಿನ ಜವಾಬ್ದಾರಿಗಳನ್ನು ಹೊರಲು ಇನ್ನಷ್ಟು ಭುಜಗಳು ಸಿದ್ಧವಾಗಲಿ ಎಂಬುದು ಇದರ ಉದ್ದೇಶವಾಗಿದೆ.”

ಪ್ರಕಟಣೆ: ಕರ್ನಾಟಕ ಕೋಮು ಸೌಹಾದ ವೇದಿಕೆ

 ಪ್ರತಿಗಾಗಿ ಇಲ್ಲಿ ಕ್ಲಿಕ್ ಮಾಡಿ ‘ಬಾಬಾಬುಡನ್‍ಗಿರಿ ಪ್ರಯೋಗ – ಕರ್ನಾಟಕ ಮಾದರಿ’

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s